ETV Bharat / state

ಲಂಕಾ ದಹನ... ಯಾವ ರಾಷ್ಟ್ರವೂ ಸೇಫ್ ಅಲ್ಲ ಅಂದ್ರು ಉಪ ರಾಷ್ಟ್ರಪತಿ - undefined

ಬಾಂಬ್ ದಾಳಿಯನ್ನು ಉಪರಾಷ್ಟ್ರಪತಿ ಖಂಡಿಸಿದ್ದು, ಭಯೋತ್ಪಾದಕರ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ಭಾರತ ಅಷ್ಟೇ ಅಲ್ಲ, ಯಾವುದೇ ದೇಶ ಸುರಕ್ಷಿತವಲ್ಲ ಎಂದು ಬೆಂಗಳೂರು ವಿವಿಯ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಬೆಂಗಳೂರು ವಿವಿ ಘಟಿಕೋತ್ಸವ ಸಮಾರಂಭ
author img

By

Published : Apr 22, 2019, 5:46 PM IST

ಬೆಂಗಳೂರು: ಶ್ರೀಲಂಕಾದಲ್ಲಿ ನಡೆದ ಬಾಂಬ್ ದಾಳಿಯನ್ನು ಉಪರಾಷ್ಟ್ರಪತಿ ಖಂಡಿಸಿದ್ದು, ಭಯೋತ್ಪಾದಕರ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ಭಾರತ ಅಷ್ಟೇ ಅಲ್ಲ, ಯಾವುದೇ ದೇಶ ಸುರಕ್ಷಿತವಲ್ಲ. ಭಯೋತ್ಪಾದನೆ ಮೇಲೆ ಕ್ರಮ ಕೈಗೊಳ್ಳದಿದ್ರೆ ವಿಶ್ವಕ್ಕೆ ಕಷ್ಟ. ಉಗ್ರರಿಗೆ ಹಾಗೂ ಅವರಿಗೆ ಸಹಕಾರ ನೀಡುವವರ ಮೇಲೂ ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರಿನಲ್ಲಿ ಹೇಳಿದ್ದಾರೆ.

215 ಜನ ಅಮಾಯಕರು ನಿನ್ನೆ ನಡೆದ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಬೆಂಗಳೂರು, ಹೈದ್ರಾಬಾದ್ ಸೇರಿದಂತೆ ಪ್ರಮುಖ ನಗರಗಳೇ ಇವರ ಗುರಿ. ಯುವಕರು ಇದರ ಬಗ್ಗೆ ಎಚ್ಚೆತ್ತುಕೊಳ್ಳಲೇ ಬೇಕು. ಪ್ರತಿಯೊಂದು ದೇಶವೂ ಇದರ ಬಗ್ಗೆ ಗಮನ ಹರಿಸಲೇಬೇಕು ಎಂದು ಬೆಂಗಳೂರು ವಿಶ್ವವಿದ್ಯಾಲಯದ 54ನೇ ಘಟಿಕೋತ್ಸವದ ಸಮಾರಂಭದಲ್ಲಿ ಮಾತಾನಾಡಿದರು. ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ರಾಜ್ಯಪಾಲರು ಹಾಗೂ ಬೆಂಗಳೂರು ವಿವಿ ಕುಲಪತಿ ವಜುಭಾಯಿ ವಾಲಾ ಅಧ್ಯಕ್ಷತೆ ವಹಿಸಿಕೊಂಡಿದ್ದರು.‌

