ಬೆಂಗಳೂರು: ಪೌರತ್ವದ ಕಿಚ್ಚು ಕಡಿಮೆ ಆಗುವ ಲಕ್ಷಣಗಳೇ ಕಾಣ್ತಿಲ್ಲ. ನಗರದ ನಾನಾ ಭಾಗಗಳಲ್ಲಿ ಪರ-ವಿರೋಧದ ಪ್ರತಿಭಟನೆಗಳು, ಸಭೆಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ನಾಳೆ ಸಹ ಸಿಎಎ ವಿರುದ್ಧ ಬಿತ್ತಿ ಪತ್ರ ಅಂಟಿಸಿ ಶಿವಾಜಿನಗರದ ರಸೆಲ್ ಮಾರ್ಕೆಟ್ನ ವ್ಯಾಪಾರಿಗಳು ಪ್ರತಿಭಟನೆ ನಡೆಸಲಿದ್ದಾರೆ.
ಇಂದು ವ್ಯಾಪಾರದ ಜೊತೆಗೆ ಸಿಎಎಯನ್ನ ವಿರೋಧಿಸಿದ್ದು, ನಾಳೆ ನಡೆಯೋ ಸಿಎಎ ವಿರೋಧಿ ರ್ಯಾಲಿಗಾಗಿ ಅಂಗಡಿಗಳನ್ನ ಮುಚ್ಚಿ ಪ್ರತಿಭಟಿಸಲು ಸಜ್ಜಾಗಿದ್ದಾರೆ. ಇದು ಭಾರತೀಯರ ವಿರೋಧಿ ಕಾನೂನು, ಇದನ್ನ ವಾಪಸ್ ಪಡೆಯಬೇಕು. ನಾಳೆ ರಸೆಲ್ ಮಾರ್ಕೆಟ್ ಸಂಪೂರ್ಣವಾಗಿ ಬಂದ್ ಮಾಡಲಾಗುವುದು, ಅಂಗಡಿ ಮುಚ್ಚಿ ಖಾದ್ರಿಯಾ ಮಸೀದಿ ಬಳಿ ಜಮಾಯಿಸಿ ಅಂತ ಬಿತ್ತಿ ಪತ್ರ ಅಂಟಿಸುತ್ತಿದ್ದ ದೃಶ್ಯ ಕಂಡು ಬಂತು.
ನಾಳೆ ಬೆಂಗಳೂರಿನ ವ್ಯಾಪಾರಿಗಳು ಅಂಗಡಿಗಳನ್ನ ಬಂದ್ ಮಾಡಲಿದ್ದಾರೆ. 10 ಗಂಟೆಗೆ ರ್ಯಾಲಿಯಲ್ಲಿ ಪಾಲ್ಗೊಳ್ಳಲು ವ್ಯಾಪಾರಿಗಳು ನಿರ್ಧಾರ ಮಾಡಿದ್ದು, ಸುಮಾರು ಎರಡು ಲಕ್ಷ ಮಂದಿ ಮೌನ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಅಂತ ರಸೆಲ್ ಮಾರ್ಕೆಟ್ ಕಾರ್ಯದರ್ಶಿ ಮಹಮದ್ ಇದ್ರೀಸ್ ಚೌಧರಿ ಮಾಹಿತಿ ನೀಡಿದ್ದಾರೆ.