ETV Bharat / state

ಬಿಎಂಟಿಸಿ ಸಂಸ್ಥೆಯನ್ನು ಈ ಸ್ಥಿತಿಗೆ ತಂದ ಸಾರಿಗೆ ಸಚಿವರನ್ನು ಸನ್ಮಾನಿಸಬೇಕು: ಕಾಂಗ್ರೆಸ್ ವ್ಯಂಗ್ಯ

ರಾಜ್ಯದ ಸಾರಿಗೆ ವ್ಯವಸ್ಥೆಯ ಇತಿಹಾಸದಲ್ಲೇ ಡೀಸೆಲ್ ಇಲ್ಲದೆ ಬಸ್​​ಗಳು ನಿಲ್ಲುವ ಸ್ಥಿತಿ ಒದಗಿದ್ದು ಇದೇ ಮೊದಲ ಬಾರಿ. ತೈಲ ಕಂಪನಿಗಳ ಎದುರು ಹೆದರಿ ಕುಳಿತಿರುವ ಸರ್ಕಾರದ ಅಸಾಮರ್ಥ್ಯಕ್ಕೆ ಜನತೆ ಹಾಗೂ ಬಿಎಂಟಿಸಿ ಸಂಕಷ್ಟ ಎದುರಿಸಬೇಕಾಗಿದೆ ಎಂದು ಟ್ವೀಟ್​ ಮೂಲಕ ಕಾಂಗ್ರೆಸ್​ ಲೇವಡಿ ಮಾಡಿದೆ.

ಕಾಂಗ್ರೆಸ್ ಲೇವಡಿ
ಕಾಂಗ್ರೆಸ್ ಲೇವಡಿ
author img

By

Published : Jun 28, 2022, 5:55 PM IST

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮದ ಪ್ರಮುಖ ಸಂಸ್ಥೆಯಾಗಿರುವ ಬಿಎಂಟಿಸಿ ಡೀಸೆಲ್ ಕೊರತೆ ಎದುರಿಸುತ್ತಿರುವುದು ವಿಪರ್ಯಾಸ. ಸಂಸ್ಥೆಯನ್ನು ಈ ಸ್ಥಿತಿಗೆ ತಂದಿರುವ ಸಾರಿಗೆ ಸಚಿವರನ್ನು ಸನ್ಮಾನಿಸಬೇಕು. ರಾಜ್ಯದ ಸಾರಿಗೆ ವ್ಯವಸ್ಥೆಯ ಇತಿಹಾಸದಲ್ಲೇ ಡೀಸೆಲ್ ಇಲ್ಲದೆ ಬಸ್​​ಗಳು ನಿಲ್ಲುವ ಸ್ಥಿತಿ ಒದಗಿದ್ದು, ಇದೇ ಮೊದಲ ಬಾರಿ. ತೈಲ ಕಂಪನಿಗಳ ಎದುರು ಹೆದರಿ ಕುಳಿತಿರುವ ಸರ್ಕಾರದ ಅಸಾಮರ್ಥ್ಯಕ್ಕೆ ಜನತೆ ಹಾಗೂ ಬಿಎಂಟಿಸಿ ಸಂಕಷ್ಟ ಎದುರಿಸಬೇಕಾಗಿದೆ ಎಂದು ರಾಜ್ಯ ಕಾಂಗ್ರೆಸ್ ಲೇವಡಿ ಮಾಡಿದೆ.

  • ರಾಜ್ಯದ ಸಾರಿಗೆ ವ್ಯವಸ್ಥೆಯ ಇತಿಹಾಸದಲ್ಲೇ ಡೀಸೆಲ್ ಇಲ್ಲದೆ ಬಸ್ಸುಗಳು ನಿಲ್ಲುವ ಸ್ಥಿತಿ ಒದಗಿದ್ದು ಇದೇ ಮೊದಲ ಬಾರಿ.

    ಇಂತಹ ದುಸ್ಥಿತಿಗೆ ಬಿಎಂಟಿಸಿಯನ್ನು ತಂದಿಟ್ಟಿದ್ದಕ್ಕೆ ಸಾರಿಗೆ ಸಚಿವರನ್ನು ಸನ್ಮಾನಿಸಬೇಕೇನೋ!!

