ಬೆಂಗಳೂರು: ಪ್ರತಿಷ್ಠಿತ ಬಿಇಎಂಎಲ್ ದೇಶದಲ್ಲೇ ರೈಲು ಮತ್ತು ಮೆಟ್ರೋ ಬೋಗಿಗಳ ಉತ್ಪಾದನೆಗೆ ಹೆಸರುವಾಸಿಯಾಗಿದ್ದು, ಇಲ್ಲಿಯವರೆಗೆ ಬೆಂಗಳೂರು, ದೆಹಲಿ, ಜೈಪುರ, ಕೋಲ್ಕತ್ತಾ ಮೆಟ್ರೋ ನಿಗಮಗಳಿಗೆ 1500 ಮೆಟ್ರೋ ಬೋಗಿಗಳನ್ನು ತಯಾರಿಸಿ ಕೊಟ್ಟಿದೆ.
ಬೆಂಗಳೂರಿನ ಬಿಇಎಂಎಲ್ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ವಸತಿ ಮತ್ತು ನಗರ ಸಚಿವಾಲಯದ ಕಾರ್ಯದರ್ಶಿಯಾಗಿರುವ ಹಿರಿಯ ಐಎಎಸ್ ಅಧಿಕಾರಿ ಡಿ.ಎಸ್.ಮಿಶ್ರಾ ಅವರು ನೂತನ ಮೆಟ್ರೋ ಬೋಗಿಗಳ 11ನೇ ಸೆಟ್ಅನ್ನ ಹಸ್ತಾಂತರಿಸುವ ಪ್ರಕ್ರಿಯೆಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಹಾಜರಿದ್ದ ಬಿಇಎಂಎಲ್ನ ದೀಪಕ್ ಕುಮಾರ್ ಹೊಟಾ ಅವರು ಬೆಮಲ್ ಸಾಧನೆಗಳನ್ನು ಮಿಶ್ರಾ ಅವರಿಗೆ ವಿವರಿಸಿದರು.
ಇದೇ ವೇಳೆ ಮೆಟ್ರೋ ಬೋಗಿಗಳ ಉತ್ಪಾದನೆ ಬಗ್ಗೆ ಮಿಶ್ರಾ ಅವರು ಬೆಮಲ್ ಸಿಬ್ಬಂದಿ ಜತೆ ಸುದೀರ್ಘ ಚರ್ಚೆ ನಡೆಸಿದರು. ಮೆಟ್ರೋ ಬೋಗಿ ತಯಾರಿಕೆ ಘಟಕಗಳ ವೀಕ್ಷಣೆ ಬಳಿಕ ದೇಶದ ಆರ್ಥಿಕ ಬೆಳವಣಿಗೆಗೆ ಪೂರಕವಾದ ಪ್ರಮುಖ ಸೆಕ್ಟಾರ್ಗಳ ಅಭಿವೃದ್ಧಿಗೆ ಬಿಇಎಂಎಲ್ ಕೊಡುಗೆ ಮತ್ತು ಶ್ರಮದ ಬಗ್ಗೆ ಶ್ಲಾಘಿಸಿ ಬೆಮಲ್ ಕಾರ್ಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.