ETV Bharat / state

ದಿಕ್ಕು, ಗುರಿ, ಅಭಿವೃದ್ಧಿ ಪರವಲ್ಲದ, ಅತ್ಯಂತ ನಿರಾಶಾದಾಯಕ ಬಜೆಟ್: ಸಿದ್ದರಾಮಯ್ಯ

ಬಜೆಟ್ ಪಾರದರ್ಶಕವಾಗಿಲ್ಲ. ಆಯವ್ಯಯ ಇಲಾಖೆವಾರು ಅರಿವಾಗುತ್ತಿಲ್ಲ. ಖರ್ಚು, ವೆಚ್ಚದ ವಿವರ ಇಲ್ಲವಾಗಿದೆ. ರೈತರಿಗೆ ಅನ್ಯಾಯ ಮಾಡುವ ಬಜೆಟ್ ಆಗಿದೆ. ದಿಕ್ಕು, ಗುರಿ ಹಾಗೂ ಅಭಿವೃದ್ಧಿ ಪರ ಬಜೆಟ್ ಅಲ್ಲ. ಅತ್ಯಂತ ನಿರಾಶಾದಾಯಕ ಬಜೆಟ್ ಇದು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

Siddaramaiah
ಸಿದ್ದರಾಮಯ್ಯ
author img

By

Published : Mar 4, 2022, 7:07 PM IST

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮಂಡಿಸಿರುವುದು​​​ ಯಾವುದೇ ಮುಂದಾಲೋಚನೆ, ಭವಿಷ್ಯ ಇಲ್ಲದ ಬಜೆಟ್ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬಜೆಟ್ ಪಾರದರ್ಶಕವಾಗಿಲ್ಲ. ಆಯವ್ಯಯ ಇಲಾಖೆವಾರು ಅರಿವಾಗುತ್ತಿಲ್ಲ. ಖರ್ಚು, ವೆಚ್ಚದ ವಿವರ ಇಲ್ಲವಾಗಿದೆ. ಇಲಾಖೆವಾರು ಇದ್ದ ಬಜೆಟ್, ವಿಭಾಗವಾರು ಮಾಡಿ ಗೊಂದಲ ಮೂಡಿಸಿದ್ದಾರೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ತಂದ ವಿಭಾಗವಾರು ಬಜೆಟ್ ಮಂಡನೆಯನ್ನು ಮುಂದುವರಿಸಿದ್ದಾರೆ. ಬಸವರಾಜ ಬೊಮ್ಮಾಯಿ ಐದು ಸೂತ್ರ ಮುಂದಿಟ್ಟು ಬಜೆಟ್ ಮಂಡಿಸಿದ್ದಾಗಿ ಹೇಳಿದ್ದಾರೆ. ಹೊಸ ಚಿಂತನೆ, ಚೈತನ್ಯ, ಮುನ್ನೋಟದಿಂದಾಗಿ ನವಭಾರತಕ್ಕಾಗಿ ನವ ಕರ್ನಾಟಕ ನಿರ್ಮಿಸುತ್ತೇವೆ ಎಂದಿದ್ದಾರೆ.

