ETV Bharat / state

ಚುನಾವಣಾ ಪೂರ್ವದಲ್ಲೇ ಬಿಎಸ್​ವೈ ನಮ್ಮ ನಾಯಕರೆಂದು ಘೋಷಿಸಲಾಗಿದೆ: 'ಕಮಲ'ನಾಯಕರಿಗೆ ಸಿಟಿ ರವಿ ಟಾಂಗ್​​

author img

By

Published : May 30, 2020, 3:52 PM IST

ಕೇಂದ್ರದ ನಾಯಕರು ಬಿ.ಎಸ್. ಯಡಿಯೂರಪ್ಪನವರ ನಾಯಕತ್ವವನ್ನು ಒಪ್ಪಿ, ಸರ್ವಾನುಮತದಿಂದಲೇ ಅವರನ್ನು ಮುಖ್ಯಮಂತ್ರಿ ಮಾಡಲಾಗಿದೆ. ಚುನಾವಣಾ ಪೂರ್ವದಲ್ಲೇ ಅವರೇ ನಮ್ಮ ನಾಯರೆಂದು ಘೋಷಿಸಿ, ಅವರ ನಾಯಕತ್ವದಲ್ಲಿ ಚುನಾವಣೆ ಎದುರಿಸಿದ್ದೇವೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಪರೋಕ್ಷವಾಗಿ ಬಿಜೆಪಿಯಲ್ಲಿ ಭುಗಿಲೆದ್ದಿರುವ ನಾಯಕರಿಗೆ ಟಾಂಗ್ ನೀಡಿದರು.

Tourism Minister C.T. Ravi statement on bsy leadership
ಮೂವರು ಸಚಿವರ ಜಂಟಿ ಸುದ್ದಿಗೋಷ್ಠಿ

ಬೆಂಗಳೂರು: ನಗರದ ಕುಮಾರ ಕೃಪ ಅತಿಥಿ ಗೃಹದಲ್ಲಿ 'ಕೃಷಿ ಪ್ರವಾಸ' ಎಂಬ ಪರಿಕಲ್ಪನೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ, ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ, ಕೃಷಿ ಸಚಿವ ಬಿ.ಸಿ. ಪಾಟೀಲ್ ಹಾಗೂ ತೋಟಗಾರಿಗೆ ಸಚಿವ ನಾರಾಯಣಗೌಡ ಮೂರು ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಮೂವರು ಸಚಿವರು ಜಂಟಿ ಸುದ್ದಿಗೋಷ್ಠಿ ನಡೆಸಿದರು.

ಈ ವೇಳೆ ಸಚಿವ ಸಿ.ಟಿ. ರವಿ ಮಾತನಾಡಿ, ಚುನಾವಣಾ ಪೂರ್ವದಲ್ಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ನಮ್ಮ ನಾಯರು ಎಂದು ಘೋಷಿಸಿದೆ. ಅಲ್ಲದೆ ಅವರ ನಾಯಕತ್ವದಲ್ಲಿ ಚುನಾವಣೆ ಎದುರಿಸಿದ್ದೇವೆ. ಕೇಂದ್ರದ ನಾಯಕರು ಕೂಡ ಯಡಿಯೂರಪ್ಪ ಅವರ ನಾಯಕತ್ವವನ್ನು ಒಪ್ಪಿ, ಸರ್ವಾನುಮತದಿಂದ ಅವರನ್ನು ಮುಖ್ಯಮಂತ್ರಿ ಮಾಡಲಾಗಿದೆ. ಈಗ ಆ ವಿಷಯದ ಬಗ್ಗೆ ಯಾರು ತಕರಾರು ಎತ್ತಬಾರದು ಎಂದು, ಬಿಎಸ್​​​ವೈ ನಾಯಕತ್ವ ಬದಲಾಯಿಸಬೇಕೆಂದು ಬಿಜೆಪಿಯಲ್ಲಿ ಭುಗಿಲೆದ್ದಿರುವ ನಾಯಕರಿಗೆ ಟಾಂಗ್ ನೀಡಿದರು.

ಬಸನಗೌಡ ಪಾಟೀಲ್ ಯತ್ನಾಳ್ ಅವರು, ಯಡಿಯೂರಪ್ಪ ಅವರ ನಾಯಕತ್ವ ಬದಲಾಯಿಸಬೇಕು ಎಂದು ಹೇಳಿದ್ದಾರೆ ಎಂಬುದು ಮಾಧ್ಯಮಗಳ ಊಹೆಯಾಗಿದೆ. ಅವರು ಕೇಂದ್ರ ಸಚಿವರಾಗಿದ್ದವರು, ಅವರ ಬಗ್ಗೆ ನಾನು ಏನು ಮಾತನಾಡಲ್ಲ ಎಂದರು. ಇನ್ನು ನನ್ನ ವಿರೋಧಿಗಳು ನನ್ನ ಚಡ್ಡಿ ಗುಂಪಿನ ನಾಯಕ ಅಂತಾರೆ. ಅದ್ರಿಂದ ನಾನು ಚಡ್ಡಿ ಗುಂಪಿನಲ್ಲಿ ಇದ್ದೇನೆ ಎಂದು ಹೇಳುವ ಮೂಲಕ, ಪಕ್ಷದ ಆಂತರಿಕ ಭಿನ್ನಮತವನ್ನು ಮುಚ್ಚಿಕೊಳ್ಳುದಕ್ಕೆ ತೇಪೆ ಹಾಕುವ ಕೆಲಸ ಮಾಡಿದರು.

