ETV Bharat / state

ಸಾವರ್ಕರ್​ ಯಾರು ಎಂದವರು ಭವಿಷ್ಯದಲ್ಲಿ ಕಸದ ಬುಟ್ಟಿಗೆ ಸೇರುತ್ತಾರೆ: ಬಿ.ಎಲ್. ಸಂತೋಷ್ - DCM caramel

ಬಲಿ ಚಕ್ರವರ್ತಿ ಬಳಿಕ ಅತಿ ಹೆಚ್ಚು ಭೂದಾನ ಮಾಡಿದವರು ಕಾಂಗ್ರೆಸ್. ಚೀನಾಕ್ಕೆ ಭೂದಾನ ಮಾಡಿದ್ದರು. ಸಾವರ್ಕರ್ ಯಾರು ಎಂದು ಪ್ರಶ್ನೆ ಮಾಡುವ ನೈತಿಕತೆ ಕಾಂಗ್ರೆಸ್​​ಗೆ ಇಲ್ಲ ಎಂದು ಸಂತೋಷ್​​​ ಕಿಡಿಕಾರಿದರು. ಅಲ್ಲದೆ ದೇಶದ ವಸ್ತುಗಳನ್ನು, ದೇಶದ ವ್ಯಕ್ತಿಗಳನ್ನು ಗೌರವಿಸಬೇಕು ಅದೇ ಆತ್ಮನಿರ್ಭರ್ ಎಂದರು.

Those who question about savarkar they will go trash in Future: BL Santhosh
ಸಾವರ್ಕರ್​ ಯಾರು ಅಂತ ಪ್ರಶ್ನೆ ಮಾಡಿದವರು ಭವಿಷ್ಯದಲ್ಲಿ ಕಸದ ಬುಟ್ಟಿಗೆ ಸೇರುತ್ತಾರೆ: ಬಿ.ಎಲ್.ಸಂತೋಷ್
author img

By

Published : Jul 7, 2020, 12:09 AM IST

ಬೆಂಗಳೂರು: ವ್ಯಕ್ತಿ ವಿದೇಶಿ, ಪಕ್ಷ ವಿದೇಶಿ, ಅರ್ಧ ಜನ ವಿದೇಶಿ, ಅಂಥವರು ಮಾತ್ರ ಸಾವರ್ಕರ್ ಯಾರು ಎಂದು ಕೇಳುತ್ತಾರೆ. ಮುಂದೊಂದು ದಿನ ಕಾಂಗ್ರೆಸ್ ಕಸದ ಬುಟ್ಟಿಗೆ ಸೇರುತ್ತದೆ. ಮೋದಿಯವರ ಆಳ ವಿಸ್ತಾರ ಅರಿಯದವರು, ಅವರನ್ನು ಅರ್ಥ ಮಾಡಿಕೊಳ್ಳಲು ಇವರಿಗೆ ಸಾಧ್ಯವೇ ಇಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವಾಗ್ದಾಳಿ ನಡೆಸಿದರು.

ಮೋದಿ ಸರ್ಕಾರದ 2.0 ಮೊದಲ ವರ್ಷದ ಸಾಧನೆಯನ್ನು ಜನರಿಗೆ ತಲುಪಿಸಲು ಆಯೋಜನೆ ಮಾಡಲಾಗಿದ್ದ ಕರ್ನಾಟಕ ಜನ ಸಂಪರ್ಕ ರ್ಯಾಲಿಯ ಸಮಾರೋಪ ಸಮಾರಂಭದಲ್ಲಿ ದೆಹಲಿಯಿಂದ ವೀಡಿಯೋ ಮೂಲಕ ಭಾಗಿಯಾಗಿ ಬಿ.ಎಲ್. ಸಂತೋಷ್ ಭಾಷಣ ಮಾಡಿದರು.

ಕೊರೊನಾ ಸಂಕಷ್ಟದ ಕಾಲದಲ್ಲಿ ನಾವೆಲ್ಲ ಇದ್ದೇವೆ. ಒಂದು ಪಕ್ಷದ ಕಾರ್ಯಕರ್ತರಾಗಿ ನಾವು ಕೇವಲ ಪಕ್ಷದ ಕೆಲಸ, ರಾಜಕೀಯ ಕೆಲಸಕ್ಕೆ ಸೀಮಿತವಾಗಬಾರದು. ಸಾಮಾನ್ಯ ಜನರ ತಲ್ಲಣ, ನೋವುಗಳನ್ನು ಕಡಿಮೆ ಮಾಡಲು ಪ್ರಯತ್ನಿಸಬೇಕು ಎಂದರು.

