ETV Bharat / state

ಸಿಲಿಕಾನ್‌ ಸಿಟಿಯಲ್ಲಿರುವ ಗುಂಡಿಗಳೆಷ್ಟು.. ಖಾಕಿ ರಿಪೋರ್ಟ್ ಹಿಡಿದು ಬೀದಿಗಿಳಿದ ಬಿಬಿಎಂಪಿ ಆಯುಕ್ತರು!

ಬೆಂಗಳೂರಿನಲ್ಲಿರುವ ಸುಮಾರು 450 ಗುಂಡಿಗಳ ಪೋಟೋ ಮತ್ತು ವಿಳಾಸವನ್ನು ಪಟ್ಟಿ ಮಾಡಿ ಟ್ರಾಫಿಕ್ ಪೊಲೀಸರು ಬಿಬಿಎಂಪಿಗೆ ಕೊಟ್ಟಿದ್ದರು. ಪೊಲೀಸರ ವರದಿ ಹಿಡ್ಕೊಂಡು ಬೆಂಗಳೂರು ನಗರವನ್ನು ಆಯುಕ್ತ ಮಂಜುನಾಥ್ ಪ್ರಸಾದ್  ಸುತ್ತು ಹಾಕಿದರು.

ಬಿಬಿಎಂಪಿ ಆಯುಕ್ತರು
author img

By

Published : May 4, 2019, 9:27 AM IST

ಬೆಂಗಳೂರು: ಗುಂಡಿಮುಕ್ತ ಬೆಂಗಳೂರು ಕನಸು ಕನಸಾಗಿಯೇ ಉಳಿದಿದೆ. ಒಂದು ಮಳೆ ಬಂದ್ರೇ ಕಳಪೆ ಕಾಮಗಾರಿಯಿಂದಾಗಿ ಸಾಕು ರಸ್ತೆಗಳೆಲ್ಲ ಬಾಯಿಬಿಡುತ್ತಿವೆ. ರಸ್ತೆ ಗುಂಡಿಗೆ ಬಿದ್ದು ಬೈಕ್ ಸವಾರರು ಸಾಯೋದನ್ನ ಕಣ್ಣಾರೆ ಕಾಣ್ತಿದ್ದ ಟ್ರಾಫಿಕ್ ಪೊಲೀಸರೆ, ಗುಂಡಿ ಮುಕ್ತ ಮಾಡಲು ಮುಂದಾಗಿದ್ದರು.

ಈ ಘಟನೆಯಿಂದ ಮುಜುಗರಕ್ಕೊಳಗಾದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ರಸ್ತೆ, ಮೂಲಸೌಕರ್ಯದ ಮುಖ್ಯ ಇಂಜಿನಿಯರ್ ಸೋಮಶೇಖರ್ ಹಾಗೂ ಅಧಿಕಾರಿಗಳು ದಿಢೀರ್ ರಸ್ತೆಗಳಿದು ಪರಿಶೀಲನೆ ನಡೆಸಿ ಗುಂಡಿಗಳನ್ನು ಹುಡುಕಿದ್ರು.

ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ ನೇತೃತ್ವದ ತಂಡ

ಪೊಲೀಸರ ವರದಿ ಹಿಡ್ಕೊಂಡು ಬೆಂಗಳೂರು ನಗರವನ್ನು ಸುತ್ತು ಹಾಕಿದರು. ಟ್ರಾಫಿಕ್ ಪೊಲೀಸರು ಬಿಬಿಎಂಪಿಗೆ ನಗರದಲ್ಲಿರೋ ಸುಮಾರು 450 ಗುಂಡಿಗಳ ಪೋಟೋ ಮತ್ತು ವಿಳಾಸವನ್ನ ಪಟ್ಟಿ ಮಾಡಿಕೊಟ್ಟಿದ್ದರು. ಆಯುಕ್ತ ಮಂಜುನಾಥ್ ಪ್ರಸಾದ್ ಇಂದು ಬೆಳಗ್ಗೆ ಸ್ಥಳ ಪರಿಶೀಲನೆ ಮಾಡೋ ವೇಳೆಗಾಗಲೇ ಸ್ವತಃ ಟ್ರಾಫಿಕ್ ಪೊಲೀಸರೇ ಲಾರಿ ಟ್ರ್ಯಾಕ್ಟರ್ ತರಿಸಿ ಸಿಮೆಂಟ್ ಹಾಕಿ ಗುಂಡಿ ಮುಚ್ಚಿದ್ದಾರೆ. ನಗರದ ಪ್ರಮುಖ ರಸ್ತೆಗಳ ಗುಂಡಿ ಮುಚ್ಚಿಸಲಾಗ್ತಿದೆ, ತ್ವರಿತವಾಗಿ ಕಾಮಗಾರಿ ಕೈಗೊಳ್ಳಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ರು.

