ETV Bharat / state

ರವಿಕೆ, ಡ್ರೈ ಫ್ರೂಟ್ಸ್, ಗುದನಾಳದಲ್ಲಿಟ್ಟು ಚಿನ್ನ ಸಾಗಾಟ: ₹67 ಲಕ್ಷ ಮೌಲ್ಯದ 1 ಕೆ.ಜಿ ಚಿನ್ನ ವಶಕ್ಕೆ, ಮೂವರು ಸೆರೆ

ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರವಿಕೆ, ಡ್ರೈ ಫ್ರೂಟ್ಸ್, ಗುದನಾಳದಲ್ಲಿ ಬಚ್ಚಿಟ್ಟು ಚಿನ್ನ ಸಾಗಾಟ ಮಾಡುತ್ತಿದ್ದ ಮೂವರನ್ನು ಕಸ್ಟಮ್ಸ್​ ಅಧಿಕಾರಿಗಳು ಬಂಧಿಸಿದ್ದಾರೆ.

three-arrested-for-smuggling-gold-at-bengaluru-airport
ರವಿಕೆ, ಡ್ರೈ ಫ್ರೂಟ್ಸ್, ಗುದನಾಳದಲ್ಲಿ ಬಚ್ಚಿಟ್ಟು ಚಿನ್ನ ಸಾಗಾಟ : ಮೂವರ ಬಂಧನ
author img

By ETV Bharat Karnataka Team

Published : Oct 22, 2023, 7:32 PM IST

Updated : Oct 22, 2023, 8:00 PM IST

ರವಿಕೆ, ಡ್ರೈ ಫ್ರೂಟ್ಸ್, ಗುದನಾಳದಲ್ಲಿಟ್ಟು ಚಿನ್ನ ಸಾಗಾಟ: ₹67 ಲಕ್ಷ ಮೌಲ್ಯದ 1 ಕೆ.ಜಿ ಚಿನ್ನ ವಶಕ್ಕೆ, ಮೂವರು ಸೆರೆ

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ರವಿಕೆಯಲ್ಲಿ ಪೇಸ್ಟ್‌ ರೂಪದಲ್ಲಿ ಮರೆಮಾಚಿ, ಗುದನಾಳದಲ್ಲೂ ಸಿಕ್ಕಿಸಿಕೊಂಡು ಹಾಗು ಡ್ರೈ ಫ್ರೂಟ್ಸ್‌ನಲ್ಲೂ ಅಕ್ರಮವಾಗಿ ಚಿನ್ನ ಸಾಗಾಟ ಮಾಡಲು ಯತ್ನಿಸಿದ ಮೂವರು ಪ್ರಯಾಣಿಕರನ್ನು ಕಸ್ಟಮ್ಸ್ ಅಧಿಕಾರಿಗಳು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಆರೋಪಿಗಳಿಂದ 67 ಲಕ್ಷ ರೂ ಮೌಲ್ಯದ 1 ಕೆ.ಜಿಗೂ ಅಧಿಕ ಚಿನ್ನವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ರವಿಕೆಯಲ್ಲಿ ಚಿನ್ನ: ಅಕ್ಟೋಬರ್ 20 ಮತ್ತು 21ರ ನಡುವೆ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಚಿನ್ನ ಸಾಗಿಸುತ್ತಿದ್ದ ಮೂವರನ್ನು ಬಂಧಿಸಿದ್ದಾರೆ. ವಿಮಾನ ಸಂಖ್ಯೆ ಎಕೆ- 053ಯಲ್ಲಿ ಕೌಲಾಲಂಪುರದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಮಹಿಳೆಯನ್ನು ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಭಾರತೀಯ ಮೂಲದ ಮಹಿಳೆ ತಾನು ಧರಿಸಿದ್ದ ರವಿಕೆಯೊಳಗೆ ಪೇಸ್ಟ್ ರೂಪದಲ್ಲಿ ಚಿನ್ನ ಸಾಗಿಸಲು ಯತ್ನಿಸಿದ್ದರು. ಈ ವೇಳೆ ಅಧಿಕಾರಿಗಳ ಆಕೆಯನ್ನು ಬಂಧಿಸಿದ್ದಾರೆ. 17.9 ಲಕ್ಷ ರೂಪಾಯಿ ಮೌಲ್ಯದ 300.95 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ.

