ETV Bharat / state

ಕೆಪಿಸಿಸಿ ಕಚೇರಿಯಲ್ಲಿ ಶ್ರದ್ಧಾಂಜಲಿ : ಧ್ರುವನಾರಾಯಣ್​ ಇನ್ನಿಲ್ಲ ಎಂಬುದು ನಂಬಲು ಸಾಧ್ಯವಾಗುತ್ತಿಲ್ಲ : ಸುರ್ಜೇವಾಲ - Etv Bharat Kannada

ದಿವಂಗತ ಮಾಜಿ ಸಂಸದ ಧ್ರುವನಾರಯಣ್​ ಅವರಿಗೆ ಬೆಂಗಳೂರಿನ ಕಾಂಗ್ರೆಸ್​ ಕಚೇರಿಯಲ್ಲಿ ಕಾಂಗ್ರೆಸ್​ ನಾಯಕರು ಶ್ರದ್ಧಾಂಜಲಿ ಸಲ್ಲಿಸಿದರು.

ಧ್ರುವನಾರಾಯಣರ ಶ್ರದ್ಧಾಂಜಲಿ ಕಾರ್ಯಕ್ರಮ
ಧ್ರುವನಾರಾಯಣರ ಶ್ರದ್ಧಾಂಜಲಿ ಕಾರ್ಯಕ್ರಮ
author img

By

Published : Mar 11, 2023, 1:37 PM IST

Updated : Mar 11, 2023, 2:36 PM IST

ಕೆಪಿಸಿಸಿ ಕಚೇರಿಯಲ್ಲಿ ಧ್ರುವನಾರಾಯಣ್​ರಿಗೆ ಶ್ರದ್ಧಾಂಜಲಿ

ಬೆಂಗಳೂರು: ಕಾಂಗ್ರೆಸ್ ಪಕ್ಷದ ನಗು ಮುಖದ ನಾಯಕ ಧ್ರುವನಾರಾಯಣ ಇನ್ನಿಲ್ಲ ಎಂಬುದು ನಂಬಲು ಸಾಧ್ಯವಾಗುತ್ತಿಲ್ಲ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಇಂದು ಹಮ್ಮಿಕೊಂಡಿದ್ದ ದಿವಂಗತ ಮಾಜಿ ಸಂಸದ ಧ್ರುವನಾರಾಯಣ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ಅವರು, ಬಡವರ ಕಷ್ಟಗಳನ್ನು ಸ್ಪಂದಿಸುತ್ತಿದ್ದರು. ಸಂಘಟನೆಯಿಂದ ಬೆಳೆದು ಶಾಸಕರಾಗಿ, ಸಂಸದರಾಗಿ ಕೆಲಸ ಮಾಡಿದ್ದಾರೆ. ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರಿಗೆ ಹತ್ತಿರವಾದ ನಾಯಕರಾಗಿದ್ದರು. ದೊಡ್ಡ ದೊಡ್ಡ ಹುದ್ದೆಯಲ್ಲಿ ಇದ್ರು ಕೂಡ ಸಾಮನ್ಯ ಕಾರ್ಯಕರ್ತರಂತೆ ಇದ್ದರು ಎಂದು ಬಣ್ಣಿಸಿದರು.

ನಿನ್ನೆ ದೂರಾವಣಿ ಮೂಲಕ 5:45 ಕ್ಕೆ ಧ್ರುವನಾರಾಯಣ ಅವರ ಜೊತೆ ಮಾತಾಡಿದ್ದೆ. ನಂಜನಗೂಡಲ್ಲಿನ ಕಾರ್ಯಕ್ರಮದ ಬಗ್ಗೆ ಚರ್ಚೆ ಆಗಿತ್ತು. ಏನೇನು ಕಾರ್ಯಕ್ರಮ ಇದೆ ಅಂತ ಧ್ರುವನಾರಾಯಣ ಬೆಳಗ್ಗೆ ಕರೆ ಮಾಡ್ತಿನಿ ಅಂದಿದ್ರು. ಆದರೆ ಅವರ ಕರೆ ನಂಗೆ ಬರಲೇ ಇಲ್ಲ. ಇಂದು ಬೆಳಗ್ಗೆ ಬೇರೆ ಅವರು ಕರೆ ಮಾಡಿ ಧ್ರುವನಾರಾಯಣ್​ ಅವರ ನಿಧನದ ಸುದ್ದಿ ತಿಳಿಸಿದರು. ನನಗೆ ನಂಬಲು ಸಾಧ್ಯವಾಗಿಲ್ಲ. ತಕ್ಷಣ ನಾನು ಡಿ.ಕೆ. ಶಿವಕುಮಾರ್ ಅವರಿಗೆ ಕರೆ ಮಾಡಿ ಕೇಳಿದೆ. ಹೌದು, ಧ್ರುವನಾರಾಯಣ ನಮ್ಮನ್ನು ಬಿಟ್ಟು ಹೋದ್ರು ಅಂತ ಶಿವಕುಮಾರ್ ಹೇಳಿದರು ಎಂದರು.

