ETV Bharat / state

ಸಂಚಾರಿ ವೈನ್ ಶಾಪ್ ತೆರೆಯಲು ಸರ್ಕಾರದ ಚಿಂತನೆ : ಹೆಚ್.ನಾಗೇಶ್ ಸುಳಿವು - ಪ್ರಗತಿ ಪರಿಶೀಲನಾ ಸಭೆ

ತಾಂಡಾಗಳು ಸೇರಿದಂತೆ ಎಲ್ಲೆಲ್ಲಿ ವೈನ್ ಶಾಪ್ ಇಲ್ಲವೋ ಅಲ್ಲಿ ಸಂಚಾರಿ ವೈನ್ ಶಾಪ್ ತೆರೆಯಲು ಚಿಂತನೆ ನಡೆಸಲಾಗಿದೆ, ಇದರಿಂದ ಆದಾಯ ಬರುತ್ತದೆ ಎಂಬುದು ಸರ್ಕಾರದ ಚಿಂತನೆ ಎಂದು ಅಬಕಾರಿ ಸಚಿವ ಹೆಚ್. ನಾಗೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಇನ್ನು, ಮಾಜಿ ಸಚಿವ ಡಿ.ಕೆ ಶಿವಕುಮಾರ್ ಇಡಿ ಬಂಧನ ವಿಚಾರ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಹೆಚ್.ನಾಗೇಶ್
author img

By

Published : Sep 4, 2019, 10:07 PM IST

ಬೆಂಗಳೂರು: ತಾಂಡಾಗಳು ಸೇರಿದಂತೆ ಎಲ್ಲೆಲ್ಲಿ ವೈನ್ ಶಾಪ್ ಇಲ್ಲವೋ ಅಲ್ಲಿ ಸಂಚಾರಿ ವೈನ್ ಶಾಪ್ ತೆರೆಯಲು ಚಿಂತನೆ ನಡೆಸಲಾಗಿದೆ, ಇದರಿಂದ ಆದಾಯ ಬರುತ್ತದೆ ಎಂಬುದು ಸರ್ಕಾರದ ಚಿಂತನೆ ಎಂದು ಅಬಕಾರಿ ಸಚಿವ ಹೆಚ್. ನಾಗೇಶ್ ತಿಳಿಸಿದರು.

ವಿಕಾಸಸೌಧದಲ್ಲಿ ಇಂದು ಅಬಕಾರಿ ಇಲಾಖೆಯ ಮೊದಲ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್. ನಾಗೇಶ್, ಮನೆ ಬಾಗಿಲಿಗೆ ಮದ್ಯ ಪೂರೈಕೆ ಮಾಡಲು ಚಿಂತನೆ ನಡೆದಿದೆ. ಕೆಲವೆಡೆ ಮದ್ಯದ ಅಂಗಡಿ ದೂರ ಇದ್ದರೆ ಇನ್ನೂ ಕೆಲವು ಕಡೆ ಮದ್ಯದ ಅಂಗಡಿಯೇ ಇರುವುದಿಲ್ಲ. ಇಂಥಾ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಯೋಚನೆ ಇದೆ. ರಾಜ್ಯದಲ್ಲಿ ಮದ್ಯಪಾನ ನಿಷೇಧ ಮಾಡುವ ಚಿಂತನೆ ಸರ್ಕಾರದ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಸಂಚಾರಿ ವೈನ್ ಶಾಪ್ ತೆರೆಯಲು ಚಿಂತನೆ : ಹೆಚ್.ನಾಗೇಶ್

