ETV Bharat / state

ವಿಡಿಯೋ: ರೈ ವಿರುದ್ಧ ಮೊದಲು ರೌಡಿ ಶೀಟ್​ ತೆರೆದ ಟೈಗರ್ ಅಶೋಕ್​ ಹೇಳುವುದೇನು?

ಕೆಲವು ಲೇಔಟ್​​ಗಳಲ್ಲಿ ಎಂಆರ್​ ಎಂಬ ಬೋರ್ಡ್​ ಇರುತ್ತಿತ್ತು. ಹಾಗಂದರೆ​ ಏನು ಎಂಬುದು ಬಹುತೇಕ ಜನರಿಗೆ ಗೊತ್ತಿರಲಿಲ್ಲ. ಆ ನಂತರವಷ್ಟೇ ಅದರ ವಿಸ್ತಾರ ರೂಪ ಮುತ್ತಪ್ಪ ರೈ ಎಂಬುದು ಗೊತ್ತಾಯಿತು ಎಂದು ನಿವೃತ್ತ ಪೊಲೀಸ್​ ಅಧಿಕಾರಿ ಟೈಗರ್​ ಅಶೋಕ್​ ಅವರು ತಿಳಿಸಿದ್ದಾರೆ.

Tiger ashok explains Muthappa rai crime activities with ETV Bharat
ಮುತ್ತಪ್ಪ ರೈ ಭೂಗತ ಕ್ರೈಮ್​ ಲೋಕ ಹೇಗಿತ್ತು ಎಂಬುದನ್ನು ಟೈಗರ್​ ಅಶೋಕ್​ ಮಾತಲ್ಲೇ ಕೇಳಿ
author img

By

Published : May 15, 2020, 11:03 AM IST

Updated : May 15, 2020, 1:52 PM IST

ಬೆಂಗಳೂರು: ಭೂಗತ ಲೋಕದಲ್ಲಿ ಪ್ರಖ್ಯಾತಿ ಹೊಂದಿದ್ದ ಮುತ್ತಪ್ಪ ರೈ ಹಲವು ಅಪರಾಧ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದ. ಈತನ ವಿರುದ್ಧ ರೌಡಿ ಶೀಟ್​ ಫೈಲ್​ ಮಾಡಲು ಬಹುತೇಕ ಪೊಲೀಸರು ಹೆದರುತ್ತಿದ್ದರು. ಈ ವೇಳೆ ಕಬ್ಬನ್​ ಪಾರ್ಕ್​ ಪೊಲೀಸ್​ ಠಾಣೆಯಲ್ಲಿ ಮೊದಲ ಬಾರಿಗೆ ರೌಡಿ ಶೀಟರ್​ ಪಟ್ಟಿ ತೆರೆದು ತನಿಖೆ ಆರಂಭ ಮಾಡಿದ್ದೆ. ಕ್ಯಾನ್ಸರ್​​ನಿಂದ ಸಾವಿಗೀಡಾದ ಮಾಜಿ ಭೂಗತ ಪಾತಕಿ ಮುತ್ತಪ್ಪ ರೈ ಕುರಿತು ನಿವೃತ್ತ ಹಿರಿಯ ಪೊಲೀಸ್​ ಅಧಿಕಾರಿ ಟೈಗರ್​ ಅಶೋಕ್​ ಸವಿಸ್ತಾರವಾಗಿ ಮಾತನಾಡಿದ್ದಾರೆ.

ಕ್ರೈಂ​​ ಲೋಕದಲ್ಲಿ ರೈ ಚಟುವಟಿಕೆಗಳು ಹೇಗಿದ್ದವು? ಎಂಬ ಕುರಿತಂತೆ ಅಶೋಕ್ ಅವರು​ ಈಟಿವಿ ಭಾರತದೊಂದಿಗೆ ಮಾತನಾಡಿದ್ದಾರೆ.

ಮುತ್ತಪ್ಪ ರೈ ಪಾತಕಲೋಕದಲ್ಲಿ ತನ್ನದೇ ಆದ ಜಾಲವನ್ನು ಸೃಷ್ಟಿಸಿಕೊಂಡು ಪ್ರಖ್ಯಾತಿ ಹೊಂದಿದ್ದ. ಹಲವು ಅಪರಾಧ ಚಟುವಟಿಕೆಯಲ್ಲಿ ತೊಡಗಿದ್ದರ ವಿರುದ್ಧ ತನಿಖೆ ಆರಂಭಿಸಿದ್ದೆ. ಈ ಹೊತ್ತಿಗಾಗಲೇ ಮುತ್ತಪ್ಪ ರೈ ಕ್ರೈಂ ಚಟುವಟಿಕೆಗಳು ಎಲ್ಲೆ ಮೀರಿದ್ದವು ಎಂದರು.

ಬೇರೆ ಬೇರೆ ಕಾರಣಗಳಿಂದ ಮುತ್ತಪ್ಪ ರೈ ಪೊಲೀಸರ ಎನ್​ಕೌಂಟರ್​ನಿಂದ ಕೂದಲೆಳೆ ಅಂತರದಲ್ಲಿ ಪಾರಾಗುತ್ತಿದ್ದ. ಇನ್ನು ಈತ ರಿಯಲ್ ಎಸ್ಟೇಟ್ ಉದ್ಯಮಿಯಾದ ಕಾರಣ, ನಗರದ ಬಹುತೇಕ ಕಡೆಗಳಲ್ಲಿ ಸೈಟ್​ಗಳನ್ನು ತನ್ನ ಹೆಸರಿಗೆ ಮಾಡಿಕೊಂಡು ಎಮ್​ಆರ್​ ಎಂದು ಬೋರ್ಡ್​ ಹಾಕುತ್ತಿದ್ದ.

ನಿವೃತ್ತ ಪೊಲೀಸ್​ ಅಧಿಕಾರಿ ಟೈಗರ್​ ಅಶೋಕ್​ ಜೊತೆ ಈಟಿವಿ ಭಾರತ ನಡೆಸಿದ ವಿಶೇಷ ಸಂದರ್ಶನ

ಎಂಆರ್​ ಎಂದರೆ ಏನು ಎಂಬುದು ಬಹುತೇಕ ಜನರಿಗೆ ಗೊತ್ತಿರಲಿಲ್ಲ. ಆ ನಂತರವಷ್ಟೇ ಅದರ ವಿಸ್ತಾರ ರೂಪ ಮುತ್ತಪ್ಪ ರೈ ಎಂಬುದು ಗೊತ್ತಾಯಿತು ಎಂದು ಅಶೋಕ್​ ಅವರು ತಿಳಿಸಿದ್ದಾರೆ.

Last Updated : May 15, 2020, 1:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.