ಬೆಂಗಳೂರು : ರಾಜಾಜಿನಗರದಲ್ಲಿರುವ ಕೋದಂಡರಾಮ ದೇವಸ್ಥಾನದಲ್ಲಿದ್ದ ಹುಂಡಿ ಹಣವನ್ನು ಕದ್ದಿರುವ ಖತರ್ನಾಕ್ ಕಳ್ಳನೊಬ್ಬ ಅದನ್ನು ತಳ್ಳುವ ಗಾಡಿಯಲ್ಲಿ ಇಟ್ಟುಕೊಂಡು ಪರಾರಿಯಾಗಿದ್ದಾನೆ.
ಇದೇ ರೀತಿ ನಗರದ ಬಸವೇಶ್ವರನಗರ, ಸುಬ್ರಮಣ್ಯನಗರದ ದೇವಸ್ಥಾನಗಳಲ್ಲೂ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾನೆ. ಆರೋಪಿಯ ಚಲನವಲನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಈಗಾಗಲೇ, ಮೂರು ಪೊಲೀಸ್ ಠಾಣೆಗೆ ಅಲರ್ಟ್ ಸೂಚನೆ ನೀಡಲಾಗಿದೆ. ರಾತ್ರಿ ವೇಳೆ ಬಂದು ಕಳ್ಳತನ ಮಾಡುವ ಖದೀಮನ ಹುಡುಕಾಟಕ್ಕಾಗಿ ಸಿಸಿ ಕ್ಯಾಮೆರಾ ದೃಶ್ಯ ಆಧರಿಸಿ ನಗರದ ಪೊಲೀಸರು ಎಲ್ಲಾ ಕಡೆ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಓದಿ: ಪರಿಸರವಾದಿ ಡಿ.ವಿ. ಗಿರೀಶ್ ಮೇಲೆ ಹಲ್ಲೆ ಪ್ರಕರಣ: ಏಳು ಜನರ ಬಂಧನ