ETV Bharat / state

ಪತ್ನಿ ಮೇಲೆ ಪತಿ ಸಂಶಯ: ಮೂರನೇ ವ್ಯಕ್ತಿಯ ಫೋನ್ ಸಂಭಾಷಣೆ ಬಹಿರಂಗ ಸಾಧ್ಯವಿಲ್ಲ- ಹೈ ಕೋರ್ಟ್

ದಂಪತಿಯ ಕಲಹದಲ್ಲಿ ಮೂರನೇ ವ್ಯಕ್ತಿಯ ಖಾಸಗಿತನದ ಹಕ್ಕು ಉಲ್ಲಂಘಿಸಲು ಅವಕಾಶವಿಲ್ಲ. ಸಂವಿಧಾನದ ಪರಿಚ್ಛೇದ 21ರ ಅಡಿಯಲ್ಲಿ ಪ್ರತಿಯೊಬ್ಬರು ಖಾಸಗಿತನದ ಗೌಪ್ಯತೆ ಕಾಪಾಡಿಕೊಳ್ಳುವುದು ಸ್ವಾಭಾವಿಕ ಹಕ್ಕು ಎಂದು ಹೈ ಕೋರ್ಟ್ ತಿಳಿಸಿದೆ.

ಹೈಕೋರ್ಟ್
ಹೈಕೋರ್ಟ್
author img

By

Published : Dec 11, 2022, 7:45 AM IST

ಬೆಂಗಳೂರು: ಪ್ರತಿಯೊಬ್ಬರೂ ತಮ್ಮ ಖಾಸಗಿತನ ಕಾಪಾಡಿಕೊಳ್ಳುವ ಹಕ್ಕು ಹೊಂದಿದ್ದು, ದಂಪತಿಯ ನಡುವಿನ ಕೌಟುಂಬಿಕ ಕಲಹದ ಕಾರಣದಿಂದ ಮೂರನೇ ವ್ಯಕ್ತಿಯ ಖಾಸಗಿತನದ ಹಕ್ಕು ಉಲ್ಲಂಘಿಸಲು ಅವಕಾಶವಿಲ್ಲ ಎಂದು ಹೈ ಕೋರ್ಟ್ ಅಭಿಪ್ರಾಯಪಟ್ಟಿದೆ. ಅಲ್ಲದೇ, ಸಂವಿಧಾನದ ಪರಿಚ್ಛೇದ 21ರ ಅಡಿಯಲ್ಲಿ ಪ್ರತಿಯೊಬ್ಬರು ಖಾಸಗಿತನದ ಗೌಪ್ಯತೆ ಕಾಪಾಡಿಕೊಳ್ಳುವುದು ಸ್ವಾಭಾವಿಕ ಹಕ್ಕು. ಹೀಗಾಗಿ ವ್ಯಕ್ತಿಯ ಕುಟುಂಬ, ವಿವಾಹ ಮತ್ತು ಗೌಣ ಸಂಬಂಧಗಳ ಕುರಿತ ಮಾಹಿತಿಯನ್ನು ಸಂಗ್ರಹಿಸುವುದು ಹಾಗೂ ಬಹಿರಂಗಪಡಿಸಲು ಅವಕಾಶವಿಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿತು.

ದಂಪತಿಯ ಕೌಟುಂಬಿಕ ಕಲಹ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಮೂರನೇ ವ್ಯಕ್ತಿ (ಪತ್ನಿಯೊಂದಿಗೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದ ಪರಪುರುಷ)ಯ ದೂರವಾಣಿ ಕರೆಗಳು ಮತ್ತು ಅವರ ಚಲನವಲಗಳ ಮಾಹಿತಿ ಸಂಗ್ರಹಿಸಲು ಮೊಬೈಲ್ ಸಂಭಾಷಣೆ, ಟವರ್ ಲೊಕೇಷನ್ ಮಾಹಿತಿ ಕೋರಿ ಕೌಟುಂಬಿಕ ನ್ಯಾಯಾಲಯ ಸಮನ್ಸ್ ಜಾರಿ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಆಶೋಕ್ (ಹೆಸರು ಬದಲಿಸಲಾಗಿದೆ)ಎಂಬುವರು ಹೈ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ವಿಭಾಗೀಯ ಪೀಠ, ವ್ಯಕ್ತಿಯೊಬ್ಬರ ಖಾಸಗಿತನವನ್ನು ಉಲ್ಲಂಘಿಸುವುದಕ್ಕೆ ಅವಕಾಶವಿಲ್ಲ ಎಂದು ಅಭಿಪ್ರಾಯಪಟ್ಟು, ಕೌಟುಂಬಿಕ ನ್ಯಾಯಾಲಯ ಜಾರಿ ಮಾಡಿದ್ದ ಸಮನ್ಸ್ ರದ್ದುಪಡಿಸಿದೆ.

ಪ್ರಕರಣದ ಹಿನ್ನೆಲೆ ಏನು?: ಬೆಂಗಳೂರಿನ ನಿವಾಸಿಗಳಾದ ಸವಿತಾ ಮತ್ತು ಕೃಷ್ಣಮೂರ್ತಿ(ಹೆಸರುಗಳನ್ನು ಬದಲಿಸಲಾಗಿದೆ) 2019ರಲ್ಲಿ ವಿವಾಹವಾಗಿದ್ದು, ಕೌಟುಂಬಿಕ ಕಲಹದ ಕಾರಣದಿಂದ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ವೇಳೆ, ಕೃಷ್ಣಮೂರ್ತಿ ಅವರು ಸವಿತಾರ ನಡತೆಯ ಕುರಿತು ಸಂಶಯ ವ್ಯಕ್ತಪಡಿಸಿದ್ದರು. ಅಲ್ಲದೆ, ಅಶೋಕ್ ಎಂಬುವರ ಮೊಬೈಲ್ ದೂರವಾಣಿ ಕರೆಗಳ ಸಂಭಾಷಣೆ ಮತ್ತು ಟವರ್ ಲೊಕೇಷನ್ ಮಾಹಿತಿ ಪಡೆದುಕೊಳ್ಳಬೇಕು ಎಂದು ಕೌಟುಂಬಿಕ ನ್ಯಾಯಾಲಯಕ್ಕೆ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಅಂಗೀಕರಿಸಿದ್ದ ನ್ಯಾಯಾಲಯ ಸಮನ್ಸ್ ಜಾರಿ ಮಾಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಅಶೋಕ್ ಹೈ ಕೋರ್ಟ್ ಮೆಟ್ಟಿಲೇರಿ, ನಮಗೆ ಸಂಬಂಧಿಸದ ವಿಚಾರದಲ್ಲಿ ನಮ್ಮ ವೈಯಕ್ತಿಕ ಹಕ್ಕು ಉಲ್ಲಂಘನೆಯಾಗುತ್ತಿದೆ. ಹೀಗಾಗಿ ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದು ಪಡಿಸಬೇಕು ಎಂದು ಕೋರಿದ್ದರು.

ಇದನ್ನೂ ಓದಿ: ಪತ್ನಿ ಮೇಲೆ ಸಂಶಯ: ಎರಡನೇ ಬಾರಿ ಮಗುವಿನ ಡಿಎನ್‌ಎ ಪರೀಕ್ಷೆಗೆ ಅನುಮತಿ ನೀಡದ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.