ಬೆಂಗಳೂರು: ರೈತರನ್ನು ಗೌರವದಿಂದ ಕಾಣಬೇಕು. ಜೊತೆಗೆ ರೈತರ ಅಹವಾಲನ್ನು ಆಲಿಸಬೇಕೆಂದು ಮಾಜಿ ಪ್ರಧಾನಿ, ರಾಜ್ಯಸಭಾ ಸದಸ್ಯ ಹೆಚ್.ಡಿ. ದೇವೇಗೌಡ ಅವರು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
-
I am extremely distressed seeing the images of confrontation with farmers near Delhi. I request the Union Government to treat farmers with dignity. Please engage with them. Listen to them. Police force cannot solve the problem. #FarmersProtest
— H D Devegowda (@H_D_Devegowda) November 26, 2020 " class="align-text-top noRightClick twitterSection" data="
">I am extremely distressed seeing the images of confrontation with farmers near Delhi. I request the Union Government to treat farmers with dignity. Please engage with them. Listen to them. Police force cannot solve the problem. #FarmersProtest
— H D Devegowda (@H_D_Devegowda) November 26, 2020I am extremely distressed seeing the images of confrontation with farmers near Delhi. I request the Union Government to treat farmers with dignity. Please engage with them. Listen to them. Police force cannot solve the problem. #FarmersProtest
— H D Devegowda (@H_D_Devegowda) November 26, 2020
ಈ ಕುರಿತು ಟ್ವೀಟ್ ಮಾಡಿರುವ ಅವರು, ಕೇಂದ್ರ ಸರ್ಕಾರದ ಕೃಷಿ ನೀತಿ ವಿರೋಧಿಸಿ ರೈತರು ನಡೆಸುತ್ತಿರುವ ದೆಹಲಿ ಚಲೋ ರ್ಯಾಲಿ ತಡೆಯಲು ಪೊಲೀಸ್ ಪಡೆಯನ್ನು ಬಳಕೆ ಮಾಡಿರುವ ಚಿತ್ರಗಳನ್ನು ಗಮನಿಸಿದ್ದೇನೆ. ಪ್ರತಿಭಟನಾ ರ್ಯಾಲಿ ನಡೆಸುತ್ತಿರುವ ರೈತರಿಗೆ ತೊಂದರೆ ಆಗುತ್ತಿರುವುದನ್ನು ನೋಡಿದ್ದೇನೆ ಎಂದಿದ್ದಾರೆ.
ರೈತರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳಬೇಕು. ಅದನ್ನು ಬಿಟ್ಟು ರೈತರ ಮೇಲೆ ದೌರ್ಜನ್ಯ ನಡೆಸುವುದು ಸರಿಯಲ್ಲ. ರೈತರ ಸಮಸ್ಯೆ ಪರಿಹರಿಸಲು ಕೇಂದ್ರ ಸರ್ಕಾರ ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.