ETV Bharat / state

LIVE UPDATE: ಎರಡನೇ ದಿನವೂ ಮುಂದುವರಿದ ಸಾರಿಗೆ ನೌಕರರ ಮುಷ್ಕರ: ಎಂಟು ಬಸ್​ಗಳ ಮೇಲೆ ಕಲ್ಲು ತೂರಾಟ - ಎರಡನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಪ್ರತಿಭಟನೆ

ಸಾರಿಗೆ ನೌಕರರ ಪ್ರತಿಭಟನೆ
ಸಾರಿಗೆ ನೌಕರರ ಪ್ರತಿಭಟನೆ
author img

By

Published : Dec 12, 2020, 9:05 AM IST

Updated : Dec 12, 2020, 6:07 PM IST

17:58 December 12

ಪೊಲೀಸ್ ಭದ್ರತೆಯಲ್ಲಿ ಎರಡು ಸಾರಿಗೆ ಬಸ್​ಗಳ ಸಂಚಾರ

ಮೈಸೂರು: ಪ್ರಯಾಣಿಕರ ಪರದಾಟ ಕಂಡು ಸಾರಿಗೆ ಅಧಿಕಾರಿಗಳು, ಪೊಲೀಸ್ ಭದ್ರತೆಯೊಂದಿಗೆ ಸಾರಿಗೆ ಬಸ್​ಗಳು ಬೆಂಗಳೂರಿಗೆ ತೆರಳಲು ವ್ಯವಸ್ಥೆ ಮಾಡಿದ್ದಾರೆ.

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಎರಡು ದಿನಗಳಿಂದ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರದಿಂದ, ಇಂದು ಗ್ರಾಮಾಂತರ ಹಾಗೂ ನಗರ ಸಾರಿಗೆ ಬಸ್ ನಿಲ್ದಾಣಗಳು ಬೀಕೊ ಎನ್ನುತ್ತಿದ್ದವು. ಆದರೆ, ಪ್ರಯಾಣಿಕರ ಪರದಾಟವನ್ನು ಗಮನಿಸಿದ ಸಾರಿಗೆ ಅಧಿಕಾರಿಗಳು ಸಂಜೆ 4ರ ನಂತರ ಬೆಂಗಳೂರಿಗೆ ಮಾತ್ರ ಬಸ್​ಗಳು ತೆರಳುವಂತೆ ಮಾಡಿದರು. ಪೊಲೀಸ್ ವಾಹನದ ಬೆಂಗಾವಲಿನಲ್ಲಿ ಗ್ರಾಮಾಂತರ ಬಸ್ ನಿಲ್ದಾಣದಿಂದ ಬಸ್​ಗಳು ಬೆಂಗಳೂರಿಗೆ ತೆರಳಿವೆ.

17:20 December 12

ಖಾಸಗಿ ಬಸ್ ಮೊರೆಹೋದ ಪ್ರಯಾಣಿಕರು

ಖಾಸಗಿ ಬಸ್ ಮೊರೆಹೋದ ಪ್ರಯಾಣಿಕರು

ಆನೇಕಲ್: ಸಾರಿಗೆ ನೌಕರರ ಮುಷ್ಕರ ಇಂದೂ ಕೂಡ ಮುಂದುವರೆದಿದ್ದು ಬಿಎಂಟಿಸಿ ಕೆಎಸ್ಆರ್​​ಟಿಸಿ ಬಸ್​ಗಳು ರಸ್ತೆಗಿಳಿಯದ ಪರಿಣಾಮ ಪ್ರಯಾಣಿಕರು ಖಾಸಗಿ ಬಸ್​ಗಳ ಮೊರೆ ಹೋಗಿದ್ದಾರೆ.  ಆನೇಕಲ್, ಅತ್ತಿಬೆಲೆ, ಸರ್ಜಾಪುರ, ಜಿಗಣಿ, ಹೆಬ್ಬಗೋಡಿ ಸೇರಿದಂತೆ ಹಲವೆಡೆ  ಸರ್ಕಾರಿ ಬಸ್ ಸಂಚಾರವಿಲ್ಲದೆ ಜನ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. 

17:07 December 12

ನೌಕರರಿಂದ ಶಾಂತಿಯುತ ಪ್ರತಿಭಟನೆ

ನೌಕರರಿಂದ ಶಾಂತಿಯುತ ಪ್ರತಿಭಟನೆ

ಪುತ್ತೂರು: ಶುಕ್ರವಾರ ಬೆಂಗಳೂರು ನಗರ ಮತ್ತು ಕೆಲವು ಜಿಲ್ಲೆಗಳಲ್ಲಷ್ಟೇ ಕೆಎಸ್‌ಆರ್‌ಟಿಸಿ ನೌಕರರು ಮುಷ್ಕರ ನಡೆಸಿದ್ದರು. ಆದರೆ ಶನಿವಾರ ಮುಷ್ಕರದ ಬಿಸಿ ಪುತ್ತೂರು ವಿಭಾಗಕ್ಕೂ ತಟ್ಟಿದೆ. ಶುಕ್ರವಾರ ಪುತ್ತೂರು ವಿಭಾಗದ 5 ಘಟಕಗಳಿಂದಲೂ ಬಸ್‌ಗಳು ಓಡಾಟ ನಡೆಸಿದ್ದವು. ಇಂದು ಮಾತ್ರ ಯಾವುದೇ ಬಸ್​ಗಳು ರಸ್ತೆಗಿಳಿಯಲಿಲ್ಲ. ಸುಮಾರು 200ಕ್ಕೂ ಹೆಚ್ಚು ನೌಕರರು ನಿಲ್ದಾಣದಲ್ಲಿ ಶಾಂತಿಯುತವಾಗಿ ಧರಣಿ ನಡೆಸಿದ್ರು.

16:59 December 12

ಮಾನವೀಯತೆ ಮೆರೆದ ಸಾರಿಗೆ ಸಿಬ್ಬಂದಿ

ಮಾನವೀಯತೆ ಮೆರೆದ ಸಾರಿಗೆ ಸಿಬ್ಬಂದಿ

ಕಲಬುರಗಿ: ಬಸ್​ಗಳಿಗಾಗಿ ನಿಲ್ದಾಣದಲ್ಲೇ ಕಾಯುತ್ತಾ ಕುಳಿತ ಪ್ರಯಾಣಿಕರಿಗೆ ಸಾರಿಗೆ ನೌಕರರು ಉಪಹಾರ ನೀಡಿ ಮಾನವಿಯತೆ ಮೆರೆದಿದ್ದಾರೆ. ತಮ್ಮ ಹೋರಾಟ ಮುಂದುವರೆಸಿರುವ ಸಾರಿಗೆ ನೌಕರರು ನಿಲ್ದಾಣದ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ದೂರದ ಊರುಗಳಿಗೆ ತೆರಳಲು ಬಸ್ ನಿಲ್ದಾಣದಲ್ಲಿ ಕುಳಿತಿದ್ದ ಹಲವು ಮಂದಿಗೆ ಉಪಹಾರ ನೀಡಿದ್ದಾರೆ.

