ಬೆಂಗಳೂರು: ಐಟಿ ಸಿಟಿ, ಗಾರ್ಡನ್ ಸಿಟಿ ಜತೆಗೆ ಟ್ರಾಫಿಕ್ ಸಿಟಿ ಎಂಬ ಹಣೆಪಟ್ಟಿ ಅಂಟಿಕೊಂಡಿದ್ದ ಮಹಾನಗರ ಬೆಂಗಳೂರಿನಲ್ಲಿ ಪ್ರಸ್ತುತ ದಿನಗಳಲ್ಲಿ ಸಂಚಾರ ದಟ್ಟಣೆ ಹತೋಟಿಗೆ ಬಂದಿದೆ. ಅದರಲ್ಲಿಯೂ ಬೆಂಗಳೂರು ಸಂಚಾರಿ ಪೊಲೀಸ್ ವಿಭಾಗಕ್ಕೆ ವಿಶೇಷ ಆಯುಕ್ತರು ನೇಮಕವಾದ ಬಳಿಕ ನಗರದ ಸಂಚಾರ ವ್ಯವಸ್ಥೆಯ ಚಿತ್ರಣ ಬದಲಾಗಿದೆ.
ಸ್ಪೆಷಲ್ ಕಮಿಷನರ್ ಆದೇಶದಂತೆ ನಗರದಲ್ಲಿ ದಿನದ ಸಮಯದಲ್ಲಿ ಭಾರಿ ವಾಹನಗಳ ಓಡಾಟ ನಿರ್ಬಂಧವಾದ ಬಳಿಕ ಇತರ ವಾಹನ ಸವಾರರು ರಸ್ತೆಯಲ್ಲಿ ಟ್ರಾಫಿಕ್ ಜಂಜಾಟವಿಲ್ಲದೇ ಸಂಚರಿಸುತ್ತಿದ್ದಾರೆ.
ಧನ್ಯವಾದ ಅರ್ಪಿಸಿದ ಸಾರ್ವಜನಿಕರು: ಸಾಮಾಜಿಕ ಜಾಲತಾಣಗಳಲ್ಲಿ ಸಂಚಾರಿ ಪೊಲೀಸರು ಮಾಹಿತಿ ಹಂಚಿಕೊಂಡಿದ್ದು, ವಾಹನ ಸವಾರರಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ಸಾಮಾನ್ಯ ದಿನಗಳಲ್ಲಿ ಬೆಂಗಳೂರಿನಲ್ಲಿ ಸಂಚರಿಸಲು ವಾರಾಂತ್ಯ ನೆನಪಾಗುತ್ತಿದೆ ಅಂತ ಜನರು ಸಂಚಾರ ಪೊಲೀಸರಿಗೆ ಧನ್ಯವಾದ ತಿಳಿಸುತ್ತಿದ್ದಾರೆ.
ಇನ್ನು, ಭಾರಿ ವಾಹನಗಳ ಸಂಚಾರ ನಿರ್ಬಂಧ ನಿಯಮ ಜಾರಿಗೊಳಿಸಿದ ಬಳಿಕ ಕೆ.ಆರ್ ಮಾರ್ಕೆಟ್ ನಂತಹ ನಗರದ ಹೃದಯ ಭಾಗದದಲ್ಲಿಯೂ ಸಂಚಾರ ದಟ್ಟಣೆ ಹತೋಟಿಗೆ ಬಂದು ತಲುಪಿದೆ.
ಇದನ್ನೂಓದಿ:ವಾರದ ಅಂತರದಲ್ಲಿ ನವ ಮಂಗಳೂರು ಬಂದರಿಗೆ ಬಂತು ಎರಡನೇ ಐಷಾರಾಮಿ ಹಡಗು