ETV Bharat / state

ಆಸ್ತಿಯ ಮುದ್ರಾಂಕ ಮತ್ತು ನೋಂದಣಿ ಶುಲ್ಕ ಕಡಿತಕ್ಕೆ ಸರ್ಕಾರ ಚಿಂತನೆ - registration fee of all assets for recovery of revenue collection

ಲಾಕ್‌ಡೌನ್ ಹಿನ್ನೆಲೆ ಎಲ್ಲರೂ ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದ್ದಾರೆ. ಹಾಗಾಗಿ ಸರ್ಕಾರ ಆಸ್ತಿ ನೋಂದಣಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಗರಿಷ್ಠ 20 ಲಕ್ಷ ರೂ. ಮೌಲ್ಯದವರೆಗಿನ ಪ್ಲಾಟ್‌ಗಳ ಮೊದಲ ನೋಂದಣಿ ಮುದ್ರಾಂಕ ಶುಲ್ಕವನ್ನು ಶೇ.5ರಿಂದ 2 ಮತ್ತು 35 ಲಕ್ಷ ರೂ. ಮೌಲ್ಯದವರೆಗಿನ ಪ್ಲಾಟ್‌ಗಳ ಮುದ್ರಾಂಕ ಶುಲ್ಕವನ್ನು ಶೇ. 5ರಿಂದ 3ಕ್ಕೆ ಇಳಿಸಲು ಚಿಂತನೆ ನಡೆಸಿದೆ.

ವಿಧಾನಸೌಧ
ವಿಧಾನಸೌಧ
author img

By

Published : Aug 16, 2020, 7:30 PM IST

Updated : Aug 16, 2020, 7:46 PM IST

ಬೆಂಗಳೂರು: ಲಾಕ್‌ಡೌನ್​​​ನಿಂದಾದ ಆರ್ಥಿಕ ಹೊರೆ ಇದೀಗ ಆಸ್ತಿ ಮಾರಾಟ ಮತ್ತು ಖರೀದಿಯ ವಹಿವಾಟನ್ನು ಕುಂಠಿತಗೊಳಿಸಿದೆ. ರಿಯಲ್ ಎಸ್ಟೇಟ್ ವಹಿವಾಟು ಕುಸಿದು ಹೋಗಿರುವುದರಿಂದ ಸರ್ಕಾರದ‌ ಆದಾಯ ಕಡಿತವಾಗುವ ಆತಂಕ ಎದುರಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಎಲ್ಲಾ ಆಸ್ತಿಗಳ ನೋಂದಣಿ ಶುಲ್ಕವನ್ನು ಕಡಿತಗೊಳಿಸುವ ಚಿಂತನೆಯಲ್ಲಿದೆ.

ಲಾಕ್‌ಡೌನ್ ಹಿನ್ನೆಲೆ ಎಲ್ಲರೂ ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದ್ದಾರೆ. ಕೈಯಲ್ಲಿ ಕಾಸಿಲ್ಲದ ಹಿನ್ನೆಲೆ ಎಲ್ಲ ವಲಯದಲ್ಲಿನ ವಹಿವಾಟು ಮಂದಗತಿಯಲ್ಲಿದೆ. ಅದರಲ್ಲೂ ರಿಯಲ್ ಎಸ್ಟೇಟ್ ವಹಿವಾಟಿಗೆ ತೀವ್ರ ಹಿನ್ನೆಡೆಯಾಗಿದೆ. ಆಸ್ತಿ, ಮನೆ, ಅಪಾರ್ಟ್​ಮೆಂಟ್ ಮಾರಾಟ, ಖರೀದಿ ವಹಿವಾಟು ನಿರೀಕ್ಷಿತ ಮಟ್ಟದಲ್ಲಿ ಚೇತರಿಕೆ ಕಾಣಲು ಇನ್ನೂ ಸಾಧ್ಯವಾಗಿಲ್ಲ.