16:46 December 12

ಪ್ರಯಾಣಿಕರಿಗೆ ಊಟದ ವ್ಯವಸ್ಥೆ ಮಾಡಿದ ಸಾರಿಗೆ ಸಿಬ್ಬಂದಿ

ಕಾರವಾರ: ಬಸ್ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದ ಪ್ರಯಾಣಿಕರಿಗೆ ಸಾರಿಗೆ ಸಂಸ್ಥೆ ನೌಕರರೇ ಊಟದ ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.ಹೊರ ರಾಜ್ಯ ಹಾಗೂ ಜಿಲ್ಲೆಗಳಿಗೆ ತೆರಳುವ ಬಸ್ ಸಂಚಾರ ಸಂಪೂರ್ಣ ಸ್ತಬ್ಧವಾಗಿದ್ದು, ನಿಲ್ದಾಣದಲ್ಲಿ ಕುಳಿತ ಪ್ರಯಾಣಿಕರಿಗೆ ಪ್ರತಿಭಟನಾ ನಿರತ ಸಿಬ್ಬಂದಿಯೇ ಅನ್,ನ ನೀರು ಪೂರೈಸಿ ಮಾನವೀಯತೆ ಮೆರೆದಿದ್ದಾರೆ. ನಮ್ಮ ಬೇಡಿಕೆ ನಮ್ಮ ಜೀವನ ಪ್ರಶ್ನೆಯಾಗಿರುವುದರಿಂದ ಸಹಕಾರ ನೀಡುವಂತೆ ಪ್ರಯಾಣಿಕರಲ್ಲಿ ಮನವಿ ಮಾಡಿದ್ದಾರೆ. 

16:33 December 12

ಧರ್ಮಸ್ಥಳದಲ್ಲಿ ಪ್ರಯಾಣಿಕರ ಪರದಾಟ

Transport staff protest
ಧರ್ಮಸ್ಥಳದಲ್ಲಿ ಪ್ರಯಾಣಿಕರ ಪರದಾಟ

ಬೆಳ್ತಂಗಡಿ: ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿಪರಿಗಣಿಸಬೇಕು ಎಂದು ಕರೆನೀಡಿರುವ ಮುಷ್ಕರದಿಂದ ಧರ್ಮಸ್ಥಳದಲ್ಲೂ ಬೆಂಬಲ ವ್ಯಕ್ತವಾಗಿದ್ದು, ಯಾವುದೇ ಬಸ್ ಸಂಚಾರ ನಡೆಸುತ್ತಿಲ್ಲ. ಮುಷ್ಕರದಿಂದಾಗಿ ಪ್ರಯಾಣಿಕರು ಪರದಾಡುವಂತಾಗಿದೆ. ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವು ನಡೆಯುತ್ತಿದ್ದು, ನಾನಾ ಕಡೆಯಿಂದ ಆಗಮಿಸಿದ ಭಕ್ತರು ಹಿಂದಿರುಗಲು ಸಾರಿಗೆ ವ್ಯವಸ್ಥೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

15:59 December 12

ಮುಷ್ಕರ ಬಿಟ್ಟು ಮಾತುಕತೆಗೆ ಬನ್ನಿ: ಬಸವರಾಜ್ ಬೊಮ್ಮಾಯಿ

ಬೆಂಗಳೂರು: ಸಾರಿಗೆ ಸಂಸ್ಥೆ ನೌಕರರ ಮುಷ್ಕರವನ್ನು ಸಿಎಂ ಗಂಭೀರವಾಗಿ ಪರಿಗಣಿಸಿದ್ದಾರೆ. ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತಿದ್ದು, ಸಮಸ್ಯೆ ಬಗೆಹರಿಸಲು ಯತ್ನಿಸುತ್ತಿದ್ದಾರೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಸಾರ್ವಜನಿಕರ ದೃಷ್ಟಿಯಿಂದ ಎಲ್ಲಾ ರೀತಿಯ ರಕ್ಷಣೆ ಕೊಡುತ್ತಿದ್ದೇವೆ. ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದೇವೆ. ನಷ್ಟದ ಸಂದರ್ಭದಲ್ಲೂ ಸರ್ಕಾರ, ಸಾರಿಗೆ ನೌಕರರ ಜೊತೆ ಇದೆ. ಮೊದಲು ಮುಷ್ಕರ ಕೈಬಿಟ್ಟು ಮಾತುಕತೆಗೆ ಬನ್ನಿ ಎಂದಿದ್ದಾರೆ. ಅಲ್ಲದೆ ಎಸ್ಮಾ ಜಾರಿ ಮಾಡುವ ಪರಿಸ್ಥಿತಿ ಇನ್ನೂ ಬಂದಿಲ್ಲ, ಸದ್ಯಕ್ಕೆ ಎಸ್ಮಾ ಜಾರಿ ಮಾಡುವುದಿಲ್ಲ. ನೌಕರರಿಗೂ ಜನರ ಕಷ್ಟ ಗೊತ್ತಾಗಿದೆ. ಒಂದೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

15:43 December 12

ಹಾಸನದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ

ಹಾಸನದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ

ಹಾಸನ: ಕೆಎಸ್ಆರ್​ಟಿಸಿ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಬೇಕು ಎಂದು ಒತ್ತಾಯಿಸಿ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರದಿಂದ ಹಾಸನ ಬಸ್ ನಿಲ್ದಾಣ ಸಂಪೂರ್ಣ ಸ್ತಬ್ಧವಾಗಿದೆ. ಸಾರಿಗೆ ಬಸ್ ಬಂದ್ ಹಿನ್ನೆಲೆಯಲ್ಲಿ ಇಂದು ಡಿಪ್ಲೊಮಾ ನರ್ಸಿಂಗ್ ಪರೀಕ್ಷೆಗಳಿಗೆ ಬರುವ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ದೂರದಿಂದ ಬರುವ ವಿದ್ಯಾರ್ಥಿಗಳಿಗೆ ಬಸ್ ಇಲ್ಲದೆ ದುಬಾರಿ ಹಣ ಕೊಟ್ಟು ಖಾಸಗಿ ವಾಹನದಲ್ಲಿ ಬಂದು ಪರೀಕ್ಷೆ ಬರೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

15:28 December 12

ಅಥಣಿಯಲ್ಲೂ ರಸ್ತೆಗಿಳಿಯದ ಬಸ್​ಗಳು

ಅಥಣಿಯಲ್ಲೂ ರಸ್ತೆಗಿಳಿಯದ ಬಸ್​ಗಳು

ಅಥಣಿ: ಸಾರಿಗೆ ಸಚಿವರ ಸ್ವಕ್ಷೆತ್ರ ಅಥಣಿಯಲ್ಲೂ ಸಾರಿಗೆ ಸಂಸ್ಥೆ ನೌಕರರು ಬಸ್ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅಥಣಿ ಘಟಕದಿಂದ ಪ್ರತಿ ದಿನ 700 ಬಸ್​ಗಳು ವಿವಿಧ ರಾಜ್ಯ ಹಾಗೂ ಗ್ರಾಮೀಣ ಪ್ರದೇಶಗಳಿಗೆ ತೆರಳುತ್ತಿದ್ದವು. ನಿನ್ನೆ ಮಾತ್ರ ಕೆಲ ಕಾಲ ಬಸ್​ಗಳು ರಸ್ತೆಗಿಳಿದಿದ್ದವು. ಆದರೆ ಇಂದು ಸಂಚಾರ ಸ್ತಬ್ಧವಾಗಿದ್ದು, ಬಸ್​ ನಿಲ್ದಾಣ ಬಣಗುಡುತ್ತಿದೆ.

