ಬೆಂಗಳೂರು: ಮೋಟಾರ್ ವಾಹನ ಕಾಯ್ದೆ ತಿದ್ದುಪಡಿ ಹಿನ್ನೆಲೆಯಲ್ಲಿ ನಗರದಲ್ಲಿ ನಿಯಮ ಉಲ್ಲಂಘಿಸಿದ ವಾಹನ ಸವಾರರಿಂದ ದಂಡ ಸಂಗ್ರಹಿಸಿರುವ ಸಂಚಾರಿ ಪೊಲೀಸರು, ಕಳೆದ 24 ಗಂಟೆಗಳಲ್ಲಿ ₹38 ಲಕ್ಷ ದಂಡ ವಸೂಲಿ ಮಾಡಿದ್ದಾರೆ.
ಒಟ್ಟು 10,974 ಪ್ರಕರಣಗಳನ್ನ ದಾಖಲಿಸಿರುವ ಸಂಚಾರಿ ಪೊಲೀಸರು ಈ ಪೈಕಿ 2141 ಹೆಲ್ಮೆಟ್ ರಹಿತ ವಾಹನ ಚಾಲನೆ ಕೇಸ್ಗಳಿಂದ ₹ 59,900 ದಂಡ, 1499 ಸಿಗ್ನಲ್ ಜಂಪ್ ಕೇಸ್ ₹ 2,65,900 ಹಾಗೂ ಹಿಂಬದಿ ಬೈಕ್ ಸವಾರ ಹೆಲ್ಮೆಟ್ ರಹಿತ ಚಾಲನೆ 1472 ಕೇಸ್ಗಳಿಂದ ₹ 5,39,000 ದಂಡ ವಸೂಲಿ ಮಾಡಲಾಗಿದೆ.