ಗುದನಾಳದಲ್ಲಿ ಚಿನ್ನ: ವಿಮಾನ ಸಂಖ್ಯೆ AK-053ರಲ್ಲಿ ಕೌಲಾಲಂಪುರದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಮಹಿಳೆಯನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದ್ದರು. ಮಹಿಳೆಯು ತನ್ನ ಗುದನಾಳದಲ್ಲಿ ಅಡಗಿಸಿಟ್ಟು ಪೇಸ್ಟ್ ರೂಪದಲ್ಲಿ ಚಿನ್ನ ಸಾಗಿಸುತ್ತಿದ್ದುದು ಕಂಡುಬಂದಿದೆ. 34.4 ಲಕ್ಷ ರೂಪಾಯಿ ಮೌಲ್ಯದ 578.27 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ.

ಡ್ರೈ ಫ್ರೂಟ್ಸ್​ ಪ್ಯಾಕೆಟ್​ನಲ್ಲಿ ಚಿನ್ನ: ಗಲ್ಫ್ ಏರ್ ಫ್ಲೈಟ್ GF 282 ಮೂಲಕ ಕುವೈಟ್‌ನಿಂದ ಬಂದ ಭಾರತೀಯ ಮೂಲದ ಪ್ರಯಾಣಿಕರೋರ್ವನನ್ನು ತಪಾಸಣೆ ನಡೆಸಿದ್ದಾಗ, ಡ್ರೈ ಫ್ರೂಟ್ಸ್ ಪ್ಯಾಕೇಟ್ ಚಿನ್ನದ ತುಂಡುಗಳು ಪತ್ತೆಯಾಗಿದೆ. 40 ಚಿನ್ನದ ತುಂಡುಗಳು ಸಿಕ್ಕಿದ್ದು, 254 ಗ್ರಾಂದ ತೂಕದ 15,26,565 ಮೌಲ್ಯದ ಚಿನ್ನ ವಶಕ್ಕೆ ಪಡೆಯಲಾಗಿದೆ.

ಪಾಸ್ತಾ ಮಷಿನ್​ನಲ್ಲಿ ಚಿನ್ನ: ಕಳೆದ ವಾರ, ಪಾಸ್ತಾ ತಯಾರಿಸುವ ಮಷಿನ್ ಒಳಗೆ ಅಕ್ರಮವಾಗಿ ಚಿನ್ನ ಸಾಗಿಸಲು ಯತ್ನಿಸಿದ ಕೇರಳ ಮೂಲದ ಪ್ರಯಾಣಿಕನೋರ್ವನನ್ನು ಇತ್ತೀಚೆಗೆ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಕಳೆದ ಅಕ್ಟೋಬರ್ 14ರಂದು ಇಂಡಿಗೋ ವಿಮಾನದಲ್ಲಿ ದುಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕನೋರ್ವ ಬಂದಿಳಿದಿದ್ದ. ಆತನನ್ನು ತಪಾಸಣೆ ನಡೆಸಿದಾಗ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು. ಪಾಸ್ತಾ ತಯಾರಿಸುವ ಯಂತ್ರದ ಒಳಗೆ ಚಿನ್ನದ ರಾಡ್​ಗಳನ್ನು ಬಚ್ಚಿಟ್ಟು ವ್ಯಕ್ತಿ ಚಿನ್ನ ಸಾಗಿಸುತ್ತಿದ್ದನು. ಕೇರಳದ ಕಾಸರಗೋಡಿನ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಆರೋಪಿಯಿಂದ 598 ಗ್ರಾಂ ತೂಕದ 35.38 ಲಕ್ಷ ರೂ. ಮೌಲ್ಯದ ಚಿನ್ನ ವಶಕ್ಕೆ ಪಡೆಯಲಾಗಿತ್ತು.

ಇದನ್ನೂ ಓದಿ: ಗುದನಾಳದಲ್ಲಿ ಚಿನ್ನ ಬಚ್ಚಿಟ್ಟು ಸಾಗಿಸುತ್ತಿದ್ದ ಮಹಿಳೆ.. ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಚಾಲಾಕಿ

Last Updated : Oct 22, 2023, 8:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.