ಬೆಂಗಳೂರು: ಇಂದು ಸಿಇಟಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ನಗರದ ನಾರಾಯಣ ಪಿಯು ಕಾಲೇಜಿನ ವಿದ್ಯಾರ್ಥಿನಿ ಐದನೇ ಶ್ರೇಯಾಂಕ ಪಡೆದಿದ್ದಾರೆ.
ಇಂದು ಸಿಇಟಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿ ಬೆಂಗಳೂರಿನ ವಿದ್ಯಾರ್ಥಿಗಳೇ ಅತೀ ಹೆಚ್ಚು ಸ್ಥಾನ ಗಿಟ್ಟಿಸಿಸಿಕೊಂಡಿದ್ದಾರೆ. ನಗರದ ನಾರಾಯಣ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಲಿಖಿತಾ ಎಂಬ ವಿದ್ಯಾರ್ಥಿನಿ ಸಿಇಟಿ( ಪಶು ವೈದ್ಯಕೀಯ ವಿಭಾಗ)ಯಲ್ಲಿ 5 ನೇ ಶ್ರೇಯಾಂಕ ಪಡೆದಿದ್ದಾಳೆ. ಈ ಹಿನ್ನೆಯಲ್ಲಿ ಇಂದು ಕಾಲೇಜಿನಲ್ಲಿ ಹಬ್ಬದ ವಾತಾವರಣವೇ ಸೃಷ್ಟಿಯಾಗಿತ್ತು. ಲಿಖಿತಾರ ಸಹಪಾಠಿಗಳು ಶುಭಾಶಯ ಕೋರಿದರು.
ಈ ವೇಳೆ ಲಿಖಿತಾ ಮಾತಾನಾಡಿ, ನಾನು ಹಾಸ್ಟೆಲ್ನಲ್ಲಿ ಇದ್ದುಕೊಂಡು ಓದಿದೆ. ಒಳ್ಳೆಯ ಶ್ರೇಯಾಂಕದ ನಿರೀಕ್ಷೆ ಇತ್ತು. ಆದರೆ 5ನೇ ಶ್ರೇಯಾಂಕದಲ್ಲಿ ಉತ್ತೀರ್ಣನಾಗುತ್ತೀನಿ ಎಂದು ಎಕ್ಸ್ಪೆಕ್ಟ್ ಮಾಡಿರಲಿಲ್ಲ. ನನ್ನ ಶಿಕ್ಷಕರು ಮತ್ತು ಪೋಷಕರಿಗೆ ನಾನು ಸದಾ ಚಿರರುಣಿಯಾಗಿರುತ್ತೇನೆ. ಅವರ ಬೆಂಬಲದಿಂದಲೇ ಈ ಸಾಧನೆ ಮಾಡಲು ಸಾಧ್ಯವಾಯಿತು. ಪೋಷಕರು ಎಂದೂ ಹೆಚ್ಚಿನ ಅಂಕ ಪಡೆಯುವಂತೆ ಕಿರಿಕಿರಿ ಮಾಡುತ್ತಿರಲಿಲ್ಲ. ಬದಲಾಗಿ ಕೈಲಾದಷ್ಟು ಪ್ರಯತ್ನಿಸು ಎಂದು ಪ್ರೋತ್ಸಾಹಿಸುತ್ತಿದ್ದರು. ಭವಿಷ್ಯದಲ್ಲಿ ಎಂಬಿಬಿಎಸ್ ನಂತರ ಇಮ್ಯೂನಾಲಜಿಯಲ್ಲಿ ಸಂಶೋಧನೆ ಮಾಡುವ ಆಸೆ ಇದೆ ಎಂದು ತಮ್ಮ ಸಂತೋಷ ಹಂಚಿಕೊಂಡರು.