15:20 December 12

ಬಸ್ ನಿಲ್ದಾಣ ಸ್ವಚ್ಛಗೊಳಿಸಿದ ಸಾರಿಗೆ ಸಿಬ್ಬಂದಿ

ಕೊಪ್ಪಳ: ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಒತ್ತಾಯಿಸಿ ಸಾರಿಗೆ ಸಂಸ್ಥೆ ನೌಕರರು ನಡೆಸುತ್ತಿರುವ ಪ್ರತಿಭಟನೆ ಎರಡನೇ ದಿನವೂ ಮುಂದುವರಿದಿದ್ದು, ಮುಷ್ಕರದ ಹಿನ್ನೆಲೆಯಲ್ಲಿ ಬಸ್ ನಿಲ್ದಾಣ, ಬಸ್ ಹಾಗೂ ಪ್ರಯಾಣಿಕರಿಲ್ಲದೆ ಖಾಲಿಖಾಲಿಯಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಸಾರಿಗೆ ಸಂಸ್ಥೆ ನೌಕರರಿಂದಲೇ ಬಸ್ ನಿಲ್ದಾಣ ಸ್ವಚ್ಛಗೊಳಿಸಿದ್ದಾರೆ. ಅಧಿಕಾರಿಗಳ ಸೂಚನೆಯಂತೆ ಸಂಸ್ಥೆಯ ಸಿಬ್ಬಂದಿ ನಿಲ್ದಾಣವನ್ನು ಸ್ವಚ್ಛಗೊಳಿಸಿದ್ದು, ಅಧಿಕಾರಿಗಳ ಈ ಕ್ರಮ ಚರ್ಚೆಗೆ ಗ್ರಾಸವಾಗಿದೆ.

14:29 December 12

ಮುಷ್ಕರ ಹಿಂತೆಗೆದುಕೊಳ್ಳದಿದ್ದರೆ ಸೂಕ್ತ ಕ್ರಮ

ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ನಗರ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಾರಿಗೆ‌ ನೌಕರರ ಮುಷ್ಕರದಿಂದ  ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗಿದೆ. ಪ್ರತಿದಿನ 20 ಲಕ್ಷ ಪ್ರಯಾಣಿಕರು ಬಿಎಂಟಿಸಿ ಬಸ್​ಗಳಲ್ಲಿ ಸಂಚಾರ ನಡೆಸುತ್ತಾರೆ. ದಿಢೀರ್‌ ಮುಷ್ಕರದಿಂದಾಗಿ ತೊಂದರೆಯಾಗಿದೆ. ನಿನ್ನೆ ಸರ್ಕಾರದೊಂದಿಗೆ ಮಾತುಕತೆ ವಿಫಲವಾಗಿದ್ದು, ಇಂದು ಸಹ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸಾರಿಗೆ ನೌಕರರ ಮುಖಂಡರ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುವ ವಿಶ್ವಾಸವಿದೆ ಎಂದು ಸಿ.ಶಿಖಾ ತಿಳಿಸಿದರು.

ಇನ್ನು ನಗರದ ಕೆಲವೆಡೆ ಕರ್ತವ್ಯನಿರತ ಚಾಲಕ ಹಾಗೂ ನಿರ್ವಾಹಕರ ಮೇಲೆ ಹಲ್ಲೆ ಹಾಗೂ ಬಸ್​ಗಳಿಗೆ ಕಲ್ಲು ತೂರಾಟ ನಡೆಸಿದ್ದ ಸಂಬಂಧ ಪೊಲೀಸರು ಕೆಲವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಬೇಕು. ಹಾಗೂ ಕೋವಿಡ್​ನಿಂದಾಗಿ ಮೃತಪಟ್ಟ ಸಿಬ್ಬಂದಿಗೆ 30 ಲಕ್ಷ ನೀಡಬೇಕೆಂದು ಸಾರಿಗೆ ನೌಕರರು ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಸರ್ಕಾರ ಮಟ್ಟದಲ್ಲಿ ಚರ್ಚೆಯಾಗುತ್ತಿದೆ‌.‌ ಸಂಜೆಯೊಳಗೆ ಮುಷ್ಕರ ಹಿಂತೆಗೆದುಕೊಳ್ಳದಿದ್ದರೆ ಸಾರಿಗೆ ನೌಕರರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

13:37 December 12

ಮಂಡ್ಯ: ಪ್ರತಿ ನಿತ್ಯ ಜನಜಂಗುಳಿಂದ ಕೂಡಿರುತ್ತಿದ್ದ ಬಸ್​ ನಿಲ್ದಾಣದಲ್ಲಿ ಬೆರಳೆಣಿಕೆಯಷ್ಟು ಪ್ರಯಾಣಿಕರು ಮಾತ್ರ ಬಸ್​ಗಾಗಿ ಕಾಯುತ್ತಿದ್ದು, ಬಸ್​ ನಿಲ್ದಾಣ ಬಿಕೋ ಎನ್ನುತ್ತಿದೆ. ಡಿಪೋದಲ್ಲೆ KSRTC ಬಸ್​ಗಳು ನಿಂತಿರುವುದರಿಂದ ಪ್ರಯಾಣಿಕರು ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಒಟ್ಟು 6 ಡಿಪೋಗಳ ಪೈಕಿ ಪ್ರತಿ ದಿನದ 82‌ ಬಸ್ಸುಗಳು ಸಂಚರಿಸುತ್ತವೆ. 1,200 ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಇಂದು ಎಲ್ಲಾ ಮುಷ್ಕರಕ್ಕೆ ಬೆಂಬಲ ನೀಡಿದ್ದಾರೆ.

13:28 December 12

ಖಾಸಗಿ ವಾಹನಗಳ ಮೊರೆ ಹೋಗುತ್ತಿರುವ ಪ್ರಯಾಣಿಕರು

ಗುರುಮಠಕಲ್ ಬಸ್ ನಿಲ್ದಾಣ
ಗುರುಮಠಕಲ್ ಬಸ್ ನಿಲ್ದಾಣ

ಗುರುಮಠಕಲ್: ಗುರುಮಠಕಲ್​ನಲ್ಲಿ ಇಂದು ಸಾರಿಗೆ ಬಸ್​ಗಳು ಬೀದಿಗಿಳಿದಿಲ್ಲ. ಸಾರಿಗೆ ಇಲಾಖೆ ನೌಕರರು ಕೆಲಸಕ್ಕೆ ಗೈರಾಗಿದ್ದು, ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಕಾದು ನಂತರ ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದಾರೆ. ನೌಕರರ ಹೋರಾಟದ ಹಿನ್ನೆಲೆ ಗುರುಮಠಕಲ್ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ದೂರದ ಊರುಗಳಿಗೆ ತೆರಳುವ ಪ್ರಯಾಣಿಕರು ಪರದಾಡುವಂತಾಗಿದೆ.

