ETV Bharat / state

ಜುಗ್ಗುರಾಜ್ ಜೈನ್‌ ಕೊಲೆ‌ ಪ್ರಕರಣ: ಹೆಂಡತಿ ಕಾಟಕ್ಕೆ ನಡೀತು ಮಾಲೀಕನ ಹತ್ಯೆ!

author img

By

Published : Jun 7, 2022, 2:33 PM IST

ಹೆಂಡತಿ ಕಾಟಕ್ಕೆ ಬೇಸತ್ತು ಮಾಲೀಕನನ್ನ ಕೊಲೆ ಮಾಡಿ ಐದು ಕೋಟಿಗಿಂತ ಹೆಚ್ಚು ನಗ - ನಾಣ್ಯ ದೋಚಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Three more accused arrested over Jugguraj murder case, Police commissioner Pratap reddy details on Jugguraj murder case, Jugguraj murder case news, Bengaluru crime news, ಜುಗ್ಗುರಾಜ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಮೂವರು ಆರೋಪಿಗಳ ಬಂಧನ, ಜುಗ್ಗುರಾಜ್ ಹತ್ಯೆ ಪ್ರಕರಣದ ವಿವರ ನೀಡಿದ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ, ಜುಗ್ಗುರಾಜ್ ಹತ್ಯೆ ಪ್ರಕರಣದ ಸುದ್ದಿ, ಬೆಂಗಳೂರು ಅಪರಾಧ ಸುದ್ದಿ,
ಜುಗ್ಗುರಾಜ್ ಜೈನ್‌ ಕೊಲೆ‌ ಪ್ರಕರಣದ ಬಗ್ಗೆ ಪೊಲೀಸ್​ ಅಧಿಕಾರಿ ಮಾಹಿತಿ

ಬೆಂಗಳೂರು:‌ ಜುಗ್ಗುರಾಜ್ ಜೈನ್‌ ಕೊಲೆ‌ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಮರಾಜಪೇಟೆ ಪೊಲೀಸರು ಒಟ್ಟು ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕೊಲೆ ಪ್ರಕರಣದಲ್ಲಿ ಒಟ್ಟು ನಾಲ್ವರು ಆರೋಪಿಗಳನ್ನು ಸೆರೆ ಹಿಡಿದಿರುವ ಪೊಲೀಸರು ಮತ್ತೊಬ್ಬ ಆರೋಪಿಗೆ ಜಾಲ ಬೀಸಿದ್ದಾರೆ.

ಏನಿದು ಪ್ರಕರಣ: ಚಾಮರಾಜಪೇಟೆಯ ಟೆಂಪಲ್‌ ಸ್ಟ್ರೀಟ್ ನಿವಾಸಿಯಾಗಿದ್ದ ದೀಪಂ ಎಲೆಕ್ಟ್ರಿಕಲ್ ಅಂಗಡಿ ಮಾಲೀಕ ಜುಗ್ಗುರಾಜ್ ಜೈನ್​ ನನ್ನು ಮೇ 24 ರಂದು ರಾಜಸ್ಥಾನ ಮೂಲದ‌‌ ಬಿಜೋರಾಮ್ ಕಣ್ಣಿಗೆ ಖಾರದ‌ಪುಡಿ ಎರಚಿ, ಕೈಕಾಲು ಕಟ್ಟಿ ಹತ್ಯೆ ಮಾಡಿ ಕೋಟ್ಯಂತರ ರೂಪಾಯಿ ನಗ-ನಾಣ್ಯ ದೋಚಿದ್ದನು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪಶ್ಚಿಮ ವಿಭಾಗದ ಪೊಲೀಸರಿಗೆ ಬಿಜೋರಾಮ್ ಗುಜರಾತ್​ನಲ್ಲಿ ಅಡಗಿರುವುದು ತಿಳಿದಿದೆ. ಕೂಡಲೇ ನಗರದ ಪೊಲೀಸರು ಗುಜರಾತ್​ ಪೊಲೀಸರ ಸಹಕಾರದೊಂದಿಗೆ ಬಿಜೋರಾಮ್​ನ​ನ್ನು ಸೆರೆಹಿಡಿದು 23 ಲಕ್ಷ ಚಿನ್ನಾಭರಣ ಜಪ್ತಿ ಮಾಡಿದ್ದರು. ಬಳಿಕ ಬಿಜೋರಾಮ್​ನ್ನು ಬೆಂಗಳೂರಿಗೆ ಶಿಫ್ಟ್​ ಮಾಡಲಾಗಿತ್ತು.