ಅಭಿವೃದ್ಧಿ ಸೂತ್ರಗಳನ್ನು ಇವರು ವಿವರಿಸಿದ್ದು ವ್ಯರ್ಥ. ಬಿಜೆಪಿ ಅಧಿಕಾರಕ್ಕೆ ಬಂದಿದ್ದರ ಸಾಧನೆ ಎಂದರೆ, ರಾಜ್ಯದ ಸಾಲ ಹೆಚ್ಚಿಸಿರುವುದು ಮಾತ್ರ. ನನ್ನ ಅವಧಿಯಲ್ಲಿ ಇದ್ದಂತ ಸಾಲ 2 ಲಕ್ಷ 48 ಸಾವಿರ ಕೋಟಿ ರೂ. ಮುಂದಿನ ಮಾರ್ಚ್​ಗೆ 5 ಲಕ್ಷ 14 ಸಾವಿರ ಕೋಟಿ ರೂ.ಗೆ ಮೊತ್ತ ಏರಲಿದೆ. 29 ಸಾವಿರ ಕೋಟಿ ರೂ.ಗಿಂತ ಹೆಚ್ಚು ಮೊತ್ತದ ಬಡ್ಡಿ ಕಟ್ಟಬೇಕಾಗುತ್ತದೆ. ಬಜೆಟ್ ಗಾತ್ರ 2.63 ಲಕ್ಷ ಕೋಟಿ ಆಗಿದೆ. ಇವರ ಅವಧಿಯಲ್ಲಿ ಸಾಲ ಯದ್ವಾತದ್ವಾ ಏರಿಕೆ ಆಗಿದೆ. ನಾಲ್ಕು ವರ್ಷದಲ್ಲಿ 2 ಲಕ್ಷ, 46 ಸಾವಿರ ಕೋಟಿ ರೂ. ಸಾಲ ಹೆಚ್ಚಿಸಲಾಗಿದೆ. ನಾನು ಅಧಿಕಾರದಲ್ಲಿದ್ದ ಸಂದರ್ಭ ಐದೂ ವರ್ಷ ಆರ್ಥಿಕ ಸಮತೋಲನ ಇತ್ತು. ಈಗ ಸಂಪೂರ್ಣ ವಿರುದ್ಧವಾಗಿದೆ. ಇದೊಂದು ಹೇಡಿ ಸರ್ಕಾರ. ಕೇಂದ್ರದಿಂದ ಜಿಎಸ್​​ಸ್ಟಿ ಪಾಲು ಸಿಗದಿದ್ದರೆ ಬಹಳ ಕಷ್ಟವಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ನೀರಾವರಿಗೆ 1.5 ಲಕ್ಷ ಕೋಟಿ ಹಣ ಮೀಸಲಿಡುತ್ತೇನೆ ಎಂದಿದ್ದರು. ಆದರೆ ಇದುವರೆಗೆ 40 ಸಾವಿರ ಕೋಟಿ ರೂ. ನೀಡಿದ್ದು, ಈಗ 20 ಸಾವಿರ ಕೋಟಿ ಘೋಷಿಸಿದ್ದಾರೆ. ಇವರು ಹೇಳುವುದು ಒಂದು ಮಾಡುವುದು ಇನ್ನೊಂದು. ಇವರು ಉತ್ತರ ಕರ್ನಾಟಕ, ಕೃಷ್ಣಾ ಮೇಲ್ದಂಡೆ ಹೆಸರನ್ನು ಪ್ರಸ್ತಾಪಿಸುತ್ತಾರೆ. ಕಾಳಜಿ ಇಲ್ಲ. ಜನರಿಗೆ ಟೋಪಿ ಹಾಕುವ ಕೆಲಸ ಮಾಡುತ್ತಾರೆ. ಬಸವರಾಜ್ ಬೊಮ್ಮಾಯಿಯವರ ಬಡಾಯಿ ಬಜೆಟ್ ಇದು ಎಂದರು.

ಇದನ್ನೂ ಓದಿ: ಮತ್ತೆ ರಾಜಸ್ವ ಕೊರತೆಯ ಬಜೆಟ್ ಮಂಡನೆ; ಆದಾಯ ಸಂಗ್ರಹದ ಬೊಮ್ಮಾಯಿ ಲೆಕ್ಕಾಚಾರ ಹೇಗಿದೆ?