13:10 December 12

ಮುಷ್ಕರ ಹಿನ್ನೆಲೆ ಪರೀಕ್ಷೆ ಮುಂದೂಡಿಕೆ:

ಬೆಳಗಾವಿ: ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಹಿನ್ನೆಲೆ ರಾಣಿ ಚೆನ್ನಮ್ಮ ವಿಶ್ವ ವಿಶ್ವವಿದ್ಯಾಲಯದ ಪರೀಕ್ಷೆ ಮುಂದೂಡಿಕೆ ಮಾಡಿದೆ. ಪ್ರತಿಭಟನೆಯಿಂದಾಗಿ ಸೂಕ್ತ ಬಸ್​ಗಳಿಲ್ಲದೆ ವಿದ್ಯಾರ್ಥಿಗಳು ಬಾರದ ಹಿನ್ನೆಲೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಪರೀಕ್ಷೆಗಳನ್ನು ಮುಂದೂಡಿ ಆದೇಶ ಹೊರಡಿಸಿದೆ. ಚೆನ್ನಮ್ಮ ವಿವಿ ಯಲ್ಲಿ  ಡಿಪ್ಲೊಮಾ ಇನ್ ಯೋಗಾ, ಪಿಹೆಚ್‌ಡಿ ಕೋರ್ಸ್ ವರ್ಕ್, ಅಂಬೇಡ್ಕರ್ ಸ್ಟಡೀಸ್ ಕೊನೆಯ ವರ್ಷದ ಸೆಮಿಸ್ಟರ್ ಪರೀಕ್ಷೆಗಳನ್ನು ಡಿ.15 ಕ್ಕೆ ಮುಂದೂಡಿಕೆ ಮಾಡಲಾಗಿದೆ.

12:51 December 12

ಪ್ರತಿಭಟನಾಕಾರರಿಂದ ಅಣಕು ಶವಯಾತ್ರೆ

ಅಣಕು ಶವಯಾತ್ರೆ
ಅಣಕು ಶವಯಾತ್ರೆ

ಬೆಳಗಾವಿ: ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಸಾರಿಗೆ ಯೂನಿಯನ್ ಅಧ್ಯಕ್ಷ ಅನಂತ್ ಸುಬ್ಬರಾವ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿರುವ ಸಾರಿಗೆ ಸಿಬ್ಬಂದಿ ಅಣಕು ಶವಯಾತ್ರೆ ನಡೆಸುವ ಮೂಲಕ ವಿನೂತ‌ನವಾಗಿ ಪ್ರತಿಭಟನೆ ನಡೆಸಿದರು. ಶವದ ಪ್ರತಿಕೃತಿ ಮೇಲೆ ಬಾಳೆ ಹಣ್ಣಿನ ಸಿಪ್ಪೆ ಎಸೆದು ಆಕ್ರೋಶ ಹೊರಹಾಕಿದರು.

12:50 December 12

ಕಿಡಿಗೇಡಿಗಳಿಂದ ಕಲ್ಲು ತೂರಾಟ

ಹೊಸಪೇಟೆ: ಹೊಸಪೇಟೆ ವಿಭಾಗದ ಎಂಟು ಬಸ್​ಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು,1 ಲಕ್ಷ ರೂ. ನಷ್ಟವಾಗಿದೆ ಎಂದು ಹೊಸಪೇಟೆ ಎನ್​ಇಕೆ​ಆರ್​ಟಿಸಿ ವಿಭಾಗದ ನಿಯಂತ್ರಣಾಧಿಕಾರಿ ಜಿ.ಶೀನಯ್ಯ ತಿಳಿಸಿದ್ದಾರೆ.

ನಿನ್ನೆ 7 ಬಸ್​ಗಳ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ಅದರಲ್ಲಿ ಮೂರು ಸ್ಲೀಪರ್ ಬಸ್​ಗಳಾಗಿದ್ದು, ಉಳಿದ ನಾಲ್ಕು ಸಾಮಾನ್ಯ ಬಸ್​ಗಳಾಗಿವೆ. ಇಂದು ಹಗರಿಬೊಮ್ಮನಹಳ್ಳಿನಲ್ಲಿ ಒಂದು ಬಸ್​ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ರಾತ್ರಿ ವೇಳೆ ರಾಯಚೂರ ಘಟಕದ ಬಸ್​ನ ಹೆಡ್ ಲೈಟ್​ಗಳನ್ನು ಪ್ರತಿಭಟನಾಕಾರರು ಬಿಚ್ಚಿಕೊಂಡಿದ್ದಾರೆ ಎಂದು ಆರೋಪಿಸಿದರು.

12:31 December 12

ಬಸ್​ಗಳ ಮೇಲೆ ಕಲ್ಲು ತೂರಾಟ: ಪ್ರಕರಣ ದಾಖಲು

ಬಸ್ಸಿನ ಗಾಜು ಒಡೆದ ಕಿಡಿಗೇಡಿಗಳು
ಬಸ್ಸಿನ ಗಾಜು ಒಡೆದ ಕಿಡಿಗೇಡಿಗಳು

ಮೈಸೂರು: ಸಾರಿಗೆ ನೌಕರರ ಮುಷ್ಕರದ ನಡುವೆಯೇ ನಾಲ್ಕು ಬಸ್‌ಗಳಿಗೆ ಕಲ್ಲು ತೂರಾಟ ನಡೆಸಲಾಗಿದೆ.

ಮೈಸೂರು ನಗರದ ಮೇಟಗಳ್ಳಿಯಲ್ಲಿ ಬಸ್ಸಿನ ಗಾಜಿಗೆ ಕಲ್ಲು ಎಸೆದಿದ್ದಾರೆ‌. ಮೈಸೂರು ತಾಲೂಕು ವರಕೋಡು ಗ್ರಾಮದ ನಗರ ಸಾರಿಗೆ ಬಸ್ ಮೇಲೆ ಸಹ ಕಲ್ಲು ಎಸೆಯಲಾಗಿದೆ. ಮೈಸೂರು ತಾಲೂಕಿನ ಜಯಪುರ ಗ್ರಾಮದಲ್ಲಿ 2 ಬಸ್‌ಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಈ ಸಂಬಂಧ ಮೈಸೂರು ಗ್ರಾಮಾಂತರ, ಜಯಪುರ, ಮೇಟಗಳ್ಳಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

12:25 December 12

ಬಸ್ ಸಿಗದಿದ್ದಕ್ಕೆ‌ ಕಣ್ಣೀರಿಟ್ಟ ಮಹಿಳೆ:

ಗದಗ : ಬಸ್ ಮುಷ್ಕರದಿಂದ ಸಮಸ್ಯೆಗೆ ಸಿಲುಕಿದ ಮಹಿಳೆಯೊಬ್ಬರು ಕಣ್ಣೀರು ಹಾಕಿದ ಘಟನೆ ಗದಗದಲ್ಲಿ ನಡೆಯಿತು. ಕೊಪ್ಪಳ ಮೂಲದವರಾದ ದೀಪಾ ಕುಲಕರ್ಣಿ ಎನ್ನುವರು ನಿನ್ನೆಯಿಂದ ಬಸ್​ಗಾಗಿ ಕಾದು ಸುಸ್ತಾಗಿ ಕೊನೆಗೆ ನಿನ್ನೆ ರಾತ್ರಿ ದಾರಿ ಕಾಣದೆ ಸಂಬಂಧಿಕರ ಮನೆಗೆ ಹೋಗಿದ್ದಾರೆ. ಇಂದು ಊರಿಗೆ ಹೋಗಲು ಬಸ್​ ನಿಲ್ದಾಣದ ಬಳಿ ಬಂದಿದ್ದು, ಮುಷ್ಕರ ಮುಂದುವರೆದ ಹಿನ್ನೆಲೆ ಕಂಗಾಲಾಗಿ ಬಳಿಕ ರೈಲಿನ ಮೂಲಕ ಊರಿಗೆ ತೆರಳಲು ಮುಂದಾಗಿದ್ದಾರೆ.