ಆಸ್ತಿಯ ಮುದ್ರಾಂಕ ಮತ್ತು ನೋಂದಣಿ ಶುಲ್ಕ ಕಡಿತಕ್ಕೆ ಸರ್ಕಾರ ಚಿಂತನೆ

ಈಗಾಗಲೇ ಸರ್ಕಾರ ಆಸ್ತಿ ನೋಂದಣಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಗರಿಷ್ಠ 20 ಲಕ್ಷ ರೂ. ಮೌಲ್ಯದವರೆಗಿನ ಪ್ಲಾಟ್‌ಗಳ ಮೊದಲ ನೋಂದಣಿ ಮುದ್ರಾಂಕ ಶುಲ್ಕವನ್ನು ಶೇ.5 ರಿಂದ 2 ಮತ್ತು 35 ಲಕ್ಷ ರೂ. ಮೌಲ್ಯದವರೆಗಿನ ಪ್ಲಾಟ್‌ಗಳ ಮುದ್ರಾಂಕ ಶುಲ್ಕವನ್ನು ಶೇ. 5ರಿಂದ 3ಕ್ಕೆ ಇಳಿಸಲು ನಿರ್ಧರಿಸಿದೆ. ಈ ಮೂಲಕ ಬಡವರು, ಮಧ್ಯಮ ವರ್ಗಕ್ಕೆ ಅನುಕೂಲ ಮಾಡಿಕೊಟ್ಟಿದೆ.

ಎಲ್ಲ ಆಸ್ತಿಗಳ ನೋಂದಣಿ ಶುಲ್ಕ ಕಡಿತಕ್ಕೆ ಒತ್ತಡ:

ಇದೀಗ ಎಲ್ಲಾ ವಿಧದ ಆಸ್ತಿಗಳ ಮುದ್ರಾಂಕ ಹಾಗೂ ನೋಂದಣಿ ಶುಲ್ಕವನ್ನು ಕಡಿತಗೊಳಿಸುವಂತೆ ರಿಯಲ್ ಎಸ್ಟೇಟ್ ವಲಯ ಹಾಗೂ ಆಸ್ತಿ ಖರೀದಿದಾರರು ಒತ್ತಡ ಹೇರುತ್ತಿದ್ದಾರೆ.

35 ಲಕ್ಷ ಮೇಲ್ಪಟ್ಟ ಆಸ್ತಿ ಖರೀದಿಗಳ ಮೇಲಿನ ಮುದ್ರಾಂಕ ಹಾಗೂ ನೋಂದಣಿ ಶುಲ್ಕ ಇಳಿಕೆ ಮಾಡುವಂತೆ ಎಫ್​ಕೆಸಿಸಿಐ ಈಗಾಗಲೇ ಕಂದಾಯ ಇಲಾಖೆಗೆ ಪತ್ರ ಬರೆದಿದೆ. ಹಲವರು ಲಾಕ್‌ಡೌನ್​ನಿಂದ ಉಂಟಾಗಿರುವ ಆರ್ಥಿಕ ಸಂಕಷ್ಟದಿಂದ ಮನೆ ಖರೀದಿಯನ್ನು ಮುಂದೂಡಿದ್ದಾರೆ. ಒಂದು ವೇಳೆ ಮುದ್ರಾಂಕ ಹಾಗೂ ನೋಂದಣಿ ಶುಲ್ಕ ಕಡಿತಗೊಳಿಸಿದರೆ ಆಸ್ತಿ ಖರೀದಿಗೆ ಉತ್ತೇಜನ ಸಿಗಲಿದೆ ಎಂದು ಬಿಲ್ಡರ್​ಗಳು ಅಭಿಪ್ರಾಯ ಪಟ್ಟಿದ್ದಾರೆ.