ಪೊಲೀಸರು ಬೆಂಗಳೂರಿಗೆ ಕರೆತಂದು ವಿಚಾರಣೆಗೊಳಪಡಿಸಿದಾಗ ಸಹಚರರ ನೆರವಿನಿಂದ ಈ ಕೃತ್ಯ ಎಸಗಲು ಸಾಧ್ಯವಾಯಿತು ಎಂದು ಬೀಜೊರಾಮ್​ ಬಾಯ್ಬಿಟ್ಟಿದ್ದ.‌ ಈತ ನೀಡಿದ ಮಾಹಿತಿ ಮೇರೆಗೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮಹೇಂದ್ರ, ಪೂರಾನ್ ಹಾಗೂ ಓಂ ಪ್ರಕಾಶ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 4,93 ಕೋಟಿ ಮೌಲ್ಯದ 8 ಕೆಜಿ 752 ಗ್ರಾಂ ಚಿನ್ನ, 3 ಕೆಜಿ 870 ಗ್ರಾಂ ಬೆಳ್ಳಿ, 53 ಲಕ್ಷ ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಓಂರಾಮ್ ದೇವಸಿ ಎಂಬಾತ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.

ಓದಿ: ದಕ್ಷಿಣ ಭಾರತದಲ್ಲೇ ಅಪರೂಪವಾದ ದೊಡ್ಡ ಸ್ಫಟಿಕ ಶಿವಲಿಂಗ ಕದ್ದೊಯ್ದ ಖದೀಮರು

ಹೆಂಡತಿ ಕಾಟಕ್ಕೆ ನಡೀತು ಕೊಲೆ: ರಾಜಸ್ಥಾನದ ಪಾಲಿ ಜಿಲ್ಲೆಯ ಬಿಜೋರಾಮ್ ಕಳೆದ‌ ಆರು ತಿಂಗಳಿಂದ ಕೊಲೆಯಾದ ಜುಗ್ಗುರಾಜ್ ಜೈನ್ ಬಳಿ ಕೆಲಸಕ್ಕೆ ಸೇರಿಕೊಂಡಿದ್ದ. ತಿಂಗಳಿಗೆ 15 ಸಾವಿರ ರೂಪಾಯಿ ವೇತನ ಪಡೆಯುತ್ತಿದ್ದ. ಹೆಚ್ಚಿನ ಸಂಬಳ ತರುವಂತೆ‌ ಪತ್ನಿ ಬಿಜೋರಾಮ್​ಗೆ ಪೀಡಿಸುತ್ತಿದ್ದಳು. ಇದರಿಂದ ಬೇಸತ್ತಿದ್ದ ಆರೋಪಿ ಮಾಲೀಕನ ಮನೆಯಲ್ಲಿ ಚಿನ್ನಾಭರಣ ದೋಚುವ ಪ್ಲ್ಯಾನ್ ಮಾಡಿದ್ದಾನೆ.

ಬಿಜೋರಾಮ್ ಕಳ್ಳತನಕ್ಕೆ ಸಂಬಂಧಿಕರಾದ ಮಹೇಶ್, ಪೂರಾನ್ ಸೇರಿದಂತೆ ಐವರು ಸಾಥ್ ನೀಡಿದ್ದಾರೆ. ಯೋಜನೆ ಪ್ರಕಾರ ಜುಗ್ಗುರಾಜ್ ಜೈನ್​ನನ್ನು ಕೊಲೆ‌ ಮಾಡಿ ಎರಡು ಬ್ಯಾಗಿನಲ್ಲಿ‌ ಕೋಟ್ಯಂತರ ರೂ. ನಗನಾಣ್ಯ ದೋಚಿ ಅಲ್ಲಿಂದ ಐವರು ಕಾಲ್ಕಿತ್ತಿದ್ದಾರೆ. ಬಿಜೋರಾಮ್​ ಮತ್ತು ಆತನ ಸಹಚರರು ಹುಬ್ಬಳಿ ಮಾರ್ಗವಾಗಿ ಗೋವಾದ ಓಂ ರಾಮ್ ದೇವಸಿ ಮನೆಗೆ ತೆರಳಿದ್ದರು. ಬಳಿಕ ಚಿನ್ನಾಭರಣ ಹಂಚಿಕೊಂಡು ಬಿಜೋರಾಮ್ ಗುಜರಾತ್​ ನತ್ತ ಮುಖ ಮಾಡಿದ್ದರೆ, ಇನ್ನಿಬ್ಬರು ರಾಜಸ್ಥಾನದ ತಮ್ಮ ನಿವಾಸಕ್ಕೆ ತೆರಳಿ ತಲೆಮರೆಸಿಕೊಂಡಿದ್ದರು. ಬಳಿಕ ಆರೋಪಿಗಳ ಸುಳಿವು ಸಿಕ್ಕ ಬಳಿಕ ಬಂಧಿಸಲಾಗಿದೆ ಎಂದು ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.