ETV Bharat / state

ಕುಂಟುತ್ತಲೇ ಸಾಗಿರುವ ರಾಜಧಾನಿಯ ಜೀವನಾಡಿ: ಲಾಕ್‌ಡೌನ್ - ನೈಟ್ ಕರ್ಪ್ಯೂನಿಂದ ಸಾರಿಗೆ ಕ್ಷೇತ್ರ ತತ್ತರ

ಕೊರೊನಾದಿಂದ ನಷ್ಟದ ಹಾದಿ ಹಿಡಿದ ಸಾರಿಗೆ ನಿಗಮಗಳು ನಂತರದ ದಿನಗಳಲ್ಲಿ ಲಾಭಕ್ಕೆ ಮರಳಲು ಕಾರ್ಗೋ ಸೇವೆ ಆರಂಭಿಸಿತ್ತು. ಅಷ್ಟೇ ಅಲ್ಲದೇ ನಿಂತಲ್ಲೇ ನಿಂತಿದ್ದ ದುಬಾರಿ ವಜ್ರ ಬಸ್‌ಗಳ ಟಿಕೆಟ್ ದರ ಕಡಿತ ಮಾಡಿ ನೋ ಲಾಸ್ ನೋ ಪ್ರಾಫಿಟ್ ಸೂತ್ರವನ್ನ ಹಿಡಿದಿತ್ತು. ಇತ್ತ ಬಹುಕಾಲದ ಕನಸಾಗಿದ್ದ ಆಟೋ ಚಾಲಕರ ಒತ್ತಾಯವನ್ನ ಸರ್ಕಾರ ಪೂರೈಸಿ ಆಟೋ ಮೀಟರ್ ದರ ಈ ವರ್ಷ ಏರಿಸಲಾಗಿದೆ.

ಲಾಕ್ ಡೌನ್-ನೈಟ್ ಕರ್ಪ್ಯೂನಿಂದ ಸಾರಿಗೆ ಕ್ಷೇತ್ರ ತತ್ತರ

author img

By

Published : Dec 21, 2021, 5:48 PM IST

ಬೆಂಗಳೂರು : ಕೋವಿಡ್ ಕಾಲಿಟ್ಟ ಘಳಿಗೆಗೆ ಮಕಾಡೆ ಮಲಗಿದ್ದು ಮಾತ್ರ ಸಾರಿಗೆ ನಿಗಮಗಳು. ಆಟೋ ಚಾಲಕರು, ಖಾಸಗಿ ಬಸ್‌ಗಳ ಮಾಲೀಕರು ಹಾಗೂ ಕ್ಯಾಬ್ ಚಾಲಕರ ಪಾಡಂತೂ ಹೇಳ ತೀರದು. 2021ರ ವರ್ಷ ಸಾರಿಗೆ ನಿಗಮಗಳ ಏಳು - ಬೀಳಿಗೆ ಸಾಕ್ಷಿಗಿರುವುದಂತೂ ಸುಳ್ಳಲ್ಲ.

ಲಾಕ್‌ಡೌನ್ - ನೈಟ್ ಕರ್ಪ್ಯೂ ಜೊತೆಗೆ ಸಿಬ್ಬಂದಿ ಮುಷ್ಕರದಿಂದ ನಿಗಮಗಳು ತತ್ತರಿಸಿವೆ. ನಾಲ್ಕು ಸಾರಿಗೆ ನಿಗಮಗಳು ತನ್ನ ಸಿಬ್ಬಂದಿಗೆ ವೇತನ ನೀಡಲೂ ಆಗದೇ ಸಂಕಷ್ಟ ಎದುರಿಸಿದ್ದವು. ಇತ್ತ ಮುಳುಗುತ್ತಿದ್ದ ನಿಗಮಗಳ ಸಹಾಯಕ್ಕೆ ಸರ್ಕಾರವೇ ಧಾವಿಸಬೇಕಾಯ್ತು.