ಮೇಕೆದಾಟು ಯೋಜನೆಗೆ 1 ಸಾವಿರ ಕೋಟಿ ರೂ. ನೀಡಲಾಗಿದೆ. ಆದರೆ ಪರಿಸರ ಇಲಾಖೆ ಪರವಾನಗಿ ಪಡೆಯಲು ವಿಫಲವಾಗಿದ್ದು, ಎರಡೂವರೆ ವರ್ಷ ವ್ಯರ್ಥ ಮಾಡಿದೆ. ಇದೀಗ ಯೋಜನೆಗೆ 1,000 ಕೋಟಿ ಹಣ ಕೊಟ್ಟು ಪ್ರಯೋಜನ ಏನು? ಕೆಲ ಇಲಾಖೆಗೆ ನಾವು ಮೀಸಲಿಟ್ಟಿದ್ದಕ್ಕಿಂತ ಕಡಿಮೆ ಹಣ ಇಟ್ಟಿದ್ದಾರೆ. ಮಹಿಳೆ, ಎಸ್​ಸಿ ಎಸ್​ಸ್ಟಿ, ವಸತಿ, ನಗರಾಭಿವೃದ್ಧಿಗೆ ಮೀಸಲಿಟ್ಟ ಹಣ ನೋಡಿದರೆ ಅರಿವಾಗುತ್ತದೆ. ಹಿಂದುಳಿದ ಜಾತಿಗಳ ಕಲ್ಯಾಣ ಕಡೆಗಣನೆಯಾಗಿದೆ. ಅಲ್ಪಸಂಖ್ಯಾತರ ಬಗ್ಗೆ ಮಾತೇ ಆಡುವುದಿಲ್ಲ. ದೀನ್ ದಯಾಳ್ ಉಪಾಧ್ಯಾಯ ಹೆಸರಲ್ಲಿ 1000 ಮಕ್ಕಳ ಹಾಸ್ಟೆಲ್ ಮಾಡ್ತೇವೆ ಅಂತಾ ನಾಲ್ಕು ಕಡೆ ಅಂದಿದ್ದಾರೆ. ಇದು ಪ್ರಾಯೋಗಿಕ ಚಿಂತನೆ ಅಲ್ಲ. ಅಸಾಧ್ಯದ ಮಾತು. ಹಿಂದುಳಿದ ಜಾತಿಗಳ ಎಲ್ಲಾ ಅಭಿವೃದ್ಧಿ ನಿಗಮಕ್ಕೆ ಹಿಂದೆ 400 ಕೋಟಿ ರೂ. ಅಂದಿದ್ದರು. ಈ ಸಾರಿ ನೀಡಿಯೇ ಇಲ್ಲ.

ಗೋಶಾಲೆಗೆ 31 ರಿಂದ 100 ಕ್ಕೆ ಏರಿಸುತ್ತೇವೆ ಎಂದಿದ್ದಾರೆ. ಕನಿಷ್ಠ 500 ಗೋಶಾಲೆ ಅಗತ್ಯವಿದೆ. ಪುಣ್ಯಕೋಟಿ ಹೆಸರಲ್ಲಿ ದತ್ತು ಕೊಡುತ್ತಾರೆ. ಅದರ ಬದಲು ರೈತರಿಗೆ ನೀಡಿ. ಇದು ಗೋಶಾಲೆಗಳ ಪುಣ್ಯ ಆಗಿದೆ. ಈ ಥರ ಮನೆಹಾಳು ಕಾರ್ಯಕ್ರಮ, ರೈತರಿಗೆ ಅನ್ಯಾಯ ಮಾಡುವ ಬಜೆಟ್ ಆಗಿದೆ. ದಿಕ್ಕು, ಗುರಿ ಹಾಗೂ ಅಭಿವೃದ್ಧಿ ಪರ ಬಜೆಟ್ ಅಲ್ಲ. ಅತ್ಯಂತ ನಿರಾಶಾದಾಯಕ ಬಜೆಟ್ ಇದು. ಬೆಳವಣಿಗೆಗೆ ಪೂರಕ ಇಲ್ಲದ, ಮಾತುಗಳಿಗೆ ವಿರುದ್ಧವಾದ ಬಜೆಟ್ ಇದಾಗಿದೆ ಎಂದಿದ್ದಾರೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.