12:25 December 12

ಸಾರಿಗೆ ಸಿಬ್ಬಂದಿ ಪೊಲೀಸ್​ ವಶಕ್ಕೆ

ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು

ಬೆಂಗಳೂರು: ಸರ್ಕಾರ, ಸಾರಿಗೆ ಇಲಾಖೆ ವಿರುದ್ಧ ಮಾತನಾಡಿದ 7 ಜನ ಸಾರಿಗೆ ನೌಕರರನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮೆಜೆಸ್ಟಿಕ್​​ನ ಕೆಎಸ್​​ಆರ್​​​ಟಿಸಿ ಬಸ್ ನಿಲ್ದಾಣದ ಬಳಿ ಸಾರಿಗೆ ನೌಕರರು ಜಮಾವಣೆಗೊಂಡು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಸರ್ಕಾರ, ಸಾರಿಗೆ ಇಲಾಖೆ ವಿರುದ್ಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

12:06 December 12

ಹೃದಯಾಘಾತದಿಂದ ಬಸ್ ಚಾಲಕ ಸಾವು:

ದತ್ತಾ ಮಂಡೋಲ್ಕರ್
ದತ್ತಾ ಮಂಡೋಲ್ಕರ್

ಬೆಳಗಾವಿ: ಸಾರಿಗೆ ಸಿಬ್ಬಂದಿ ನಡೆಸುತ್ತಿರುವ ಹೋರಾಟದಲ್ಲಿ ಭಾಗಿಯಾಗಿದ್ದ ಸರ್ಕಾರಿ ಬಸ್ ಚಾಲಕನೋರ್ವ ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಬೆಳಗಾವಿ ನಗರದ ವಡಗಾವಿಯ ನಿವಾಸಿ ದತ್ತಾ ಮಂಡೋಲ್ಕರ್ (58) ಸಾವನ್ನಪ್ಪಿದ ವ್ಯಕ್ತಿ. ಈತ ಬೆಳಗಾವಿ ಮಾಹಾನಗರ ಸಾರಿಗೆ ಬಸ್ ಚಾಲಕನಾಗಿ ಕಳೆದ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಸಾರಿಗೆ ಇಲಾಖೆ ಸಿಬ್ಬಂದಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ನಿನ್ನೆ ಭಾಗವಹಿಸಿ ಮನೆಗೆ ತೆರಳಿದ್ದರು. ಇಂದು ಮನೆಯಲ್ಲಿದ್ದ ವೇಳೆ ಏಕಾಏಕಿ ಎದೆ ನೋವು ಕಾಣಿಸಿಕೊಂಡಿದ್ದು, ಮನೆಯಲ್ಲಿಯೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

11:40 December 12

ಬಸ್ ನಿಲ್ದಾಣ ಸ್ವಚ್ಛಗೊಳಿಸಿದ ಆಟೋ ಚಾಲಕರು:

ಬಸ್ ನಿಲ್ದಾಣ ಸ್ವಚ್ಛಗೊಳಿಸಿದ ವಾಲ್ಮೀಕಿ ಆಟೋ ಚಾಲಕರ ಸಂಘ

ಮೈಸೂರು: ಟಿ. ನರಸೀಪುರದಲ್ಲಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರಕ್ಕೆ ಆಟೋ ಚಾಲಕರು ಸಹ ಬೆಂಬಲ ಸೂಚಿಸಿದ್ದು, ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸಿದರು. ಸಾರಿಗೆ ಸಂಚಾರ ಬಂದ್ ಮಾಡಿ ಅನಿರ್ದಿಷ್ಟಾವಧಿ ಹೋರಾಟ ಮಾಡುತ್ತಿರುವುದರಿಂದ ಟಿ. ನರಸೀಪುರ ಬಸ್ ನಿಲ್ದಾಣ ಖಾಲಿ ಖಾಲಿಯಾಗಿದ್ದು, ಯಾವುದೇ ಬಸ್ ಸಂಚಾರ ಮತ್ತು ಪ್ರಯಾಣಿಕರ ಓಡಾಟ ಇಲ್ಲದ ಹಿನ್ನೆಲೆ ಶ್ರೀ ಮಹರ್ಷಿ ವಾಲ್ಮೀಕಿ ಆಟೋ ಚಾಲಕರ ಸಂಘ ಮತ್ತು ಅಂಗಡಿ ವ್ಯಾಪಾರಿಗಳು ನಿಲ್ದಾಣವನ್ನು ಸ್ವಚ್ಛಗೊಳಿಸಿದರು.

11:40 December 12

ಬಸ್​ಗಾಗಿ ಸೈನಿಕ ಆತನ ಪತ್ನಿ ಪರದಾಟ
ಬಸ್​ಗಾಗಿ ಸೈನಿಕ ಆತನ ಪತ್ನಿ ಪರದಾಟ

ಚಿಕ್ಕೋಡಿ : 15 ದಿನಗಳ ರಜೆ ಮೇಲೆ ಊರಿಗೆ ಬಂದಿದ್ದ ಸೈನಿಕರೊಬ್ಬರು ಧಾರವಾಡದಿಂದ ಚಿಕ್ಕೋಡಿಗೆ ಹೋಗಬೇಕಿತ್ತು. ಆದರೆ ನೌಕರರ ಮುಷ್ಕರ ಇರುವ ಹಿನ್ನೆಲೆ ಸೈನಿಕ ಹಾಗೂ ಆತನ ಪತ್ನಿ ಕೆಲಕಾಲ ಪರದಾಡುವಂತಾಯಿತು. ಬಳಿಕ ಖಾಸಗಿ ವಾಹನದ ಮೂಲಕ ಚಿಕ್ಕೋಡಿಗೆ ತೆರಳಿದರು.

11:39 December 12

ಬಸ್ ಸಂಚಾರ ಸಂಪೂರ್ಣ ಸ್ಥಗಿತ:

ಕಲಬುರಗಿಯಲ್ಲಿ ಸಾರಿಗೆ ನೌಕರರ ಪ್ರತಿಭಟನೆ
ಕಲಬುರಗಿಯಲ್ಲಿ ಸಾರಿಗೆ ನೌಕರರ ಪ್ರತಿಭಟನೆ

ಕಲಬುರಗಿ: ಪ್ರಯಾಣಿಕರಿಗೆ ಸಾರಿಗೆ ನೌಕರರ ಮುಷ್ಕರದ ಬಿಸಿ ತಟ್ಟಿದೆ. ಬಸ್​ಗಳಿಲ್ಲದೆ ಜನರು ಪರದಾಟ ನಡೆಸುತ್ತಿದ್ದಾರೆ. ಪುಟ್ಟ ಮಕ್ಕಳು, ಲಗೇಜ್​ನೊಂದಿಗೆ ಪ್ರಯಾಣಿಕರು ಅತಂತ್ರ ಸ್ಥಿತಿಗೆ ಸಿಲುಕಿ ಒದ್ದಾಡುತ್ತಿದ್ದಾರೆ. ಕೆಲ ಪ್ರಯಾಣಿಕರು ಅನಿವಾರ್ಯವಾಗಿ ಆಟೋ, ಖಾಸಗಿ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಮುಷ್ಕರವನ್ನೇ ಬಂಡವಾಳ ಮಾಡಿಕೊಂಡಿರುವ ಅಟೋ ಚಾಲಕರು ಮತ್ತು ಖಾಸಗಿ ವಾಹನ ಮಾಲೀಕರು ಜನರಿಂದ ದುಪ್ಪಟ್ಟು ಹಣ ಸುಲಿಗೆ ಮಾಡುತ್ತಿದ್ದಾರೆಂದು ಪ್ರಯಾಣಿಕರು ಆರೋಪ ಮಾಡುತ್ತಿದ್ದಾರೆ.