ಲಾಕ್‌ಡೌನ್ ಹೇರುವ ಮುನ್ನ ಸುಮಾರು 90 ಸಾವಿರ ಆಸ್ತಿಗಳು ನೋಂದಾಣಿಗೆ ಸಿದ್ಧವಾಗಿದ್ದವು ಎನ್ನಲಾಗಿದೆ. ಲಾಕ್​ಡೌನ್ ಸಡಿಲಿಕೆ ಬಳಿಕ ಸುಮಾರು 8500 ಪ್ಲಾಟ್​​ಗಳು ನೋಂದಾಣಿಯಾಗಿವೆ ಎಂದು ಹೇಳಲಾಗಿದೆ. ನಿರೀಕ್ಷಿತ ಪ್ರಮಾಣದಲ್ಲಿ ಚೇತರಿಕೆ ಕಾಣದಿರುವುದು, ಜೊತೆಗೆ ಸರ್ಕಾರಕ್ಕೆ ನಿರೀಕ್ಷಿತ ಆದಾಯ ಬರಬೇಕಾದರೆ ಎಲ್ಲಾ ಆಸ್ತಿಗಳ ಮುದ್ರಾಂಕ ಹಾಗೂ ನೋಂದಣಿ ಶುಲ್ಕ ಶೇ.3ಕ್ಕೆ ಇಳಿಸುವುದು ಅನಿವಾರ್ಯ ಎಂದು ರಿಯಲ್ ಎಸ್ಟೇಟ್ ಉದ್ಯಮಿಗಳು ಒತ್ತಾಯಿಸಿದ್ದಾರೆ.

ಮುದ್ರಾಂಕ ಶುಲ್ಕ ಸಂಗ್ರಹದ ಸ್ಥಿತಿಗತಿ:

ಈ ಆರ್ಥಿಕ ವರ್ಷದಲ್ಲಿ 12,655 ಕೋಟಿ ರೂ. ಮುಂದ್ರಾಂಕ ಮತ್ತು ನೋಂದಣಿ ಶುಲ್ಕ ರೂಪದಲ್ಲಿ ಆದಾಯ ಸಂಗ್ರಹದ ಗುರಿ ಅಂದಾಜಿಸಲಾಗಿದೆ. ಅದರಂತೆ ಮಾಸಿಕ 1055 ಕೋಟಿ ರೂ. ಸಂಗ್ರಹಿಸಬೇಕು. ಆದರೆ ಕಂದಾಯ ಇಲಾಖೆಗೆ ನಿರೀಕ್ಷಿತ ಸಂಗ್ರಹದ ಗುರಿ ಮುಟ್ಟಲು ಸಾಧ್ಯವಾಗುತ್ತಿಲ್ಲ.

ಇಲಾಖೆ ನೀಡಿರುವ ಮಾಹಿತಿಯಂತೆ ಏಪ್ರಿಲ್​​ನಲ್ಲಿ 31 ಕೋಟಿ ರೂ. ಮುದ್ರಾಂಕ ಹಾಗೂ ನೋಂದಣಿ ಶುಲ್ಕ ಸಂಗ್ರಹವಾಗಿದ್ದರೆ, ಮೇ ತಿಂಗಳಲ್ಲಿ ರಾಜ್ಯಾದ್ಯಂತ 362 ಕೋಟಿ ರೂ. ಮುದ್ರಾಂಕ ಮತ್ತು ನೋಂದಣಿ ಶುಲ್ಕ ಸಂಗ್ರಹಿಸಲಾಗಿದೆ. ಅದೇ ಜೂನ್​​​ನಲ್ಲಿ ಶುಲ್ಕ ಸಂಗ್ರಹ 785 ಕೋಟಿ ರೂ.ಗೆ ಏರಿಕೆಯಾಗಿತ್ತು. ಜುಲೈ ತಿಂಗಳಲ್ಲಿ ಒಂದು ವಾರದ ಲಾಕ್‌ಡೌನ್ ಹಿನ್ನೆಲೆ ಶುಲ್ಕ ಸಂಗ್ರಹ 682 ಕೋಟಿ ರೂ.ಗೆ ಇಳಿಕೆ ಕಂಡಿದೆ.