ಬೆಂಗಳೂರು ವಿವಿ ಘಟಿಕೋತ್ಸವ ಸಮಾರಂಭ

ದೇಶದ ಭವಿಷ್ಯದ ದೃಷ್ಟಿಯಿಂದ ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು. ಶಿಕ್ಷಣ ಶಿಸ್ತನ್ನು ಕಲಿಸಿ, ಕಷ್ಟದ ಸಮಯದಲ್ಲಿ ಕಾಪಾಡುತ್ತದೆ. ವಾಷಿಂಗ್ಟನ್​​ಗಿಂತ ಬೆಂಗಳೂರಿನಲ್ಲಿ ಉತ್ತಮ ಜ್ಞಾನವಂತರಿದ್ದಾರೆ. ಇವತ್ತಿನ ಯುವಜನತೆಯಲ್ಲಿ ತಾಳ್ಮೆ ಇಲ್ಲ. ಇಂದಿನ ದಿನಗಳಲ್ಲಿ ಪರಿಸರ ತುಂಬಾ ಬದಲಾವಣೆ ಆಗುತ್ತಿದೆ. ಸಮಾಜದಲ್ಲಿ ಸ್ಪರ್ಧೆ ಹೆಚ್ಚಾಗುತ್ತಿದ್ದು, ಇದಕ್ಕೆ ಅನುಗುಣವಾಗಿ ಯುವಕರು ಬದಲಾವಣೆ ಆಗಬೇಕು ಎಂದರು.

ಇನ್ನು ಘಟಿಕೋತ್ಸವದಲ್ಲಿ, ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರು ಸಿ ಎನ್ ಮಂಜುನಾಥ್, ಗೈನಕಾಲಜಿಸ್ಟ್ ಡಾ ಕಾಮಿನಿ ರಾವ್ , ಸಮಾಜಸೇವಕರು ಎಸ್ ವಿವಿ ಸುಬ್ರಹ್ಮಣ್ಯ ಗುಪ್ತರಿಗೆ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಾಯಿತು. ವಿವಿಧ ವಿಷಯಗಳಲ್ಲಿ 65,039 ಅಭ್ಯರ್ಥಿಗಳು ಪದವಿ ಸ್ವೀಕರಿಸಲಿದ್ದು, ಒಟ್ಟು 166 ವಿದ್ಯಾರ್ಥಿಗಳು ಪಿ ಹೆಚ್ ಡಿ ಪದವಿಗಳನ್ನು ಸ್ವೀಕರಿಸಿದರು.

328 ಚಿನ್ನದ ಪದಕಗಳಿಗೆ 216 ಅಭ್ಯರ್ಥಿಗಳು ಭಾಜರಾದರು. ಎಂಎಸ್ಸಿ ರಸಾಯನಶಾಸ್ತ್ರ ವಿಭಾಗದಲ್ಲಿ ಕೆ‌ವಿ ವಿನುತ 7 ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಬಿಎಸ್ಸಿ ಬಿಎಂ‌ ಎಸ್ ಮಹಿಳಾ ಕಾಲೇಜಿನ ವರಲಕ್ಷ್ಮಿ ಆರ್ 4 ಚಿನ್ನದ ಪದಕ, ಬಿಕಾಂ ಭಗವಾನ್ ಮಹಾವೀರ್ ಜೈನ್‌ಕಾಲೇಜು ಶಂಕರ ಭಾಷ್ಯಂ 5 ಚಿನ್ನದ ಪದಕ, ಸೌಮ್ಯ ಎನ್ 3, ವರ್ಷಿತಾ ವಿ 2 ಚಿನ್ನದ ಪದಕಗಳನ್ನು ಪಡೆದು ಕೊಂಡರು. ಇನ್ನು ಪ್ರತಿಯೊಂದು ಚಿನ್ನದ‌‌ ಪದಕಗಳಲ್ಲಿ, 20ಗ್ರಾಂ ಬೆಳ್ಳಿಯ ಮೇಲೆ 1.3 ಗ್ರಾಂ ಚಿನ್ನದ ಲೇಪನ ಒಳಗೊಂಡಿದೆ.