ನುಡಿ ನಮನ: ಕಲುಷಿತ ರಾಜಕೀಯವೇ ಕೇಂದ್ರೀಕೃತವಾಗಿರುವಾಗ ಸೈದ್ಧಾಂತಿಕ ಬದ್ಧತೆ, ಮೌಲ್ಯಾಧಾರಿತ, ಸರಳ, ಸಜ್ಜನಿಕೆಯೊಂದಿಗೆ ರಾಜಕೀಯ ಜೀವನ ನಡೆಸಿದ ನನ್ನ ಬಹುಕಾಲದ ರಾಜಕೀಯ ಒಡನಾಡಿ ಮಾಜಿ ಸಂಸದ ಧ್ರುವ ನಾರಾಯಣ್ ಅವರ ಅಗಲಿಕೆ ವೈಯಕ್ತಿಕವಾಗಿ ಹಾಗೂ ಪಕ್ಷಕ್ಕೆ ಭರಿಸಲಾರದ ನಷ್ಟ ಎಂದು ವಿಧಾನಪರಿಷತ್​ನ ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ವಿದ್ಯಾರ್ಥಿ ನಾಯಕರಾಗಿ ರಾಜಕೀಯ ಜೀವನ ಆರಂಭಿಸಿದ ಧ್ರುವನಾರಾಯಣ್, ಪ್ರಸ್ತುತ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಜವಾಬ್ದಾರಿಯನ್ನ ಹೊತ್ತಿದ್ದವರು. ತಮ್ಮ ಸಾರ್ವಜನಿಕ ಜೀವನದಲ್ಲಿ ಭ್ರಷ್ಟಾಚಾರ, ಲಂಚತನ, ಸೇರಿದಂತೆ ಯಾವ ಹಗರಣದ ಕಳಂಕಗಳೂ ಅವರ ಸುತ್ತ ಸುಳಿಯದಂತೆ ನಡೆದುಕೊಂಡವರು. ಪಕ್ಷ ಸಿದ್ಧಾಂತ, ಸರಳತೆ, ಸಜ್ಜನಿಕೆಯ ಜೊತೆಗೆ, ಪಕ್ಷ ವಹಿಸಿದ ಜವಾಬ್ದಾರಿಯನ್ನ ಅತ್ಯಂತ ನಿಷ್ಠೆಯಿಂದ ನಿಭಾಯಿಸುವ ಛಾತಿ ಅವರಲ್ಲಿತ್ತು ಎಂದು ಹೇಳಿದರು.

ಕಾಂಗ್ರೆಸ್ ಪಕ್ಷಕ್ಕೆ ಆಸ್ತಿಯಂತಿದ್ದ ಧೃವ ನಾರಾಯಣ್ ಅವರ ಸಾವು ಬಹುದಿನಗಳ ಕಾಲ ಪಕ್ಷವನ್ನ ಕಾಡಲಿದೆ. ಎಂದೂ ತನ್ನ ಸಿದ್ದಾಂತ, ತಾವು ಅಳವಡಿಸಿಕೊಂಡಿದ್ದ ಪ್ರಗತಿಪರ ಮೌಲ್ಯಗಳೊಂದಿಗೆ ರಾಜಿಯಾಗಲೇ ಇಲ್ಲ. ಚುನಾವಣಾ ರಾಜಕೀಯದಲ್ಲಿಯೂ ಕೂಡ ದ್ವೇಷ, ಕುತಂತ್ರಗಳಿಗೆ ಅವಕಾಶ ನೀಡಲಿಲ್ಲ. ಶಾಸಕರಾಗಿ, ಸಂಸದರಾಗಿ ಅತ್ಯುತ್ತಮ ಸಂಸದೀಯ ಪಟು ಆಗಿ, ತನ್ನ ಜವಾಬ್ದಾರಿಯನ್ನ ಅಚ್ಚುಕಟ್ಟಾಗಿ ನಿಭಾಯಿಸಿ, ಸದಾ ಕಾಲ ಪಕ್ಷಕ್ಕಾಗಿ ಶ್ರನಿಸಿದವರು ಎಂದು ನುಡಿದರು.

ಧ್ರುವನಾರಾಯಣ್ ಹಾಗೂ ನನ್ನ ರಾಜಕೀಯ ಗೆಳೆತನ ಬಹುಕಾಲದ್ದು. ಸಮಾನ ಮನಸ್ಸು, ಸಮಾನ ಚಿಂತನೆಗಳೊಂದಿಗೆ ಬೆಸೆದ ರಾಜಕೀಯ ಸಂಗಾತಿಯ ಹಠಾತ್ ನಿಧನದಿಂದ ಆಘಾತಗೊಂಡಿದ್ದೇನೆ. ದುಃಖತಪ್ತ ಕುಟುಂಬವರ್ಗಕ್ಕೆ ನನ್ನ ಸಂತಾಪಗಳೊಂದಿಗೆ, ಪ್ರೀತಿಯ ಅಪಾರ ಅಭಿಮಾನಿಗಳ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಹೇಳಿದರು. ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಂಸದ ಡಿ.ಕೆ. ಸುರೇಶ್, ಮಾಜಿ ಸಚಿವ ಎಂ.ಬಿ. ಪಾಟೀಲ್, ಶಾಸಕ ರಿಜ್ವಾನ್ ಅರ್ಷದ್ ಮತ್ತಿತರರು ಭಾಗವಹಿಸಿದ್ದರು.

ಇದನ್ನೂ ಓದಿ: ಸಕಲ ಸರ್ಕಾರಿ ಗೌರವದೊಂದಿಗೆ ಮಾಜಿ ಸಂಸದ ಧ್ರುವನಾರಾಯಣ್ ಅಂತ್ಯಕ್ರಿಯೆ: ಸಿಎಂ ಬಸವರಾಜ ಬೊಮ್ಮಾಯಿ

Last Updated : Mar 11, 2023, 2:36 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.