ETV Bharat / state

ಮನೆಗೆಲಸ‌ ಮಾಡುವ ಸೋಗಿನಲ್ಲಿ ಮನೆಗಳ್ಳತನ: ಲೇಡಿ ಬಾಂಬೆ ಗ್ಯಾಂಗ್ ಅರೆಸ್ಟ್ - ಕಳ್ಳತನ ಮಾಡುತ್ತಿದ್ದ ಲೇಡಿ ಬಾಂಬೆ ಗ್ಯಾಂಗ್ ಬಂಧನ

ಮುಂಬೈ ಮೂಲದ ಕಳ್ಳಿಯರು ಮಹಾರಾಷ್ಟ್ರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 37 ಪ್ರಕರಣ ದಾಖಲಾಗಿದ್ದು, ಜೈಲಿಗೂ ಹೋಗಿ ಜಾಮೀನಿನ ಮೇರೆಗೆ ಬಿಡುಗಡೆಗೊಂಡು ಮತ್ತೆ ಹಳೆ‌ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ.

ಮನೆಗೆಲಸ‌ ಮಾಡುವ ಸೋಗಿನಲ್ಲಿ ಮನೆಗಳ್ಳತನ
ಮನೆಗೆಲಸ‌ ಮಾಡುವ ಸೋಗಿನಲ್ಲಿ ಮನೆಗಳ್ಳತನ
author img

By

Published : Jul 11, 2022, 5:02 PM IST

Updated : Jul 11, 2022, 6:24 PM IST

ಬೆಂಗಳೂರು: ಸಾಮಾಜಿಕ ಜಾಲತಾಣ ಫೇಸ್ ಬುಕ್​​​ನಲ್ಲಿ ಮನೆಗೆಲಸಕ್ಕೆ ಲಭ್ಯವಿರುವುದಾಗಿ ಜಾಹೀರಾತು ನೀಡಿ ನಂತರ ಮನೆಗಳಲ್ಲಿ ಕೆಲಸಕ್ಕೆ ಸೇರಿದ ಕೆಲವೇ ದಿನಗಳಲ್ಲಿ ಮಾಲೀಕರು ಇಲ್ಲದಿರುವ ಸಮಯ ನೋಡಿ ಮನೆಗಳ್ಳತನ ಮಾಡುತ್ತಿದ್ದ ಕುಖ್ಯಾತ ಬಾಂಬೆ ಲೇಡಿ ಗ್ಯಾಂಗ್ ಅ​ನ್ನು ಹೆಣ್ಣೂರು ಪೊಲೀಸರು ಹೆಡೆಮುರಿಕಟ್ಟಿದ್ದಾರೆ.

ಮಹಾರಾಷ್ಟ್ರ ಮೂಲದ ವನಿತಾ, ಮಹಾದೇವಿ ಹಾಗೂ ಪ್ರಿಯಾಂಕಾ ಬಂಧಿತ ಕಳ್ಳಿಯರಾಗಿದ್ದು, ಇವರಿಂದ 250 ಗ್ರಾಂ ಚಿನ್ನ, 100 ಗ್ರಾಂ ಬೆಳ್ಳಿ ಜಪ್ತಿ ಮಾಡಿಕೊಳ್ಳಲಾಗಿದೆ. ಸದ್ಯ ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಬೈ ಮೂಲದ ಕಳ್ಳಿಯರು ಮಹಾರಾಷ್ಟ್ರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 37 ಪ್ರಕರಣ ದಾಖಲಾಗಿದ್ದು, ಜೈಲಿಗೂ ಹೋಗಿ ಜಾಮೀನಿನ ಮೇರೆಗೆ ಬಿಡುಗಡೆಗೊಂಡು ಮತ್ತೆ ಹಳೆ‌ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು.

