ETV Bharat / state

ರವಿ ಡಿ ಚೆನ್ನಣ್ಣನವರ್ ಸೇರಿ 9 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ - ಕರ್ನಾಟಕದ ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಸಿಐಡಿ ಎಸ್​ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ರವಿ ಡಿ‌ ಚನ್ನಣ್ಣನವರ್​​ ಅವರನ್ನು ವಾಲ್ಮೀಕಿ ಅಭಿವೃದ್ಧಿ ನಿಗಮದ ಎಂಡಿಯಾಗಿ ವರ್ಗಾವಣೆಗೊಳಿಸಲಾಗಿದೆ‌.‌ ಇವರ ಜೊತೆಗೆ 8 ಮಂದಿ ಐಪಿಎಸ್​ ಅಧಿಕಾರಿಗಳನ್ನೂ ಸಹ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ರವಿ ಡಿ ಚೆನ್ನಣ್ಣನವರ್ ಸೇರಿ 9 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ

author img

By

Published : Jan 27, 2022, 5:39 PM IST

Updated : Jan 27, 2022, 7:00 PM IST

ಬೆಂಗಳೂರು: ಐಪಿಎಸ್​ ರವಿ ಡಿ ಚನ್ನಣ್ಣನವರ್ ಸೇರಿದಂತೆ 9 ಮಂದಿ‌ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಸಿಐಡಿ ಎಸ್​​ಪಿ ಹುದ್ದೆಯಿಂದ ಕರ್ನಾಟಕ ಮಹರ್ಷಿ ವಾಲ್ಮೀಕಿ ಶಡ್ಯೂಲ್ ಟ್ರೈಬ್ ಡೆವಲಪ್ಮೆಂಟ್ ಕಾರ್ಪೊರೇಷನ್ ಎಂಡಿ ಆಗಿ ರವಿ ಡಿ. ಚನ್ನಣ್ಣನವರ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಸಿಐಡಿ ಎಸ್​ಪಿಯಾಗಿದ್ದ ಐಪಿಎಸ್ ಅಧಿಕಾರಿ ಭೀಮಾಶಂಕರ ಗುಳೇದ್ ಅವರನ್ನು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಅಗಿ ವರ್ಗಾವಣೆ ಮಾಡಲಾಗಿದೆ. ಅಬ್ದುಲ್ ಅಹಾದ್ ಅವರನ್ನು ಎಸಿಬಿ ಎಸ್​ಪಿಯಿಂದ ಕೆಎಸ್​ಆರ್​​ಟಿಸಿ ನಿರ್ದೇಶಕರಾಗಿ ವರ್ಗಾಯಿಸಲಾಗಿದೆ.

ಟಿ ಶ್ರೀಧರ್ ಅವರನ್ನು ಕೊಪ್ಪಳ ಎಸ್​ಪಿ ಹುದ್ದೆಯಿಂದ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಎಸ್​ಪಿಯಾಗಿ ವರ್ಗಾಯಿಸಲಾಗಿದೆ. ಟಿ.ಪಿ ಶಿವಕುಮಾರ್ ಅವರನ್ನು ಬಂಧೀಖಾನೆ ಎಸ್​ಪಿಯಿಂದ ಚಾಮರಾಜನಗರ ಎಸ್​ಪಿಯಾಗಿ, ದಿವ್ಯಸಾರ ಥಾಮಸ್ ಅವರನ್ನು ಚಾಮರಾಜನಗರ ಎಸ್​ಪಿಯಿಂದ ಕರ್ನಾಟಕ ಪೊಲೀಸ್ ಅಕಾಡೆಮಿ ಉಪ ನಿರ್ದೇಶಕರಾಗಿ, ಡೆಕ್ಕಾ ಕಿಶೋರ್ ಬಾಬು ಅವರನ್ನು ಬೀದರ್ ಎಸ್​ಪಿ ಆಗಿ ವರ್ಗಾವಣೆ ಮಾಡಲಾಗಿದೆ.

ಅರುಣಾಂಗ್ಶು ಗಿರಿ ಅವರನ್ನು ಎಸಿಬಿ ಎಸ್ ಪಿಯಿಂದ ಕೊಪ್ಪಳ ಎಸ್ ಪಿ ಆಗಿ ವರ್ಗಾವಣೆ ಮಾಡಲಾಗಿದೆ. ಡಿ.ಎಲ್. ನಾಗೇಶ್ ಅವರನ್ನು ಬೀದರ್ ಎಸ್​ಪಿಯಿಂದ ಸಿಐಡಿ ಎಸ್​ಪಿ ಆಗಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.

9 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ
9 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 27, 2022, 7:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.