ETV Bharat / state

ಐಫೋನ್​ ಸೇರಿ ದುಬಾರಿ ಫೋನ್​ಗಳನ್ನು ಕದ್ದು ತೆಲಂಗಾಣಕ್ಕೆ ಸಾಗಣೆ: ಮೂವರ ಬಂಧನ, 40 ಲಕ್ಷ ಮೌಲ್ಯದ ಮೊಬೈಲ್ ವಶ

ನಗರದಲ್ಲಿ ಗುಜರಿ ಕೆಲಸ ಮಾಡಿಕೊಂಡಿದ್ದ ಆರೋಪಿಗಳು ಹೆಚ್ಚು ಹಣ ಸಂಪಾದಿಸಲು ರಾತ್ರಿ ವೇಳೆ ಫೋನ್​ನಲ್ಲಿ ಮಾತನಾಡಿಕೊಂಡು ಹೋಗುವವರ ಮೊಬೈಲ್​ ಕಸಿದು ಪರಾರಿಯಾಗುತ್ತಿದ್ದವರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

three-iphone-thieves-arrested-in-bengaluru
ಐಪೋನ್​ ಸೇರಿ ದುಬಾರಿ ಫೋನ್​ಗಳನ್ನು ಕದ್ದು ತೆಲಂಗಾಣಕ್ಕೆ ಸಾಗಾಟ: ಮೂವರ ಬಂಧನ, 110 ಮೊಬೈಲ್ ವಶ
author img

By

Published : Mar 21, 2023, 8:07 PM IST

Updated : Mar 21, 2023, 8:18 PM IST

ಐಫೋನ್​ ಸೇರಿ ದುಬಾರಿ ಫೋನ್​ಗಳನ್ನು ಕದ್ದು ತೆಲಂಗಾಣಕ್ಕೆ ಸಾಗಣೆ: ಮೂವರ ಬಂಧನ, 40 ಲಕ್ಷ ಮೌಲ್ಯದ ಮೊಬೈಲ್ ವಶ

ಬೆಂಗಳೂರು: ಸ್ಮಾರ್ಟ್​ಫೋನ್​ನಲ್ಲಿ ಮಾತನಾಡಿಕೊಂಡು ಓಡಾಡುವವರನ್ನೇ ಗುರಿಯಾಗಿಸಿ ನಗರದಲ್ಲಿ ರಾತ್ರಿ ವೇಳೆ ಸಕ್ರಿಯವಾಗಿ ಐಪೋನ್ ಸೇರಿದಂತೆ ವಿವಿಧ‌ ಕಂಪನಿಗಳ ಪೋನ್ ಸುಲಿಗೆ‌ ಮಾಡುತ್ತಿದ್ದ ಮೂವರು ಆರೋಪಿಗಳನ್ನು ವಿವೇಕನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಗೋರಿಪಾಳ್ಯದ ಮೊಹಮ್ಮದ್ ಸಕೈನ್, ಸುಹೇಲ್ ಹಾಗೂ ಸಾಹೀಬ್ ಎಂದು ಗುರುತಿಸಲಾಗಿದೆ. ಇನ್ನು ಬಂಧಿತರಿಂದ ವಿವಿಧ‌ ಕಂಪನಿಗಳ 40 ಲಕ್ಷ ಮೌಲ್ಯದ 110 ಮೊಬೈಲ್​ಗಳನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ.

ಆರೋಪಿಗಳೆಲ್ಲರೂ ನಗರದಲ್ಲಿ ಗುಜರಿ ಕೆಲಸ ಸೇರಿದಂತೆ ಸಣ್ಣಪುಟ್ಟ ಕೆಲಸ‌ ಮಾಡಿಕೊಂಡಿದ್ದವರು. ಹಣದ ವ್ಯಾಮೋಹಕ್ಕೆ ಬಿದ್ದು ಕೆಲಸ‌ ಮುಗಿದ ಬಳಿಕ ರಾತ್ರಿ ವೇಳೆ ಕದ್ದಿದ್ದ ಬೈಕ್​ಗಳಲ್ಲಿ‌ ಮೂವರು ಸುಲಿಗೆಕೋರರು ನಗರದೆಲ್ಲೆಡೆ‌ ಸುತ್ತಾಡುತ್ತಿದ್ದರು‌. ವಸತಿ ಪ್ರದೇಶಗಳಲ್ಲಿ‌ ಮೊಬೈಲ್​ನಲ್ಲಿ ಮಾತನಾಡಿಕೊಂಡು ಓಡಾಡುವರನ್ನು ಗುರಿಯಾಗಿಸಿ ಕ್ಷಣಾರ್ಧದಲ್ಲಿ ಮೊಬೈಲ್‌ ಕಸಿದು ಪರಾರಿಯಾಗುವ ಪ್ರವೃತ್ತಿ ಬೆಳೆಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕೊರಿಯರ್​ನಲ್ಲಿ ಮೊಬೈಲ್​ಗಳು ಹೈದರಾಬಾದ್​ಗೆ ಶಿಫ್ಟ್ : ಕಳ್ಳತನ ಮಾಡಿದ ಸಾವಿರಾರು ರೂಪಾಯಿ ಬೆಲೆಬಾಳುವ ಮೊಬೈಲ್​ಗಳನ್ನು ವ್ಯವಸ್ಥಿತ ರೀತಿಯಲ್ಲಿ ಹೈದರಬಾದ್​ನ ಜಗದೀಶಪುರ ಮಾರ್ಕೆಟ್​ನ ಪರಿಚಯಸ್ಥರಿಗೆ ಕೊರಿಯರ್ ಮೂಲಕ ಕಳುಹಿಸುತ್ತಿದ್ದರು. ಕದ್ದ ಐಫೋನ್​ಗಳಿಗೆ ಲೊಕೇಷನ್ ಪತ್ತೆಯಾಗುವ ಹಿನ್ನೆಲೆಯಲ್ಲಿ ಅದರ ಮದರ್ ಬೋರ್ಡ್ ಪ್ರತ್ಯೇಕಗೊಳಿಸುತ್ತಿದ್ದರು. ಅಲ್ಲದೆ ಬಿಡಿಭಾಗಗಳು ಕಳುಹಿಸಿ ಲಕ್ಷಾಂತರ ರೂಪಾಯಿ ಹಣವನ್ನ‌ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದರು.