ಮಹಿಳೆಯರು, ಸ್ವಾಮೀಜಿಗಳು ಒಳ್ಳೆಯ ದೃಷ್ಟಿಯಿಂದ ಮದ್ಯ ಬೇಡವೆಂದು ಹೇಳಿದ್ದಾರೆ. ಆದರೆ, ರಾಜ್ಯಕ್ಕೆ ಆದಾಯ ಬೇಕು. ಯಾರೋ ಮಹಿಳೆಯರು ಹೇಳಿದ್ರು ಅಂತ ಮದ್ಯ ನಿಷೇಧ ಮಾಡಲಾಗುವುದಿಲ್ಲ ಎಂದರು. ರಾಜ್ಯ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದು, ಕ್ವಾಲಿಟಿ ಡ್ರಿಂಕ್ಸ್ ಕೊಡಬೇಕೆನ್ನುವುದು ನಮ್ಮ ಉದ್ದೇಶ. 2018-19 ರಲ್ಲಿ 19,750 ಕೋಟಿ.ರೂ ಗುರಿ ನಿಗದಿ ಪಡಿಸಲಾಗಿತ್ತು. ಅದರಂತೆ 19,943.93 ಕೋಟಿ.ರೂ ಗುರಿಯನ್ನು ಸಾಧಿಸಲಾಗಿದೆ. 2019-20 ನೇ ಸಾಲಿನಲ್ಲಿ 20,950 ಕೋಟಿ.ರೂ ನಿಗದಿಪಡಿಸಲಾಗಿದ್ದು, 2019-20ನೇ ಸಾಲಿನ ಆಗಸ್ಟ್ ಅಂತ್ಯಕ್ಕೆ 9099.56 ಕೋಟಿ ರೂ.ಗಳ ಗುರಿಯನ್ನು ಸಾಧಿಸಲಾಗಿದೆ ಎಂದು ಹೇಳಿದರು.

ಪಾರ್ಟಿಗಳಲ್ಲಿ ಬೇರೆ ಕಡೆಯಿಂದ ಮದ್ಯ ತಂದು ಉಪಯೋಗಿಸುತ್ತಾರೆ. ಪೊಲೀಸರ ಬದಲು ಅಂತಹ ಪಾರ್ಟಿಗಳ ಮೇಲೆ ನಮ್ಮ ಅಧಿಕಾರಿಗಳು ದಾಳಿ ಮಾಡುತ್ತಾರೆ. ಗಾಂಜಾ ಮತ್ತು ಮಾದಕವಸ್ತುಗಳ ಬಳಕೆಗೆ ಕಡಿವಾಣ ಹಾಕುತ್ತೇವೆ ಎಂದರು. ಅಬಕಾರಿ ಇಲಾಖೆಯಲ್ಲಿ ಆಗಸ್ಟ್ ಅಂತ್ಯಕ್ಕೆ ದಾಳಿ ನಡೆಸಿ 4,993 ಪ್ರಕರಣಗಳನ್ನು ದಾಖಲಿಸಿದ್ದು, 3,312 ಆರೋಪಿಗಳನ್ನು ಬಂಧಿಸಲಾಗಿದೆ. 62 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, 61.32 ಲಕ್ಷ ದಂಡ ವಸೂಲಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಜೊತೆಗೆ, ಇಲಾಖೆಯಲ್ಲಿ ಶೇ.43 ರಷ್ಟು ಹುದ್ದೆಗಳು ಖಾಲಿ ಇವೆ. ಮೊದಲ ಆದ್ಯತೆ ಮೇಲೆ ಅವುಗಳನ್ನು ಭರ್ತಿ ಮಾಡುತ್ತೇವೆ. 1,205 ಹುದ್ದೆಗಳು ಕೆಪಿಎಸ್​ಸಿ ನೇಮಕಾತಿ ಹಂತದಲ್ಲಿವೆ. ಉಳಿದಿರುವ ಹುದ್ದೆಗಳನ್ನು ಒಂದು ವರ್ಷದಲ್ಲಿ ಭರ್ತಿ ಮಾಡಲಾಗುತ್ತದೆಯೆಂದು ತಿಳಿಸಿದರು. ಮದ್ಯ ಖರೀದಿಗೆ ಆಧಾರ್ ಕಾರ್ಡ್ ಕಡ್ಡಾಯವಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, ಇದನ್ನೆಲ್ಲಾ ಮಾಡುವುದಕ್ಕೆ ಆಗುತ್ತದೆಯೇ, ಇಂತಹ ಯಾವುದೇ ಪ್ರಸ್ತಾವನೆ ನಮಲ್ಲಿಲ್ಲ ಎಂದರು.

ಇನ್ನೂ, ಮಾಜಿ ಸಚಿವ ಡಿ.ಕೆ ಶಿವಕುಮಾರ್ ಇಡಿ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ನಾಗೇಶ್, ಈ ಬಗ್ಗೆ ಹೇಳಿಕೆ ಕೊಡದಂತೆ ಸಿ.ಎಂ ಯಡಿಯೂರಪ್ಪ ಮೂವರು ಸಚಿವರಿಗೆ ವಾರ್ನ್ ಮಾಡಿದ್ದಾರೆ. ಹೀಗಾಗಿ ಈ ಬಗ್ಗೆ ನಾನೇನು ಪ್ರತಿಕ್ರಿಯಿಸುವುದಿಲ್ಲವೆಂದು ಹೇಳಿದರು.

