ಬೆಂಗಳೂರು: ರಾಜ್ಯದಲ್ಲಿ ಇಂದು ಕೋವಿಡ್ ಪ್ರಕರಣಗಳ ಸಂಖ್ಯೆ ಸಾವಿರ ಗಡಿದಾಟಿದೆ. ರಾಜ್ಯದಲ್ಲಿ 26,437 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 1,127 ಮಂದಿಗೆ ಸೋಂಕು ದೃಢಪಟ್ಟಿದೆ.
ಇಂದು 1044 ಮಂದಿ ಡಿಸ್ಜಾರ್ಜ್ ಆಗಿದ್ದು, ಒಟ್ಟು 39,28,397 ಮಂದಿ ಗುಣಮುಖರಾಗಿದ್ದಾರೆ. ಕೋವಿಡ್ಗೆ ಮೃತಪಟ್ಟವರ ಸಂಖ್ಯೆ ಶೂನ್ಯ. ಸದ್ಯ ಸಕ್ರಿಯ ಪ್ರಕರಣಗಳು 6,481 ಏರಿಕೆಯಾಗಿದೆ. ಈ ಮೂಲಕ ಸೋಂಕಿತರ ಪ್ರಮಾಣ ಶೇ. 4.26 ರಷ್ಟಿದ್ದರೆ, ವಾರದ ಸೋಂಕಿತರ ಪ್ರಮಾಣ ಶೇ. 3.86 ರಷ್ಟಿದೆ.
ಇಲ್ಲಿಯವರೆಗೂ ಪರಿಕ್ಷೀಸಲಾದ ಒಟ್ಟು ಸಂಖ್ಯೆ 67,134,350. ವಾರದ ಸಾವಿನ ಪ್ರಮಾಣ ಶೇ. 0.07 ರಷ್ಟಿದೆ. ವಿಮಾನ ನಿಲ್ದಾಣದಿಂದ ಇಂದು ತಪಾಸಣೆಗೆ 4,600 ಮಂದಿ ಒಳಗಾಗಿದ್ದು, ಇದುವರೆಗೂ 11,68,836 ಪ್ರಯಾಣಿಕರು ಕೋವಿಡ್ ತಪಾಸಣೆಗೆ ಒಳಪಟ್ಟಿದ್ದಾರೆ.
ರಾಜಧಾನಿಯಲ್ಲಿ ಸಾವಿರ ಗಡಿದಾಟಿದ ಕೋವಿಡ್ ಪ್ರಕರಣ : ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು ಸಾವಿರ ಗಡಿದಾಟಿದೆ.
ಬೆಂಗಳೂರಿನಲ್ಲಿ ಇಂದು 1,053 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 18,09,240 ಕ್ಕೆ ಏರಿಕೆ ಆಗಿದೆ. ಇಂದು 986 ಮಂದಿ ಬಿಡುಗಡೆಯಾಗಿದ್ದು, ಇದುವರೆಗೂ 17,86,214 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. ಬೆಂಗಳೂರಿನಲ್ಲಿ ಕೋವಿಡ್ ಸಾವಿನ ಸಂಖ್ಯೆ ಶೂನ್ಯ. ಸಕ್ರಿಯ ಪ್ರಕರಣಗಳು 6,056 ಇದೆ. ಇದುವರೆಗೂ ಕೋವಿಡ್ ಸಾವಿನ ಸಂಖ್ಯೆ 16,969 ರಷ್ಟಿದೆ.
ಇದನ್ನೂ ಓದಿ: ವೀರೇಂದ್ರ ಹೆಗ್ಗಡೆ,ಇಳಯರಾಜ, ಪಿಟಿ ಉಷಾ ಸೇರಿ ನಾಲ್ವರು ದಿಗ್ಗಜರು ರಾಜ್ಯಸಭೆಗೆ ನಾಮನಿರ್ದೇಶನ.. ಮೋದಿ ಅಭಿನಂದನೆ