ETV Bharat / state

ಪರಿಸರ ಉಳಿವಿಗಾಗಿ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಹೊಸ ಪ್ರಯತ್ನ! - news kannada

ಮರಗಳನ್ನು ವ್ಯವಸ್ಥಿತವಾಗಿ ಸ್ಥಳಾಂತರಿಸುವ ಹೊಸ ಪ್ರಯತ್ನಕ್ಕೆ ಕೈ ಹಾಕಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಇದೀಗ ದೇಶದ ಗಮನ ಸೆಳೆಯುತ್ತಿದೆ. ಈ ರೀತಿಯ ನೂತನ ವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಕೆಐಎಎಲ್, ಇದರಲ್ಲೂ ಸಕ್ಸಸ್​ ಕಾಣುತ್ತಿದೆ.

ದೊಡ್ಡ ದೊಡ್ಡ ಮರಗಳನ್ನು ಬೇರು ಸಮೇತ ಸ್ಥಳಾಂತರಿಸುವ ಹೊಸ ವಿಧಾನಕ್ಕೆ ಕೈ ಹಾಕಿದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
author img

By

Published : Jun 5, 2019, 5:58 PM IST

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಇತ್ತೀಚೆಗೆ ಹೊಸ ಹೊಸ ಪ್ರಯೋಗಗಳನ್ನು ಮಾಡುವ ಮೂಲಕ ದೇಶದ ಗಮನ ಸೆಳೆಯುತ್ತಿದೆ. ಇದೀಗ ಪರಿಸರ ದಿನದ ಅಂಗವಾಗಿ ಪರಿಸರ ಹಾಳಾಗದಂತೆ ಸಂರಕ್ಷಣೆ ಮಾಡುವಂತ ಹೊಸ ವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ ಎಲ್ಲ ವಿಮಾನ ನಿಲ್ದಾಣಗಳಿಗೂ ಮಾದರಿಯಾಗಿದೆ.

ಸರ್ಕಾರಿ ಶಾಲೆಗಳ ಅಭಿವೃದ್ಧಿ, ವಿದ್ಯುತ್ ಉಳಿತಾಯ, ಸೋಲಾರ್​ ಸಿಸ್ಟಮ್​ ಅಳವಡಿಸಿಕೊಳ್ಳುವುದು ಸೇರಿದಂತೆ ಪ್ರಯಾಣಿಕರಿಗೆ ಅನುಕೂಲವಾಗುವಂತಹ ಸಾಕಷ್ಟು ವ್ಯವಸ್ಥೆಯನ್ನು ವಿಮಾನ‌ ನಿಲ್ದಾಣ ಅಳವಡಿಸಿಕೊಂಡು ಬಂದಿದೆ. ಇದರಿಂದ ಹಲವು ಪ್ರಶಸ್ತಿಗಳನ್ನು ಸಹ ಮುಡಿಗೇರಿಸಿಕೊಂಡಿದೆ. ‌ಇದೀಗ ಪರಿಸರ ಉಳಿವಿಗಾಗಿ ಹೊಸ ಪ್ರಯತ್ನಕ್ಕೆ ಮುಂದಾಗಿದ್ದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್) ಇದರಲ್ಲೂ ಸಕ್ಸಸ್​ ಕಾಣುತ್ತಿದೆ.

ರಸ್ತೆ ಅಗಲೀಕರಣ ಹಾಗೂ ಮೆಟ್ರೋ ಕಾಮಗಾರಿಗೆ ಸ್ಥಳ ನೀಡುವ ಅನಿವಾರ್ಯತೆ ವಿಮಾನ ನಿಲ್ದಾಣಕ್ಕಿದೆ. ರಸ್ತೆ ಅಗಲೀಕರಣ ಮತ್ತು ಮೆಟ್ರೋ ಕಾಮಗಾರಿ ನಡೆಯುವ ಸ್ಥಳದಲ್ಲಿ ದೊಡ್ಡ ದೊಡ್ಡ ಮರಗಳಿದ್ದು ಅವುಗಳು ನಾಶವಾಗದಂತೆ ಬೇರು ಸಮೇತ ಸ್ಥಳಾಂತರಿಸುವ ಹೊಸ ವಿಧಾನಕ್ಕೆ ಕೈ ಹಾಕಿದೆ. ಇದಕ್ಕಾಗಿ ಇನ್ಸ್ಟಿಟ್ಯೂಟ್​ ಆಫ್‌ ವುಡ್​ ಸೈನ್ಸ್​ ಅಂಡ್​ ಟೆಕ್ನಾಲಜಿ ಮತ್ತು ವೋಲ್ವೋಗಳನ್ನು ಬಳಸಿಕೊಳ್ಳಲಾಗುತ್ತಿದ್ದು, ಇದರ ಮೂಲಕ ಮರಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸಿ ಅಲ್ಲಿ ನೆಡಬಹುದಾಗಿದೆ.