ಇನ್ನು ರೈತರ ಹಾಗೂ ಗ್ರಾಮೀಣ ಭಾಗದ ಜನರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ, ಯುವ ಪೀಳಿಗೆಗೆ ಕೃಷಿಯ ಬಗ್ಗೆ ಅರಿವು ಮೂಡಿಸಿ, ರಾಜ್ಯದ ವೈವಿದ್ಯತೆಯನ್ನು ದೇಶ ವಿದೇಶದ ಮಟ್ಟದಲ್ಲಿ ಪ್ರಚಾರ ಮಾಡುವ ನಿಟ್ಟಿನಲ್ಲಿ ಈ ಅಗ್ರಿ ಟೂರಿಸಂ ('ಕೃಷಿ ಪ್ರವಾಸ') ವನ್ನು ಜಾರಿಗೆ ತರಲು ಅಲೋಚಿಸಲಾಗಿದೆ ಎಂದರು.

ಈ ಯೋಜನೆಯನ್ನು ಪ್ರಾಯೋಗಿಕವಾಗಿ ರಾಜ್ಯದ ಯಾವುದಾದರು ಎರಡು ಜಿಲ್ಲೆಗಳಲ್ಲಿ ಆರಂಭಿಸಿ, ಯಶಸ್ವಿಯಾದ ನಂತರ ಇತರ ಜಿಲ್ಲೆಗಳಿಗೂ ವಿಸ್ತರಿಸುವ ಉದ್ದೇಶವಿದೆ. ಸದ್ಯ ಈ ಅಗ್ರಿ ಟೂರಿಸಂ ಅನ್ನು ಪ್ರಯೋಗಿಕವಾಗಿ ಸ್ಥಾಪಿಸಲು, ಚಿಕ್ಕಮಗಳೂರು, ಮಂಗಳೂರು ಸೇರಿದಂತೆ 6 ಜಿಲ್ಲೆಗಳಲ್ಲಿ ಪ್ರಾರಂಭಿಸುವಂತೆ ಚರ್ಚಿಸಲಾಗಿದೆ ಎಂದರು.

ಇನ್ನು ಈಗಾಗಲೇ ಅಗ್ರಿ ಟೂರಿಸಂ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಲೇಗಾ ಹಾಗೂ ಪುಣೆಯ ಬಾರಮತಿ ಗ್ರಾಮಗಳಲ್ಲಿ ಸರ್ಕಾರೇತರ ಸಂಸ್ಥೆಗಳು ಅನುಷ್ಠಾನಗೊಳಿಸಿ ಯಶಸ್ವಿಯಾಗಿವೆ.‌ ಈ ನಿಟ್ಟಿನಲ್ಲಿ ರಾಜ್ಯದಲ್ಲೂ ಅಗ್ರಿ ಟೂರಿಸಂ ಅರಂಭಿಸಲು ಅಲೋಚಿಸಲಾಗಿದ್ದು, ಈ ಯೋಜನೆ ಮುಂದಿನ‌ ವರ್ಷದ ವೇಳೆಗೆ ಆರಂಭವಾಗುವ ಸಾಧ್ಯತೆಯಿದೆ ಎಂದರು.

ನಂತರ ಮಾತನಾಡಿದ ಕೃಷಿ ಸಚಿವ ಬಿ.ಸಿ. ಪಾಟೀಲ್, ಕೃಷಿ ಪ್ರವಾಸ ಜಾರಿಗೆ ತರುವುದರಿಂದ ರೈತರ ಅದಾಯ ಹೆಚ್ಚುವುದರ ಜೊತೆಗೆ, ಗ್ರಾಮೀಣ, ಕರಕುಶಲ ವಸ್ತುಗಳು, ಉಡುಗೆ ತೊಡುಗೆಗಳು, ತಾಜಾ ಕೃಷಿ ಉತ್ಪನ್ನದ ಬಗ್ಗೆ ಪ್ರವಾಸಿಗರಿಗೆ ತಿಳಿಯುತ್ತದೆ. ಜೊತೆಗೆ ರೈತರ ತೋಟಗಳಲ್ಲಿಯೇ ಕಡಿಮೆ ದರದಲ್ಲಿ ಕೃಷಿ ಉತ್ಪನ್ನಗಳನ್ನು ಪ್ರವಾಸಿಗರು ಖರೀದಿಸಬಹುದು ಎಂದರು. ಇದರಿಂದ ರೈತರ ಆದಾಯವು ಹೆಚ್ಚುತ್ತದೆ ಹಾಗೂ ಪ್ರವಾಸೋದ್ಯಮವು ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.

ಸಚಿವರ ಜಂಟಿ ಸುದ್ದಿಗೋಷ್ಠಿ

ಇನ್ನು ತೋಟಗಾರಿಕೆ ಸಚಿವ ನಾರಾಯಣಗೌಡ, ಕೊರೊನಾದಿಂದ ಕುಗ್ಗಿರುವ ಪ್ರವಾಸ್ಯೋದ್ಯಮಕ್ಕೆ ಶಕ್ತಿ ನೀಡುವ ನಿಟ್ಟಿನಲ್ಲಿ, ಇಂದು ನಡೆಸಿದ ಸಭೆ ತುಂಬಾ ಉಪಯುಕ್ತವಾಗಿದೆ ಎಂದರು‌. ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ರೈತರಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ, ಈ ಯೋಜನೆ ಆಶಾದಾಯಕವಾಗಿದೆ. ಆದ್ದರಿಂದ ಅಗ್ರಿ ಟೂರಿಸಂ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ನಮ್ಮ ಇಲಾಖೆಯಿಂದ ಎಲ್ಲಾ ರೀತಿಯಲ್ಲಿ ನೆರವು ನೀಡುವುದಾಗಿ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.