ಬೊಮ್ಮನಹಳ್ಳಿಯ 4 ಸೇರಿ ಬೆಂಗಳೂರಿನಲ್ಲಿ ಇಂದು 10 ಕೊರೊನಾ ಕೇಸ್ ಪತ್ತೆ - Covid-19 detected in bangalore
P-2834 ಸಂಪರ್ಕದಿಂದ 30 ವರ್ಷದ ಮಹಿಳೆ, 55 ವರ್ಷದ ಮಹಿಳೆ ಹಾಗೂ 28 ವರ್ಷದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ. ರೋಗಿಗಳ ವಿವರಗಳನ್ನು ಅಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ. ಇನ್ನೊಂದೆಡೆ P-2894 ಸಂಪರ್ಕದಿಂದ 31 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ಹರಡಿದೆ.
ಬೆಂಗಳೂರು: ನಗರದಲ್ಲಿ ಬಿಹಾರಿ ವಲಸೆ ಕಾರ್ಮಿಕರಿಂದ ಹಾಟ್ಸ್ಪಾಟ್ ಆಗಿದ್ದ ಬೊಮ್ಮನಹಳ್ಳಿ ವಲಯದಲ್ಲಿ ನಾಲ್ಕು ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.
P-2834 ಸಂಪರ್ಕದಿಂದ 30 ವರ್ಷದ ಮಹಿಳೆ, 55 ವರ್ಷದ ಮಹಿಳೆ ಹಾಗೂ 28 ವರ್ಷದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ. ರೋಗಿಗಳ ವಿವರಗಳನ್ನು ಅಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ. ಇನ್ನೊಂದೆಡೆ P-2894 ಸಂಪರ್ಕದಿಂದ 31 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ಹರಡಿದೆ.
ಉಳಿದಂತೆ ದೆಹಲಿಯಿಂದ ಬಂದ ಮೂವರಿಗೆ, ಮಹಾರಾಷ್ಟ್ರ, ತಮಿಳುನಾಡು, ಇಂಡೋನೇಷ್ಯಾದಿಂದ ಬಂದ ತಲಾ ಒಬ್ಬೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ವಿವಿ ಪುರಂ ಬಳಿಯ ಪಾರ್ವತಿಪುರದ 60 ವರ್ಷದ ಮಹಿಳೆ ಕೊರೊನಾದಿಂದ ಮೃತಪಟ್ಟಿದ್ದರು. ಅವರ ಮನೆಯ 14 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಪಾರ್ವತಿಪುರದ ಒಂದನೇ ರಸ್ತೆಯನ್ನು ಸೀಲ್ ಡೌನ್ ಮಾಡಲಾಗಿದೆ.