ದೊಡ್ಡ ಮರಗಳನ್ನು ಬೇರು ಸಮೇತ ಸ್ಥಳಾಂತರಿಸುವ ನವೀನ ವಿಧಾನಕ್ಕೆ ಮೊರೆ

ಈ ವೈಜ್ಞಾನಿಕ ಪರಿಹಾರದಿಂದ ಮರಗಳಿಗೆ ಯಾವುದೇ ಹಾನಿಯಾಗುವುದಿಲ್ಲ. ಈಗಾಗಲೇ 247 ಮರಗಳನ್ನು ಬೇರೆಡೆಗೆ ಶಿಫ್ಟ್​ ಮಾಡಲಾಗಿದ್ದು, ಯಾವುದೇ ಹಾನಿಯಾಗಿಲ್ಲ. ಎಂದಿನಂತೆ ಅಲ್ಲೂ ಉತ್ತಮ ರೀತಿಯಲ್ಲಿ ಬೆಳೆಯುತ್ತಿವೆ. ಕಳೆದೆರಡು ತಿಂಗಳಿಂದ ಈ ಕೆಲಸ ಮಾಡುತ್ತಿದ್ದು, ಇನ್ನು ಒಂದು ತಿಂಗಳ‌ ಕಾಲಾವಕಾಶವಿದೆ. ಇವಾಗ ಒಂದು ವೋಲ್ವೋ ಟ್ರೀ- ಟ್ರಾನ್ಸ್​ಪ್ಲಾಂಟರ್​ನೊಂದಿಗೆ ಕೆಲಸ ಮಾಡುತ್ತಿದ್ದು, ಸದ್ಯದಲ್ಲೇ ಇನ್ನೊಂದು ಟ್ರೀ ಟ್ರಾನ್ಸ್​ಪ್ಲಾಂಟರ್ ಬರಲಿದೆ. ಆಗ ಇನ್ನು ವೇಗವಾಗಿ ಮರಗಳ ಸ್ಥಳಾಂತರ ಕಾರ್ಯ ನಡೆಯಲಿದೆ. ಇಂದು ಮರವನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸ್ಥಳಾಂತರಿಸಲು ಒಂದೂವರೆ ಗಂಟೆ ಬೇಕಾಗಲಿದೆ. ಅದು ಎಷ್ಟು ದೂರದಿಂದ ಎಷ್ಟು ದೂರಕ್ಕೆ ಅನ್ನೋದರ‌ ಮೇಲೆ ಟೈಮ್​ ತೆಗೆದುಕೊಳ್ಳಲಿದೆ. ಅಲ್ಲದೇ ಮರಗಳ ಕಾಂಡ ಕಡಿಮೆ ಅಂದರೆ 6 ಇಂಚಿನ ಮರಗಳನ್ನು ಸ್ಥಳಾಂತರಿಸಬಹುದು. ಅದಕ್ಕಿಂತ ದೊಡ್ಡ ಮರಗಳನ್ನು ಸ್ಥಳಾಂತರಿಸಲು ಸ್ವಲ್ಪ ಕಷ್ಟವಾಗುತ್ತದೆ ಎನ್ನುತ್ತಾರೆ (ಬಿಐಎಎಲ್​) ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಸಿಬ್ಬಂದಿ ಪ್ರಸನ್ನ ಮೂರ್ತಿ.