11:36 December 12

ಪುತ್ತೂರಿನಲ್ಲಿ ರಸ್ತೆಗಿಳಿಯದ ಬಸ್​ಗಳು:

ಪುತ್ತೂರು ಕೆಎಸ್​ಆರ್​ಟಿಸಿ ಬಸ್ ನಿಲ್ದಾಣ
ಪುತ್ತೂರು ಕೆಎಸ್​ಆರ್​ಟಿಸಿ ಬಸ್ ನಿಲ್ದಾಣ

ಪುತ್ತೂರು: ಸಾರಿಗೆ ನೌಕರರರು ನಡೆಸುತ್ತಿರುವ ಪ್ರತಿಭಟನೆಗೆ ಪುತ್ತೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಂದು ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಲ್ಲಿ ಬೆಳಗ್ಗಿನಿಂದಲೇ ಬಸ್‌ ಸಂಚಾರ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. 

10:54 December 12

ಬಣಗುಟ್ಟುತ್ತಿರುವ ಬಸ್ ನಿಲ್ದಾಣ:

ಬಿಕೋ ಎನ್ನುತ್ತಿರು ಮೈಸೂರು ಬಸ್​ ನಿಲ್ದಾಣ
ಬಿಕೋ ಎನ್ನುತ್ತಿರುವ ಮೈಸೂರು ಬಸ್​ ನಿಲ್ದಾಣ

ಮೈಸೂರು: ಮೈಸೂರಿನ‌ ಗ್ರಾಮಾಂತರ ಹಾಗೂ ನಗರ ಬಸ್ ನಿಲ್ದಾಣಗಳಲ್ಲಿ ಯಾವುದೇ ಬಸ್ ಸಂಚಾರವಿಲ್ಲದ ಹಿನ್ನೆಲೆ ನಿಲ್ದಾಣಗಳು ಬಣಗುಟ್ಟುತ್ತಿವೆ. ಈ ಎರಡು ನಿಲ್ದಾಣಗಳಲ್ಲಿ ಸುಮಾರು 4 ಸಾವಿರಕ್ಕಿಂತ ಹೆಚ್ಚಿನ ನೌಕರರಿದ್ದು, ಪ್ರತಿಭಟನೆಗೆ ಪೂರ್ಣ ಬೆಂಬಲ ನೀಡಿದ್ದಾರೆ. 

10:53 December 12

ಬಿಗಿ ಪೊಲೀಸ್ ಬಂದೋಬಸ್ತ್​ :

ಚಿತ್ರದುರ್ಗ ಬಸ್ ನಿಲ್ದಾಣ
ಚಿತ್ರದುರ್ಗ ಬಸ್ ನಿಲ್ದಾಣ

ಚಿತ್ರದುರ್ಗ: ವೇತನ‌ ಹೆಚ್ಚಳ ಸೇರಿದಂತೆ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮುಷ್ಕರ ನಡೆಸುತ್ತಿರುವುದರಿಂದ ಯಾವುದೇ ಬಸ್ ಸಂಚಾರವಿಲ್ಲದೆ‌ ಪ್ರಯಾಣಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಬಸ್ ನಿಲ್ದಾಣ ಬಿಕೋ ಎನ್ನುತ್ತಿದ್ದು, ಬಸ್ ನಿಲ್ದಾಣದ ಮಳಿಗೆಗಳ ವ್ಯಾಪಾರಸ್ಥರು ಕೂಡ ಗ್ರಾಹಕರಿಲ್ಲದೆ ಕಂಗಾಲಾಗಿದ್ದಾರೆ. ಜೊತೆಗೆ ಪ್ರತಿಭಟನೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ನಿಲ್ದಾಣದ ಸುತ್ತಲು ಬಿಗಿ ಪೊಲೀಸ್ ಬಂದೋಬಸ್ತ್​ ಕೈಗೊಳ್ಳಲಾಗಿದೆ.

10:32 December 12

ಹೊಸಪೇಟೆ: ಸಾರಿಗೆ ನೌಕರರ ಮುಷ್ಕರಕ್ಕೆ ಹೊಸಪೇಟೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಸ್ ಸಂಚಾರ ಬಂದ್​ ಆಗಿದ್ದು, ಬಸ್ ನಿಲ್ದಾಣ ಹಾಗೂ ಡಿಪೋಗಳ ಮುಂದೆ ಬಸ್​ಗಳನ್ನು ನಿಲ್ಲಿಸಲಾಗಿದೆ. ನಿನ್ನೆ 60 ಬಸ್ಸುಗಳು ಸಂಚರಿಸಲು ಅವಕಾಶ ನೀಡಲಾಗಿತ್ತು. ಇಂದು ಖಾಸಗಿ ವಾಹನಗಳಿಗೆ ಹೆಚ್ಚು ಬೇಡಿಕೆ ಬಂದಿದ್ದು, ಪ್ರಯಾಣಿಕರಿಂದ ಮೂರಕ್ಕೂ ಹೆಚ್ಚು ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ ಎನ್ನಲಾಗಿದೆ.

10:31 December 12

ವಿಮಾನ ನಿಲ್ದಾಣಕ್ಕೆ ತಟ್ಟದ ಸಾರಿಗೆ ನೌಕರರ ಮುಷ್ಕರ:

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ದೇವನಹಳ್ಳಿ: ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಒತ್ತಾಯಿಸಿ ಬಿಎಂಟಿಸಿ ಮತ್ತು ಕೆಎಸ್​ಆರ್​ಸಿ ನೌಕರರು ನಡೆಸುತ್ತಿರುವ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಮುಷ್ಕರದ ಬಿಸಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಟ್ಟಿಲ್ಲ. ವಿಮಾನ ನಿಲ್ದಣದಿಂದ ನಗರದ ವಿವಿಧ ಭಾಗಗಳಿಗೆ ಸಂಪರ್ಕಿಸುವ ಬಿಎಂಟಿಸಿ, ವಾಯುವಜ್ರ ಬಸ್​ಗಳು ಓಡಾಡುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಬಸ್​ಗಳು ಇಲ್ಲದಿರುವುದರಿಂದ ಪ್ರಯಾಣಿಕರು ಟ್ಯಾಕ್ಸಿಗಳ ಮೊರೆ ಹೋಗುತ್ತಿದ್ದಾರೆ.

