ಬೆಂಗಳೂರು: ವಿಕಲಚೇತನ ಮಹಿಳೆಗೆ ಕಾಲಿನಿಂದ ಒದ್ದು ಆಕ್ರೋಶ ವ್ಯಕ್ತಪಡಿಸಿದ ಆರೋಪ ಹಿನ್ನೆಲೆ ಹಲಸೂರು ಗೇಟ್ ಸಂಚಾರಿ ಠಾಣೆಯ ಎಎಸ್ಐ ನಾರಾಯಣ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ಹಲಸೂರು ಗೇಟ್ ಬಳಿ ನಡೆದ ಘಟನೆಗೆ ಸಂಬಂಧಿಸಿದಂತೆ ಎಎಸ್ಐ ತಲೆದಂಡವಾಗಿದೆ.
ಟೋಯಿಂಗ್ ಮಾಡುತ್ತಿರುವುದನ್ನು ವಿರೋಧಿಸಿ ವಿಕಲಚೇತನ ಮಹಿಳೆಯು ಟೋಯಿಂಗ್ ವಾಹನದಲ್ಲಿ ಹೋಗುತ್ತಿದ್ದ ಎಎಸ್ಐ ನಾರಾಯಣ್ಗೆ ಕಲ್ಲಿನಿಂದ ಹೊಡೆದಿದ್ದಳು. ಇದರಿಂದ ಕೋಪಗೊಂಡ ಅವರು ಮಹಿಳೆ ವಿಕಲಚೇತನಳು ಎಂಬುದನ್ನು ಲೆಕ್ಕಿಸದೇ ಬೂಟುಕಾಲಿನಲ್ಲಿ ಒದ್ದಿದ್ದಾರೆ ಎನ್ನಲಾಗ್ತಿದೆ. ಅಷ್ಟಕ್ಕೆ ಮುಗಿಯದೆ ಎಸ್ಜೆ ಪಾರ್ಕ್ ಹೊಯ್ಸಳಗೆ ಕರೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಈ ನಡುವೆ ಆಕೆಯ ಕೂದಲೆಳೆದ ಎಎಸ್ಐ ನಾರಾಯಣ ಮತ್ತೆ ಮಹಿಳೆಯನ್ನು ಕೆಡವಿ ತುಳಿದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿದೆ. ಈ ಹಿನ್ನೆಲೆ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಅವರು ಎಎಸ್ಐ ನಾರಾಯಣ ಅವರನ್ನು ಅಮಾನತು ಮಾಡಿದ್ದಾರೆ.
ಓದಿ: ಬಿಜೆಪಿಯಿಂದ ಯಾವ ಶಾಸಕರು ಸಹ ಕಾಂಗ್ರೆಸ್ಗೆ ಹೋಗುವುದಿಲ್ಲ: ಸಚಿವ ಗೋವಿಂದ ಕಾರಜೋಳ