ಈ ವೈಜ್ಞಾನಿಕ ತಂತ್ರಜ್ಞಾನದಿಂದ ಕಡಿಮೆ ಖರ್ಚಿನಿಂದ ಹೆಚ್ಚು ಕೆಲಸ ಮಾಡಬಹುದಾಗಿ. ಒಂದು ದಿನಕ್ಕೆ 14 ರಿಂದ 16 ಮರಗಳನ್ನು ರೀ ಟ್ರಾನ್ಸ್​ಪ್ಲಾಂಟರ್ ಮಾಡಬಹುದು. ಇದರಿಂದ ಮರಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಈ ವಿಮಾನ ನಿಲ್ದಾಣದಲ್ಲಿ ಈಗಾಗಲೆ ನೂರಾರು ಮರಗಳನ್ನು ಸ್ಥಳಾಂತರ ಮಾಡಲಾಗಿದೆ ಎನ್ನುತ್ತಾರೆ ಬಿಐಎಎಲ್​ನ ಸಿಬ್ಬಂದಿ ಮಂಜುನಾಥ್.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರತಿ ಸಲ ಒಂದಲ್ಲ ಒಂದು ವಿನೂತನ ಪ್ರಯತ್ನಗಳಿಂದ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಇದೀಗ ಹೊಸದಾಗಿ ಪರಿಸರ ಉಳಿವಿಗಾಗಿ ಮಾಡುತ್ತಿರುವ ಪ್ರಯತ್ನಕ್ಕೂ ಯಶಸ್ಸು ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಇನ್ಯಾವ ಹೊಸ ಪ್ರಯೋಗ ಮಾಡಲಿದೆ ಅನ್ನೋದನ್ನು ನೋಡಬೇಕು.

Intro:KN_BNG_01_05_KIAL re plantation _Ambarish_7203301
Slug: ಪರಿಸರ ಉಳಿವಿಗಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊಸ ಪ್ರಯತ್ನ

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಒಂದಲ್ಲ ಒಂದು ಪ್ರಯೋಗಗಳನ್ನು ಮಾಡುತ್ತ ಅದರಲ್ಲಿ ಯಶಸ್ಸು ಕಂಡು ವಿಶ್ವ ವಿಖ್ಯಾತಿ ಪಡೆದಿದೆ. ಇದೀಗ ಪರಿಸರ ದಿನದ ಅಂಗವಾಗಿ ಪರಿಸರ ಹಾಳಾಗದಂತೆ ಸಂರಕ್ಷಣೆ ಮಾಡುವಂತ ಹೊಸ ವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ ಎಲ್ಲಾ ವಿಮಾನ ನಿಲ್ದಾಣಗಳಿಗೂ ಮಾದರಿಯಾಗಿದೆ.. ಆ ಹೊಸ ವಿಧಾನವಾದರೂ ಏನು ಅಂತಿರಾ..? ಹಾಗಾದ್ರೆ ಈ ಸ್ಟೋರಿ ನೋಡಿ..

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭವಗಿ ಹನ್ನೊಂದನೆ ವರ್ಷದಲ್ಲಿದೆ.. ಇಷ್ಟು ವರ್ಷಗಳಲ್ಲಿ ಹಲವಾರು ಸಮಾಜಮುಖಿ ಕೆಲಸಗಳನ್ನು ಈ ಏರ್ಪೋರ್ಟ್ ಮಾಡುತ್ತ ಬಂದಿದೆ.. ಸರ್ಕಾರಿ ಶಾಲೆಗಳ ಅಭಿವೃದ್ಧಿ ಇರಬಹುದು, ವಿದ್ಯುತ್ ಉಳಿತಾಯಕ್ಕೆ ಸಂಬಂಧಿಸಿದಂತೆ ಸೋಲಾರ್ ಸಿಸ್ಟಮ್ ಅಳವಡಿಸಿಕೊಳ್ಳುವುದು ಸೇರಿದಂತೆ ಪ್ರಯಾಣಿಕರಿಗೆ ಅನುಕೂಲವಾಗುವಂತಹ ವ್ಯವಸ್ಥೆಯನ್ನು ವಿಮಾನ‌ ನಿಲ್ದಾಣದಲ್ಲಿ ಅಳವಡಿಸಿಕೊಂಡು ಬಂದಿದೆ.. ಇದರಿಂದ ಹಲವು ಪ್ರಶಸ್ತಿಗಳು ಅವಾರ್ಡ್ಸ್ ಈ ಕೆಐಎಎಲ್ ಗೆ ಬಂದಿದೆ..‌ಇದೀಗ ಪರಿಸರ ಉಳಿವಿಗಾಗಿ ಹೊಸ ಪ್ರಯತ್ನಕ್ಕೆ ಮುಂದಾಗಿರುವ ಕೆಐಎಎಲ್ ಇದರಲ್ಲೂ ಸಕ್ಸಸ್ ಕಾಣುತ್ತಿದೆ..

