ಬೆಂಗಳೂರು: ಬಸವೇಶ್ವರ ನಗರದ ರೆಪ್ಕೋ ಬ್ಯಾಂಕ್‌ನ ಸೇಫ್ ಲಾಕರ್‌ನಲ್ಲಿ ಇಟ್ಟಿದ್ದ ಅರ್ಧ ಕೆ.ಜಿ.ಗಿಂತ ಹೆಚ್ಚಿನ ಚಿನ್ನಾಭರಣ ಲಪಟಾಯಿಸಿದ್ದ ಜವಾನನನ್ನು ಪೊಲೀಸರು ಬಂಧಿಸಿದ್ದಾರೆ.
ಬಸವೇಶ್ವರ ನಗರದಲ್ಲಿರುವ ರೆಪ್ಕೋ ಬ್ಯಾಂಕ್‌ನ ಜವಾನ ರಾಹುಲ್ ಬಂಧಿತ ಆರೋಪಿ. ಬಸವೇಶ್ವರ ನಗದಲ್ಲಿರುವ ರೆಪ್ಕೋ ಬ್ಯಾಂಕ್‌ನಲ್ಲಿ ಗ್ರಾಹಕರು ಚಿನ್ನಾಭರಣ ಅಡವಿಟ್ಟು ಹಣವನ್ನು ಪಡೆಯುತ್ತಿದ್ದರು. ಗ್ರಾಹಕರು ಅಡವಿಟ್ಟ ಚಿನ್ನಾಭರಣವನ್ನು ಬ್ಯಾಂಕ್‌ನ ನೆಲಮಹಡಿಯಲ್ಲಿರುವ ಸೇಫ್ ರೂಂನ ಸೇಫ್ ಲಾಕರ್‌ನಲ್ಲಿ ಇಡಲಾಗುತ್ತಿತ್ತು. ಕಳೆದ 2 ತಿಂಗಳ ಹಿಂದೆ ಸೇಫ್ ಲಾಕರ್‌ನಲ್ಲಿ ಇಟ್ಟಿದ್ದ 29.70 ಲಕ್ಷ ರೂ. ಬೆಲೆ ಬಾಳುವ 594 ಗ್ರಾಂ ಚಿನ್ನಾಭರಣ ಕಾಣೆಯಾಗಿತ್ತು. ಈ ಬಗ್ಗೆ ಬ್ಯಾಂಕ್ ಸಿಬ್ಬಂದಿ ದೀಪಕ್ ಮಿಶ್ರಾ ಬಸವೇಶ್ವರ ನಗರ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ನಡೆಸಿ ಬ್ಯಾಂಕ್ ಸಿಬ್ಬಂದಿಯನ್ನು ವಿಚಾರಣೆ ನಡೆಸಿದಾಗ ಇದೇ ಬ್ಯಾಂಕ್‌ನಲ್ಲಿ ಜವಾನನಾಗಿ ಕೆಲಸ ನಿರ್ವಹಿಸುತ್ತಿದ್ದ ರಾಹುಲ್ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿತ್ತು.
ಇದನ್ನು ಓದಿ: ಸೋಮನಾಥ ದೇವಾಲಯ ಟ್ರಸ್ಟ್ನ ಅಧ್ಯಕ್ಷರಾಗಿ ಮೋದಿ: ಈ ಹುದ್ದೆ ಅಲಂಕರಿಸಿದ 2ನೇ ಪ್ರಧಾನಿ!
ರಾಹುಲ್ ಬ್ಯಾಂಕ್ ಸಿಬ್ಬಂದಿ ಗಮನಕ್ಕೆ ಬಾರದಂತೆ ಸೇಫ್ ರೂಂಗೆ ಹೋಗಿ ಲಾಕರ್‌ನಿಂದ ಚಿನ್ನಾಭರಣ ಕಳ್ಳತನ ಮಾಡಿದ್ದ. ಕದ್ದ ಚಿನ್ನಾಭರಣವನ್ನು ಮಣಿಪುರಂನಲ್ಲಿ ಅಡವಿಟ್ಟು ಹಣ ಪಡೆದಿದ್ದ. ಹಲವಾರು ಬೆಟ್ಟಿಂಗ್ ಜೂಜಿನಲ್ಲಿ ತೊಡಗುತ್ತಿದ್ದ ಆರೋಪಿಯು ಈ ಹಣವನ್ನೂ ವಿವಿಧೆಡೆ ಬೆಟ್ಟಿಂಗ್‌ನಲ್ಲಿ ಖರ್ಚು ಮಾಡಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.