ETV Bharat / state

ಮಾ.14ರಂದು ತಿಗಳ ಕ್ಷತ್ರಿಯ ನಡೆ ಕಾಂಗ್ರೆಸ್ ಕಡೆ.. ಜಾಗೃತಿ ಸಮಾವೇಶ - ಈಟಿವಿ ಭಾರತ ಕನ್ನಡ

ಮಾರ್ಚ್​14ರಂದು ತಿಗಳ ಕ್ಷತ್ರಿಯ ಸಮುದಾಯದ ಸಮಾವೇಶ - ತಿಗಳ ಕ್ಷತ್ರಿಯ ನಡೆ ಕಾಂಗ್ರೆಸ್ ಕಡೆ - ತಿಗಳ ಕ್ಷತ್ರಿಯ ಸಮುದಾಯಕ್ಕೆ ನಿಗಮ ಮಂಡಳಿಗೆ ವಿಧಾನ ಪರಿಷತ್ ಸದಸ್ಯ ಪಿ.ಆರ್. ರಮೇಶ್ ಒತ್ತಾಯ

tigla-kshatriyas-meeting-held-at-mysore-says-p-r-ramesh
ಮಾ.14ರಂದು ತಿಗಳ ಕ್ಷತ್ರಿಯ ನಡೆ ಕಾಂಗ್ರೆಸ್ ಕಡೆ ..ಜಾಗೃತಿ ಸಮಾವೇಶ
author img

By

Published : Mar 12, 2023, 5:43 PM IST

ಬೆಂಗಳೂರು : ರಾಜ್ಯ ಸರ್ಕಾರವು ತಿಗಳ ಕ್ಷತ್ರಿಯ ಜನಾಂಗವನ್ನು ಕಡೆಗಣಿಸಿದೆ. ಎಲ್ಲ ಸಮುದಾಯಕ್ಕೆ ಪ್ರತ್ಯೇಕ ನಿಗಮ ಮಂಡಳಿ ಮಾಡಲಾಗಿದೆ. ಆದರೆ ತಿಗಳ ಕ್ಷತ್ರಿಯ ಸಮುದಾಯಕ್ಕೆ ನಿಗಮ ಮಂಡಳಿ ಮಾಡಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಪಿ. ಆರ್. ರಮೇಶ್ ಹೇಳಿದ್ದಾರೆ.

ನಗರದ ಖಾಸಗಿ ಹೋಟೆಲ್​ನಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಈಗಿರುವ ನಿಗಮ ಮಂಡಳಿಯಲ್ಲಿ ಕೆಲಸ ಮಾಡುವವರಿಗೆ ಸರಿಯಾಗಿ ಸಂಬಳ ಸಿಕ್ಕಿಲ್ಲ. ಕಳೆದ ಬಜೆಟ್ ನಲ್ಲಿ ತಿಗಳ ಸಮುದಾಯಕ್ಕೆ 400 ಕೋಟಿ ಹಣ ಇಟ್ಟಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದರು. ಆದರೆ ಒಂದು ರೂಪಾಯಿಯನ್ನೂ ಇದುವರೆಗೂ ಖರ್ಚು ಮಾಡಿಲ್ಲ. ಮಾರ್ಚ್​ 14ರಂದು ತಿಗಳ ಸಮುದಾಯದ ಜಾಗೃತಿ ಸಭೆಯನ್ನು ಮೈಸೂರು ರಸ್ತೆಯಲ್ಲಿರುವ ಪೂರ್ಣಿಮಾ ಪ್ಯಾಲೇಸ್ ನಲ್ಲಿ ಹಮ್ಮಿಕೊಂಡಿದ್ದೇವೆ. ಈ ಜಾಗೃತಿ ಸಮಾವೇಶಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬರಲಿದ್ದಾರೆ ಎಂದು ತಿಳಿಸಿದರು.

ತಿಗಳ ಕ್ಷತ್ರಿಯ ನಡೆ ಕಾಂಗ್ರೆಸ್​ ಕಡೆ : ಜೊತೆಗೆ ತಿಗಳ ಕ್ಷತ್ರಿಯ ನಡೆ ಕಾಂಗ್ರೆಸ್ ಕಡೆ ಎಂದು ನಾವು ಕಾರ್ಯಕ್ರಮ ಮಾಡುತ್ತಿದ್ದೇವೆ. ತಿಗಳ ಸಮುದಾಯಕ್ಕೆ ಇರುವ ಕೆಲವು ಕಾರ್ಯಕ್ರಮಗಳನ್ನು ಈ ಸರ್ಕಾರ ರದ್ದು ಮಾಡಿದೆ. ಅದಕ್ಕಾಗಿ ತಿಗಳ ಕ್ಷತ್ರಿಯ ನಡೆ ಕಾಂಗ್ರೆಸ್ ಕಡೆ ಎಂಬ ಕಾರ್ಯಕ್ರಮ ಮಾಡುತ್ತಿದ್ದೇವೆ. ರಾಜ್ಯದಲ್ಲಿ ನಮ್ಮ ಸಮುದಾಯದ 40 ಲಕ್ಷಕ್ಕೂ ಹೆಚ್ಚು ಜನರಿದ್ದಾರೆ. ಹಿಂದೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ತಿಗಳ ಜನಾಂಗದ ವಿದ್ಯಾರ್ಥಿಗಳು ವಿದೇಶಕ್ಕೆ ಹೋಗಿ ಓದಿದ್ದರು ಎಂದು ಹೇಳಿದರು.