ವಿವೇಕನಗರ ಮಾತ್ರವಲ್ಲದೆ ಆಡುಗೋಡಿ, ಅಶೋಕನಗರ, ಕೋರಮಂಗಲ, ವಿಲ್ಸನ್ ಗಾರ್ಡನ್ ಹಾಗೂ ಎಚ್​ಎಸ್​ಆರ್ ಪೊಲೀಸ್ ಠಾಣೆಗಳಲ್ಲಿ ಆರೋಪಿಗಳ ವಿರುದ್ಧ ಕಳ್ಳತನ ಪ್ರಕರಣ ದಾಖಲಾಗಿವೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್​ ಪ್ರಸಾದ್ ತಿಳಿಸಿದ್ದಾರೆ.

ಆರೋಪಿಗಳು ಸಿಕ್ಕಿಬಿದ್ದಿದ್ದು ಹೇಗೆ ?: ಮೊಬೈಲ್ ಸುಲಿಗೆಗೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರು ಪ್ರಕರಣ ದಾಖಲಾಗುತ್ತಿದ್ದಂತೆ ತನಿಖೆ‌ ಕೈಗೆತ್ತಿಕೊಂಡ ಇನ್ಸ್​ಪೆಕ್ಟರ್​ ಅನಿಲ್‌ ಕುಮಾರ್ ನೇತೃತ್ವದ ತಂಡ ಸುಮಾರು 300ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಗಳನ್ನ ಪರಿಶೀಲಿಸಿದಾಗ ಆರೋಪಿಗಳು ಪಾದರಾಯನಪುರದ ಗೋರಿಪಾಳ್ಯ‌ ನಿವಾಸಿಗಳು ಎಂದು ಗೊತ್ತಾಗಿದೆ.‌ ಮಫ್ತಿಯಲ್ಲಿ ಮೂರು ದಿನಗಳ ಕಾರ್ಯಾಚರಣೆ ನಡೆಸಿ ಕಳ್ಳತನಕ್ಕೆ ಮುಂದಾದಾಗ ಆರೋಪಿಗಳನ್ನ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹಿಂದೆಯು ಐಫೋನ್​ ಕಳ್ಳರ ಬಂಧನ: ಕಳೆದ ಜನವರಿ ತಿಂಗಳಲ್ಲಿ ಮೈಕೋ ಲೇಔಟ್ ಠಾಣಾ ಪೊಲೀಸರು ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಾ ಸಾರ್ವಜನಿಕರ ಮೊಬೈಲ್ ಕಸಿದುಕೊಂಡು ಪರಾರಿಯಾಗುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದರು. ಡಿ.28ರಂದು ಸಂಜೆ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಆರೋಪಿಗಳು ಬಿಳೇಕಹಳ್ಳಿ ಬಳಿ ಸುಜಿತ್ ಎಂಬಾತನ ಕೈಯಲ್ಲಿದ್ದ ಐಫೋನ್ ಎಗರಿಸಿ ಪರಾರಿಯಾಗಿದ್ದರು. ಫೋನ್ ಕಳೆದುಕೊಂಡ ಸುಜಿತ್ ತಕ್ಷಣ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದರು. ಘಟನೆ ವರದಿಯಾಗಿ ಎರಡು ಗಂಟೆಯೊಳಗೆ ಕ್ಷಿಪ್ರ ಕಾರ್ಯಾಚರಣೆ ಕೈಗೊಂಡ ಮೈಕೋಲೇಔಟ್ ಠಾಣಾ ಪೊಲೀಸರು ಫೋನ್ ಲೊಕೇಶನ್ ಆಧರಿಸಿ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

ಇದನ್ನೂ ಓದಿ : ದೂರು ನೀಡಲು ಬಂದ ಮಹಿಳೆಯನ್ನೇ ಮಂಚಕ್ಕೆ ಕರೆದ್ರಾ ಇನ್‌ಸ್ಪೆಕ್ಟರ್? ಡಿಸಿಪಿಗೆ ತನಿಖಾ ವರದಿ ಸಲ್ಲಿಕೆ

Last Updated : Mar 21, 2023, 8:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.