ETV Bharat / state

ಪೀಣ್ಯ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ 100 ಕೋಟಿ ನೀಡಿದ್ದು ಸ್ವಾಗತಾರ್ಹ; ಎಫ್​​ಕೆಸಿಸಿಐ - This budget of the state government

ಥೀಮ್ ಪಾರ್ಕ್, ಫುಡ್, ಸಾರಿಗೆ, ಸಬರ್ಬನ್ ರೈಲ್ವೆ, ಫುಟ್ ಪಾತ್ ಸೇರಿದಂತೆ ಹಲವು ಕಡೆ ಒತ್ತು ನೀಡಿದ್ದಾರೆ. ಇಂಡಸ್ಟ್ರಿಯಲ್ ಬೆಳವಣಿಗೆಗೆ ಒತ್ತು ಕೊಟ್ಟಿದ್ದಾರೆ. ಟೆಕ್ಸ್​ಟೈಲ್​ ಪಾರ್ಕ್, ಹಾಸನ ಏರ್ ಪೋರ್ಟ್​ಗಳಿಂದ ಎಕ್ಸಪೋರ್ಟ್​ಗೆ ಉತ್ತೇಜನ ಸಿಗಲಿದೆ ಎಂದು ಎಫ್​ಕೆಸಿಸಿಐ ಅಧ್ಯಕ್ಷರು ಹೇಳಿದ್ದಾರೆ.

ಎಂ.ಸುಂದರ್
ಎಂ.ಸುಂದರ್
author img

By

Published : Mar 8, 2021, 10:04 PM IST

ಬೆಂಗಳೂರು : ಇಂದು ರಾಜ್ಯ ಬಜೆಟ್ ಮಂಡನೆಯಾಗಿದ್ದು ಕಳೆದ ಬಾರಿಯಷ್ಟು ದೊಡ್ಡ ಬಜೆಟ್ ಅಲ್ಲದಿದ್ರು, ಕೋವಿಡ್ ನಡುವೆ ಸಾಧಾರಣ ಆಯವ್ಯಯ ಪ್ಲಾನ್ ಆಗಿದೆ ಎಂದು ಎಫ್​ಕೆಸಿಸಿಐ ಅಧ್ಯಕ್ಷ ಪೆರಿಕಲ್ ಎಂ. ಸುಂದರಮ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಈ ಬಜೆಟ್ ಸಮತೋಲನವಾಗಿದೆ. ಕೋವಿಡ್ ಕಷ್ಟದ ಕಾಲದಲ್ಲೂ ಎಲ್ಲಾ ಕ್ಷೇತ್ರಗಳನ್ನು ಪರಿಗಣಿಸಿದ್ದು ಒಳ್ಳೆಯ ಬೆಳವಣಿಗೆ. ಹೊಸ ತೆರಿಗೆಗಳನ್ನು ಹೇರದೆ ಇರೋದನ್ನು ಸ್ವಾಗತಿಸುತ್ತೇವೆ ಎಂದು ಹೇಳಿದರು.

ಥೀಮ್ ಪಾರ್ಕ್, ಫುಡ್, ಸಾರಿಗೆ, ಸಬರ್ಬನ್ ರೈಲ್ವೆ, ಫುಟ್ ಪಾತ್ ಸೇರಿದಂತೆ ಹಲವು ಕಡೆ ಒತ್ತು ನೀಡಿದ್ದಾರೆ. ಇಂಡಸ್ಟ್ರಿಯಲ್ ಬೆಳವಣಿಗೆಗೆ ಒತ್ತು ಕೊಟ್ಟಿದ್ದಾರೆ. ಟೆಕ್ಸ್​ಟೈಲ್​ ಪಾರ್ಕ್, ಹಾಸನ ಏರ್ ಪೋರ್ಟ್​ಗಳಿಂದ ಎಕ್ಸಪೋರ್ಟ್​ಗೆ ಉತ್ತೇಜನ ಸಿಗಲಿದೆ ಎಂದು ಅಭಿಪ್ರಾಯಪಟ್ಟರು.

ಬಜೆಟ್​ ಕುರಿತು ಮಾತನಾಡಿದ ಎಫ್.ಕೆ.ಸಿ.ಸಿ.ಐ ಅಧ್ಯಕ್ಷ ಪೆರಿಕಲ್ ಎಂ.ಸುಂದರ್

ಇಂಡಸ್ಟ್ರಿಯಲ್ ಟ್ಯಾಕ್ಸ್ ಬಗ್ಗೆ ಹೊಸ ಯೋಜನೆ ಘೋಷಿಸೋದಾಗಿ ಹೇಳಿರೋದು ಸ್ವಾಗತ. ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಒತ್ತು ನೀಡುವಂತೆ ಹತ್ತಾರು ವರ್ಷದಿಂದ ಕೇಳುತ್ತಿದ್ದೆವು. ಈಗ 100 ಕೋಟಿ ರೂ. ನೀಡುವುದಾಗಿ ಹೇಳಿರೋದು ಕೈಗಾರಿಕೆಗೆ ಉತ್ತೇಜನ ಸಿಗುತ್ತೆ ಎಂದು ತಿಳಿಸಿದರು.

ಪ್ರತಿ 50 ಕಿ. ಮೀಟರ್ ಅಂತರದಲ್ಲಿ ಚಾರ್ಜಿಂಗ್ ಪಾಯಿಂಟ್ ಮಾಡುವಂತೆ ಎಫ್​ಕೆಸಿಸಿಐ ಕೋರಿತ್ತು, ಸರ್ಕಾರ ಈಗ ನಮ್ಮ ಮನವಿ ಪರಿಗಣಿಸಿ 1000 ಚಾರ್ಜಿಂಗ್ ಪಾಯಿಂಟ್ ಘೋಷಣೆ‌‌ ಮಾಡಿದೆ ಎಂದರು.

