ETV Bharat / state

ಚಾಲಕನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಥಳಿಸಿದ ಸಂಚಾರಿ ಪೊಲೀಸ್: ವಿಡಿಯೋ ವೈರಲ್​ - ಸಿಟಿ ಮಾರುಕಟ್ಟೆ

ಬೆಂಗಳೂರಿನ ಸಿಟಿ ಮಾರುಕಟ್ಟೆಯ ಮೇಲ್ಸೇತುವೆ​ ಬಳಿ ಏಕಮುಖ ರಸ್ತೆಯಲ್ಲಿ ತೆರಳುವಂತೆ ಸಂಚಾರಿ ಪೊಲೀಸ್​​ ಪೇದೆ ಹೇಳಿದ್ದರು ಎನ್ನಲಾಗ್ತಿದೆ. ಟೆಂಪೋ ಚಾಲಕ ಸುನೀಲ್​ ಆ ಮಾರ್ಗವಾಗಿ ತೆರಳಿದಾಗ ಮತ್ತೋರ್ವ ಸಂಚಾರಿ ಪೊಲೀಸ್​ ಆ ಚಾಲಕನನ್ನು ಅವಾಚ್ಯ ಪದಗಳಿಂದ ನಿಂದಿಸಿ, ಥಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ವಿಡಿಯೋ ವೈರಲ್​ ಆಗಿದೆ.

ಚಾಲಕನನ್ನು ಥಳಿಸಿದ ಸಂಚಾರಿ ಪೊಲೀಸ್​
author img

By

Published : Sep 20, 2019, 8:23 PM IST

Updated : Sep 22, 2019, 1:14 PM IST

ಬೆಂಗಳೂರು: ಸಿಟಿ ಮಾರುಕಟ್ಟೆ ಫ್ಲೈ ಓವರ್​ ಬಳಿ ಟ್ರಾಫಿಕ್​ ಪೊಲೀಸ್​ ಒನ್​ ವೇನಲ್ಲಿ ಹೋಗುವಂತೆ ಟೆಂಪೋ ಚಾಲಕನಿಗೆ ಸೂಚಿಸಿದ್ದರು ಎನ್ನಲಾಗ್ತಿದೆ. ಅದರಂತೆ ಟೆಂಪೋ ಚಾಲಕ ಹೋಗಿದ್ದಕ್ಕೆ ಮತ್ತೋರ್ವ ಟ್ರಾಫಿಕ್​ ಪೊಲೀಸ್​ ಬಂದು ವಾಹನವನ್ನು ಅಡ್ಡಗಟ್ಟಿ ಕಪಾಳ ಮೋಕ್ಷ ಮಾಡಿದ್ದಲ್ಲದೆ, ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಚಾಲಕನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಥಳಿಸಿದ ಸಂಚಾರಿ ಪೊಲೀಸ್

ನನ್ನದೇನು ತಪ್ಪಿಲ್ಲವೆಂದು ಚಾಲಕ ಸುನೀಲ್​ ಹೇಳಿದರೂ ಅದನ್ನು ಕೇಳದೇ ಟ್ರಾಫಿಕ್ ಪೊಲೀಸ್​ ನಿಂದಿಸಿ, ಥಳಿಸಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಆದ್ರೆ ನಿಜಕ್ಕೂ ಅಲ್ಲಿ ನಡೆದಿದ್ದೇನು ಎಂಬುದರ ಬಗ್ಗೆ ಪೂರ್ಣ ಮಾಹಿತಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಂದ ತಿಳಿದುಬರಬೇಕಿದೆ.

Intro:ಇದು ಬೇಲಿಯೇ ಎದ್ದು ಹೊಲ ಮೇಯ್ದ ಹಾಗೆ.
ನೀತಿ ಪಾಠ ಹೇಳಬೇಕಾದವರ ಬಾಯಲ್ಲಿ ಸಂಸ್ಕೃತ ಪಾಠ ಇದೀಗ ವೈರಲ್

ಟೆಂಪೋ ಚಾಲಕನಿಗೆ ಒನ್ ವೇಯಲ್ಲಿ ಹೋಗುವಂತೆ ಹೇಳಿದ ಓರ್ವ ಟ್ರಾಫಿಕ್ ಪೊಲೀಸ್ ಮತ್ತೋರ್ವ ಟ್ರಾಫಿಕ್ ಪೊಲೀಸ್ ಒನ್ ವೇಯಲ್ಲಿ‌ ಯಾಕೆ ಹೋಗಿದ್ಯ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿ ಥಳಿಸಿರುವ ಘಟನೆ ಸಿಟಿ ಮಾರ್ಕೆಟ್ ಫ್ಲೈ ಓವರ್ ಬಳಿ ನಡೆದಿದೆ.

ಹಲಸೂರು ಗೇಟ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ
ಸುನಿಲ್ ಎಂಬಾತ ಸಿಟಿ ಮಾರ್ಕೇಟ್ ಕಡೆಯಿಂದ ಟೆಂಪೋ ಚಾಲನೆ ಮಾಡುತ್ತ ಬಂದಿದ್ದಾನೆ. ಇದಕ್ಕೆ ಅಲ್ಲೆ ಇದ್ದ ಟ್ರಾಫೀಕ್ ಒನ್ ವೇಯಲ್ಲಿ ಹೋಗುವಂತೆ ಹೇಳಿದ್ದಾನೆ.ಇದಕ್ಕೆ ಮತ್ತೋರ್ವ ಪೇದೆ ಯಾಕೆ ಒನ್ ವೇಯಲ್ಲಿ ಹೊಗ್ತಿಯಾ ಎಂದು ಸಂಸ್ಕೃತ ಪದದಲ್ಲಿ ಬೈದಿದ್ದಾನೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ‌ ಈ ವಿಡಿಯೋ ವೈರಲ್ ಆಗಿದೆBody:KN_BNG_08_TRAFFIC_7204498Conclusion:KN_BNG_08_TRAFFIC_7204498
Last Updated : Sep 22, 2019, 1:14 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.