ಬೆಂಗಳೂರು: ನಿರ್ದೇಶಿತ ಕೊರೊನಾ ಬಂದ್ಗೆ ಬಹುತೇಕ ಎಲ್ಲಾ ರಂಗಗಳು ಬೆಳಗ್ಗೆ ಚಟುವಟಿಕೆಗಳನ್ನು ಸ್ಥಗಿತಗೊಳಿಸಿವೆ. ವಾಹನ ಸಂಚಾರವಿಲ್ಲದೇ ರಸ್ತೆಗಳು ಬಿಕೋ ಎನ್ನುತ್ತಿವೆ. ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು, ಅಗತ್ಯ ವಸ್ತುಗಳ ಚಲಾವಣೆ ಹೊರತುಪಡಿಸಿದರೆ ಅಕ್ಷರಶಃ ಎಲ್ಲ ಸೇವೆಗಳೂ ಬೆಳಗ್ಗೆಯೇ ಅಲಭ್ಯತೆಯ ಮುನ್ಸೂಚನೆ ನೀಡುತ್ತಿವೆ.
ಸಿಲ್ಕ್ಬೋರ್ಡ್, ಬೊಮ್ಮನಹಳ್ಳಿ, ಎಲೆಕ್ಟ್ರಾನಿಕ್ ಸಿಟಿ, ಹೆಬ್ಬಗೋಡಿ ಹಾಗೂ ಚಂದಾಪುರ ಅತ್ತಿಬೆಲೆಯ ರಾಷ್ಟ್ರೀಯ ಹೆದ್ದಾರಿಯೂ ಖಾಲಿಯಾಗಿ ಉದ್ದನೆಯ ರಸ್ತೆಯಷ್ಟೇ ಮಲಗಿದಂತೆ ಕಂಡಿದೆ. ಹುಳಿಮಾವು, ಗೊಟ್ಟಿಗೆರೆ, ಬನ್ನೇರುಘಟ್ಟ, ಜಿಗಣಿ, ಆನೇಕಲ್, ಸರ್ಜಾಪುರ ಸೇರಿದಂತೆ ಎಲ್ಲೆಡೆ ಲಾಕ್ಡೌನ್ ಆಗಿದ್ದು, ಸಂಪೂರ್ಣ ನಗರ-ಗ್ರಾಮೀಣ ಭಾಗಗಳೂ ಮುಚ್ಚಿವೆ.
ಅದರಲ್ಲೂ ಪವಿತ್ರ ರಂಜಾನ್ ಹಬ್ಬದ ಗಂಧ ಗಾಳಿಯೂ ಈ ಬಂದ್ ಭರಾಟೆಗೆ ತಣ್ಣಗಾಗಿದೆ. ಇನ್ನೂ ಬಿಸಿಲೇರಿದ ಹಾಗೆ ವಾಹನ ಓಡಾಡಬಹುದೆಂಬ ಊಹೆಯನ್ನೂ ತಳ್ಳಿಹಾಕುವಂತಿಲ್ಲ ಎಂದು ಮೂಲಗಳು ತಿಳಿಸಿವೆ.