ETV Bharat / state

ನಾಳೆ ಕರ್ನಾಟಕ ಬಂದ್​ ಇಲ್ಲ: ಸಿಎಂ ಸಂಧಾನ ಸಭೆ ಸಕ್ಸಸ್​ - ನಾಳೆ ಕರ್ನಾಟಕ ಬಂದ್​ಗೆ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಬಂದ್​ ವಾಪಸ್​

ನಾಳೆ ಕರ್ನಾಟಕ ಬಂದ್​ಗೆ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದವು. ಆದರೆ, ಸಿಎಂ ಮನವೊಲಿಸಿದ್ದರಿಂದ ಬಂದ್​ ಮಾಡದಿರಲು ಸಂಘಟನೆಗಳು ನಿರ್ಧಾರ ಮಾಡಿವೆ.

ಸಿಎಂ ಸಂಧಾನ ಸಭೆ ಸಕ್ಸಸ್​
ಸಿಎಂ ಸಂಧಾನ ಸಭೆ ಸಕ್ಸಸ್​
author img

By

Published : Dec 30, 2021, 7:00 PM IST

Updated : Dec 30, 2021, 9:14 PM IST

ಬೆಂಗಳೂರು: ನಾಳೆ ಕರ್ನಾಟಕ ಬಂದ್​ಗೆ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದು, ಈ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಂಘಟನೆಗಳ ಜೊತೆ ಮಾತುಕತೆ ನಡೆಸಿ ಬಂದ್​ ವಾಪಸ್​ ತೆಗೆದುಕೊಳ್ಳುವಂತೆ ಮಾಡಿದ್ದಾರೆ.

ಸಿಎಂ ಸಂಧಾನ ಸಭೆ ಸಕ್ಸಸ್​

ಸಿಎಂ ಬಸವರಾಜ ಬೊಮ್ಮಾಯಿ ನಡೆಸಿದ ಸಂಧಾನ ಸಕ್ಸಸ್ ಆಗಿದೆ. ಇನ್ನು ನನ್ನ ಮನವಿ ಒಪ್ಪಿ ಸಂಧಾನ ವಾಪಸ್ ಪಡೆದಿದ್ದಾರೆ. ಬಂದ್ ವಾಪಸ್ ಪಡೆದ ಹೋರಾಟಗಾರರಿಗೆ ಧನ್ಯವಾದಗಳು ಎಂದು ಸಿಎಂ ತಿಳಿಸಿದ್ದಾರೆ.

ಸಭೆ ಬಳಿಕ ಮಾತನಾಡಿದ ವಾಟಾಳ್​ ನಾಗರಾಜ್​ ಹೇಳಿದ್ದೇನು?

ಸಭೆ ಬಳಿಕ ಮಾತನಾಡಿದ ಕನ್ನಡ ಪರ ಸಂಘಟನೆಗಳ ನೇತಾರ ವಾಟಾಳ್ ನಾಗರಾಜ್, ನಾಳೆ ಕರ್ನಾಟಕ ಬಂದ್ ಹಾಗೂ ಟೌನ್ ಹಾಲ್ ನಿಂದ ಮೆರವಣಿಗೆ ಇಟ್ಟುಕೊಳ್ಳಲಾಗಿತ್ತು. ಸಿಎಂ ಎರಡು ಬಾರಿ ನಮಗೆ ಮನವಿ ಮಾಡಿ ಬಂದ್​ ವಾಪಸ್ ಪಡೆಯುವಂತೆ ಮನವಿ ಮಾಡಿ, ಮಾತುಕತೆಗೆ ಆಹ್ವಾನಿಸಿದ್ದರು. ಬಂದ್​ ಹಿಂಪಡೆಯುವಂತೆ ಮಾತುಕತೆ ನಡೆಸಿ ಕರೆ ನೀಡಿದ್ದರು. ಅಷ್ಟೇ ಅಲ್ಲ ಕಾನೂನು ಪ್ರಕಾರ ಪ್ರಾಮಾಣಿಕವಾಗಿ ಎಂಇಎಸ್ ನಿಷೇಧ ಮಾಡೋದರ ಬಗ್ಗೆ ಸರ್ಕಾರ ಕೆಲಸ ಮಾಡುತ್ತೆ ಎಂಬ ಭರವಸೆ ನೀಡಿದ ಹಿನ್ನೆಲೆಯಲ್ಲಿ ಬಂದ್​ ಕರೆ ವಾಪಸ್​ ಪಡೆಯುತ್ತಿದ್ದೇವೆ ಎಂದು ಸ್ಪಷ್ಟನೆ ಕೊಟ್ಟರು.

ನಾಳೆ ಕರ್ನಾಟಕ ಬಂದ್​ ಇಲ್ಲ

ನಾಳೆ ಬಂದ್​ ಇರೋದಿಲ್ಲ.. ಬದಲಿಗೆ ಬೃಹತ್​ ಮೆರವಣಿಗೆ; ಸಾರಾ ಗೋವಿಂದು

ಹೊಸ ವರ್ಷದ ಹಿಂದಿನ ದಿನ ಬಂದ್ ಸರಿ ಅಲ್ಲ. ಹೀಗಾಗಿ ಬಂದ್​ ವಾಪಸ್​ ಪಡೆಯಿರಿ ಎಂದು ಸಿಎಂ ಮನವಿ ಮಾಡಿದರು. ಅಷ್ಟೇ ಅಲ್ಲ ಎಂಇಎಸ್​ ವಿರುದ್ಧ ಸೂಕ್ತ ಕ್ರಮದ ಭರವಸೆ ನೀಡಿದರು ಎಂದು ವಾಟಾಳ್​ ನಾಗರಾಜ್​ ಹೇಳಿದರು. ಇದೇ ವೇಳೆ ಮಾತನಾಡಿದ ಸಾ.ರಾ ಗೋವಿಂದು ನಾಳೆ ಬಂದ್​ ಇಲ್ಲ, ಮುಂದೂಡಿದ್ದೇವೆ, ದಿನಾಂಕ ಮುಂದಿನ ದಿನಗಳಲ್ಲಿ ತಿಳಿಸಲಾಗುತ್ತದೆ ಎಂದರು. ಆದರೆ ನಾಳೆ ಟೌನ್ ಹಾಲ್ ನಿಂದ ಮೆಜೆಸ್ಟಿಕ್ ಹಾಗೂ ಫ್ರೀಡಂ ಪಾರ್ಕ್ ವರೆಗೆ ಕನ್ನಡಪರ ಸಂಘಟನೆಗಳಿಂದ ಬೃಹತ್ ಮೆರವಣಿಗೆ ನಡೆಯಲಿದೆ ಎಂದು ಘೋಷಿಸಿದರು.

Last Updated : Dec 30, 2021, 9:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.