ETV Bharat / state

ಹಣ ಕೊಡದಿದ್ರೆ ಅಶ್ಲೀಲವಾಗಿ ಫೋಟೋ ಎಡಿಟ್​ ಮಾಡುವ ಬೆದರಿಕೆ

ಹಣ ನೀಡಲು ಒತ್ತಾಯಿಸಿದ ಕಿಡಿಗೇಡಿ ಓರ್ವ ಯುವತಿಗೆ ಮಾನಸಿಕ ಹಿಂಸೆ ನೀಡಿದ್ದಾನೆ. ಹಣ ನೀಡದಿದ್ದರೆ ದಾಖಲೆಗಳಲ್ಲಿರುವ ಫೋಟೋವನ್ನು ಅಶ್ಲೀಲವಾಗಿ ಎಡಿಟ್​ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದ ಬೇಸತ್ತ ಯುವತಿ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾಳೆ.

ಸೈಬರ್​ ಠಾಣೆಯಲ್ಲಿ ಕೇಸು ದಾಖಲು
ಸೈಬರ್​ ಠಾಣೆಯಲ್ಲಿ ಕೇಸು ದಾಖಲು
author img

By

Published : Aug 30, 2020, 5:36 PM IST

ಬೆಂಗಳೂರು: ಸಂಕಷ್ಟದ ಸಂದರ್ಭದಲ್ಲಿ ಆ್ಯಪ್​ ಮೂಲಕ ಲೋನ್​ ಪಡೆದುಕೊಂಡ ಯುವತಿಯೋರ್ವಳಿಗೆ ಕೆಲ ಕಿಡಿಗೇಡಿಗಳು ಕಿರುಕುಳ ನೀಡಿದ್ದು, ಸದ್ಯ ಪ್ರಕರಣ ಸೈಬರ್​ ಪೊಲೀಸ್​ ಠಾಣೆ ಮೆಟ್ಟಿಲೇರಿದೆ.

ಯುವತಿಯೋರ್ವಳು ಲೋನ್​ಗಾಗಿ ಕ್ಯಾಶ್ ಬಿನ್ ಆ್ಯಪ್ ಮೂಲಕ ಅಪ್ಲೈ ಮಾಡಿದ್ದಾಳೆ. ಇನ್ನು ಆಕೆ ಖಾಸಗಿ ಬ್ಯಾಂಕ್​ವೊಂದರಲ್ಲಿ ಖಾತೆ ಹೊಂದಿದ್ದು, ಹೀಗಾಗಿ ಆ ಖಾತೆಗೆ 10,800 ರೂ. ಬಂದಿದೆ. ಇನ್ನು ಅದಕ್ಕೆ ಬಡ್ಡಿ ಎಲ್ಲಾ ಸೇರಿ ಒಟ್ಟಾರೆಯಾಗಿ ಆಕೆ 12,419 ರೂ ಮರು ಪಾವತಿ ಮಾಡಬೇಕಿತ್ತು. ಈ ವಿಚಾರ ನಡೆದು ಒಂದು ವಾರ ಕಳೆದ ಬಳಿಕ ಅಪರಿಚಿತ ನಂಬರ್​ನಿಂದ ಆಕೆಗೆ ಕರೆ ಬಂದಿದೆ. ಕರೆ ಮಾಡಿದ್ದ ವ್ಯಕ್ತಿ ಕ್ಯಾಶ್​ ಬಿನ್​ ಆ್ಯಪ್​ನಿಂದ ಪಡೆದ ಹಣವನ್ನು ಮರು ಪಾವತಿಸುವಂತೆ ತಿಳಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಆಕೆ 3,000 ರೂ. ಗಳನ್ನು ಜಮೆ ಮಾಡಿದ್ದಾಳೆ. ಆದರೆ ಮತ್ತೆ ಕರೆ ಮಾಡಿದ ಆತ ಉಳಿದ ಹಣವನ್ನು ಪಾವತಿಸುವಂತೆ ತಿಳಿಸಿದ್ದಾನೆ.

ಹಣ ಪಾವತಿ ಮಾಡದಿದ್ದರೆ ದಾಖಲೆಗಳಲ್ಲಿ ಇದ್ದ ಫೋಟೋವನ್ನು ಅಶ್ಲೀಲವಾಗಿ ಎಡಿಟ್​ ಮಾಡುವುದಾಗಿ ಎಚ್ಚರಿಕೆ ನೀಡಿದ್ದ. ಆದರೆ ಇದಕ್ಕೆಲ್ಲ ಕ್ಯಾರೇ ಎನ್ನದ ಯುವತಿ ಸುಮ್ಮನಾಗಿದ್ದಾಳೆ. ಆದರೆ ಕೆಲ ಸಮಯದ ಬಳಿಕ ಆಕೆಯ ಮೊಬೈಲ್​ಗೆ​ ಫೋಟೋ ಒಂದು ಬಂದಿದ್ದು, ಅದರಲ್ಲಿ ಆಕೆಯ ಚಿತ್ರವನ್ನು ಅಶ್ಲೀಲವಾಗಿ ಎಡಿಟ್​ ಮಾಡಲಾಗಿತ್ತು. ಇದರಿಂದ ಭಯಗೊಂಡ ಆಕೆ ಪೋಷಕರಿಗೆ ತಿಳಿಸಿದ್ದಾಳೆ. ಬಳಿಕ ಪೋಷಕರು 12 ಸಾವಿರ ರೂ.ಗಳನ್ನು ಪಾವತಿಸಿದ್ದಾರೆ.

ಸೈಬರ್​ ಠಾಣೆಯಲ್ಲಿ ಕೇಸು ದಾಖಲು
ಸೈಬರ್​ ಠಾಣೆಯಲ್ಲಿ ಕೇಸು ದಾಖಲು

ಇಷ್ಟಕ್ಕೆ ಸುಮ್ಮನಾಗದ ಆತ ಮತ್ತೆ ಮತ್ತೆ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ. ಇದರಿಂದ ಬೇಸತ್ತ ಯುವತಿ ಸೈಬರ್​ ಪೊಲೀಸರಿಗೆ ದೂರು ನೀಡಿದ್ದಾಳೆ. ಸದ್ಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.