ಬೆಂಗಳೂರು: ಟ್ರಾಫಿಕ್ ಪೊಲೀಸರು ಪ್ರತಿ ದಿನ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡುವವರನ್ನ ಹಿಡಿದು ದಂಡ ಹಾಕ್ತಿದ್ದಾರೆ. ಹೊಸ ನಿಯಮ ಬಂದ ಮೇಲೆ ಸಂಚಾರಿ ನಿಯಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿದೆ ಎಂದು ಬೆಂಗಳೂರು ಸಂಚಾರಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿದ ರವಿಕಾಂತೇಗೌಡ ಅವರು, ಹೊಸ ನಿಯಮ ಬಂದ ನಂತ್ರ ಅಗಸ್ಟ್ ತಿಂಗಳಿಗೆ ಹೋಲಿಸಿದ್ರೆ, ಸೆಪ್ಟೆಂಬರ್ ತಿಂಗಳಿನಲ್ಲಿ ಎರಡು ಲಕ್ಷ ಉಲ್ಲಂಘನೆ ಪ್ರಕರಣಗಳು ಕಡಿಮೆಯಾಗಿವೆ. ಆದರೆ, ದಂಡದ ದರ ಜಾಸ್ತಿಯಾಗಿದೆ.
ಹೊಸ ದಂಡ ಜಾರಿ ಬಂದ ಮೇಲೆ ಜನರು ಇದೀಗ ಎಚ್ಚೆತ್ತು ಹಣವನ್ನ ಪಾವತಿ ಮಾಡ್ತಿದ್ದಾರೆ. ಹೆಲ್ಮೆಟ್ ಧರಿಸದೇ, ಸೀಟ್ ಬೆಲ್ಟ್ ಹಾಕದೇ, ಮೊಬೈಲ್ ಫೋನ್ ಬಳಸಿ ಚಾಲನೆ ಮಾಡುವವರಿಗೆ ಟ್ರಾಫಿಕ್ ಪೊಲೀಸರು ಕೂಡ ದಂಡ ವಿಧಿಸುತ್ತಿದ್ದಾರೆ ಎಂದರು.