ETV Bharat / state

ಬಿಎಸ್​​ವೈ ಮೂರು ವರ್ಷ ಸಿಎಂ ಆಗಿರುವುದು ಅನುಮಾನ: ಸಿದ್ದರಾಮಯ್ಯ - ಬಜೆಟ್ ಮೇಲಿನ ಚರ್ಚೆ

ವಿಧಾನಸಭೆಯಲ್ಲಿ ಇಂದು ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಸಿಎಂ ಬಿ.ಎಸ್​.ಯಡಿಯೂರಪ್ಪನವರು ಮೂರು ವರ್ಷ ಸಿಎಂ ಆಗಿರುವುದು ಅನುಮಾನ ಎಂದಿದ್ದಾರೆ.

Siddaramaiah
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಭವಿಷ್ಯ
author img

By

Published : Mar 19, 2020, 6:22 PM IST

ಬೆಂಗಳೂರು: ಮುಂದಿನ ಮೂರು ವರ್ಷಗಳ ಕಾಲ ನಿಮ್ಮ ಸರ್ಕಾರ ಇರುವುದು, ನೀವು (ಯಡಿಯೂರಪ್ಪ) ಸಿಎಂ ಆಗಿರುವುದು ಅನುಮಾನ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.

ವಿಧಾನಸಭೆಯಲ್ಲಿ ಇಂದು ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ವೇಳೆ ನಿಮ್ಮ (ಬಿಜೆಪಿ) ಪಕ್ಷದಲ್ಲಿ ಏನೇನೋ ನಡೆಯುತ್ತಿದೆ. ನಿಮಗೆ ತಿಳಿಯದೇ ರಾಜಕೀಯ ವಿದ್ಯಮಾನಗಳು ನಡೆಯುತ್ತಿವೆ ಎಂದು ಮಾರ್ಮಿಕವಾಗಿ ನುಡಿದರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಈ ವರ್ಷ ಅಸಲು ಮತ್ತು ಬಡ್ಡಿ ಸೇರಿ 33 ಸಾವಿರ ಕೋಟಿ ರೂ.ಗೂ ಹೆಚ್ಚು ಪಾವತಿಸಬೇಕಿದೆ. ಸಾಲದ ಪ್ರಮಾಣ ಹೆಚ್ಚಾಗುತ್ತಿದೆ. ಮುಂದಿನ ಮೂರು ವರ್ಷಗಳ ಕಾಲ ನೀವೇ ಇರುತ್ತೇವೆ ಅಂದುಕೊಳ್ಳಿ. ನಮಗೇನೂ ತೊಂದರೆ ಇಲ್ಲ. ಆದರೆ, ನಮಗೆ ಅನುಮಾನವಿದೆ. ನಿಮ್ಮ ಪಕ್ಷದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳನ್ನು ನೋಡಿದರೆ ಸಂದೇಹ ಬರುತ್ತದೆ ಎಂದರು.

ಇದಕ್ಕೆ ಕಾಂಗ್ರೆಸ್‍ನ ಹಲವರು ಧ್ವನಿಗೂಡಿಸಿದರು. ಆ ಸಂದರ್ಭದಲ್ಲಿ ನಿಮ್ಮಲ್ಲಿ ನಡೆದಂತೆ ನಮ್ಮಲ್ಲೂ ನಡೆಯುತ್ತಿದೆ ಎಂದು ಆಡಳಿತ ಪಕ್ಷದ ಕಡೆಯಿಂದ ಧ್ವನಿ ಕೇಳಿಸಿತು. ಆಗ ಸದನದಲ್ಲಿನ ಸದಸ್ಯರಲ್ಲಿ ನಗೆ ಮೂಡಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.