ಬೆಂಗಳೂರಿನ ಇಡ್ಲಿ, ದೋಸೆ ನೆನಪಿಸಿಕೊಂಡ ವೆಂಕಯ್ಯನಾಯ್ಡು:

ನಾನು‌ ಸಚಿವನಾಗಿದ್ದಾಗ ಬೆಂಗಳೂರಿನಲ್ಲಿರೋ ಜನಾರ್ದನ ಹೋಟೆಲ್​​​ನಲ್ಲಿ ಇವೆಲ್ಲ ಸವಿಯುತ್ತಿದ್ದೆ. ಇದರ ಸ್ವಾದ ಹೇಳಲು ಸಾಧ್ಯವಿಲ್ಲ.ಆದರೆ ಇವತ್ತು ಹೋಗಲು ಸಾಧ್ಯವಿಲ್ಲ. ಪ್ರೋಟೋಕಾಲ್ ಇದೆ ಎಂದರು.

Intro:ಇಂದು ಯಾವ ರಾಷ್ಟ್ರವೂ ಸೇಫ್ ಅಲ್ಲ; ಉಪರಾಷ್ಟ್ರಪತಿ ವೆಂಕನಾಯ್ಡು...

ಬೆಂಗಳೂರು: ಶ್ರೀಲಂಕಾದಲ್ಲಿ ಬಾಂಬ್ ದಾಳಿಗೆ ಉಪರಾಷ್ಟ್ರಪತಿ ಖಂಡನೆ ಮಾಡಿದರು..
ಶ್ರೀಲಂಕಾಗೆ ಪ್ರವಾಸ ಹೋಗಿದ್ದವರ ಮೇಲೆ ಭಯೋತ್ಪಾದಕರ ದಾಳಿಯಾಗಿದೆ. ಇದನ್ನ ನಾವು ಖಂಡಿಸುತ್ತೇವೆ. ಭಯೋತ್ಪಾದಕರ ಮೇಲೆ ಕ್ರಮ ಕೈಗೊಳ್ಳಬೇಕು. ಭಾರತ ಅಷ್ಟೇ ಅಲ್ಲ, ಯಾವುದೇ ದೇಶ ಸುರಕ್ಷಿತವಲ್ಲ. ಭಯೋತ್ಪಾದನೆ ಮೇಲೆ ಕ್ರಮ ಕೈಗೊಳ್ಳದಿದ್ರೆ ವಿಶ್ವಕ್ಕೆ ಕಷ್ಟ. ಉಗ್ರರ ಮೇಲೆ ಹಾಗೂ ಅವರಿಗೆ ಸಹಕಾರ ನೀಡುವವರ ಮೇಲೂ ಕ್ರಮ ಕೈಗೊಳ್ಳಬೇಕು. 215 ಜನ ಅಮಾಯಕರು ಸಾವನ್ನಪ್ಪಿದ್ದಾರೆ. ಬೆಂಗಳೂರು, ಹೈದ್ರಾಬಾದ್ ಸೇರಿದಂತೆ ಪ್ರಮುಖ ನಗರಗಳೇ ಇವರ ಗುರಿ. ಯುವಕರು ಇದರ ಬಗ್ಗೆ ಎಚ್ಚೆತ್ತುಕೊಳ್ಳಲೇ ಬೇಕು. ಪ್ರತಿಯೊಂದು ದೇಶವೂ ಇದರ ಬಗ್ಗೆ ಗಮನ ಹರಿಸಲೇಬೇಕು ಅಂತ ಬೆಂಗಳೂರು ವಿಶ್ವವಿದ್ಯಾಲಯದ 54 ನೇ ಘಟಿಕೋತ್ಸವದ ಸಮಾರಂಭದಲ್ಲಿ ಮಾತಾನಾಡಿದರು..

ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಗಳಾಗಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ರಾಜ್ಯಪಾಲರು ಹಾಗೂ ಬೆಂಗಳೂರು ವಿವಿ ಕುಲಾಧಿಪತಿಗಳು ವಜುಭಾಯಿ ವಾಲಾ ಅಧ್ಯಕ್ಷತೆ ವಹಿಸಿಕೊಂಡಿದ್ದರು..‌