ಫೇಸ್​ಬುಕ್​ ಪ್ಲಾಟ್​ಪಾರ್ಮ್​: ಕಳೆದ ತಿಂಗಳು ನಗರಕ್ಕೆ ಬಂದಿದ್ದ ಮಹಿಳೆಯರು ಫೇಸ್ ಬುಕ್ ವೊಂದರ ರೆಫರ್ ಹೌಸ್ ಮೇಡ್ಸ್ ಬೆಂಗಳೂರು ಪಬ್ಲಿಕ್ ಗ್ರೂಪ್ ನಲ್ಲಿ ಸುಬ್ಬಲಕ್ಷಿ ಹೆಸರಿನಲ್ಲಿ ಮೊಬೈಲ್‌ ನಂಬರ್ ಹಾಕಿ ಮನೆಗೆಲಸಕ್ಕೆ ಲಭ್ಯವಿರುವುದಾಗಿ ಆರೋಪಿಗಳ‌ ಪೈಕಿ ಮಹಾದೇವಿ ಪೋಸ್ಟ್ ಹಾಕಿದ್ದಳು.‌ ಇದನ್ನು ನೋಡಿ ಹೆಣ್ಣೂರಿನ ಅರವಿಂದ್ ಎಂಬುವರು ಸಂಪರ್ಕಿಸಿದ್ದರು. ಇದರಂತೆ ಮೂರು ದಿನಗಳ ಕೆಲಸ ಮಾಡಿ ಬಳಿಕ ಮನೆಯಲ್ಲಿ ಯಾರೂ ಇಲ್ಲದಿರುವ ಸಮಯ ನೋಡಿ, ಚಿನ್ನಾಭರಣ ಲಪಾಟಿಯಿಸಿ ಪರಾರಿಯಾಗಿದ್ದರು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಇನ್ಸ್​​​​​​ಪೆಕ್ಟರ್​​ ವಸಂತ್ ಕುಮಾರ್ ತಂಡ ಸೆರೆಯಾದ ಸಿಸಿಟಿವಿ ಹಾಗೂ ಮೊಬೈಲ್ ನಂಬರ್ ಆಧಾರದ ಮೇರೆಗೆ ಮುಂಬೈನಲ್ಲಿ‌ ಖತರ್ ನಾಕ್ ಕಳ್ಳಿಯರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮನೆಗೆಲಸ‌ ಮಾಡುವ ಸೋಗಿನಲ್ಲಿ ಮನೆಗಳ್ಳತನ: ಲೇಡಿ ಬಾಂಬೆ ಗ್ಯಾಂಗ್ ಅರೆಸ್ಟ್

ವಿಚಾರಣೆ ವೇಳೆ ಫೇಸ್​​ಬುಕ್​ನ ಗ್ರೂಪ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯವಳು ಎಂದು ಮಹಾದೇವಿ ನಕಲಿ ಆಧಾರ್ ಕಾರ್ಡ್ ಮಾಡಿಸಿರುವುದು ತಿಳಿದುಬಂದಿದೆ.‌‌ ಪೋಸ್ಟ್​ನಲ್ಲಿ ಹಾಕಿದ್ದ ನಂಬರ್ ಕದ್ದ ಮೊಬೈಲ್ ನಂಬರ್ ಆಗಿದೆ ಎಂದು‌ ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಮಾಹಿತಿ ನೀಡಿದ್ದಾರೆ.

ಇನ್ನು ಮನೆಕೆಲಸದವರಿಂದ ಕಳ್ಳತನವಾಯ್ತು ಅಂದ್ರೆ ಮುಂಬೈ ಪೊಲೀಸರು ಮೊದಲು ಹುಡುಕುತ್ತಿದ್ದದ್ದು ಇವರನ್ನೆ ಅಂತ ಹೇಳಲಾಗ್ತಿದೆ. ಮುಂಬೈ ಒಂದರಲ್ಲಿಯೇ ಸುಮಾರು 36 ಪ್ರಕರಣ ಇವರ ಮೇಲಿದೆ.

ಮುಂಬೈಯಲ್ಲಿ ಸೆಕ್ಯೂರಿಟಿ ಗಾರ್ಡ್ ಗಳಿಗೆ ಕಮಿಷನ್ ಕೊಟ್ಟು ಮನೆಕೆಲಸಕ್ಕೆ ಸೇರುತ್ತಿದ್ದ ಗ್ಯಾಂಗ್ ಇಲ್ಲಿಯೂ ಸಹ ಅದೇ ಚಾಳಿಯನ್ನು ಮುಂದುವರೆಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಜೈಲಲ್ಲಿ ಸಹಕೈದಿಯಿಂದ 'ಹೈಟೆಕ್​' ಪಾಠ.. ಸ್ಮಾರ್ಟ್ ಡಿವೈಸ್ ಬಳಸಿ‌ ಕಾರು ಕದಿಯುತ್ತಿದ್ದ ಕಳ್ಳ ಅಂದರ್​

Last Updated : Jul 11, 2022, 6:24 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.