ETV Bharat / state

ತರಕಾರಿ ಬೆಲೆ ಕುಸಿತ.. ವ್ಯಾಪಾರವೂ ಇಲ್ಲ; ಸಾಲದ ಸುಳಿಯಲ್ಲಿ ವ್ಯಾಪಾರಿಗಳು - ಕಿಲ್ಲ‌ರ್ ಕೊರೊನಾ ಅರ್ಭಟ

ಮಹಾಮಾರಿ ಕಿಲ್ಲ‌ರ್ ಕೊರೊನಾ ಅರ್ಭಟಕ್ಕೆ ದೇಶದ ಆರ್ಥಿಕ ವ್ಯವಸ್ಥೆ ಬುಡಮೇಲಾಗಿದೆ. ಅದರಲ್ಲೂ ದೇಶದ ಪ್ರಮುಖ ನಗರಗಳ ಪರಿಸ್ಥಿತಿ ಹೇಳತೀರದು. ಹಣ್ಣು ತರಕಾರಿ ಮಾರಿಕೊಂಡು ಜೀವನ ನಡೆಸುತ್ತಿದ್ದವರ ಬದುಕು ಅಕ್ಷರಶಃ ಬೀದಿಗೆ ಬಿದ್ದಿದೆ.

ತರಕಾರಿ
ತರಕಾರಿ
author img

By

Published : Jul 11, 2020, 10:47 PM IST

ಬೆಂಗಳೂರು: ಮಹಾಮಾರಿ ಕಿಲ್ಲ‌ರ್ ಕೊರೊನಾ ಅರ್ಭಟಕ್ಕೆ ದೇಶದ ಆರ್ಥಿಕ ವ್ಯವಸ್ಥೆ ಬುಡಮೇಲಾಗಿದೆ. ಅದರಲ್ಲೂ ದೇಶದ ಪ್ರಮುಖ ನಗರಗಳ ಪರಿಸ್ಥಿತಿ ಹೇಳತೀರದು. ಹಣ್ಣು ತರಕಾರಿ ಮಾರಿಕೊಂಡು ಜೀವನ ನಡೆಸುತ್ತಿದ್ದವರ ಬದುಕು ಈಗ ಅಕ್ಷರಶಃ ಬೀದಿಗೆ ಬಿದ್ದಿದೆ.

ಲಾಕ್​ಡೌನ್ ನಂತರ ಬೆಂಗಳೂರಿನಲ್ಲಿ ಹಣ್ಣು ಮತ್ತು ತರಕಾರಿ ಮಾರಾಟ ಕುಸಿದಿದ್ದು ವ್ಯಾಪಾರವಿಲ್ಲದೆ ಮಾರಾಟಗಾರರು ಸಾಲದ ಸುಳಿಗೆ ಸಿಲುಕಿದ್ದಾರೆ. ದೇಶದಲ್ಲಿ ಇನ್ನು ಲಾಕ್​ಡೌನ್ ಜಾರಿ ಇರುವ ಕಾರಣ, ಅದ್ದೂರಿ ಮದುವೆ, ಮುಂಜಿ, ಹಬ್ಬ ಹರಿದಿನಗಳಿಗೆ ಸರ್ಕಾರ ಅನುಮತಿ ನೀಡಿಲ್ಲ. ಇದರಿಂದ ತರಕಾರಿ ವ್ಯಾಪಾರ ನೆಲಕಚ್ಚಿದೆ. ಮಾರ್ಚ್​ನಿಂದ ಜೂನ್​ವರೆಗೂ ಸಾಲು ಸಾಲು ಹಬ್ಬಗಳು ಮದುವೆಗಳು ನಡೆಯುತ್ತಿದ್ದ ಕಾರಣ ನಾಲ್ಕು ತಿಂಗಳು ವ್ಯಾಪಾರ ಜೋರಾಗಿ ನಡೆಯುತ್ತಿತ್ತು. ಅದರೆ ಲಾಕ್​ಡೌನ್ ನಿಂದ ತರಕಾರಿ ವ್ಯಾಪಾರ ಹೇಳಿಕೊಳ್ಳುವಷ್ಟಿಲ್ಲ ಎಂಬುದು ತರಕಾರಿ ವ್ಯಾಪಾರಿಗಳ ಅಳಲು.

ತರಕಾರಿ ಬೆಲೆ ಕುಸಿತದ ಜೊತೆ ವ್ಯಾಪರವು ಕುಸಿತ

ಲಾಕ್ ಡೌನ್ ವೇಳೆ ಜನರು ಮನೆಯಲ್ಲೆ ಇದ್ದ ಕಾರಣ ಬೆಲೆ ಜಾಸ್ತಿ ಇದ್ದರೂ ಸಹ ವ್ಯಾಪಾರ ಸ್ವಲ್ಪ ಮಟ್ಟಿಗೆ ನಡೆಯುತ್ತಿತ್ತು. ಆದರೆ ಲಾಕ್​ಡೌನ್ ಸಡಿಲಿಕೆ ನಂತರ ತರಕಾರಿ, ಹಣ್ಣುಗಳ ಬೆಲೆ‌ ಕಡಿಮೆಯಾಗಿ ವ್ಯಾಪಾರ ನೆಲಕಚ್ಚಿದೆ. ಮದುವೆ, ಹಬ್ಬಗಳು ನಡೆಯುತ್ತಿಲ್ಲ. ಇದರಿಂದ ವ್ಯಾಪಾರ ಕೂಡ ಇಲ್ಲ. ಈಗ ಇದರ ಜೊತೆಗೆ ಬೆಂಗಳೂರಿನಲ್ಲಿ ಕೊರೊನಾ ಜಾಸ್ತಿ ಆಗಿರುವ ಕಾರಣ ಹೆಚ್ಚಿನ ಜನ ಬೆಂಗಳೂರು ತೊರೆಯುತ್ತಿದ್ದಾರೆ. ಸಾಲ ಸೋಲ ಮಾಡಿ ಸರಕು ಹಾಕಿದ್ರು ಮಾರ್ಕೆಟ್​ಗಳ ಕಡೆಗೆ ಜನರು ಬರ್ತಿಲ್ಲ ಎಂದು ತರಕಾರಿ ವ್ಯಾಪಾರಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.