Body:ಕನ್ನಡದಲ್ಲೇ ಭಾಷಣ ಶುರು ಮಾಡಿದ, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಘಟಿಕೋತ್ಸವದಲ್ಲಿ ಭಾಗವಹಿಸಲು ಖುಷಿಯಾಗುತ್ತಿದೆ.. ಇಂದು ವಿಶ್ವ ಭೂ ದಿನ ನಿಮ್ಮೆಲ್ಲರಿಗೂ ಭೂದಿನದ ಶುಭಾಶಯ ಅಂತ ತಿಳಿಸಿದರು..‌

ಬೆಂಗಳೂರು ವಿವಿಯಿಂದ ಪದವಿ, ಸ್ನಾತಕೋತ್ತರ ಪದವಿ ಪಡೆದವರಿಗೆ ಶುಭ ಕೋರಿದ ಉಪರಾಷ್ಟ್ರಪತಿ, ಶಿಕ್ಷಣ ಕೇವಲ ಕೆಲಸಕ್ಕಾಗಿ ಅಲ್ಲ, ಶಿಕ್ಷಣ ರಾಷ್ಟ್ರದ ಶಕ್ತಿ. ಉನ್ನತ ಶಿಕ್ಷಣಕ್ಕೆ ಶಿಕ್ಷಣ ಮಾರ್ಗಸೂಚಿಯಾಗಿರಬೇಕು.. ದೇಶದ ಭವಿಷ್ಯ ದೃಷ್ಟಿಯಿಂದ ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು. ಶಿಕ್ಷಣ ಶಿಸ್ತನ್ನ ಕಲಿಸುತ್ತದೆ, ಕಷ್ಟದ ಸಮಯದಲ್ಲಿ ಕಾಪಾಡುತ್ತದೆ. ವಾಷಿಂಗ್ಟನ್ ಗಿಂತ ಬೆಂಗಳೂರಿನಲ್ಲಿ ಉತ್ತಮ ಜ್ಞಾನವಂತರಿದ್ದಾರೆ.
ಇವತ್ತಿನ ಯುವಜನತೆಯಲ್ಲಿ ತಾಳ್ಮೆ ಇಲ್ಲ ಅಂತ ತಿಳಿಸಿದರು..‌

ಇವತ್ತು ಪರಿಸರದ ವ್ಯವಸ್ಥೆ ಬದಲಾವಣೆ ಆಗುತ್ತಿದೆ.. ಸಮಾಜದಲ್ಲಿ ಸ್ಪರ್ಧೆ ಹೆಚ್ಚಾಗುತ್ತಿದ್ದು, ಇದಕ್ಕೆ ಅನುಗುಣವಾಗಿ ಯುವಕರು ಬದಲಾವಣೆ ಆಗಬೇಕು. ರೈತರ ಮಕ್ಕಳು ಇವತ್ತು ಚಿನ್ನದ ಪದಕ‌ ಪಡೆಯುತ್ತಿದ್ದಾರೆ. ಅವಕಾಶ ಸಿಕ್ಕರೆ ರೈತರ ಮಕ್ಕಳು ಸಾಧನೆ ಮಾಡಬಹುದು ಅಂತ ತೋರಿಸಿದ್ದಾರೆ. ಇತ್ತೀಚಗೆ ಹೆಣ್ಣು ಮಕ್ಕಳ ಶಿಕ್ಷಣದಲ್ಲಿ ಹೆಚ್ಚಳ ಆಗುತ್ತಿದೆ. ಬೇಟಿ ಬಜಾವೋ ಬೇಟಿ ಪಡೋವೋ ಕಾರ್ಯಕ್ರಮಗಳು ಇವತ್ತು ಹೆಚ್ಚಾಗುತ್ತಿದೆ. ಹೆಣ್ಣು ಮಕ್ಕಳಿಗೆ ಶಿಕ್ಷಣ ಹೆಚ್ಚು ಹೆಚ್ಚು ಕೊಟ್ಟರೆ, ಮತ್ತಷ್ಟು ಸಾಧನೆ ಮಾಡುತ್ತಾರೆ..‌
ಮಹಿಳೆಯರು ಇವತ್ತು ಒಳ್ಳೆ ಒಳ್ಳೆ ಸ್ಥಾನದಲ್ಲಿ‌ ಇದ್ದಾರೆ. ಲಕ್ಷ್ಮಿ ಹಣಕ್ಕೆ, ಸರಸ್ವತಿ ಶಿಕ್ಷಣಕ್ಕೆ, ಪಾರ್ವತಿ ರಕ್ಷಣೆಗೆ ಅಂತ ಮಹಿಳೆಯರ ಪಾತ್ರದ ಬಗ್ಗೆ ವಿವರಿಸಿದರು..

