ETV Bharat / state

ಒತ್ತಡಕ್ಕೆ ಮಣಿದು ಯಾರು ಏನು ಬೇಕಾದರೂ ಮಾಡಬಹುದು: ಡಿ.ಕೆ.ಸುರೇಶ್ - ಸಂಸದ ಡಿ ಕೆ ಸುರೇಶ್

ನಮ್ಮನ್ನು ರಾಜಕೀಯವಾಗಿ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.

ಸಂಸದ ಡಿ ಕೆ ಸುರೇಶ್
ಸಂಸದ ಡಿ ಕೆ ಸುರೇಶ್
author img

By

Published : Apr 21, 2023, 3:42 PM IST

ಸಂಸದ ಡಿ.ಕೆ.ಸುರೇಶ್ ಹೇಳಿಕೆ

ಬೆಂಗಳೂರು : ಚುನಾವಣಾಧಿಕಾರಿಗಳು ಕೂಡಾ ಸರ್ಕಾರಿ ಅಧಿಕಾರಿಗಳೇ. ಯಾವ ಸಂದರ್ಭದಲ್ಲಿ ಯಾರು ಬೇಕಾದರೂ ಒತ್ತಡಕ್ಕೆ ಮಣಿದು ಏನು ಬೇಕಾದರೂ ಮಾಡಬಹುದು ಎಂದು ಸಂಸದ ಡಿ.ಕೆ.ಸುರೇಶ್ ಪ್ರತಿಕ್ರಿಯಿಸಿದರು. ಕೆಪಿಸಿಸಿ ಕಚೇರಿಯಲ್ಲಿಂದು ಮಾತನಾಡಿದ ಅವರು, ಚುನಾವಣಾ ಆಯೋಗಕ್ಕೆ ಡಿಕೆಶಿ ಸಲ್ಲಿಸಿದ್ದ ಆಸ್ತಿ ವಿವರದ ಅಫಿಡವಿಟ್ ಪತ್ರವನ್ನು ಹಲವರು ಡೌನ್​ಲೋಡ್ ಮಾಡುತ್ತಿದ್ದಾರೆ. ನಾಮಪತ್ರ ಪರಿಶೀಲನೆ ವೇಳೆ ಹೇಗಾದರೂ ಮಾಡಿ ಅಡ್ಡಿ ಮಾಡಬಹುದು. ದೆಹಲಿಯಲ್ಲಿ ಕೆಲವು ಬಿಜೆಪಿಗರು ಪತ್ರಿಕಾಗೋಷ್ಠಿ ನಡೆಸಿ ಡಿಕೆಶಿಯನ್ನು ರಾಜಕೀಯವಾಗಿ ಕಟ್ಟಿ ಹಾಕಬೇಕು ಎಂದಿದ್ದಾರೆ ಎಂದು ತಿಳಿಸಿದರು.

ಜನಾಭಿಪ್ರಾಯದ ಮುಂದೆ ಬೇರೆ ಯಾರೂ ಇಲ್ಲ. ಹಾಗಾಗಿ ನಮ್ಮನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿಯಿಂದ ಸಾಧ್ಯವಿಲ್ಲ. ಡಿಕೆಶಿ ನಾಮಪತ್ರದಲ್ಲಿ ಯಾವುದೇ ತಾಂತ್ರಿಕ ದೋಷ ಇಲ್ಲ. ಬಿಜೆಪಿಯಿಂದ ತಂತ್ರಗಾರಿಕೆ ನಡೆಯುತ್ತಿದೆ. ಚುನಾವಣಾ ದಿನಾಂಕ ಘೋಷಣೆ ಮಾಡುವಾಗಲೂ ಸರ್ಕಾರದ ಅನುಮತಿ ಬೇಕು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರ್ನಾಟಕ ಪ್ರವಾಸ ಮುಗಿದ ಬಳಿಕ ಚುನಾವಣೆ ಘೋಷಣೆ ಆಗಿರುವುದು ನಿಮಗೆಲ್ಲ ಗೊತ್ತು ಎಂದು ಟೀಕಿಸಿದರು.