Intro:ಬೆಂಗಳೂರು : ರಾಜ್ಯದಲ್ಲಿ ಸಂಚಾರಿ ವೈನ್ ಶಾಪ್ ಗಳಿಗೆ ಸರ್ಕಾರ ಚಿಂತನೆ ನಡೆಸಿದೆ.Body:ವಿಕಾಸಸೌಧದಲ್ಲಿ ಇಂದು ಅಬಕಾರಿ ಇಲಾಖೆಯ ಮೊದಲ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅಬಕಾರಿ ಸಚಿವ ಹೆಚ್. ನಾಗೇಶ್ ಅವರು, ತಾಂಡಗಳು ಸೇರಿದಂತೆ ಎಲ್ಲೆಲ್ಲಿ ವೈನ್ ಶಾಪ್ ಗಳಿಲ್ಲವೋ ಅಲ್ಲಿ ಸಂಚಾರಿ ವೈನ್ ಶಾಪ್ ತೆರೆಯಲು ಚಿಂತನೆ ನಡೆಸಲಾಗಿದೆ. ಇದರಿಂದ ಆದಾಯ ಬರುತ್ತದೆ ಎಂಬುದು ಸರ್ಕಾರದ ಚಿಂತನೆ ಎಂದರು.
ಮನೆ ಬಾಗಿಲಿಗೆ ಮದ್ಯ ಪೂರೈಕೆ ಮಾಡಲು ಚಿಂತನೆ ನಡೆದಿದ್ದು, ಕೆಲವು ಕಡೆ ಮದ್ಯದ ಅಂಗಡಿ ದೂರ ಇರುತ್ತದೆ. ಕೆಲವು ಕಡೆ ಮದ್ಯದ ಅಂಗಡಿಯೇ ಇರುವುದಿಲ್ಲ. ಇಂಥಾ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಯೋಚನೆ ಇದೆ. ಮನೆ ಬಾಗಿಲಿಗೆ ಮದ್ಯ ಪೂರೈಸುವ ಚಿಂತನೆ ಕೂಡ ಇಲಾಖೆ ಮುಂದಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಮದ್ಯಪಾನ ನಿಷೇಧ ಮಾಡುವ ಚಿಂತನೆ ಸರ್ಕಾರದ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, ಮದ್ಯಪಾನ ನಿಷೇಧದ ಬಗ್ಗೆ ಈ ಹಿಂದೆ ಮಹಿಳೆಯರು ಪ್ರತಿಭಟನೆ ಮಾಡಿದ್ದು ನನಗೆ ಗೊತ್ತಿಲ್ಲ. ನಾನು ಬಹುಶಃ ಬಾಂಬೆಯಲ್ಲಿದ್ದೆ ಎಂದು ತಮಾಷೆಯಾಗಿ ಹೇಳಿದರು.
ಮಹಿಳೆಯರು, ಸ್ವಾಮೀಜಿಗಳು ಒಳ್ಳೆಯ ದೃಷ್ಟಿಯಿಂದ ಹೇಳಿದ್ದಾರೆ. ಆದರೆ, ರಾಜ್ಯಕ್ಕೆ ಆದಾಯ ಬೇಕು. ಯಾರೋ ಮಹಿಳೆಯರು ಹೇಳಿದ್ರು ಅಂತ ಮದ್ಯ ನಿಷೇಧ ಮಾಡಲು ಆಗಲ್ಲ ಎಂದರು.
ರಾಜ್ಯ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿದೆ. ಕ್ವಾಲಿಟಿ ಡ್ರಿಂಕ್ಸ್ ಕೊಡಬೇಕೆನ್ನುವುದು ನಮ್ಮ ಉದ್ದೇಶ. 2018-19 ರಲ್ಲಿ 19,750 ಕೋಟಿ ರೂ. ಗುರಿ ನಿಗದಿ ಪಡಿಸಲಾಗಿತ್ತು. ಅದರಂತೆ 19,943.93 ಕೋಟಿ ರೂ.ಗಳ ಗುರಿಯನ್ನು ಸಾಧಿಸಲಾಗಿದೆ. 2019-20 ನೇ ಸಾಲಿನಲ್ಲಿ 20,950 ಕೋಟಿ ರೂ.ಗಳ ನಿಗದಿಪಡಿಸಲಾಗಿದ್ದು, 2019-20 ನೇ ಸಾಲಿನ ಆಗಸ್ಟ್ ಅಂತ್ಯಕ್ಕೆ 9099.56 ಕೋಟಿ ರೂ.ಗಳ ಗುರಿಯನ್ನು ಸಾಧಿಸಲಾಗಿದೆ ಎಂದು ಹೇಳಿದರು.