ಕೊರೊನಾದಿಂದಾಗಿ ನಷ್ಟದ ಹಾದಿ ಹಿಡಿದ ಸಾರಿಗೆ ನಿಗಮಗಳು ನಂತರದ ದಿನಗಳಲ್ಲಿ ಲಾಭಕ್ಕೆ ಮರಳಲು ಕಾರ್ಗೋ ಸೇವೆಯನ್ನ ಆರಂಭಿಸಿತ್ತು. ಅಷ್ಟೇ ಅಲ್ಲ, ನಿಂತಲ್ಲೇ ನಿಂತಿದ್ದ ದುಬಾರಿ ವಜ್ರ ಬಸ್‌ಗಳ ಟಿಕೆಟ್ ದರ ಕಡಿತ ಮಾಡಿ ನೋ ಲಾಸ್ ನೋ ಪ್ರಾಫಿಟ್ ಸೂತ್ರವನ್ನ ಹಿಡಿದಿದೆ.

ಇತ್ತ ಬಹುಕಾಲದ ಕನಸಾಗಿದ್ದ ಆಟೋ ಚಾಲಕರ ಒತ್ತಾಯವನ್ನ ಸರ್ಕಾರ ಪೂರೈಸಿ ಆಟೋಮೀಟರ್ ದರ ಈ ವರ್ಷ ಏರಿಸಲಾಯಿತು. ಮತ್ತೊಂದು ಕಡೆ ನಮ್ಮ ಮೆಟ್ರೋ ಮತ್ತೊಂದು ಮೈಲಿಗಲ್ಲು ಸಾಧಿಸಿ ಮೈಸೂರು ರಸ್ತೆ ಟು ಕೆಂಗೇರಿ ಮೆಟ್ರೋ ಸಂಚಾರಕ್ಕೆ ಹಸಿರು ನಿಶಾನೆಯನ್ನೂ ನೀಡಲಾಗಿದೆ.

ದೊಡ್ಡ ಹೊಡೆತ ಕೊಟ್ಟ 15 ದಿನಗಳ ಮುಷ್ಕರ : ಕೊರೊನಾ ಸಂಕಷ್ಟದ ಮಧ್ಯೆ ಏಪ್ರಿಲ್ 7ರಂದು ನಾಲ್ಕು ಸಾರಿಗೆ ಸೇವೆಗಳು ಬಂದ್ ಮಾಡಿದ್ದವು. ಪರ್ಯಾಯ ಮಾರ್ಗಕ್ಕೆ ಮುಂದಾದ ಸಾರಿಗೆ ಇಲಾಖೆಯು ಮೆಜೆಸ್ಟಿಕ್​​​ನಲ್ಲಿ ಖಾಸಗಿ ಬಸ್‌ಗಳ ಓಡಾಟಕ್ಕೆ ಅನುವು ಮಾಡಿತ್ತು. ಮತ್ತೊಂದು ಕಡೆ 5 ನಿಮಿಷಕ್ಕೊಮ್ಮೆ ಮೆಟ್ರೋ ಸಂಚಾರದ ವ್ಯವಸ್ಥೆ ಮಾಡಿ ಪರಿಸ್ಥಿತಿ ನಿಬಾಯಿಸಲು ಮುಂದಾಯಿತು.

ಇನ್ನು ಕೆಲಸಕ್ಕೆ ಹಾಜರಾಗದಿದ್ದರೆ ಮಾರ್ಚ್ ತಿಂಗಳ ವೇತನ ಕಡಿತ ಮಾಡೋದಾಗಿ ಬಿಎಂಟಿಸಿ ಎಂ ಡಿ ಶಿಖಾ ಆದೇಶ ಮಾಡಿದ್ದರು. ಮುಷ್ಕರದಲ್ಲಿ ಭಾಗಿಯಾದವರಿಗೆ ವಸತಿಗೃಹ ಖಾಲಿ ಮಾಡುವಂತೆ ಬಿಎಂಟಿಸಿ ನೋಟಿಸ್ ಜಾರಿ ಮಾಡಿತು. ಮುಷ್ಕರ ಬೆಂಬಲಿಸಿ ಕೆಲಸಕ್ಕೆ ಗೈರಾಗಿದ್ದ ತರಬೇತಿ ನೀರತರನ್ನ ವಜಾ ಕೂಡ ಮಾಡಿದ್ದರಿಂದ ಸಾಕಷ್ಟು ಸುದ್ದಿ ಆಯಿತು.

ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ ನೇತೃತ್ವದಲ್ಲಿ ನಡೆದ ಸಾರಿಗೆ ನೌಕರರ ಮುಷ್ಕರ 15 ದಿನಗಳ ಬಳಿಕ ಅದು ಕೂಡ ಕೋರ್ಟ್ ಚಾಟಿ ಬಿಸಿದ ಮೇಲೆ ಎಲ್ಲ ನೌಕರರು ಕೆಲಸಕ್ಕೆ ಹಾಜರಾದರು.15 ದಿನಗಳ ಮುಷ್ಕರದಿಂದ ನಾಲ್ಕು ಸಾರಿಗೆ ನಿಗಮಗಳಿಗೆ ₹287 ಕೋಟಿ ಆದಾಯ ನಷ್ಟ ಉಂಟಾಯಿತು.

ಬಳಿಕ ಅಗತ್ಯ ಸೇವೆಗೆ ಒಳಪಡುವವರು ವರ್ಷಪೂರ್ತಿ ಮುಷ್ಕರಕ್ಕೆ ನಿಷೇಧ ಅಂತಾ ಆದೇಶ ಹೊರಡಿಸಿತ್ತು. ಈ ಮಧ್ಯೆ ಕಲ್ಲು ತೂರಾಟ, ಕೆಲಸಕ್ಕೆ ಗೈರು. ಹೀಗೆ ನಾನಾ ಕಾರಣಗಳಿಂದ ನೌಕರರು ವಜಾಗೊಂಡಿದ್ದರು. ಬಳಿಕ ನೂತನ ಸಾರಿಗೆ ಸಚಿವರಾಗಿ ಶ್ರೀರಾಮುಲು ಬಂದು ಸಾರಿಗೆ ನೌಕರರ ಬೇಡಿಕೆಗೆ ಅಸ್ತು ಅಂದು ವಜಾಗೊಂಡಿದ್ದ 4,200 ನೌಕರರ ಮರು ನೇಮಕಕ್ಕೆ ಆದೇಶಿಸಿದರು. 2021ರ ವರ್ಷದಲ್ಲಿ ಅತೀ ಹೆಚ್ಚು ಸುದ್ದಿ ಆಗಿದ್ದು ನೌಕರರ ಮುಷ್ಕರ.

ಹಾಗಾದ್ರೆ ಏರುಪೇರಿನೊಂದಿಗೆ ಹೇಗಿತ್ತು ಸಾರಿಗೆ ಸಮಾಚಾರ ? ಜಾರಿಯಾದ ಹೊಸ ಯೋಜನೆಗಳಾವವು.. ಈ ಕುರಿತ ಮಾಹಿತಿ..