*ಬೆಂಗಳೂರಿನ ಇಡ್ಲಿ, ದೋಸೆ ನೆನಪಿಸಿಕೊಂಡ ವೆಂಕಯ್ಯನಾಯ್ಡು*

ನಾನು‌ ಸಚಿವನಾಗಿದ್ದಾಗ ಬೆಂಗಳೂರಿನಲ್ಲಿರೋ ಜನಾರ್ದನ ಹೋಟೆಲ್ ನಲ್ಲಿ ಇವೆಲ್ಲ ಸವಿಯುತ್ತಿದ್ದೆ. ಇದರ ಸ್ವಾದ ಹೇಳಲು ಸಾಧ್ಯವಿಲ್ಲ.
ಆದರೆ ಇವತ್ತು ಹೋಗಲು ಸಾಧ್ಯವಿಲ್ಲ. ಪ್ರೋಟೋಕಾಲ್ ಇದೆ ಎಂದು ನೆನಪಿಸಿಕೊಂಡರು..‌

*ಮಾತೃ ಭಾಷೆ ಕಣ್ಣುಗಳು ಇದ್ದಂತೆ; ಉಳಿದ ಭಾಷೆಗಳು ಕನ್ನಡಕ ಇದ್ದಂತೆ*..

ಕನ್ನಡ ಭಾಷೆ ಸೇರಿದಂತೆ ಮಾತೃ ಭಾಷೆ ಯಾವತ್ತು ಸುಂದರ. ಮಾತೃಭಾಷೆಯಲ್ಲಿ ಸಂವಹನ ಉತ್ತಮವಾಗುತ್ತೆ. ಮಾತೃಭಾಷೆ ಕಣ್ಣುಗಳು ಇದ್ದಂತೆ,ಉಳಿದ ಭಾಷೆಗಳು ಕನ್ನಡಕ ಇದ್ದಂತೆ.. ಹೀಗಾಗಿ, ಮಾತೃ ಭಾಷೆ ಯಾವತ್ತು ಮರಿಯಬೇಡಿ. ಬೇರೆ ಭಾಷೆ ಕಲಿಯಿರಿ ಆದರೆ ಮಾತೃ ಭಾಷೆ ಮರೆಯಬೇಡಿ. ವಿವಿಧತೆಯಲ್ಲಿ ಏಕತೆ ಭಾರತದ ವಿಶೇಷತೆ, ದೇಶವನ್ನು ಯಾವತ್ತು ಮರೆಯಬೇಡಿ. ನಮ್ಮ ಭಾಷೆ, ನಮ್ಮ‌ ದೇಶವನ್ನು ಯಾವತ್ತು ಬಿಡಬೇಡಿ ಅಂತ ಕಿವಿ ಮಾತು ಹೇಳಿದರು..

ಗುರುವನ್ನು ಎಂದಿಗೂ ಮರೆಯಬೇಡಿ. ಗೂಗಲ್ ಯಾವತ್ತು ಗುರುವನ್ನ ಮೀರಿಸಲು ಸಾಧ್ಯವಿಲ್ಲ. ತಂತ್ರಜ್ಞಾನ ಬೆಳೆದರು ಗುರುವನ್ನು ಮೀರಿಸಲು ಸಾಧ್ಯವಿಲ್ಲ. ಗುರಿವಿಗೆ ಗೌರವ ಕೊಡೋದು ಮರೆಯಬೇಡಿ ಅಂತ ಸಲಹೆ‌ ನೀಡಿದರು..

