ಬೆಂಗಳೂರು: ವಿಶ್ವದಲ್ಲಿ ಮಹಾಮಾರಿ ಕೊರೊನಾ ಹರಡುವಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮೊದಮೊದಲು ಭಾರತದಲ್ಲಿ ಒಂದಿಬ್ಬರಿಗೆ ಮಾತ್ರ ಸೋಂಕು ತಗುಲಿತ್ತು. ಆದರಿಗ ಕೊರೊನಾ ತನ್ನ ಅಟ್ಟಹಾಸ ಮುಂದವರೆಸಿದೆ.
ರಾಜ್ಯದಲ್ಲಿಗ 83 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಸಾವಿರಾರು ಶಂಕಿತರರು ಹೋಂ ಕ್ವಾರಂಟೈನ್ನಲ್ಲಿ ಇದ್ದಾರೆ. ಇನ್ನು ಹಲವರ ಕೊರೊನಾ ವರದಿ ಬರಬೇಕಿದೆ. ಇದರ ನಡುವೆ 21 ದಿನಗಳ ಭಾರತ ಲಾಕ್ಡೌನ್ ಆಗಿದೆ. ಜನರಿಗೆ ಮನೆಯಿಂದ ಹೊರಗೆ ಬರಬೇಡಿ ಅಂದರು ಕೇಳುತ್ತಿಲ್ಲ. ಬೀದಿಯಲ್ಲಿರುವ ಮಾರಿಯನ್ನು ಮೈ ಮೇಲೆ ಎಳೆದುಕೊಳ್ಳುತ್ತಿದ್ದಾರೆ. ಅಂದಹಾಗೇ, ಕೊರೊನಾ ಯುದ್ಧ ಗೆಲ್ಲುಬೇಕು ಅಂದರೆ ಮುಂದಿನ ಎರಡು ವಾರಗಳು ಅತ್ಯವಶ್ಯ ಅಂತಾರೆ ಆರೋಗ್ಯಾಧಿಕಾರಿಗಳು.
ಹೌದು, ಹೋಂ ಕ್ವಾರಟೈನ್ನಲ್ಲಿರುವ ಶಂಕಿತರು ಮನೆಯಿಂದ ಹೊರಬಂದು ಜನರ ಜೊತೆ ಸಂಪರ್ಕಕ್ಕೆ ಬಂದರೆ ಡೇಂಜರ್. ವಿದೇಶದಿಂದ ಬರುವ ವ್ಯಕ್ತಿ ಜನರ ಜೊತೆ ಬೆರೆತರೆ ಅಪಾಯ ಕಟ್ಟಿಟ್ಟ ಬುತ್ತಿ. 84 ಕೇಸ್ಗಳನ್ನು ಉದಾಹರಣೆಗೆ ತೆಗೆದುಕೊಂಡರೆ, ಸೋಂಕಿತರ ಜೊತೆ ಯಾರು ಕ್ಲೋಸ್ ಕಾಂಟ್ಯಾಕ್ಟ್ ಇರುತ್ತಾರೋ ಅಂತವರಿಗೆ ಸೋಂಕು ತಗುಲಿದೆ. ಹೀಗಾಗಿ ಅಂತಹವರಿಂದ ದೂರ ಉಳಿಯಲು ಮನೆಯಲ್ಲಿರುವುದು ಅತ್ಯವಶ್ಯ. ಡಬ್ಬಲ್ ದಿ ಇನ್ ಕ್ಯೂಪೇಷನ್ ಪಿರಿಯಡ್ ಇದು. ಈ ವೈರಸ್ನ ಪರಿಚಯ ಅಷ್ಟಿಲ್ಲ.ಹೀಗಾಗಿ ಸಾಮಾಜಿಕ ಅಂತರ ಅತ್ಯವಶ್ಯ.
ಈ ವೈರಸ್ ಒನ್ ಟು ಡಬಲ್ ಆಗುವುದರಿಂದ, ಎರಡು ವಾರಗಳ ಕಾಲ ಮನೆಯಲ್ಲಿರುವುದು ಸೇಫ್ ಅಂತಾರೆ. ನಮ್ಮ ದೇಶ ಇನ್ನೂ ಸ್ಟೇಜ್ 3 ತಲುಪಿಲ್ಲ. ಒಂದೆರಡು ಪ್ರಕರಣಗಳನ್ನು ನೋಡಿ ಸ್ಟೇಜ್ 3 ಎಂದು ನಿರ್ಧರಿಸಲು ಸಾಧ್ಯವಿಲ್ಲ. ತುಮಕೂರು ವೃದ್ಧನ ಪ್ರಕರಣದಲ್ಲಿ ಆತ ದೆಹಲಿಗೆ ಪ್ರಯಾಣಿಸಿದ್ದಾಗ ಅಲ್ಲಿನ ಮಸೀದಿಯಲ್ಲಿ ಬಹಳ ಕಾಲ ತಂಗಿದ್ದ. ಆ ಮಸೀದಿಗೆ ಸೌದಿ ಅರೇಬಿಯಾ ಮತ್ತು ದುಬೈನಿಂದ ಬಂದಿದ್ದ ಅನೇಕರು ಆ ಸಂದರ್ಭದಲ್ಲಿ ಭೇಟಿ ಕೊಟ್ಟಿದ್ದರು. ಹಾಗಾಗಿ ಆತನ ಸೋಂಕಿನ ಮೂಲ ಪತ್ತೆಯಾಗಿದೆ.. ನಂಜನಗೂಡು ಪ್ರಕರಣದ ತನಿಖೆ ಜಾರಿಯಲ್ಲಿದ್ದು,ಇನ್ನು ಎರಡು ಮೂರು ದಿನದಲ್ಲಿ ಆತನ ಸೋಂಕಿನ ಮೂಲ ತಿಳಿಯಲಿದೆ.. ನಂತರವಷ್ಟೇ ಸ್ಟೇಜ್ 3 ಇರುವ ಬಗ್ಗೆ ನಿಖರವಾಗಿ ತಿಳಿದು ಬರಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಡಾ ಬಿ ಜಿ ಪ್ರಕಾಶ್ ಕುಮಾರ್ ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ ಮಹಾಮಾರಿ ಕೊರೊನಾ ತಡೆಯಬೇಕಾದ್ರೆ ಮನೆಯಲ್ಲಿರದೆ ಬೇರೆ ದಾರಿಯಿಲ್ಲ ಮತ್ತು ಸಾಮಾಜಿಕ ಅಂತರ ಕಾಯ್ದುಕೊಂಡರೆ ನಿಯಂತ್ರಣ ಸಾಧ್ಯ ಎಂಬುದು ತಜ್ಞರ ಅಭಿಪ್ರಾಯವಾಗಿದೆ.