ಕಳೆದ ಆರ್ಥಿಕ ವರ್ಷದಲ್ಲಿ 2019-2020ರ ಜುಲೈ ತಿಂಗಳವರೆಗೆ ಒಟ್ಟು 8,727 ಕೋಟಿ ರೂ. ಮುದ್ರಾಂಕ ಹಾಗೂ ನೋಂದಣಿ ಶುಲ್ಕ ಸಂಗ್ರಹಿಸಲಾಗಿತ್ತು. ಆದರೆ ಈ ವರ್ಷ ಜುಲೈ ವರೆಗೆ ಕೇವಲ 1,860 ಕೋಟಿ ರೂ. ಮಾತ್ರ ಸಂಗ್ರಹವಾಗಿದ್ದು, ಬರೋಬ್ಬರಿ 6,867 ಕೋಟಿ ರೂ. ಆದಾಯ ಖೋತಾ ಆಗಿದೆ.

ನೋಂದಣಿ/ಮುದ್ರಾಂಕ ಶುಲ್ಕ ಇಳಿಕೆಗೆ ಚಿಂತನೆ:

ಇತ್ತ ರಿಯಲ್ ಎಸ್ಟೇಟ್ ವಹಿವಾಟು ನಿರೀಕ್ಷಿತ ಮಟ್ಟದಲ್ಲಿ ಚೇತರಿಕೆ ಕಾಣದ ಹಿನ್ನೆಲೆ ಹಾಗೂ ಹೆಚ್ಚಿನ ಆದಾಯ ಸಂಗ್ರಹದ ನಿಟ್ಟಿನಲ್ಲಿ ಕಂದಾಯ ಇಲಾಖೆ ಎಲ್ಲಾ ರೀತಿಯ ಆಸ್ತಿಗಳ ನೋಂದಣಿ ಶುಲ್ಕ ಕಡಿತಕ್ಕೆ ಚಿಂತನೆ ನಡೆಸುತ್ತಿದೆ.

ಈ ಸಂಬಂಧ ಕಂದಾಯ ಇಲಾಖೆ ಸಮಾಲೋಚನೆ ನಡೆಸಿದ್ದು, ಆಸ್ತಿಗಳ ಖರೀದಿ ವಹಿವಾಟನ್ನು ಉತ್ತೇಜಿಸಿ, ಆದಾಯ ಸಂಗ್ರಹ ಹೆಚ್ಚಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಆಯ್ಕೆಗಳನ್ನು ಪರಿಗಣಿಸಲಾಗುತ್ತಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೊಂದೆಡೆ ಹಲವೆಡೆ ಅಪಾರ್ಟ್ಮೆಂಟ್, ನಿವೇಶನ ಮೌಲ್ಯಗಳು ಕುಸಿತ ಕಾಣುತ್ತಿವೆ. ಲಾಕ್​ಡೌನ್ ಬಳಿಕ ಹಲವೆಡೆ ಆಸ್ತಿಗಳ ಮಾರುಕಟ್ಟೆ ದರ ಕುಸಿತ ಕಾಣುತ್ತಿದೆ. ಈ ಹಿನ್ನೆಲೆ ಎಲ್ಲಿ ಮಾರುಕಟ್ಟೆ ಬೆಲೆ ಮಾರ್ಗಸೂಚಿ ದರಕ್ಕಿಂತ ಕಡಿಮೆಯಾಗಿದೆ, ಆ ಪ್ರದೇಶಗಳಲ್ಲಿ ಎಲ್ಲಾ ಆಸ್ತಿಗಳ ಮೇಲಿನ ಮುದ್ರಾಂಕ ಹಾಗೂ ನೋಂದಣಿ ಶುಲ್ಕ ಕಡಿತಗೊಳಿಸಲು ಚಿಂತನೆ ನಡೆಸುತ್ತಿದ್ದೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

Last Updated : Aug 16, 2020, 7:46 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.