ETV Bharat / state

ಬೆಂಗಳೂರು: ಟೆಸ್ಟ್ ಡ್ರೈವ್ ನೆಪದಲ್ಲಿ ಡಿಕ್ಕಿಯಲ್ಲಿಟ್ಟಿದ್ದ ₹1 ಲಕ್ಷ ಹಣದ ಸಮೇತ ಸ್ಕೂಟರ್ ಎಗರಿಸಿದ ಚಾಲಾಕಿ! - ಬೆಂಗಳೂರಿನಲ್ಲಿ ಟೆಸ್ಟ್ ಡ್ರೈವ್ ನೆಪದಲ್ಲಿ ಡಿಕ್ಕಿಯಲ್ಲಿಟ್ಟಿದ್ದ 1 ಲಕ್ಷ ಹಣ ಸಮೇತ ಸ್ಕೂಟರ್ ಕದ್ದು ಎಸ್ಕೇಪ್

ಸ್ನೇಹಿತನ ಹೆಸರಿನಲ್ಲಿದ್ದ ಸ್ಕೂಟರ್ ಮಾರುವ ಸಲುವಾಗಿ ಒಎಲ್​​ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು.‌‌‌ ಪೋಸ್ಟ್ ಕಂಡು ಇದೇ ತಿಂಗಳು 14 ರಂದು ಮಧುಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ನಿಮ್ಮ ಡಿಯೋ ಹೋಂಡಾ ಬೈಕ್ ಖರೀದಿಸುತ್ತೇನೆ ಎಂದು ಸ್ಕೂಟರ್ ಸಮೇತ ನಾಗಸಂದ್ರ ಮುಖ್ಯರಸ್ತೆಗೆ ಬರಲು ಹೇಳಿದ್ದ ಈ ವೇಳೆ ಟೆಸ್ಟ್​ ಡ್ರೈವ್​ ಮಾಡೋದಾಗಿ ಪರಾರಿ ಆಗಿದ್ದಾನೆ.

1 ಲಕ್ಷ ಹಣ ಸಮೇತ ಸ್ಕೂಟರ್ ಎಗರಿಸಿದ ಚಾಲಾಕಿ
1 ಲಕ್ಷ ಹಣ ಸಮೇತ ಸ್ಕೂಟರ್ ಎಗರಿಸಿದ ಚಾಲಾಕಿ
author img

By

Published : Jan 18, 2022, 8:30 PM IST

ಬೆಂಗಳೂರು: ಒಎಲ್‌ಎಕ್ಸ್ ವೆಬ್​ಸೈಟ್​​ನಲ್ಲಿ ಹಾಕಲಾಗಿದ್ದ ಪೋಸ್ಟ್ ನೋಡಿ ಬೈಕ್ ಮಾಲೀಕನಿಗೆ‌ ಕರೆ ಮಾಡಿದ ಚಾಲಾಕಿಯೋರ್ವ ಕರೆಯಿಸಿಕೊಂಡು ಟೆಸ್ಟ್ ಡ್ರೈವ್ ನೆಪದಲ್ಲಿ ಆರೋಪಿಯು ಡಿಕ್ಕಿಯಲ್ಲಿಟ್ಟಿದ್ದ ಒಂದು ರೂಪಾಯಿ ಸಮೇತ ಸ್ಕೂಟರ್ ಕಳ್ಳತನ ಮಾಡಿರುವ ಘಟನೆ‌ ನಗರದಲ್ಲಿ ನಡೆದಿದೆ.

ಟಾಟಾ ಏಸ್ ವಾಹನ ಚಾಲಕನಾಗಿರುವ‌ ಮಧು ಎಂಬುವರು ನೀಡಿದ ದೂರಿನ‌ ಮೇರೆಗೆ ಅಪರಿಚಿತನ ವಿರುದ್ಧ ಪೀಣ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ‌. ವೃತ್ತಿಯಲ್ಲಿ ಚಾಲಕನಾಗಿರುವ ಮಧು ತನ್ನ ಚಿಕ್ಕಪ್ಪನಿಂದ 1.50 ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದರು. ಸಾಲ ತೀರಿಸಲು ತನ್ನ ಟಾಟಾ ಏಸ್ ವಾಹನ ಹಾಗೂ‌‌ ಒಡವೆ ಮಾರಿ ಒಂದು ಲಕ್ಷ ರೂಪಾಯಿ ಹೊಂದಿಸಿದ್ದರು.

ಇದೇ ವೇಳೆ ಸ್ನೇಹಿತನ ಹೆಸರಿನಲ್ಲಿದ್ದ ಸ್ಕೂಟರ್ ಮಾರುವ ಸಲುವಾಗಿ ಒಎಲ್​​ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು.‌‌‌ ಪೋಸ್ಟ್ ಕಂಡು ಇದೇ ತಿಂಗಳು 14 ರಂದು ಮಧುಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ನಿಮ್ಮ ಡಿಯೋ ಹೋಂಡಾ ಬೈಕ್ ಖರೀದಿಸುತ್ತೇನೆ ಎಂದು ಸ್ಕೂಟರ್ ಸಮೇತ ನಾಗಸಂದ್ರ ಮುಖ್ಯರಸ್ತೆಗೆ ಬರಲು ಹೇಳಿದ್ದ.

ಇದರಂತೆ ಮಧು ನಾಗಸಂದ್ರ ಬಳಿ ಹೋಗಿ ಆರೋಪಿಗೆ ಸ್ಕೂಟರ್ ತೋರಿಸಿ, 60 ಸಾವಿರ ರೂಪಾಯಿಗೆ ವ್ಯವಹಾರ ಕುದುರಿಸಿದ್ದರು. ಈ ವೇಳೆ ಕೀ ಪಡೆದುಕೊಂಡು ಟೆಸ್ಟ್ ಡ್ರೈವ್ ನೆಪದಲ್ಲಿ ಸ್ಕೂಟರ್ ಚಲಾಯಿಸಿ ಆರೋಪಿ ಎಸ್ಕೇಪ್ ಆಗಿದ್ದಾನೆ.‌ ಈ ಸಂಬಂಧ‌‌‌ ಪೀಣ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.