ಪಾರ್ಟಿಗಳಲ್ಲಿ ಬೇರೆ ಕಡೆಯಿಂದ ಮದ್ಯೆ ತಂದು ಉಪಯೋಗಿಸುತ್ತಾರೆ. ಪೊಲೀಸರ ಬದಲು ಅಂತಹ ಪಾರ್ಟಿಗಳ ಮೇಲೆ ನಮ್ಮ ಅಧಿಕಾರಿಗಳು ದಾಳಿ ಮಾಡುತ್ತಾರೆ. ಗಾಂಜಾ ಮತ್ತು ಮಾದಕವಸ್ತುಗಳ ಬಳಕೆಗೆ ಕಡಿವಾಣ ಹಾಕುತ್ತೇವೆ ಎಂದರು.
ಅಬಕಾರಿ ಇಲಾಖೆಯಲ್ಲಿ ಆಗಸ್ಟ್ ಅಂತ್ಯಕ್ಕೆ ದಾಳಿ ನಡೆಸಿ 4993 ಪ್ರಕರಣಗಳನ್ನು ದಾಖಲಿಸಿದ್ದು, 3312 ಆರೋಪಿಗಳನ್ನು ಬಂಧಿಸಲಾಗಿದೆ. 62 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, 61.32 ಲಕ್ಷ ದಂಡ ವಸೂಲಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಶೀಘ್ರ ಭರ್ತಿ : ಇಲಾಖೆಯಲ್ಲಿ ಶೇ. 43 ರಷ್ಟು ಹುದ್ದೆಗಳು ಖಾಲಿ ಇವೆ. ಮೊದಲ ಆದ್ಯತೆ ಮೇಲೆ ಅವುಗಳನ್ನು ಭರ್ತಿ ಮಾಡುತ್ತೇವೆ. 1205 ಹುದ್ದೆಗಳು ಕೆಪಿಎಸ್ ಸಿ ನೇಮಕಾತಿ ಹಂತದಲ್ಲಿವೆ. ಉಳಿದಿರುವ ಹುದ್ದೆಗಳನ್ನು ಒಂದು ವರ್ಷದಲ್ಲಿ ಭರ್ತಿ ಮಾಡಲಾಗುತ್ತದೆ ಎಂದು ತಿಳಿಸಿದರು.
ಮದ್ಯ ಖರೀದಿಗೆ ಆಧಾರ್ ಕಡ್ಡಾಯವಲ್ಲ : ಮದ್ಯ ಖರೀದಿಗೆ ಆಧಾರ್ ಕಾರ್ಡ್ ಕಡ್ಡಾಯವಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, ಇದನ್ನೆಲ್ಲಾ ಮಾಡುವುದಕ್ಕೆ ಆಗುತ್ತದೆಯೇ. ಅದನ್ನು ಮಾಡಿದರೆ ನಮಗೆ ಆದಾಯ ಬರುತ್ತಾ. ಇಂತಹ ಯಾವುದೇ ಪ್ರಸ್ತಾವನೆ ನಮಲ್ಲಿಲ್ಲ ಎಂದರು.
ಸಿಎಂ ವಾರ್ನ್ : ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಇಡಿ ಬಂಧನ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ನಾಗೇಶ್, ಈ ಬಗ್ಗೆ ಹೇಳಿಕೆ ಕೊಡದಂತೆ ಸಿಎಂ ಯಡಿಯೂರಪ್ಪನವರು ಮೂವರು ಸಚಿವರಿಗೆ ವಾರ್ನ್ ಮಾಡಿದ್ದಾರೆ. ಹೀಗಾಗಿ ಈ ಬಗ್ಗೆ ನಾನೇನು ಹೇಳಲ್ಲ ಎಂದು ಹೇಳಿದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.