ಇನ್ನು ಘಟಿಕೋತ್ಸವದಲ್ಲಿ, ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರು ಸಿ ಎನ್ ಮಂಜುನಾಥ್, ಗೈನಕಾಲಜಿಸ್ಟ್ ಡಾ ಕಾಮಿನಿ ರಾವ್ , ಸಮಾಜಸೇವಕರು ಎಸ್ ವಿವಿ ಸುಬ್ರಹ್ಮಣ್ಯ ಗುಪ್ತರಿಗೆ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಾಯಿತು.. ವಿವಿಧ ವಿಷಯಗಳಲ್ಲಿ 65,039 ಅಭ್ಯರ್ಥಿಗಳು ಪದವಿ ಸ್ವೀಕರಿಸಲಿದ್ದು, ಒಟ್ಟು 166 ವಿದ್ಯಾರ್ಥಿಗಳು ಪಿ ಹೆಚ್ ಡಿ ಪದವಿಗಳನ್ನು ಸ್ವೀಕರಿಸಿದರು..

328 ಚಿನ್ನದ ಪದಕಗಳಿಗೆ 216 ಅಭ್ಯರ್ಥಿಗಳು ಭಾಜರಾದರು.. ಎಂ ಎಸ್ಸಿ ರಸಾಯನಶಾಸ್ತ್ರ ವಿಭಾಗದಲ್ಲಿ ಕೆ‌ವಿ ವಿನುತ 7 ಚಿನ್ನದ ಪದಕ ತದಾಗಿಸಿಕೊಂಡರು.. ಬಿಎಸ್ಸಿ ಬಿ.‌ಎಂ‌. ಎಸ್ ಮಹಿಳಾ ಕಾಲೇಜಿನ ವರಲಕ್ಷ್ಮಿ ಆರ್ 4 ಚಿನ್ನದ ಪದಕ, ಬಿ ಕಾಂ ಭಗವಾನ್ ಮಹಾವೀರ್ ಜೈನ್‌ಕಾಲೇಜು ಶಂಕರ ಭಾಷ್ಯಂ 5 ಚಿನ್ನದ ಪದಕ,, ಸೌಮ್ಯ ಎನ್ 3, ವರ್ಷಿತಾ ವಿ 2 ಚಿನ್ನದ ಪದಕಗಳನ್ನು ಪಡೆದು ಕೊಂಡರು.. ಇನ್ನು ತಲಾ ಚಿನ್ನದ‌‌ ಪದಕಗಳಲ್ಲಿ, 20ಗ್ರಾಂ ಬೆಳ್ಳಿಯ ಮೇಲೆ 1.3 ಗ್ರಾಂ ಚಿನ್ನದ ಲೇಪನ ಒಳಗೊಂಡಿದೆ..
===================

Conclusion:*ಚಿನ್ನ ಪದಕ ಗೆದ್ದ ಚಿನ್ನದ ಹುಡುಗಿಯರ ಚಿನ್ನದ ಮಾತು*

ಚಿನ್ನದ ಪದಕ ಪಡೆದ ಆಶಾ ಮಾತಾನಾಡಿ,
ತುಂಬಾ ಬಡತನದೊಂದಿಗೆ ವಿದ್ಯಾಭಾಸ್ಯ ಮಾಡಿದ್ದೇನೆ.. ನನ್ನ‌ ಎಲ್ಲ ಗೆಲುವಿಗೆ ನನ್ನ ತಂದೆಯೇ ಸ್ಪೂರ್ತಿ.. ಕೆ ಎ ಎಸ್ ಅಧಿಕಾರಿ ಆಗಬೇಕೆಂಬ ಆಸೆ ಇದೆ ಮಾಡೇ ಮಾಡುವ ಭರವಸೆ ವ್ಯಕ್ತಪಡಿಸಿದರು...

KN_BNG_01_220419_BANGALORE_VV_CONVOCATION_SCRIPT_DEEPA
===========================
VIEDOS SENT FROM *BACKPACK* BANGALORE_VV_CONVOCATION

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.