10:15 December 12

ಬೆಳಗಾವಿಯಲ್ಲಿ ವಿಭಿನ್ನ ರೀತಿ ಪ್ರತಿಭಟನೆ:

ಬೆಳಗಾವಿ: ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಕೈಗೊಂಡಿರುವ ಧರಣಿ ಸತ್ಯಾಗ್ರಹ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಸಾರಿಗೆ ನೌಕರರು ತಲೆ ಮೇಲೆ ಪಾದರಕ್ಷೆಗಳನ್ನು ಹೊತ್ತು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ನಿನ್ನೆಯಿಂದ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಸಾರಿಗೆ ನೌಕರರು, ಇಂದು ಬೆಳ್ಳಂ ಬೆಳಗ್ಗೆ ತಲೆ ಮೇಲೆ ಪಾದರಕ್ಷೆಗಳನ್ನು ಇಟ್ಟುಕೊಂಡು ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರ ನಮ್ಮ ಬೇಡಿಕೆಯನ್ನು ನಿರ್ಲಕ್ಷಿಸುತ್ತಿದೆ. ಕೂಡಲೇ ಬೇಡಿಕೆ ಈಡೇರಿಕೆಗೆ ಮುಂದಾಗಬೇಕು ಎಂದು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

10:02 December 12

ವಿಜಯಪುರದಲ್ಲಿ ಮುಂದುವರೆದ ಮುಷ್ಕರ:

ಕಣ್ಣೀರಿಟ್ಟ ಮಹಿಳೆ
ಕಣ್ಣೀರಿಟ್ಟ ಮಹಿಳೆ

ವಿಜಯಪುರ: ಜಿಲ್ಲೆಯಲ್ಲಿ ಸಾರಿಗೆ ಸಿಬ್ಬಂದಿ ನಡೆಸುತ್ತಿರುವ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಬಸ್ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ವಿಜಯಪುರ ಡಿಪೋದ ಮುಂಭಾಗ ಸಾರಿಗೆ ನೌಕರರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕಣ್ಣೀರಿಟ್ಟ ಮಹಿಳೆ:

ಮುಷ್ಕರ ಹಿನ್ನೆಲೆಯಲ್ಲಿ ವಿಜಯಪುರದ ಬಸ್ ನಿಲ್ದಾಣದಲ್ಲಿ ಕೂಲಿ ಕಾರ್ಮಿಕ‌ ಮಹಿಳೆಯೊಬ್ಬಳು ಕಣ್ಣೀರು ಹಾಕಿದ ಘಟನೆ ನಡೆಯಿತು. ಮಹಾರಾಷ್ಟ್ರದಿಂದ ವಿಜಯಪುರಕ್ಕೆ ಬಂದಿದ್ದ ಮಹಿಳೆ ಹಾಗೂ ಆಕೆಯ ಇಬ್ಬರು ಪುಟ್ಟ ಮಕ್ಕಳು ಎಲ್ಲಿಯೂ ಹೋಗಲಾಗದೆ ಪರಿತಪಿಸಿದರು. ಬಾಗಲಕೋಟೆ ಜಿಲ್ಲೆಯ ಮುಧೋಳ ಬಳಿ ಕಬ್ಬು ಕಟಾವ್ ಮಾಡುವ ಕೆಲಸಕ್ಕೆ ತನ್ನ ಮಕ್ಕಳ ಜತೆ ಮಹಿಳೆ ಆಗಮಿಸಿದ್ದು, ಬಸ್ ಸಂಚಾರ ಸ್ಥಗಿತವಾದ ಹಿನ್ನೆಲೆ ದಿಕ್ಕು ತೋಚದೆ ಕಣ್ಣೀರಿಟ್ಟಿದ್ದಾರೆ.

10:01 December 12

ಬಸ್ ನಿಲ್ದಾಣದಲ್ಲಿ ರಾತ್ರಿ ಕಳೆದ‌ ಪ್ರಯಾಣಿಕರು:

ಹೈರಾಣಾದ ಪ್ರಯಾಣಿಕರು
ಹೈರಾಣಾದ ಪ್ರಯಾಣಿಕರು

ಬೆಂಗಳೂರು: ಸಾರಿಗೆ ನೌಕರರು ಕರೆ ನೀಡಿರುವ  ಬಸ್ ಮುಷ್ಕರಕ್ಕೆ ಪ್ರಯಾಣಿಕರು ಕಂಗಾಲಾಗಿದ್ದಾರೆ. ರಾಜಧಾನಿಯಿಂದ ನಗರ ಹಾಗೂ ವಿವಿಧ ಜಿಲ್ಲೆಗಳಿಗೆ ತೆರಳುವ ಪ್ರಯಾಣಿಕರು ಸರ್ಕಾರಿ ಬಸ್​ಗಳಿಲ್ಲದ ಹಿನ್ನೆಲೆ ತಡರಾತ್ರಿವರೆಗೂ ಬಸ್ ಸಿಗುವ ಆಶಾಭಾವನೆಯಿಂದ ಮೆಜೆಸ್ಟಿಕ್ ಸೇರಿದಂತೆ ಪ್ರಮುಖ ಬಸ್ ನಿಲ್ದಾಣಗಳಲ್ಲಿ‌‌‌‌ ಕಾದು ಸುಸ್ತಾಗಿ, ಕೊನೆಗೆ ಬಸ್ ನಿಲ್ದಾಣದಲ್ಲೇ ರಾತ್ರಿ ಕಳೆದಿದ್ದಾರೆ. ಚಳಿ ಮಧ್ಯೆ ಸರಿಯಾದ ಹೊದಿಕೆ ಇಲ್ಲದೆ ಪ್ರಯಾಣಿಕರು ಅಕ್ಷರಶಃ ಹೈರಾಣಾಗಿದ್ದಾರೆ.

09:46 December 12

ಬಸ್​ ನಿಲ್ದಾಣದೊಳಗೆ ಎಂಟ್ರಿ ಕೊಟ್ಟ ಆಟೋ:

ಬೆಂಗಳೂರು: ಸಾರಿಗೆ ಮುಷ್ಕರಕ್ಕೆ ಪ್ರಯಾಣಿಕರು ಹೈರಾಣಾಗಿದ್ದಾರೆ. ಬಂದ್​ ಹಿನ್ನೆಲೆ ಮೆಜೆಸ್ಟಿಕ್ ನಿಲ್ದಾಣದ ಚಿತ್ರಣವೇ ಬದಲಾಗಿ ಹೋಗಿದೆ. ಬಿಎಂಟಿಸಿ ಬಸ್​ ಸಂಚಾರ ಸ್ಥಗಿತಗೊಂಡ ಹಿನ್ನೆಲೆ ಆಟೋ ರಿಕ್ಷಾ ಚಾಲಕರು ಬಸ್​ ನಿಲ್ದಾಣದೊಳಗೆ ಎಂಟ್ರಿ ಕೊಟ್ಟಿದ್ದಾರೆ. ಬೆಳಿಗ್ಗೆ 8 ಗಂಟೆಯವರೆಗೆ ಒಟ್ಟು 55 ಬಿಎಂಟಿಸಿ ಬಸ್‌ಗಳು ಸಂಚರಿಸುತ್ತಿವೆ.