  • ಬೆಂಗಳೂರು ದಿನೇ ದಿನೆ ಬೆಳೆಯುತ್ತಲೇ ಇದೆ. ಇಲ್ಲಿ ವಾಸಿಸುವ ಜನರು ಹಗಲು ರಾತ್ರಿ ಎನ್ನದೇ ಓಡಾಡೋದು ಮಾಮೂಲಿ. ಹೀಗಾಗಿ, ಬಿಎಂಟಿಸಿ ಯು ಮಿಡ್ ನೈಟ್‌ನಲ್ಲೇ ಸೇವೆ ನೀಡಲು ಮುಂದಾಯಿತು.
  • ಗುತ್ತಿಗೆ ಆಧಾರದಲ್ಲಿ ಎಲೆಕ್ಟ್ರಿಕ್ ಬಸ್​​​ ಖರೀದಿಗೆ ಟೆಂಡರ್‌ ಫೈನಲ್ ಮಾಡಿದ ಬಿಎಂಟಿಸಿ, ಪ್ರಾಯೋಗಿಕವಾಗಿ 2 ಬಸ್‌ಗಳನ್ನ ರಸ್ತೆಗಿಳಿಸಿದ್ದವು.
  • ಮಹಿಳಾ ನಿರ್ವಾಹಕಿಯರಿಗೆ ಪಾಳಿ ವ್ಯವಸ್ಥೆ ಜಾರಿ ಮಾಡಿ ಆಸಕ್ತಿ ಇದ್ದವರಿಗಷ್ಟೇ ನೈಟ್ ಶಿಫ್ಟ್ ಜಾರಿ.
  • ಬಸ್‌ನಲ್ಲಿ ಬಿಟ್ಟು ಹೋಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಸಾಮಗ್ರಿ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಬಿಎಂಟಿಸಿ ನೌಕರರು ಎಲ್ಲರ ಮೆಚ್ಚುಗೆಗೆ ಕಾರಣರಾದರು.
  • ಆರ್ಥಿಕ ಸಂಕಷ್ಟಕ್ಕೆ ಟಿಟಿಎಂಸಿಯನ್ನೇ ಅಡಮಾನ ಇಟ್ಟ ಬಿಎಂಟಿಸಿ, ₹160 ಕೋಟಿ ಸಾಲ ಪಡೆಯಬೇಕಾದ ಸ್ಥಿತಿ ನಿರ್ಮಾಣವಾಯ್ತು.
  • ಬಿಎಂಟಿಸಿ ಚಾಲಕ ನಿರ್ವಾಹಕರಿಗೆ ಬಿಗ್ ರಿಲೀಫ್ ನೀಡಿ ಟಿಕೆಟ್ ಪಡೆಯದೇ ಇರೋ ಪ್ರಯಾಣಿಕರಿಗೆ ದಂಡ ವಸೂಲಿಗೆ ಹೊಸ ರೂಲ್ಸ್ ಜಾರಿ.
  • ಕೊರೊನಾ ಆತಂಕದ ನಡುವೆಯೇ ವಾಕ್ಸಿನೇಷನ್ ಬಂದಾಗ ಹಲವರು ಹಿಂದೆಟು ಹಾಕುತ್ತಿದ್ದರು. ಹೀಗಾಗಿ ಲಸಿಕೆ ಹಾಕಿಸಿಕೊಂಡವರಿಗೆ ಅಷ್ಟೇ ಸ್ಟೇರಿಂಗ್ ಹಿಡಿಯಲು ಅವಕಾಶ ಅಂತಾ ಬಿಎಂಟಿಸಿಯಿಂದ ಸುತ್ತೋಲೆ ಜಾರಿ.
  • ಸಾರ್ವಜನಿಕರಿಗೆ ವ್ಯಾಕ್ಸಿನೇಷನ್ ನೀಡುವ ಸಲುವಾಗಿ ಕೆಎಸ್ಆರ್​​ಟಿಸಿ ಬಸ್‌ಗಳ ಬಳಕೆ.
  • Over Time ಕೆಲಸ ಮಾಡಿದರೂ ಸಿಗೋಲ್ಲ BATA ಭತ್ಯೆ, ಸಾರಿಗೆ ಸಿಬ್ಬಂದಿಗೆ ರಾಜ್ಯ ಸರ್ಕಾರ ವೇತನ ಬಿಡುಗಡೆ ಮಾಡಿ ಷರತ್ತು.
  • ಕೆಎಸ್‌ಆರ್‌ಟಿಸಿ ಹೆಸರು ಕೇರಳದ್ದೋ ಕರ್ನಾಟಕದ್ದಾ ಎಂಬ ದೊಡ್ಡ ಚರ್ಚೆಯೇ ನಡೆಯಿತು.
  • ಒಲಿಂಪಿಕ್​ನಲ್ಲಿ ಭಾರತಕ್ಕೆ ಬಂಗಾರ ತಂದ ನೀರಜ್ ಚೋಪ್ರಾಗೆ ಕೆಎಸ್ಆರ್​​ಟಿಸಿಯಿಂದ ಲೈಫ್ ಟೈಂ ಗೋಲ್ಡನ್ ಬಸ್ ಪಾಸ್ ಘೋಷಣೆ.
