ಬೆಂಗಳೂರು: ವರ ಮಹಾಲಕ್ಷ್ಮಿ ಹಬ್ಬದ ದಿನ ಪೂಜೆಗೆ ಇಟ್ಟಿದ್ದ ಚಿನ್ನಾಭರಣಗಳನ್ನು ಕಳ್ಳತನ ಮಾಡಿರುವ ಆರೋಪಿವೋರ್ವ ಸಿಸಿಟಿವಿಯಲ್ಲಿ ಸೆರೆಸಿಕ್ಕಿರುವ ಘಟನೆ ಎಂ. ಎಸ್ ರಸ್ತೆಯ ಮುತ್ಯಾಲಮ್ಮ ನಗರದಲ್ಲಿ ನಡೆದಿದೆ.
ಬಿಂದು ಹಾಗೂ ವೆಂಕಟೇಶ್ ದಂಪತಿ ವರಮಹಾಲಕ್ಷೀ ಪೂಜೆ ಮುಗಿಸಿ ನಿದ್ದೆಗೆ ಜಾರಿದ್ರು. ಇದನ್ನೇ ಕಾಯ್ತಿದ್ದ ಖದೀಮನೋರ್ವ ಮನೆಯ ಕಿಟಕಿಯಿಂದ ಮಹಾಲಕ್ಷ್ಮಿ ದೇವರಿಗೆ ತೊಡಿಸಿದ್ದ ಮಾಂಗಲ್ಯ ಸರ ಸೇರಿದಂತೆ 3.50 ಮೌಲ್ಯದ ಬೆಲೆಬಾಳುವ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾನೆ.
ಇನ್ನು, ದಂಪತಿ ಬೆಳಗ್ಗೆ ಎದ್ದು ನೋಡುತ್ತಿದ್ದಂತೆ ಚಿನ್ನಭಾರಣ ನಾಪತ್ತೆಯಾಗಿದ್ದವು. ಪಕ್ಕದ ಮನೆಯ ಸಿಸಿಟಿವಿಯಲ್ಲಿ ಕಳ್ಳನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಕಳ್ಳನ ಬಂಧನಕ್ಕೆ ಬಲೆ ಬೀಸಿದ್ದಾರೆ.