Intro:ಪೊಲೀಸ್ ರಿಪೋರ್ಟ್ ನೋಡಿ ಬೀದಿಗಿಳಿದ ಬಿಬಿಎಂಪಿ ಕಮಿಷನರ್..!

ಬೆಂಗಳೂರು - ಗುಂಡಿಮುಕ್ತ ಬೆಂಗಳೂರು ಕನಸು ಕನಸಾಗಿಯೇ ಉಳಿದಿದ್ದು, ಒಂದು ಮಳೆ ಬಂದ್ರೆ ಸಾಕು ರಸ್ತೆಗಳೆಲ್ಲ ಕಳಪೆ ಕಾಮಗಾರಿಯಿಂದಾಗಿ ಬಾಯಿಬಿಡುತ್ತಿವೆ. ರಸ್ತೆ ಗುಂಡಿಗೆ ಬಿದ್ದು ಬೈಕ್ ಸವಾರರು ಸಾಯೋದನ್ನ ನೋಡ್ತಿದ್ದ, ಸ್ವತಃ ಟ್ರಾಫಿಕ್ ಪೊಲೀಸರೆ ಗುಂಡಿ ಮುಕ್ತ ಮಾಡೋಕೂ ಮುಂದಾಗಿದ್ದಾಯ್ತು..
ಇದರಿಂದ ಮುಜುಗರಕ್ಕೆ ಒಳಗಾದ ಬಿಬಿಎಂಪಿ ಆಯುಕ್ತರಾದ ಮಂಜುನಾಥ್ ಪ್ರಸಾದ್ ಹಾಗೂ ರದ್ತೆ ಮೂಲಭೂತ ಸೌಕರ್ಯದ ಚೀಫ್ ಇಂಜಿನಿಯರ್ ಸೋಮಶೇಖರ್ ಹಾಗೂ ಅಧಿಕಾರಿಗಳು ದಿಢೀರ್ ಅಂತಾ ಪರಿಶೀಲನೆ ಹೆಸರಲ್ಲಿ ರಸ್ತೆಗಳಿದು ಮುಚ್ಚಿರೋ ಗುಂಡಿಗಳನ್ನು ಹುಡುಕಿದ್ರು. ಪೊಲೀಸರ ವರದಿ ಹಿಡ್ಕೊಂಡು ಬೆಂಗಳೂರು ನಗರವನ್ನ ಸುತ್ತುಹಾಕಿದ್ರು. ಟ್ರಾಫಿಕ್ ಪೊಲೀಸರು ಬಿಬಿಎಂಪಿಗೆ ನಗರದಲ್ಲಿರೋ ಸುಮಾರು 450 ಗುಂಡಿಗಳ ಪೋಟೋ ಮತ್ತು ವಿಳಾಸವನ್ನ ಪಟ್ಟಿ ಮಾಡಿಕೊಟ್ಟಿದೆ..ಆಯುಕ್ತ
ಮಂಜುನಾಥ್ ಪ್ರಸಾದ್ ಇಂದು ಬೆಳಗ್ಗೆ ಸ್ಥಳ ಪರಿಶೀಲನೆ ಮಾಡೋ ವೇಳೆಗಾಗಲೇ ಸ್ವತಃ ಟ್ರಾಫಿಕ್ ಪೊಲೀಸರೇ ಲಾರಿ ಟ್ರ್ಯಾಕ್ಟರ್ ತರಿಸಿ ಸಿಮೆಂಟ್ ಹಾಕಿ ಗುಂಡಿ ಮುಚ್ಚಿದ್ದಾರೆ..
ನಗರದ ಪ್ರಮುಖ ರಸ್ತೆಗಳ ಗುಂಡಿ ಮುಚ್ಚಿಸಲಾಗ್ತಿದೆ, ತ್ವರಿತವಾಗಿ ಕಾಮಗಾರಿ ಕೈಗೊಳ್ಳಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ರು.

ಸೌಮ್ಯಶ್ರೀ
KN_BNG_01_03_pothole_visit_script_sowmya_7202707Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.