  • ಪ್ರತಿಷ್ಠಿತ ಸಕ್ಷಮ್ - 2021ರ ರಾಷ್ಟ್ರ ಮಟ್ಟದ ಮೊದಲನೆ ಅತ್ಯುತ್ತಮ ಪ್ರಶಸ್ತಿ ಬಿಎಂಟಿಸಿ ಮುಡಿಗೆ.
  • ಕೋವಿಡ್ ಸಮಯದಲ್ಲಿ ಅತ್ಯುತ್ತಮ ಸಾಧನೆಗೆ ಬಿಎಂಟಿಸಿಗೆ ಕೊರೊನಾ ವಾರಿಯರ್‌ ಮ್ಯಾನೇಜ್‌ಮೆಂಟ್ ಪ್ಲಾಟಿನಂ ಪ್ರಶಸ್ತಿ.
  • ಕೆಎಸ್‌ಆರ್‌ಟಿಸಿಯ "ಸಾರಿಗೆ ಸುರಕ್ಷಾಗೆ ಸ್ಕೋಚ್ ಆರ್ಡರ್ ಆಫ್ ಮೆರಿಟ್ ಪ್ರಶಸ್ತಿ.
  • ಸರ್ಕಾರಿ ಬಸ್ ಪ್ರಯಾಣದ ವೇಳೆ ಮೊಬೈಲ್ ಬಳಸಿ ಜೋರಾಗಿ ಶಬ್ದ ಮಾಡುವುದು ನಿಷೇಧಿಸಿ ಕೆಎಸ್‌ಆರ್​ಟಿಸಿ ಎಂಡಿ ಶಿವಯೋಗಿ ಕಳಸದ ಆದೇಶ.
  • ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಆದೇಶದಂತೆ ಭಾರತದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಬಿಎಸ್ 6 ವಾಹನ ಖರೀದಿಸಲು ಮುಂದಾದ ಬಿಎಂಟಿಸಿ.
  • ಪ್ರಯಾಣಿಕರಿಗೆ ವಜ್ರ ಬಸ್‌ಗಳ ಟಿಕೆಟ್ ದರ ಕಡಿತ ಮಾಡಿದ ಬಿಎಂಟಿಸಿ.
  • ಇತ್ತ ನೈರುತ್ಯ ರೈಲ್ವೆ ಇಲಾಖೆಯು ಬೆಂಗಳೂರಿನಿಂದ ಏರ್ ಪೋರ್ಟ್‌ಗೆ ವಾರದಲ್ಲಿ 6 ದಿನ ರೈಲು ಸೇವೆ ಆರಂಭ.
  • ಕೊರೊನಾ ಹಿನ್ನೆಲೆ 14 ದಿನಗಳ ಕರ್ಫ್ಯೂ ಜಾರಿಯಾದ ಕಾರಣಕ್ಕೆ ನೈರುತ್ಯ ರೈಲ್ವೆ ಸೀಟ್ ರಿಸರ್ವೇಷನ್ ಸೆಂಟರ್ ಬಂದ್.
  • ಕೋವಿಡ್ -19 ಕಾರಣಕ್ಕೆ ಹಲವು ಬಾರಿ ರೈಲ್ವೆ ಪ್ಲಾಟ್ ಫಾರ್ಮ್ ಟಿಕೆಟ್ ದರ ಪರಿಷ್ಕರಣೆ.
  • ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಸ್ಟಿಕ್ ಬಾಟೆಲ್ ಬಳಕೆ ಹೆಚ್ಚಾದ ಕಾರಣಕ್ಕೆ ಪೆಟ್ ಬಾಟಲ್ ಪುಡಿ ಮಾಡುವ ಯಂತ್ರಗಳ ಸ್ಥಾಪನೆ.
  • ಕೊರೊನಾ ಎರಡನೇ ಅಲೆ ಕಾರಣಕ್ಕೆ ನಮ್ಮ ಮೆಟ್ರೋ ರೈಲು ಓಡಾಟದಲ್ಲಿ ಸಮಯ ಬದಲಾವಣೆ ಮಾಡಿ ಶನಿವಾರ- ಭಾನುವಾರ ರೈಲು ಸಂಚಾರ ರದ್ದು.
  • ಯಲಚೇನಹಳ್ಳಿ- ಅಂಜನಾಪುರ ಮಾರ್ಗಕ್ಕೆ ಹಸಿರು ನಿಶಾನೆ.