ಕರ್ನಾಟಕದಲ್ಲಿ ಕೊರೊನಾ ಹೆಚ್ಚಾಗುತ್ತಿರಬಹುದು. ಆದರೆ ರಾಜ್ಯದಲ್ಲಿ ಆರಂಭದಲ್ಲಿ ಹೆಚ್ಚು ಕಾಣಿಸಿಕೊಂಡ ಪ್ರದೇಶಗಳಲ್ಲಿ ಸೋಂಕು ಕಡಿಮೆಯಾಗುತ್ತಿದೆ ಎಂದರು. ಜಗತ್ತಿನ ಅನೇಕ ವೈದ್ಯರು ಫೇಸ್ ಕವರ್, ಮಾಸ್ಕ್ ಅಗತ್ಯ ಇಲ್ಲ ಅಂದರು. ಆದರೆ ನಮ್ಮ ಪ್ರಧಾನಿ ನಮಗೆಲ್ಲ ಫೇಸ್ ಕವರ್, ಮಾಸ್ಕ್ ಅಗತ್ಯ ಇದೆ ಅಂದರು. ಈಗ ಆ ವಿಜ್ಞಾನಿಗಳೂ, ವೈದ್ಯರೂ ಫೇಸ್ ಕವರ್, ಮಾಸ್ಕ್ ಅಗತ್ಯ ಅಂತಿದ್ದಾರೆ.

ಕೊರೊನಾ ಬಗ್ಗೆ ಸಮೂಹ ಸನ್ನಿ, ಸಾಮೂಹಿಕ ಉದ್ವೇಗ ಹೆಚ್ಚಿಸುವ ಪ್ರಯತ್ನಗಳು ನಡೀತಿವೆ. ಈಗಾಗಲೇ ಶೇ.40ರಷ್ಟು ಜನ ಕೊರೊನಾದಿಂದ ಗುಣಮುಖರಾಗಿದ್ದಾರೆ ವೈಯಕ್ತಿಕ ಎಚ್ಚರಿಕೆಗಳನ್ನು ಕೈಗೊಳ್ಳುವ ಮೂಲಕ ಕೊರೊನಾ ಎದುರಿಸಬೇಕಿದೆ ಎಂದರು.

39 ಕೋಟಿ ಬ್ಯಾಂಕ್ ಖಾತೆಗಳಿಗೆ 65 ಸಾವಿರ ಕೋಟಿ ರೂ. ಪರಿಹಾರದ ಹಣ ಜಮೆ ಮಾಡಲಾಗಿದೆ. ಮಧ್ಯವರ್ತಿಗಳಿಲ್ಲದೇ, ಯಾವುದೇ ಭ್ರಷ್ಟಾಚಾರ ಇಲ್ಲದೇ ಪರಿಹಾರ ಕೊಡಲಾಗಿದೆ.
ಪ್ರತಿಯೊಬ್ಬರ ಮನೆಗೆ ವಿದ್ಯುತ್, ಗ್ಯಾಸ್ ಕಲ್ಪನೆ ತಂದವರು ಮೋದಿ. ರಾಜಕೀಯ ನಾಯಕನಿಗೆ ಚುನಾವಣೆ ಒಂದೇ ಉದ್ದೇಶ ಅಲ್ಲ, ಚುನಾವಣೆ ಒಂದು ಸಾಧನ. ಆರ್ಥಿಕ ಸಮಸ್ಯೆ ಪುಟಿದೆದ್ದು ವಿ ಶೇಪ್ ನಲ್ಲಿ ಬರ್ತಾ ಇದೆ, ಗೊಬ್ಬರದ ಬೇಡಿಕೆ ಈ ವರ್ಷ ಹೆಚ್ಚಿದೆ, ಇದು ಆರ್ಥಿಕ ದೃಷ್ಟಿಯಿಂದ ಉತ್ತಮ ಬೆಳವಣಿಗೆ. ಆತ್ಮ ನಿರ್ಭರ್ ಕಲ್ಪನೆ ಚಿಕ್ಕದಲ್ಲ ನಮ್ಮ ದೇಶದ ವಸ್ತುಗಳನ್ನು ಗ್ಲೋಬಲ್ ಬ್ರಾಂಡ್ ಮಾಡಬೇಕು. ಬೆಂಗಳೂರು ಮೈಸೂರು ದೊಡ್ಡ ಮಾರುಕಟ್ಟೆ ಆಗಬೇಕು ಎಂದರು.

ಬಲಿ ಚಕ್ರವರ್ತಿ ಬಳಿಕ ಅತಿ ಹೆಚ್ಚು ಭೂದಾನ ಮಾಡಿದವರು ಕಾಂಗ್ರೆಸ್. ಚೀನಾಕ್ಕೆ ಭೂದಾನ ಮಾಡಿದ್ದರು. ಸಾವರ್ಕರ್ ಯಾರು ಎಂದು ಪ್ರಶ್ನೆ ಮಾಡುವ ನೈತಿಕತೆ ಕಾಂಗ್ರೆಸ್​​ಗೆ ಇಲ್ಲ. ದೇಶದ ವಸ್ತುಗಳನ್ನು, ದೇಶದ ವ್ಯಕ್ತಿಗಳನ್ನು ಗೌರವಿಸಬೇಕು.. ಅದೇ ಆತ್ಮನಿರ್ಭರ್.

ಮಲ್ಲೇಶ್ವರನಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಿಂದ ಬಿಜೆಪಿ‌ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಡಿಸಿಎಂ ಗೋವಿಂದ ಕಾರಜೋಳ ಸಮಾರೋಪ ಸಮಾರಂಭದಲ್ಲಿ ಭಾಗಿಯಾದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.