ಇಂದು ಪರಿಸರ ದಿನವಾಗಿದ್ದು, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಗುವ ರಸ್ತೆಯ ಅಕ್ಕಪಕ್ಕದಲ್ಲಿ ಹಸಿರು ಕಂಗೊಳಿಸುತ್ತದೆ.. ವಿಧವಿಧವಾದ ಮರ ಗಿಡಗಳಿಂದ ವಿಮನ‌ ನಿಲ್ದಾಣಕ್ಕೆ ಒಂದು ಕಳೆ ಬಂದಿದೆ.. ಇದೀಗ ಏರ್ಪೋರ್ಟ್ ರಸ್ತೆಯನ್ನು ಮತ್ತಷ್ಟು ಅಗಲ ಮಾಡುವ ಉದ್ದೇಶದ ಜೊತೆಗೆ ಮೆಟ್ರೋ ಕಾಮಾಗಾರಿಗೆ ಸ್ಥಳ ನೀಡುವ ಅನಿವಾರ್ಯ ವಿಮಾನ ನಿಲ್ದಾಣಕ್ಕಿದೆ.. ಇದರಿಂದ ರಸ್ತೆ ಮಾಡಲು ಮತ್ತು ಮೆಟ್ರೋ ಕಾಮಗಾರಿ ನಡೆಯುವ ಸ್ಥಳದಲ್ಲಿ ದೊಡ್ಡ ದೊಡ್ಡ ಮರಗಳು ಇವೆ..‌ಇವುಗಳನ್ನು ಕಡಿದರೆ ಪರಿಸರ ನಾಶ ಮಾಡಿದಂತೆ ಹಾಗುತ್ತದೆ ಎಂದು ಮರಗಳನ್ನು ಬೇರು ಸಮೇತ ಸ್ಥಳಾಂತರಿಸಲು ವಿಮಾನ ನಿಲ್ದಾಣ ಮುಂದಾಗಿದೆ.. ಇದಕ್ಕಾಗಿ ಇನ್ಸ್ಟಿಟ್ಯೂಟ್ ಆಫ್‌ ವುಡ್ ಸೈನ್ಸ್ ಅಂಡ್ ಟೆಕ್ನಾಲಜಿ ಮತ್ತು ವೋಲ್ವೊಗಳನ್ನು ಬಳಸಿಕೊಳ್ಳಲಾಗುತ್ತಿದ್ದು, ಇದರ ಮೂಲಕ ಮರಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಯಾವುದೇ ತೊಂದರೆ ಇಲ್ಲದೇ ಸಾಗಿಸಿ ಅಲ್ಲಿ ನೆಡಬಹುದಾಗಿದೆ.

