ETV Bharat / state

ರಸ್ತೆ ವಿಸ್ತರಣೆಗಾಗಿ ಮರ ಕಡಿಯಲು ಮುಂದಾದ ಪಾಲಿಕೆ.. ವಿದ್ಯಾರ್ಥಿಗಳಿಂದ ಅಪ್ಪಿಕೋ ಚಳವಳಿ

ರಸ್ತೆ ವಿಸ್ತರಣೆ ನೆಪದಲ್ಲಿ ಮರ ಕಡಿಯಲು ಮುಂದಾಗಿದ್ದ ಪಾಲಿಕೆ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಶಾಲಾ ಆವರಣದಲ್ಲಿ ಅಪ್ಪಿಕೋ ಚಳವಳಿ ಮಾದರಿಯ ಪ್ರತಿಭಟನೆ ನಡೆಸುತ್ತಿದ್ದಾರೆ.

ಅಪ್ಪಿಕೋ ಚಳವಳಿ
ಅಪ್ಪಿಕೋ ಚಳವಳಿ
author img

By

Published : Sep 9, 2021, 11:34 AM IST

Updated : Sep 9, 2021, 11:53 AM IST

ಬೆಂಗಳೂರು: ಶಾಲಾ ಆವರಣದಲ್ಲಿರುವ ಮರಗಳನ್ನು ಕಡಿಯದಂತೆ ಆಗ್ರಹಿಸಿ ನಗರದ ಪೀಣ್ಯ ದಾಸರಹಳ್ಳಿಯ ಅಬ್ಬಿಗೆರೆ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಅಪ್ಪಿಕೋ ಚಳವಳಿ ಮಾದರಿಯ ಪ್ರತಿಭಟನೆ ನಡೆಸುತ್ತಿದ್ದಾರೆ.

ವಿದ್ಯಾರ್ಥಿಗಳಿಂದ ಅಪ್ಪಿಕೋ ಚಳವಳಿ

ರಸ್ತೆ ವಿಸ್ತರಿಸುವ ಸಲುವಾಗಿ ಬಿಬಿಎಂಪಿ, ಏಕಾಏಕಿ ಮರಗಳನ್ನು ಕಡಿಯಲು ಮುಂದಾಗಿದೆ. ಈ ಹಿನ್ನೆಲೆ ಅಬ್ಬಿಗೆರೆ ಸರ್ಕಾರಿ ಶಾಲಾ ಮಕ್ಕಳು ಕೈಯಲ್ಲಿ ನಾಮಫಲಕಗಳನ್ನು ಹಿಡಿದು, ಮರಗಳನ್ನು ಸುತ್ತುವರಿದು, ಕಡಿಯದಂತೆ ಮನವಿ ಮಾಡುತ್ತಿದ್ದಾರೆ.

ಅಬ್ಬಿಗೆರೆ ಸರ್ಕಾರಿ ಶಾಲೆ ಆವರಣದಲ್ಲಿ 100ಕ್ಕೂ ಹೆಚ್ಚು ಮರಗಳಿವೆ. ಅಬ್ಬಿಗೆರೆಯಿಂದ ಚಿಕ್ಕಬಾಣಾವರಕ್ಕೆ ಸಂಪರ್ಕಿಸುವ ಮುಖ್ಯರಸ್ತೆಯನ್ನು ಅಗಲೀಕರಣ ಮಾಡಲು ಪಾಲಿಕೆ ಅಧಿಕಾರಿಗಳು, ಗುತ್ತಿಗೆದಾರರು ಮುಂದಾಗಿದ್ದಾರೆ. ಈ ಅಗಲೀಕರಣ ಅವೈಜ್ಞಾನಿಕವಾಗಿದ್ದು, ಯಾವುದೇ ಕಾರಣಕ್ಕೂ ಮುಂದುವರೆಸದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮನವಿ ಮಾಡುತ್ತಿದ್ದಾರೆ.

20 ವರ್ಷದ ಮರಗಳು:

ಈ ಕುರಿತಂತೆ ಜಿಂದಾಲ್ ಜುಬ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ಮತ್ತು ಈಗ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು, ಶಿಕ್ಷಕರು, ಮುಖ್ಯೋಪಾಧ್ಯಾಯರು ಮತ್ತು ಸ್ಥಳೀಯರನ್ನು ಈ ಟಿವಿ ಭಾರತದ ಪ್ರತಿನಿಧಿ ಮಾತನಾಡಿಸಿದ್ದಾರೆ.

ಈ ವೇಳೆ ಅವರು, ಈ ಮರಗಳು 15-20 ವರ್ಷದ ಹಳೆಯ ಮರಗಳಾಗಿವೆ. ಈ ಶಾಲೆ ಕೂಡ 30 ವರ್ಷದ ಹಳೆಯದ್ದಾಗಿದೆ. ಶಿಕ್ಷಣ ಅಥವಾ ಅರಣ್ಯ ಇಲಾಖೆಯಾಗಲಿ ಮರಗಳನ್ನು ಕಡಿಯುತ್ತೇವೆ ಎಂದು ಯಾವುದೇ ನೋಟಿಸ್ ನೀಡಿಲ್ಲ ಎಂದು ಹೇಳಿದರು.

ಜನಪ್ರತಿನಿಧಿಗಳ ಅಸಡ್ಡೆ:

ಪಾಲಿಕೆ ಹಾಗೂ ಅಧಿಕಾರಿಗಳು ಮರ ಕಡಿಯಲು ಮುಂದಾಗಿರುವುದರ ಬಗ್ಗೆ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದೇವೆ. ಆದರೆ, ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಪಾಲಿಕೆ ಅಧಿಕಾರಿಗಳಿಂದ ನೋ ರೆಸ್ಪಾನ್ಸ್

ಈ ಕುರಿತು ಪೀಣ್ಯ ದಾಸರಹಳ್ಳಿ ವಿಭಾಗದ ಪಾಲಿಕೆ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಯಾವುದೇ ಸ್ಪಂದನೆ ನೀಡುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

Last Updated : Sep 9, 2021, 11:53 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.