ETV Bharat / state

ಆದಾಯ ತೆರಿಗೆ ಇಲಾಖೆಯಲ್ಲಿ ಸಾಕಷ್ಟು ಭ್ರಷ್ಟರು: ಸಿಎಂ ಆರೋಪ - corruption,Income Tax department, CM ,ಆದಾಯ, ಇಲಾಖೆ, ಭ್ರಷ್ಟ, ಸಿಎಂ ,ಆರೋಪ,

ಜನರ ಮುಂದೆ ಹೇಳಬೇಕಾದ್ದು ಬಹಳಷ್ಟಿದೆ. ಆದರೆ, ಸೂಕ್ತ ಸಂದರ್ಭದಲ್ಲಿ ಸಂಬಂಧಿಸಿದ ದಾಖಲೆ ಸಮೇತ ನಿಮ್ಮ ಮುಂದೆ ಬರುತ್ತೇನೆ.

ಸಿಎಂ ಭಾಷಣ
author img

By

Published : Mar 28, 2019, 8:49 PM IST

ಬೆಂಗಳೂರು: ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯಾದ ಆದಾಯ ತೆರಿಗೆ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.

ಬೆಂಗಳೂರಿನ ಆದಾಯ ತೆರಿಗೆ ಕಚೇರಿ ಎದುರು ಕಾಂಗ್ರೆಸ್ ಹಾಗೂ ಜೆಡಿಎಸ್ ಜಂಟಿ ಪ್ರತಿಭಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ನಾವು ಯಾರಿಗೂ ಹೆದರಲ್ಲ, ಕಾನೂನು ಬದ್ಧವಾಗಿ ಅಧಿಕಾರ ನಡೆಸುವವರಿಗೆ ಗೌರವ ಕೊಡುತ್ತೇವೆ. ತಪ್ಪು ಕೆಲಸ ಮಾಡುವವರನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಯಾರನ್ನು ಹೇಗೆ ಹತ್ತಿಕ್ಕಬೇಕೆಂಬುದು ನಮಗೂ ಗೊತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಎಂ ಭಾಷಣ

ನಮ್ಮಲ್ಲಿ ಎಸಿಬಿ ಇದೆ. ಇದನ್ನು ಹೇಗೆ ಬಳಸಿಕೊಳ್ಳಬೇಕೆನ್ನುವುದು ನನಗೂ ಗೊತ್ತು. ಸಿದ್ದರಾಮಯ್ಯನವರು ತಿಳಿಸಿರುವಂತೆಯೇ ಸಿಬಿಐ ಯಾವ ರೀತಿ ಬಳಸಿಕೊಳ್ಳಬೇಕು ಎಂಬುದು ನಮಗೆ ಗೊತ್ತು. ಆದಾಯ ತೆರಿಗೆ ಇಲಾಖೆಯಲ್ಲಿ ಕೂಡ ಸಾಕಷ್ಟು ಭ್ರಷ್ಟರಿದ್ದಾರೆ. ಅವರ ವಿರುದ್ಧ ಯಾವ ರೀತಿ ಕ್ರಮ ಕೈಗೊಳ್ಳಬೇಕೆಂದು ನಾವು ನಿರ್ಧರಿಸುತ್ತೇವೆ. ಆದಾಯ ತೆರಿಗೆ ಅಧಿಕಾರಿಗಳು ನಡೆಸಿದ ದಾಳಿಯ ನಂತರ ಸೆಟ್ಲಮೆಂಟ್ ವಿಚಾರದಲ್ಲಿ ಯಾವ ರೀತಿ ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂಬ ದಾಖಲೆ ನಮ್ಮ ಬಳಿ ಇದೆ ಅದನ್ನು ನಾವು ಮುಂದಿನ ದಿನಗಳಲ್ಲಿ ಮುಂದೆ ಬಿಚ್ಚಿಡುವ ಪ್ರಯತ್ನ ಮಾಡುತ್ತೇವೆ ಎಂದರು.

ಸಚಿವ ಡಿ.ಕೆ. ಶಿವಕುಮಾರ್ ಮಾತನಾಡಿ, ಪ್ರಕರಣ ನ್ಯಾಯಾಲಯದಲ್ಲಿದೆ ಇದರಿಂದ ಹೆಚ್ಚು ಹೇಳಲ್ಲ. ಜನರ ಮುಂದೆ ಹೇಳಬೇಕಾದ್ದು ಬಹಳಷ್ಟಿದೆ. ಆದರೆ, ಸೂಕ್ತ ಸಂದರ್ಭದಲ್ಲಿ ಸಂಬಂಧಿಸಿದ ದಾಖಲೆ ಸಮೇತ ನಿಮ್ಮ ಮುಂದೆ ಬರುತ್ತೇನೆ. ಅತ್ಯಂತ ಕಡಿಮೆ ಅವಧಿಯಲ್ಲಿ ಎರಡು ಸಾರಿ ನನ್ನ ಮೇಲೆ ದಾಳಿಯಾಗಿದೆ. ಕೇಂದ್ರ ಸರ್ಕಾರ ಉದ್ದೇಶ ಪೂರ್ವಕವಾಗಿ ನಮ್ಮ ವಿರುದ್ಧ ಸೇಡು ತೀರಿಸಿಕೊಳ್ಳುವ ರಾಜಕೀಯ ಮಾಡುತ್ತಿದೆ. ಇದೆಲ್ಲಕ್ಕೂ ಇನ್ನೊಂದು ತಿಂಗಳಲ್ಲಿ ಉತ್ತರ ಸಿಗಲಿದೆ. ದೇಶದಲ್ಲಿ ಬದಲಾವಣೆ ಆಗಲಿದೆ. ನರೇಂದ್ರ ಮೋದಿಯ ದಬ್ಬಾಳಿಕೆ ಸರ್ಕಾರ ಅಂತ್ಯವಾಗಲಿದೆ ಎಂದರು.

sample description

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.