71,332 ಸಾವಿರ ಕೋಟಿ ರೂ. ಸಾಲ ತೋರಿಸಿ ಬಜೆಟ್ ಘೋಷಣೆ ಮಾಡಿದ್ದು ಅಷ್ಟು ಒಳ್ಳೆಯ ಬೆಳವಣಿಗೆಯಲ್ಲ. ಎ.ಪಿ.ಎಂ.ಸಿ ಸೆಸ್ ಬಗ್ಗೆ ಬಜೆಟ್​ನಲ್ಲಿ ಘೋಷಣೆ ‌ಮಾಡಿಲ್ಲ, ಇಂತಹ‌ ಧೋರಣೆಯಿಂದ ಎ.ಪಿ.ಎಂ.ಸಿ‌ ಮುಚ್ಚೋ ಹಂತಕ್ಕೆ ಬರುತ್ತದೆ. ಇದೊಂದು ಸಾಧಾರಣ ಉತ್ತಮ‌ ಬಜೆಟ್ ಅಷ್ಟೇ ಎಂದರು.

ಬಜೆಟ್ ಬಗ್ಗೆ ಅಂಗನವಾಡಿ, ಸಾರಿಗೆ, ರೈತ ಮುಖಂಡರು ಏನಂತಾರೆ?
ಬೆಲೆಯೇರಿಕೆಯ ದಿನಗಳಲ್ಲಿ, ಗೌರವ ಧನವನ್ನೂ ಹೆಚ್ಚಳ ಮಾಡದೆ, ಇತರ ಯಾವುದೇ ಬೇಡಿಕೆಗಳನ್ನು ಈಡೇರಿಸದೆ, ರಾಜ್ಯದ 1.25 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು- ಸಹಾಯಕಿಯರಿಗೆ ನಿರಾಸೆಯಾಗಿದೆ. ಬೃಹತ್ ಪ್ರತಿಭಟನೆಗಳನ್ನು ನಡೆಸಿದಾಗ, ಬೇಡಿಕೆ ಈಡೇರಿಸುವುದಾಗಿ ಭರವಸೆ ಕೊಟ್ಟಿದ್ರೂ, ಇದನ್ನು ಸರ್ಕಾರ ಹುಸಿಗೊಳಿಸಿದೆ ಎಂದು ಎಐಯುಟಿಯುಸಿ ಗೆ ಸಂಯೋಜಿತವಾದ ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘದ ರಾಜ್ಯ ಅಧ್ಯಕ್ಷ ಕೆ. ಸೋಮಶೇಖರ್ ಹೇಳಿದರು.

ಕರ್ನಾಟಕ ರಾಜ್ಯ ಟ್ರಾವೆಲ್ ಮಾಲೀಕರ ಸಂಘದ ರಾಧಾಕೃಷ್ಣ ಹೊಳ್ಳ ಮಾತನಾಡಿ, ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗಾಗಿ 500 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಕರಾವಳಿ ಭಾಗದಲ್ಲಿ ಪ್ರವಾಸೋಧ್ಯಮ ಅಭಿವೃದ್ಧಿಗೆ ಕೆಲ ಜಾಗ ಗುರುತಿಸಿದ್ದಾರೆ. ಬಹಳ ವರ್ಷಗಳ ಮೇಲೆ ಉತ್ತೇಜನ ನೀಡುವ ಕೆಲಸ ಮಾಡಿದ್ದಾರೆ. ಆದರೆ ಪ್ರವಾಸೋದ್ಯಮದ ಇನ್ನೊಂದು ವಿಭಾಗವಾದ ಸಾರಿಗೆ ಕ್ಷೇತ್ರಕ್ಕೆ, ಕೊರೊನಾ ಸಮಯದಲ್ಲಿ ಸೋತು ಹೋಗಿರುವವರಿಗೆ ತೆರಿಗೆ ವಿನಾಯಿತಿ ಅಥವಾ ಪೆಟ್ರೋಲ್-ಡೀಸೆಲ್ ಬೆಲೆಯನ್ನೂ ಹಿಂದಕ್ಕೆ ಪಡೆದಿಲ್ಲ. ದೇಶದ ಏಳು ರಾಜ್ಯದಲ್ಲಿ ತೆರಿಗೆ ಹಿಂದಕ್ಕೆ ಪಡೆದಿದ್ದರೂ, ನಮ್ಮ ರಾಜ್ಯದಲ್ಲಿ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯ ಕಬ್ಬು ಹೋರಾಟಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ನಗರ ಪ್ರದೇಶಕ್ಕೆ ಹೆಚ್ಚಿನ ಆದ್ಯತೆ ಕೊಟ್ಟು ಕೃಷಿ ಕ್ಷೇತ್ರಕ್ಕೆ ನಿರ್ಲಕ್ಷ್ಯ ಮಾಡಿದ್ದಾರೆ. ಜಾತಿ ಸಮುದಾಯಗಳ ಓಲೈಕೆ ಮಾಡಿ, ಕೃಷಿ ಉತ್ಪನ್ನಗಳ ಖರೀದಿಗೆ ಬೇಕಾದ ಕನಿಷ್ಠ ಬೆಂಬಲ ಬೆಲೆಯನ್ನೂ, ಆವರ್ತ ನಿಧಿಯನ್ನೂ ಕಾಯ್ದಿರಿಸಿಲ್ಲ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.