ಬೆಂಗಳೂರು: ಕಲಾಸಿಪಾಳ್ಯ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನೆಡಸಿ, ಟೈರ್ ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.
ಟೈರ್ ಮ್ಯಾನ್ಯುಫ್ಯಾಕ್ಚರ್ ಮಾಡುವ ಗೋಡನ್ ಶೀಟ್ ಮುರಿದು ಕಳ್ಳತನ ಮಾಡಿದ್ದ ಆರೋಪಿಗಳು, ಹೊಸ ಟೈರ್ಗಳನ್ನು ಕದ್ದು ಮಾರುಕಟ್ಟೆಯಲ್ಲಿ ಕಮ್ಮಿ ದರಕ್ಕೆ ಮಾರುತ್ತಿದ್ದರು.
ವಸಂತಕುಮಾರ್ ಹಾಗೂ ಶರತ್ ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ 75 ಸಾವಿರ ರೂ ಬೆಲೆಬಾಳುವ 74 ಟೈರ್ಗಳನ್ನು ವಶಕ್ಕೆ ಪಡೆಯಲಾಗಿದೆ. ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.