  • ನಮ್ಮ ಮೆಟೋ ಮತ್ತೊಂದು ಮೈಲಿಗಲ್ಲು ಸಾಧಿಸಿ, ಮೈಸೂರು ರಸ್ತೆ ಟು ಕೆಂಗೇರಿ ಮೆಟ್ರೋ ಸಂಚಾರಕ್ಕೆ ನಿಶಾನೆ.
  • ಕೊರೊನಾದ ಸಂದರ್ಭದಲ್ಲಿ ಬೆಡ್ ಗಳ ಸಮಸ್ಯೆ ಸೃಷ್ಟಿಯಾದಾಗ ಮೆಟ್ರೋ ಸಿಬ್ಬಂದಿ- ಕಾರ್ಮಿಕರಿಗಾಗಿ ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್ ಅನ್ನ ಬಿಎಂಆರ್ ಸಿಎಲ್ ಸ್ಥಾಪಿಸಿತು.
  • ಕೊರೊನಾ ಹರಡುವ ಭೀತಿಗೆ ನಮ್ಮ ಮೆಟ್ರೋದಲ್ಲಿ ಸ್ಮಾರ್ಟ್ ಕಾರ್ಡ್ ಹೊಂದಿರುವ ಪ್ರಯಾಣಿಕರಿಗಷ್ಟೇ ಓಡಾಟಕ್ಕೆ ಅವಕಾಶ ಕಲ್ಪಿಸಿತ್ತು. ನಂತರ ಪ್ರಯಾಣಿಕರ ಒತ್ತಡಕ್ಕೆ ಮಣಿದ ಬಿಎಂಆರ್ ಸಿಎಲ್ ಟೋಕನ್ ವಿತರಿಸಲು ನಿರ್ಧಾರಿಸಿತ್ತು.
  • ಕೋವಿಡ್ ರೂಲ್ಸ್ ಬ್ರೇಕ್ ಮಾಡಿದ ಮೆಟ್ರೋ ಪ್ರಯಾಣಿಕರ ಮೇಲೆ ಬಿಎಂಆರ್‌ಸಿಎಲ್ ದಂಡ ಪ್ರಯೋಗ.
  • ಶಿವಾಜಿನಗರದಲ್ಲಿ 13 ತಿಂಗಳ ಬಳಿಕ ಸುರಂಗದಿಂದ ಊರ್ಜಾ ನಂತರ ವಿಂಧ್ಯಾ ಯಂತ್ರಗಳು ಕೊರೆದು ಹೊರ ಬಂದವು. ಈ ಮೂಲಕ ಮೆಟ್ರೋ ಕಾಮಗಾರಿ ಮತ್ತಷ್ಟು ಚುರುಕು ಪಡೆದುಕೊಂಡವು.
  • ಸಾರ್ವಜನಿಕರಿಗೆ ಶಾಕಿಂಗ್ ನ್ಯೂಸ್ ಅಂತೆ ಸ್ಕ್ರಾಪ್ ಪಾಲಿಸಿ ತರುವ ಮಾತುಕತೆ ನಡಿತು. ಸ್ಕ್ರಾಪ್ ಪಾಲಿಸಿ ಕರ್ಮಷಿಯಲ್ ವೆಹಿಕಲ್‌ಗೆ ಓಕೆ.. ಆದರೆ, ಪಸರ್ನಲ್ ವೆಹಿಕಲ್‌ಗೆ ಯಾಕೆ ಅನ್ನೋ ಚರ್ಚೆಗಳು ನಡೆದವು.
  • ದೇಶವ್ಯಾಪ್ತಿ ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಲಾರಿ ಬಂದ್ ಕರೆ ನೀಡಿ ರಾಜಧಾನಿಯಲ್ಲಿ ಲಾರಿಗಳ ಓಡಾಟ ಸ್ಥಗಿತಗೊಂಡಿದ್ದವು.
  • ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದ್ದ ಆಟೋ, ಟ್ಯಾಕ್ಸಿ, ಮ್ಯಾಕ್ಸಿ ಚಾಲಕರಿಗೆ 3,000 ರೂ. ಪರಿಹಾರದ ಹಣ ಸರ್ಕಾರ ಘೋಷಣೆ.
  • 8 ವರ್ಷದ ಬಳಿಕ ಆಟೋ ದರ ಪರಿಷ್ಕರಣೆ ಮಾಡಿದ ಬೆಂಗಳೂರು ಜಿಲ್ಲಾಡಳಿತ, ಮಿನಿಮಂ ಜಾರ್ಜ್ 25 ರಿಂದ 30ರೂ ಏರಿಕೆ ಮಾಡು ಡಿಸೆಂಬರ್ 1 ರಿಂದ ಹೊಸ ದರ ಜಾರಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.