ಬೆಂಗಳೂರು: ''ಈ ಬಾರಿ ಕಾಂಗ್ರೆಸ್ ಅಧಿಕಾರ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ'' ಎಂದು ಮಾಜಿ ಸಚಿವ, ಕಾಂಗ್ರೆಸ್ ಅಭ್ಯರ್ಥಿ ರಾಮಲಿಂಗಾರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವಿಲ್ಸನ್ ಗಾರ್ಡನ್ನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ''ಎರಡು ಮೂರು ದಿನದಿಂದ ಟ್ರೆಂಡ್ ಬದಲಾಗಿದೆ. ಕಾಂಗ್ರೆಸ್ ಪರ ಒಲವು ವ್ಯಕ್ತವಾಗುತ್ತಿದೆ. ರಾಜ್ಯದಲ್ಲಿ 125 ಸ್ಥಾನ ಬರುವ ನಿರೀಕ್ಷೆ ಇದೆ. ಕಳೆದ ಬಾರಿ ಬೆಂಗಳೂರಿನಲ್ಲಿ 15 ಸ್ಥಾನ ಬಂದಿತ್ತು. ಈ ಸಲ ಅದಕ್ಕಿಂತ ಹೆಚ್ಚು ಸ್ಥಾನ ಬರುತ್ತದೆ'' ಎಂದರು.
ಇದನ್ನೂ ಓದಿ: ಬಿಸಿಲಿನ ತಾಪಮಾನಕ್ಕೆ ಅಲ್ಲಲ್ಲಿ ವಿವಿಪ್ಯಾಟ್ ಕೈಕೊಟ್ಟಿವೆ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ
ಪ್ರಧಾನಿ ಮೋದಿ ರೋಡ್ ಶೋನಿಂದ ಏನೂ ಆಗಲ್ಲ: ''ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಿಂದ ಏನೂ ಆಗಲ್ಲ. ಮೋದಿ ಅವರು ಹಿಮಾಚಲ ಪ್ರದೇಶ, ಪಶ್ಚಿಮ ಬಂಗಾಳದಲ್ಲೂ ರೋಡ್ ಶೋ ನಡೆಸಿದ್ದರು. ಅಲ್ಲಿ ಗೆದ್ದರಾ? ಒಡಿಶಾ, ಬಿಹಾರ, ದಕ್ಷಿಣದಲ್ಲಿ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳದಲ್ಲಿ ರೋಡ್ ಶೋ ಮಾಡಿದರು. ಸಹಜವಾಗಿ ರಾಜಕೀಯ ಪಕ್ಷಗಳು ರೋಡ್ ಶೋ ಮಾಡಬೇಕು ಅಲ್ವಾ ಅದಕ್ಕೆ ಮಾಡಿದ್ದಾರೆ.
ಇದನ್ನೂ ಓದಿ: ಮತ ಚಲಾಯಿಸಿದ ರಾಕಿಭಾಯ್: ಸಿನಿಮಾ, ರಾಜಕೀಯ, ಪ್ರಚಾರದ ಬಗ್ಗೆ ಯಶ್ ಮನದಾಳದ ಮಾತು
ಈಗ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆ: ರೋಡ್ ಶೋ ವೇಳೆ ಮೋದಿ ಅವರ ಅಭಿಮಾನಿಗಳು ಇರಬಹುದು. ಬಿಜೆಪಿ ಪಕ್ಷದ ಅಭಿಮಾನಿಗಳು ಇರಬಹುದು. ಆದರೆ, ಉಳಿದ ಜನರನ್ನು ಕರೆತರಲಾಗಿತ್ತು. ಕೇಂದ್ರ ಬಿಜೆಪಿ ಸರ್ಕಾರ ಡೀಸೆಲ್, ಪೆಟ್ರೋಲ್ ಹಾಗೂ ಗ್ಯಾಸ್ ಬೆಲೆ ಏರಿಕೆ ಮಾಡಿದ್ದಾರೆ. ಮನಮೋಹನ್ ಸಿಂಗ್ ಸರ್ಕಾರದಲ್ಲಿ ಗ್ಯಾಸ್ ಬೆಲೆ ಹೆಚ್ಚಾಗಿರಲಿಲ್ಲ. ಈಗ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದೆ. ಈಗ ಗ್ಯಾಸ್ ಬೆಲೆ 1,200 ರೂ. ಆಗಿದೆ'' ಎಂದು ಆರೋಪಿಸಿದರು.
ಇದನ್ನೂ ಓದಿ: ಪ್ರಾಂತ್ಯವಾರು ಮತದಾನ: ಮೈಸೂರು ಭಾಗದಲ್ಲಿ ಅತ್ಯಧಿಕ, ಬೆಂಗಳೂರು ಪ್ರದೇಶ ಕೊನೆ
ಸಿಎಂ ಯಾರಾದರೂ ಆಗಲಿ ಪಕ್ಷ ಅಧಿಕಾರಕ್ಕೆ ಬರಬೇಕು: ''ಮುಖ್ಯಮಂತ್ರಿ ಸ್ಥಾನ ಸಿಗಬೇಕಾದರೆ, 113 ಸ್ಥಾನ ಬರಬೇಕು. ಈಗಾಗಲೇ ಡಿ.ಕೆ. ಶಿವಕುಮಾರ್ ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಕೊನೆ ಚುನಾವಣೆ, ನನಗೂ ಅವಕಾಶ ಬೇಕೆಂದು ಕೇಳಿದ್ದಾರೆ. ಇನ್ನೂ ಬೇರೆಯವರಿಗೂ ಆಸೆ ಇರುತ್ತದೆ. ನಮಗೆ ಯಾರಾದರೂ ಮುಖ್ಯಮಂತ್ರಿಯಾಗಲಿ, ನಮ್ಮ ಪಕ್ಷ ಅಧಿಕಾರಕ್ಕೆ ಬರಬೇಕು. ಡಿ. ಕೆ. ಶಿವಕುಮಾರ್, ಸಿದ್ದರಾಮಯ್ಯ ಇದ್ದಾರೆ. ದೇಶಪಾಂಡೆ, ಪರಮೇಶ್ವರ್, ಎಂ. ಬಿ. ಪಾಟೀಲ್ ಇರಬಹುದು. ನಾನು ಹಿರಿಯ ನಾಯಕನಾದರೆ, ಕಿತ್ತಾಡಲು ಸಾಧ್ಯವೇ'' ಎಂದು ಅವರು ಹೇಳಿದರು.
ಇದನ್ನೂ ಓದಿ: ರಾಜ್ಯಾದ್ಯಂತ ಸಂಜೆ 5 ಗಂಟೆ ವೇಳೆಗೆ 65.69ರಷ್ಟು ವೋಟಿಂಗ್, ರಾಮನಗರದಲ್ಲಿ 79 ಪ್ರತಿಶತ ಮತದಾನ
ಇದನ್ನೂ ಓದಿ: ಹಣ ಹೆಂಡಕ್ಕೆ ಮತ ಮಾರದಿರಿ : ಪದ್ಮಶ್ರೀ ಸುಕ್ರಿ ಬೊಮ್ಮಗೌಡ