ಈ ವೈಜ್ನಾನಿಕ ಪರಿಹಾರದಿಂದ ಮರಗಳಿಗೆ ಯಾವುದೇ ಹಾನಿಯಾಗುವುದಿಲ್ಲ..ಈಗಾಗಲೇ ೨೪೭ ಮರಗಳನ್ನು ಬೇರೆಡೆಗೆ ಶಿಪ್ಟ್ ಮಾಡಲಾಗಿದ್ದು, ಯಾವುದೇ ಹಾನಿಯಾಗಿಲ್ಲ.. ಎಂದಿನಂತೆ ಅಲ್ಲೂ ಉತ್ತಮ ರೀತಿಯಲ್ಲಿ ಬೆಳೆಯುತ್ತಿವೆ.. ಕಳೆದ ಎರಡು ತಿಂಗಳಿಂದ ಕೆಲಸ ಮಾಡುತ್ತಿದ್ದು, ಇನ್ನು ಒಂದು ತಿಂಗಳ‌ ಕಾಲಾವಕಾಶ ಇದೆ.. ಇವಾಗ ಒಂದು ವೋಲ್ವೋ ಟ್ರೀ- ಟ್ರಾನ್ಸ್ ಪ್ಲಾಂಟರ್ ನೊಂದಿಗೆ ಕೆಲಸ ಮಾಡುತ್ತಿದ್ದು, ಸದ್ಯದಲ್ಲೇ ಇನ್ನೊಂದು ಟ್ರೀ ಟ್ರಾನ್ಸ್ ಪ್ಲಾಂಟರ್ ಬರಲಿದೆ..‌ಆಗ ಇನ್ನು ವೇಗವಾಗಿ ಮರಗಳ ಸ್ಥಳಾಂತರ ಕಾರ್ಯ ನಡೆಯಲಿದೆ.. ಇಂದು ಮರವನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸ್ಥಳಾಂತರಿಸಲು ಒಂದುವರೆ ಗಂಟೆ ಬೇಕಾಗಲಿದೆ.. ಅದು ಎಷ್ಟು ದೂರದಿಂದ ಎಷ್ಟು ದೂರಕ್ಕೆ ಅನ್ನೋದರ‌ ಮೇಲೆ ಟೈ ತೆಗದುಕೊಳ್ಳಲಿದೆ.. ಅಲ್ಲದೇ ಮರಗಳ ಕಾಂಡ ಕಡಿಮೆ ಅಂದರೆ ೬ ಇಂಚಿನ ಮರಗಳನ್ನು ಸ್ಥಳಾಂತರಿಸಬಹುದು..‌ಅದಕ್ಕಿಂತ ದೊಡ್ಡ ಮರಗಳನ್ನು ಸ್ಥಳಾಂತರಿಸಲು ಸ್ವಲ್ಪ‌ ಕಷ್ಟವಾಗುತ್ತದೆ ಎಂದು ಬಿಐಎಎಲ್ ನ ಪ್ರಸನ್ನ ತಿಳಿಸಿದರು..

ಇನ್ನು ಈ ವೈಜ್ಞಾನಿಕ ತಂತ್ರಜ್ಞಾನದಿಂದ ಕಡಿಮೆ ಖರ್ಚಿನಿಂದ ಹೆಚ್ಚು ಕೆಲಸ ಮಾಡಬಹುದಾಗಿ.. ಒಂದು ದಿನಕ್ಕೆ ೧೪ ರಿಂದ ೧೬ ಮರಗಳನ್ನು ರೀ ಟ್ರಾನ್ಸ್ ಪ್ಲಾಂಟರ್ ಮಾಡಬಹುದು.. ಇದರಿಂದ ಮರಗಳಿಗೆ ಯಾವುದೇ ತೊಂದರೆಯಾಗುವುದಿಲ.. ಈ ವಿಮಾನ ನಿಲ್ದಾಣದಲ್ಲಿ ಹೀಗಾಗಲೆ ನೂರಾರು ಮರಗಳನ್ನು ಸ್ಥಳಾಂತರ ಮಾಡಲಾಗಿದೆ ಎಂದು ಬಿಐಎಎಲ್ ನ ಮಂಜುನಾಥ್ ತಿಳಿಸಿದರು..

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರತಿ ಸಲ ಒಂದಲ್ಲ ಒಂದು ವಿನೂತನ ಪ್ರಯತ್ನಗಳಿಂದ ಸಾಕಷ್ಟು ಜನಪ್ರಿಯತೆ ಗಳಿಸಿದೆ.. ಇದೀಗ ಹೊಸದಾಗಿ ಪರಿಸರ ಉಳಿವಿಗಾಗಿ ಮಾಡುತ್ತಿರುವ ಪ್ರಯತ್ನಕ್ಕು ಯಶಸ್ಸು ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಇನ್ಯಾವ ಹೊಸ ಪ್ರಯೋಗ ಮಾಡಲಿದೆ ಅನ್ನೋದನ್ನು ನೋಡಬೇಕು.. ಆದರೆ ಇದೀರ ಪರಿಸರ ಉಳಿವಿಗೆ ಮಾಡಿರುವ ಪ್ರಯೋಗಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.. Body:NoConclusion:No
ETV Bharat Logo

Copyright © 2025 Ushodaya Enterprises Pvt. Ltd., All Rights Reserved.