ಬೆಂಗಳೂರು: ಬಿಬಿಎಂಪಿ ಬಜೆಟ್ ಬಹುತೇಕ ಅಂತಿಮಗೊಂಡಿದ್ದು, ಮಾರ್ಚ್ 26ರ ಶುಕ್ರವಾರ ಆಯವ್ಯಯ ಮಂಡನೆಯಾಗುವ ಸಾಧ್ಯತೆ ಇದೆ.
ಆದರೆ ಅಧಿಕಾರಿಗಳ ಹಂತದಲ್ಲೇ ಮಾತುಕತೆ ನಡೆಯುತ್ತಿದ್ದು, ಅಂತಿಮ ದಿನಾಂಕ ಘೋಷಣೆ ಬಾಕಿ ಉಳಿದಿದೆ. ರಾಜ್ಯ ಬಜೆಟ್ ಅನುದಾನ ಹಾಗೂ ಪಾಲಿಕೆ ಆರ್ಥಿಕ ಸ್ಥಿತಿ ಆಧರಿಸಿ 8 ಸಾವಿರ ಕೋಟಿ ರೂ. ಅಂದಾಜಿನ ಬಜೆಟ್ ಮಂಡನೆಯಾಗಲಿದೆ ಎಂಬ ಮಾಹಿತಿ ಇದೆ.
ಪಾಲಿಕೆ ಹಣಕಾಸು ವಿಭಾಗದ ವಿಶೇಷ ಆಯುಕ್ತರಾದ ತುಳಸಿ ಮದ್ದಿನೇನಿ ಬಜೆಟ್ ಪುಸ್ತಕದ ಸಿದ್ಧತೆ ನಡೆಸಿದ್ದಾರೆ. ಜನಪ್ರತಿನಿಧಿಗಳು ಅಧಿಕಾರದಲ್ಲಿ ಇಲ್ಲದಿರುವ ಕಾರಣ ಆಡಳಿತಗಾರರಾದ ಗೌರವ್ ಗುಪ್ತಾ ಬಜೆಟ್ ಮಂಡಿಸಲಿದ್ದಾರೆ.