ETV Bharat / state

‘ಬೆಂದ’ಕಾಳೂರಿನಲ್ಲಿ ಬಿಎಂಟಿಸಿ ನೌಕರರಿಂದ ಪ್ರತಿಭಟನೆ: ಪ್ರಯಾಣಿಕರಿಗೆ ತಟ್ಟಲಿದೆಯಾ ಬಸ್ ಮುಷ್ಕರದ​ ಎಫೆಕ್ಟ್?​

author img

By

Published : Feb 10, 2021, 7:00 AM IST

ಇಂದು ಬೆಂಗಳೂರಿನಲ್ಲಿ ಬಿಎಂಟಿಸಿ ನೌಕರರಿಂದ ಪ್ರತಿಭಟನೆ ನಡೆಯಲಿದೆ. ಈ ಪ್ರತಿಭಟನೆಯಿಂದ ಪ್ರಯಾಣಿಕರಿಗೆ ತೊಂದರೆಯಾಗುವುದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

bmtc transport workers protest, Today bmtc transport workers protest, Today bmtc transport workers protest in Bangaluru, bmtc transport workers protest news, bmtc transport workers protest update, ಬಿಎಂಟಿಸಿ ಸಾರಿಗೆ ನೌಕರರ ಪ್ರತಿಭಟನೆ, ಇಂದು ಬಿಎಂಟಿಸಿ ಸಾರಿಗೆ ನೌಕರರ ಪ್ರತಿಭಟನೆ, ಬೆಂಗಳೂರಿನಲ್ಲಿ ಬಿಎಂಟಿಸಿ ಸಾರಿಗೆ ನೌಕರರ ಪ್ರತಿಭಟನೆ, ಬಿಎಂಟಿಸಿ ಸಾರಿಗೆ ನೌಕರರ ಪ್ರತಿಭಟನೆ ಸುದ್ದಿ, ಬಿಎಂಟಿಸಿ ಸಾರಿಗೆ ನೌಕರರ ಪ್ರತಿಭಟನೆ ಅಪ್​ಡೇಟ್​,
ಬಿಎಂಟಿಸಿ ನೌಕರರಿಂದ ಪ್ರತಿಭಟನೆ

ಬೆಂಗಳೂರು: ಬಿಎಂಟಿಸಿ ಕೇಂದ್ರ ಕಚೇರಿ ಎದುರು ಇಂದು ಸಾರಿಗೆ ನೌಕರರಿಂದ ಪ್ರತಿಭಟನೆ ನಡೆಸಲಾಗುತ್ತದೆ.

ಇಂದು ಮಧ್ಯಾಹ್ನ 1 ಗಂಟೆಗೆ ಕೆಎಸ್​​ಆರ್​​ಟಿಸಿ ನಿಗಮಗಳ ಜಂಟಿ ಕಾರ್ಮಿಕರ ವೇದಿಕೆಯಿಂದ, ಸಾರಿಗೆ‌ ಮುಷ್ಕರದ ವೇಳೆ ನೀಡಿದ್ದ ಭರವಸೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ.

ನಷ್ಟದ‌ ನೆಪದಲ್ಲಿ ಸಾರಿಗೆ ನಿಗಮಗಳನ್ನು ಖಾಸಗೀಕರಿಸಲು ಹುನ್ನಾರ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. 300 ಎಲೆಕ್ಟ್ರಿಕ್ ಬಸ್ಸುಗಳನ್ನು ಗುತ್ತಿಗೆ ಅಡಿ ಪಡೆಯದಂತೆಯೂ ಆಗ್ರಹಿಸಲಾಗಿದೆ.

ಈ ಪ್ರತಿಭಟನೆಯಿಂದಾಗಿ ಬಿಎಂಟಿಸಿ ಪ್ರಯಾಣಿಕರಿಗೆ ಯಾವದೇ ರೀತಿ ತೊಂದರೆಯಾಗದಂತೆ ಸಾರಿಗೆ ಸಂಸ್ಥೆ ನೋಡಿಕೊಳ್ಳುವ ಭರವಸೆ ನೀಡಿದೆ. ಇಂದು ನಡೆಯಲಿರುವ ಪ್ರತಿಭಟನೆ ವಿಕೋಪಕ್ಕೆ ತಿರುಗದಂತೆ ಕೆಎಸ್​​ಆರ್​​ಟಿಸಿ ಮುನ್ನೆಚ್ಚರಿಕೆ ವಹಿಸಿದೆ.

ಬಸ್ಸುಗಳ ಕಾರ್ಯಾಚರಣೆಗೆ ತೊಂದರೆಯಾಗದಂತೆ ಕೆಎಸ್​​ಆರ್​​ಟಿಸಿ ಸುತ್ತೋಲೆ ಹೊರಡಿಸಿದೆ. ಯಾರಿಗೂ ಇಂದು ರಜೆ ಮಂಜೂರು ಮಾಡದಂತೆ ನಿನ್ನೆ ಸುತ್ತೋಲೆ ಹೊರಡಿಸಿದೆ. ಒಂದು ವೇಳೆ ಕೆಲಸ ಬಿಟ್ಟು ಪ್ರತಿಭಟನೆಗೆ ಹಾಜರಾದರೆ, ವೇತನ ಕಡಿತಕ್ಕೂ ಅಡಳಿತ ಮಂಡಳಿ ಆದೇಶಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.