ಆರ್.ಅಶೋಕ್ ಜೊತೆ ಹೊಂದಾಣಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ದ್ವೇಷದ ರಾಜಕಾರಣ ನಾವು ಮಾಡಲ್ಲ, ನಾವು ನೇರಾನೇರಾ ರಾಜಕಾರಣ ಮಾಡುತ್ತೇವೆ. ನಮಗೆ ದ್ವೇಷದ ರಾಜಕಾರಣ ಅಗತ್ಯವಿಲ್ಲ. ಅಶೋಕ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಗತಿ ಡಿ.ಕೆ.ಶಿವಕುಮಾರ್‌ಗೆ ಬಂದಿಲ್ಲ ಎಂದು ತಿರುಗೇಟು ನೀಡಿದರು.

ಡಿ.ಕೆ.ಶಿವಕುಮಾರ್ ನಾಮಪತ್ರ ಸ್ವೀಕೃತವಾಗಿದೆ ಅಂದ್ರೆ ಅಲ್ಲಿಗೆ ಮುಗೀತಲ್ಲ ಎಂದು ಇದೇ ವೇಳೆ ತಿಳಿಸಿದರು. ನಮಗೆ ನಮ್ಮ‌ ಕಾರ್ಯಕರ್ತರು, ಬಿಜೆಪಿಯವರು, ಅಧಿಕಾರಿಗಳು ಎಲ್ಲರೂ ಮಾಹಿತಿ ನೀಡಿದರು. ಆ ಕಾರಣಕ್ಕೆ ನಾವು ನಾಮಪತ್ರ ಸಲ್ಲಿಸಿದ್ದೇವೆ ಎಂದು ಹೇಳಿದರು.

ಸುಮಾರು 5 ಸಾವಿರ ಜನರು ನನ್ನ ಆಸ್ತಿ ಘೋಷಣೆ ಪ್ರಮಾಣ ಪತ್ರವನ್ನು ಡೌನ್​ಲೋಡ್​ ಮಾಡಿಕೊಂಡಿದ್ದಾರೆ. ಅವರೆಲ್ಲರೂ ಏನೇನು ಮಾಡುತ್ತಿದ್ದಾರೆ ಎಂಬುದು ಗೊತ್ತು. ಹೀಗಾಗಿ ಡಿ.ಕೆ.ಸುರೇಶ್​ ಅವರಿಂದ ಮತ್ತೊಂದು ನಾಮಪತ್ರ ಸಲ್ಲಿಕೆ ಮಾಡಿಸಿದ್ದೇವೆ. ನಮಗೆ ನಮ್ಮದೇ ಆದ ತಂತ್ರಗಾರಿಕೆ ಇದೆ ಎಂದು ಡಿ.ಕೆ.ಶಿವಕುಮಾರ್ ಮಂಡ್ಯದಲ್ಲಿಂದು ಹೇಳಿದ್ದಾರೆ. ಕನಕಪುರದಲ್ಲಿ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಕೆ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಂಡ್ಯದ ತೂಬಿನಕೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು.

ಡಿ.ಕೆ.ಸುರೇಶ್ ಯಾಕೆ ನಾಮಪತ್ರ ಸಲ್ಲಿಸಬಾರದು?. ನಮ್ಮದೂ ರಾಜಕೀಯ ಲೆಕ್ಕಾಚಾರ ಇರುತ್ತದೆ. ನಮ್ಮ ಗುಟ್ಟನ್ನು ನಾವು ಹೇಳಲ್ಲ. ನಾಡಿದ್ದು ಎಲ್ಲವೂ ಗೊತ್ತಾಗುತ್ತದೆ. ನಮಗೂ ರಾಜಕೀಯ ಬರುತ್ತದೆ. ನನ್ನ ಆಸ್ತಿ ಪಟ್ಟಿಯನ್ನು 5 ಸಾವಿರ ಜನ ಡೌನ್​ಲೋಡ್ ಮಾಡಿಕೊಂಡಿದ್ದಾರೆ. ಇದರಲ್ಲಿ ಬಿಜೆಪಿ ಕುತಂತ್ರವಿದೆ ಎಂದರು.

ಇದನ್ನೂ ಓದಿ: 5 ಸಾವಿರ ಜನರಿಂದ ನನ್ನ ಆಸ್ತಿ ಪತ್ರ ಡೌನ್​ಲೋಡ್: ಡಿಕೆಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.