    ತೈಲ ಕಂಪನಿಗಳ ಎದುರು ಹೆದರಿ ಕುಳಿತಿರುವ ಸರ್ಕಾರದ ಅಸಾಮರ್ಥ್ಯಕ್ಕೆ ಜನತೆ ಹಾಗೂ ಬಿಎಂಟಿಸಿ ಸಂಕಷ್ಟ ಎದುರಿಸಬೇಕಿದೆ. pic.twitter.com/icP7CIDe3V

    — Karnataka Congress (@INCKarnataka) June 28, 2022 " class="align-text-top noRightClick twitterSection" data=" ">

ತುಘಲಕ್ ದರ್ಬಾರ್: ಲಜ್ಜೆಗೇಡಿ ಬಿಜೆಪಿ ಎಂಬ ಟ್ಯಾಗ್ ಲೈನ್‌ನಡಿ ಮತ್ತೊಂದು ಟ್ವೀಟ್ ಮಾಡಿರುವ ಕಾಂಗ್ರೆಸ್, ಪರಿಷ್ಕೃತ ಪಠ್ಯಪುಸ್ತಕಗಳನ್ನು ಸಮರ್ಥಿಸುತ್ತಿದ್ದ ಸರ್ಕಾರ ಮತ್ತೊಮ್ಮೆ ಲೋಪ ಸರಿಪಡಿಸಿದ ಮತ್ತೊಂದು ಹೆಚ್ಚುವರಿ ಪುಸ್ತಕ ಹಂಚುತ್ತೇವೆ ಎಂದಿರುವುದು ತುಘಲಕ್ ದರ್ಬಾರಿನಂತಿದೆ. ಇಂತದ್ದೊಂದು ನಾಚಿಕೆಗೇಡಿನ ಬೆಳವಣಿಗೆಗೆ ಸಿಎಂ ತಲೆತಗ್ಗಿಸಿ ಕ್ಷಮೆ ಕೇಳಬೇಕು. ಶಿಕ್ಷಣ ಸಚಿವರು ರಾಜೀನಾಮೆ ಕೊಟ್ಟು ಹೊರಡಬೇಕು ಎಂದು ಒತ್ತಾಯಿಸಿದೆ.

ಮಾನ ಮರ್ಯಾದೆ ಬಿಟ್ಟ ಬಿಜೆಪಿ ಎಂಬ ಟ್ಯಾಗ್ ಲೈನ್ ಅಡಿ ಮಾಡಿರುವ ಟ್ವೀಟ್​ನಲ್ಲಿ ಕಾಂಗ್ರೆಸ್​ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಬಿಜೆಪಿಯ ವಿತ್ತಮಂತ್ರಿ ನಿರ್ಮಲಾ ಸೀತಾರಾಮನ್ ಬಡವರಿಗೆ ಅಕ್ಕಿ ನೀಡಲು ಹಣವಿಲ್ಲ ಎನ್ನುತ್ತಾರೆ. ಮುಖ್ಯಮಂತ್ರಿಗಳು ಮಕ್ಕಳಿಗೆ ಬೈಸಿಕಲ್ ಒದಗಿಸಲು, ಮೊಟ್ಟೆ ನೀಡಲು ಹಣವಿಲ್ಲ ಎನ್ನುತ್ತಾರೆ. ಶಿಕ್ಷಣ ಸಚಿವರು ತಮ್ಮ ಖಾಸಗಿ ಸಾಮಾಜಿಕ ಜಾಲತಾಣ ನಿರ್ವಹಿಸಲು ಲಕ್ಷಾಂತರ ಹಣ ಸರ್ಕಾರಿ ಬೊಕ್ಕಸದಿಂದ ಖರ್ಚು ಮಾಡುತ್ತಾರೆ ಎಂದು ಲೇವಡಿ ಮಾಡಿದೆ.

ಇದನ್ನೂ ಓದಿ: ನಿಯಮಿತ ವಿದ್ಯುತ್ ಪೂರೈಕೆ ಮಾಡದ ಸರ್ಕಾರಕ್ಕೆ ದರ ಏರಿಸುವ ನೈತಿಕ ಹಕ್ಕಿಲ್ಲ: ಹೆಚ್​ಡಿಕೆ ಕಿಡಿ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.