09:46 December 12

ಬಿಸಿಲೂರಿನಲ್ಲಿ ಸಾರಿಗೆ ಸಿಬ್ಬಂದಿ ಪ್ರತಿಭಟನೆ:

ಬಂದ್​ ಎಫೆಕ್ಟ್​
ಬಂದ್​ ಎಫೆಕ್ಟ್​

ರಾಯಚೂರು: ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆ ಅನಾರೋಗ್ಯದಿಂದ ಬಳಲುತ್ತಿರುವ ವೃದ್ಧೆ ಹಾಗೂ ವಿಕಲಚೇತನೊಬ್ಬರು ಊರಿಗೆ ತೆರಳು ಬಸ್‌ ಇಲ್ಲದೆ ಪರದಾಟ ನಡೆಸಿದರು. ಸಾರಿಗೆ ಬಸ್​ನಲ್ಲಿ ಉಚಿತ ಪ್ರಯಾಣದ ಅವಕಾಶವಿತ್ತು. ಆದ್ರೆ ಇದೀಗ ಬಸ್ ಇಲ್ಲದಿರುವ ಹಿನ್ನೆಲೆ ಖಾಸಗಿ ವಾಹನ ಚಾಲಕರಿಗೆ ಹಣ ನೀಡಿ ಪ್ರಯಾಣಿಸಬೇಕಾದ ಪರಿಸ್ಥಿತಿ ಬಂದಿದೆ. ಖಾಸಗಿ ವಾಹನಗಳ ಮಾಲೀಕರು ದುಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.

09:24 December 12

ಮೂರು ಬಸ್​ಗಳ ಮೇಲೆ ಕಲ್ಲು ತೂರಾಟ:

ಕೆಎಸ್​ಆರ್​ಟಿಸಿ ಬಸ್​ ಮೇಲೆ ಕಲ್ಲು ತೂರಾಟ
ಕೆಎಸ್​ಆರ್​ಟಿಸಿ ಬಸ್​ ಮೇಲೆ ಕಲ್ಲು ತೂರಾಟ

ಬಳ್ಳಾರಿ: ರಾಜ್ಯವ್ಯಾಪಿ ಕರೆ ನೀಡಿದ್ದ ಸಾರಿಗೆ ನೌಕರರ ಪ್ರತಿಭಟನೆ ಕಾವು ಎರಡನೇ ದಿನಕ್ಕೂ ಮುಂದುವರೆದಿದೆ. ಗಣಿಜಿಲ್ಲೆಯಲ್ಲಿ ತಡರಾತ್ರಿ ಮೂರು ಕೆಎಸ್​ಆರ್​ಟಿಸಿ ಬಸ್​ಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಪರಿಣಾಮ ಬಸ್​ ಗಾಜು ಪುಡಿಪುಡಿಯಾಗಿದೆ.

09:20 December 12

ವಾಣಿಜ್ಯ ನಗರಿಯಲ್ಲಿ ಹೆಚ್ಚಿದ ಪ್ರತಿಭಟನೆ ಕಾವು:

ಹುಬ್ಬಳ್ಳಿ ಬಸ್​ ನಿಲ್ದಾಣ
ಹುಬ್ಬಳ್ಳಿ ಬಸ್​ ನಿಲ್ದಾಣ

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸಹ ಸಾರಿಗೆ ನೌಕರರ ಪ್ರತಿಭಟನೆ ಮುಂದುವರೆದಿದೆ. ಎರಡನೇ ದಿನವಾದ ಇಂದು ಒಂದು ಬಸ್ ಕೂಡ ರಸ್ತೆಗೆ ಇಳಿದಿಲ್ಲ. ಹೀಗಾಗಿ ಬಸ್​ಗಳಿಲ್ಲದೆ ಪ್ರಯಾಣಿಕರು ಪರದಾಡುತ್ತಿದ್ದಾರೆ.

ಅಂತರ್​ ಜಿಲ್ಲಾ ಹಾಗೂ ಗ್ರಾಮೀಣ ಭಾಗದ ಬಸ್ ಸೌಲಭ್ಯ ಕೂಡ ಸ್ಥಗಿತಗೊಂಡಿದ್ದು, ನಗರದ ಹಳೇ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣ ಹಾಗೂ ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣಗಳಲ್ಲಿ ಕೆಲ ಪ್ರಯಾಣಿಕರು ಕಾದು ಕುಳಿತಿದ್ದಾರೆ.

09:19 December 12

ರಾಜಧಾನಿಯಲ್ಲಿ ಮುಂದುವರೆದ ಮುಷ್ಕರ:

ಮುಷ್ಕರಕ್ಕೆ ಬೆಂಬಲ
ಮುಷ್ಕರಕ್ಕೆ ಬೆಂಬಲ

ಬೆಂಗಳೂರು: ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡುವಂತೆ ಒತ್ತಾಯಿಸಿ ನಡೆಸುತ್ತಿರುವ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಪಟ್ಟು ಬಿಡದೆ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿರುವ ಚಾಲಕರು, ನಿರ್ವಾಹಕರು‌ ಬೇಡಿಕೆ ಈಡೇರಿಕೆಗೆ ಆಗ್ರಹಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಬಸ್ ಸಿಗದೆ ಜನರು ಪರದಾಟ ನಡೆಸುತ್ತಿದ್ದಾರೆ. ನಿನ್ನೆ ಸಮಸ್ಯೆ ಬಗೆಹರಿಸಲು ಸರ್ಕಾರ ವಿಫಲವಾದ ಕಾರಣ ಇಂದೂ ಕೂಡ ಮುಷ್ಕರ ಮುಂದುವರಿಸಿದ್ದಾರೆ. ಈ ಹಿನ್ನೆಲೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ಸರ್ಕಾರ, ಖಾಸಗಿ ಬಸ್​ ಚಾಲಕರು, ನಿರ್ವಾಹಕರು ಬಸ್ ಓಡಿಸುವಂತೆ ಸೂಚಿಸಲು ಚಿಂತನೆ ನಡೆಸಿದೆ.

09:00 December 12

ಬಿಕೋ ಎನ್ನುತ್ತಿರುವ ಬಸ್ ನಿಲ್ದಾಣ:

ಹಾವೇರಿ ಬಸ್ ನಿಲ್ದಾಣ
ಹಾವೇರಿ ಬಸ್ ನಿಲ್ದಾಣ

ಹಾವೇರಿ: ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಎರಡನೇ ದಿನಕ್ಕೆ ಮುಂದುವರೆದಿದ್ದು, ಹಾವೇರಿಯಲ್ಲಿ ಬಂದ್​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾರಿಗೆ ಇಲಾಖೆ ನೌಕರರು ಕೆಲಸಕ್ಕೆ ಗೈರಾಗಿದ್ದು, ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಕಾದು ನಂತರ ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದಾರೆ.

08:29 December 12

ಸಾರಿಗೆ ನೌಕರರ ಪ್ರತಿಭಟನೆ:

ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿ ಸಾರಿಗೆ ಸಿಬ್ಬಂದಿ ನಡೆಸುತ್ತಿರುವ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ರಾಜ್ಯದಲ್ಲಿ ಪ್ರತಿಭಟನೆಯ ಕಾವು ಜೋರಾಗಿದ್ದು, ಇಂದು ಸಹ ಸಾರಿಗೆಯಲ್ಲಿ ವ್ಯತ್ಯಯ ಉಂಟಾಗಿದೆ.

Last Updated : Dec 12, 2020, 6:07 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.