ಬೆಂಗಳೂರು : ಕೂಡಲಸಂಗಮ ಪೀಠದ ಬಸವ ಜಯಮೃತ್ಯಂಜಯ ಸ್ವಾಮೀಜಿ ಅವರಿಗೆ ಬೆದರಿಕೆ ಕರೆ ಬರುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆ ಕಲ್ಪಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ. ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಅವರು ಸರ್ಕಾರದ ಮೀಸಲಾತಿ ಘೋಷಣೆಯನ್ನು ಒಪ್ಪಿಕೊಂಡಿದ್ದಕ್ಕೆ ಕೂಡಲಸಂಗಮ ಶ್ರೀಗಳಿಗೆ ಬೆದರಿಕೆ ಕರೆಗಳು ಬರುತ್ತಿವೆ. ಮೀಸಲಾತಿ ಹೋರಾಟದ ಮುಂಚೂಣಿಯಲ್ಲಿದ್ದ ಕಾಂಗ್ರೆಸ್ ನಾಯಕರಿಂದಲೇ ಬೆದರಿಕೆ ಕರೆ ಬರುತ್ತಿವೆ ಎಂದು ಸಚಿವರು ಆರೋಪ ಮಾಡಿದ್ದರು.
ಬಳಿಕ ಅರವಿಂದ್ ಬೆಲ್ಲದ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಈ ಕುರಿತು ಮಾಹಿತಿ ನೀಡಿ, ಸೂಕ್ತ ಭದ್ರತೆಯನ್ನು ಶ್ರೀಗಳಿಗೆ ಕಲ್ಪಿಸಲು ಮನವಿ ಮಾಡಿದ್ದರು. ಪ್ರತಿ ದಿನವೂ ಶ್ರೀಗಳಿಗೆ ದೂರವಾಣಿ ಕರೆಗಳು ಬರುತ್ತಿದ್ದು, ನಿಂದನಾತ್ಮಕವಾದ ಮಾತುಗಳನ್ನಾಡುತ್ತಾರೆ. ಕೆಲವರು ಕುಡಿದು ಸಹ ಮಾತನಾಡಿ ಶ್ರೀಗಳ ಮನನೋಯಿಸುತ್ತಿದ್ದಾರೆ. ಇನ್ನು ಕೆಲ ಕರೆಗಳು ಬೆದರಿಕೆ ಕರೆಗಳಾಗಿವೆ, ಹಾಗಾಗಿ ಶ್ರೀಗಳಿಗೆ ಸೂಕ್ತ ಭದ್ರತೆಯ ಅಗತ್ಯವಿದೆ ಸಿಎಂಗೆ ಮನವಿ ಮಾಡಿದರು.
ಇದೀಗಾ ಶಾಸಕರ ಅರವಿಂದ ಬೆಲ್ಲದ್ ಅವರ ಮನವಿಗೆ ಸ್ಪಂದಿಸಿದ ಸಿಎಂ ಬೊಮ್ಮಾಯಿ ಅವರು ಬೆದರಿಕೆ ಕರೆಗಳ ದಾಖಲೆ ಪರಿಶೀಲಿಸಿ ಸೂಕ್ತ ಭದ್ರತೆ ನೀಡುವಂತೆ ಪೊಲಿಸ್ ಇಲಾಖೆಗೆ ಸೂಚನೆ ನೀಡಿದರು. ಹಾಗಾಗಿ ಇನ್ನು ಮುಂದೆ ಬಸವ ಜಯಮೃತ್ಯುಂಜಯ ಶ್ರೀಗಳು ಪೊಲೀಸ್ ಭದ್ರತೆಯಲ್ಲಿ ಸಂಚಾರ ಮಾಡಲಿದ್ದಾರೆ.
ಇದನ್ನೂ ಓದಿ : ಅಪರಾಧ ಹಿನ್ನೆಲೆಯುಳ್ಳ ಅಭ್ಯರ್ಥಿಗಳ ಮೇಲೆ ಚುನಾವಣಾ ಆಯೋಗದ ಹದ್ದಿನ ಕಣ್ಣು: ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ
ಇಂದು ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಸಿಸಿ ಪಾಟೀಲ್ ಹಾಗೂ ಶಾಸಕ ಅರವಿಂದ ಬೆಲ್ಲದ್ ಅವರು, ರಾಜ್ಯ ಸರ್ಕಾರ ನೀಡಿದ 2ಡಿ ಮೀಸಲಾತಿ ಒಪ್ಪಿಕೊಂಡ ಬಸವ ಜಯಮೃತ್ಯಂಜಯ ಸ್ವಾಮೀಜಿಗೆ ಬೆದರಿಕೆ ಕರೆಗಳು ಬರುತ್ತಿದ್ದು, ಅಂದು ಮಿಸಲಾತಿ ಹೋರಾಟದಲ್ಲಿದ್ದ ಕಾಂಗ್ರೆಸ್ನ ಪ್ರಮುಖ ನಾಯಕರು ಇದೀಗಾ ಸಂಜೆ, ರಾತ್ರಿ ಎನ್ನದೇ ಕುಡಿದು ಶ್ರೀಗಳಿಗೆ ಕರೆ ಮಾಡಿ ಅಗೌರವದಿಂದ ಮಾತನಾಡಿ ಸಮಾಜಕಕ್ಕೆ ಅಗೌರವ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದರು.
ಈ ವೇಳೆ, ಕರೆ ಮಾಡಿ ಆಗೌರವ ತೊರುತ್ತಿರುವ ನಾಯಕರ ಹೆಸರು ಕೇಳಿದಾಗ, ಕರೆ ಮಾಡುತ್ತಿರುವವರ ಹೆಸರು ಪ್ರಸ್ತಾಪಿಸಲು ಹಿಂದೇಟು ಹಾಕಿದ ಸಿಸಿ ಪಾಟೀಲ್ ಹಾಗೂ ಅರವಿಂದ ಬೆಲ್ಲದ್, ಹೋರಾಟದಲ್ಲಿ ಭಾಗಿಯಾದ ಕಾಂಗ್ರೆಸ್ ಪಕ್ಷದ ನಾಯಕರು ಕರೆ ಮಾಡಿ ಕಿರುಕುಳ ಕೊಡುತ್ತಿದ್ದಾರೆ. ನಾವು ಹೆಸರು ಹೇಳಲ್ಲ , ನಿಮಗೆ ಎಲ್ಲ ಗೊತ್ತಿದೆ. ಭಾಗವಹಿಸಿದ ಮೂರು ನಾಲ್ಕು ಪ್ರಮುಖರು ಕರೆ ಮಾಡಿ ನೋಯಿಸುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದರು.
ಇದನ್ನೂ ಓದಿ : ಕಾಂಗ್ರೆಸ್ ನಾಯಕರಿಂದ ಪಂಚಮಸಾಲಿ ಶ್ರೀಗೆ ಮಾನಸಿಕ ಹಿಂಸೆ: ಬಿಜೆಪಿ ನಾಯಕರ ಆರೋಪ