ಇಂದು ತಿಗಳ ಸಮುದಾಯ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂಬ ಸಂದೇಶವನ್ನು ಪಿ.ಆರ್. ರಮೇಶ್ ನೀಡಿದ್ದಾರೆ. ಇದಕ್ಕೆ ಕೆಲವರು ಸಮ್ಮತಿ ಸೂಚಿಸಿದ್ದಾರೆ. ಆದರೆ ಸಂಪೂರ್ಣ ಸಮುದಾಯ ಕಾಂಗ್ರೆಸ್ ಬೆನ್ನಿಗೆ ನಿಲ್ಲುವುದೇ ಎನ್ನುವುದನ್ನು ಕಾದು ನೋಡಬೇಕಿದೆ. ಯಾವ ಕ್ಷೇತ್ರದಲ್ಲಿ ತಿಗಳ ಸಮುದಾಯದ ಮತದಾರರು ನಿರ್ಣಾಯಕರಾಗಿದ್ದಾರೋ, ಅಲ್ಲಿ ತಾವು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂಬ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ.

ತಿಗಳ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಕ್ಕಿದ್ದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಸಾಕಷ್ಟು ಅನುಕೂಲ, ಅನುದಾನ ಸಿಕ್ಕಿತ್ತು. ಈಗಿನ ಬಿಜೆಪಿ ಸರ್ಕಾರ ನಮ್ಮನ್ನು ಕಡೆಗಣಿಸಿದೆ. ಸಮುದಾಯವನ್ನು ಒಡೆಯುವ ಕೆಲಸ ಮಾಡುತ್ತಿದೆ. ಇದರಿಂದ ನಾವು ಈಗ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಾದಿದೆ. ಆದಷ್ಟು ಬೇಗ ಒಂದು ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಸಮಾವೇಶ ಇದಕ್ಕೆ ಪರಿಹಾರ ಒದಗಿಸಲಿದೆ ಎಂದು ಪಿ. ಆರ್​ ರಮೇಶ್ ಅಭಿಪ್ರಾಯಪಟ್ಟಿದ್ದಾರೆ.​​

ಸಿಎಂ ಬೊಮ್ಮಾಯಿ ಭರವಸೆ ಹುಸಿ- ಪಿ ಆರ್​ ರಮೇಶ್​ : ಇತ್ತೀಚೆಗೆ ತಿಗಳ ಕ್ಷತ್ರಿಯ ಸಮುದಾಯದವರು ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಸಮಾವೇಶದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪಾಲ್ಗೊಂಡಿದ್ದರು. ಈ ವೇಳೆ ಮುಂದಿನ ಬಜೆಟ್​ನಲ್ಲಿ ಕ್ಷತ್ರಿಯ ಸಮುದಾಯದ ಕುಲಕಸುಬು ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪಿಸಿ ಅನುದಾನ ಒದಗಿಸುವ ಭರವಸೆ ಕೊಟ್ಟಿದ್ದರು. ಆದರೆ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ ಎಂದು ಸಮಾಜದ ಮುಖಂಡರು ಹೇಳಿದ್ದಾರೆ. ರಾಜ್ಯ ಕ್ಷತ್ರಿಯ ಒಕ್ಕೂಟದ ರಾಜ್ಯಾಧ್ಯಕ್ಷ ಉದಯ್ ಸಿಂಗ್ ನೇತೃತ್ವದಲ್ಲಿ ಕ್ಷತ್ರಿಯ ಸಮುದಾಯದ ಬೃಹತ್ ಸಮಾವೇಶ ನಡೆದಿತ್ತು. ಸಮಾವೇಶದಲ್ಲಿ ರಾಜಕೀಯ ಪ್ರಾತಿನಿಧ್ಯ ಸಿಗದಿದ್ದರೆ, ಒಗ್ಗಟ್ಟಾಗಿ ಹೋರಾಟ ಮಾಡುವುದಾಗಿ ಹೇಳಿದ್ದರು.

ಬೆಂಗಳೂರು ನಗರದಲ್ಲಿ ಶೇ. 25 ರಷ್ಟು ಕ್ಷತ್ರಿಯ ಸಮುದಾಯದವರಿದ್ದಾರೆ. ಒಂದೊಂದು ಕ್ಷೇತ್ರದಲ್ಲಿ ಕನಿಷ್ಠ 20 ರಿಂದ 25 ಸಾವಿರ ಕ್ಷತ್ರಿಯ ಸಮುದಾಯದವರು ಇದ್ದಾರೆ. ಸುಮಾರು 150 ವಿಧಾನಸಭಾ ಕ್ಷೇತ್ರಗಳಲ್ಲಿ ಸಮುದಾಯದ ಪ್ರಾಬಲ್ಯ ಇದೆ. ತಮ್ಮ ಸಮಾಜಕ್ಕೂ ಪ್ರಾತಿನಿಧ್ಯ ನೀಡುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ : 'ಪಿಎಸ್​ಐ ನೇಮಕಾತಿಯಲ್ಲಿ ಬೇಲಿಯೇ‌ ಎದ್ದು‌ ಹೊಲ‌ ಮೇಯ್ದಿದೆ': ಸಚಿವ ಆರಗ ಜ್ಞಾನೇಂದ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.